ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 30ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1
ಅಂದುಕೊಂಡಂತೆ ಖರ್ಚುಗಳನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ನಿಮ್ಮಲ್ಲಿನ ಉತ್ಸಾಹವೂ ಹೆಚ್ಚಾಗಿ ಆ ನಂತರದಲ್ಲಿ ಯೋಚನೆ ಮಾಡುವಂತಾಗುತ್ತದೆ. ನೀವೇ ಸ್ವತಃ ಡ್ರೈವ್ ಮಾಡುವಂಥದ್ದಾಗಿದಲ್ಲಿ ಜಾಸ್ತಿ ವೇಗ ಬೇಡ. ಹೊಸ ಜಾಗಕ್ಕೆ ತೆರಳಿದಾಗ ನೀರು, ಆಹಾರದ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಿ.
ಜನ್ಮಸಂಖ್ಯೆ 2
ಹೊಸ ಸ್ಥಳಗಳಿಗೆ ಭೇಟಿ ನೀಡಲಿದ್ದೀರಿ. ಕುಟುಂಬದೊಂದಿಗೆ ಉತ್ತಮವಾದ ಸಮಯ ಕಳೆಯಲಿದ್ದೀರಿ. ಕೆಲಸ ಬದಲಾವಣೆ ಮಾಡಬೇಕು ಅಂದುಕೊಳ್ಳುತ್ತಿರುವವರಿಗೆ ಇರುವ ಉದ್ಯೋಗದಲ್ಲೇ ಉತ್ತಮ ಅವಕಾಶ ದೊರೆಯುವ ಸೂಚನೆ ಸಿಗಲಿದೆ. ದೇಹದ ತೂಕದ ಕಡೆಗೆ ಒಂದಿಷ್ಟು ಲಕ್ಷ್ಯ ನೀಡಿ.
ಜನ್ಮಸಂಖ್ಯೆ 3
ವಿಮಾನ ಪ್ರಯಾಣ ಮಾಡುವಂಥವರು ಟಿಕೆಟ್, ಐಡಿ ಪ್ರೂಫ್ ಇತ್ಯಾದಿಗಳನ್ನು ಸರಿಯಾಗಿಟ್ಟುಕೊಳ್ಳಿ. ಕೊನೆ ಕ್ಷಣದಲ್ಲಿ ಒಂದಿಷ್ಟು ಆತಂಕದ ಸನ್ನಿವೇಶಗಳು ನಿರ್ಮಾಣ ಆಗಬಹುದು. ಇನ್ನು ಅಂತಾರಾಷ್ಟ್ರೀಯ ಪ್ರವಾಸಕ್ಕೆ ತೆರಳುತ್ತಿರುವವರು ಅಲ್ಲಿಬ ಕರೆನ್ಸಿ ಮಿತಿಗಳನ್ನು ಸರಿಯಾಗಿ ನೋಡಿಕೊಳ್ಳಿ.
ಜನ್ಮಸಂಖ್ಯೆ 4
ನಿಮ್ಮ ಬಹು ಸಮಯದ ಆಸೆ ಈಡೇರಿಸಿಕೊಳ್ಳುವ ಸಂದರ್ಭ ಇದು. ಸಜ್ಜನರ ಸಹವಾಸದಿಂದ ಮನಸ್ಸಿನಲ್ಲಿ ಆತ್ಮವಿಶ್ವಾಸ, ನಂಬಿಕೆ ಹೆಚ್ಚಾಗುತ್ತದೆ. ಮದ್ಯಪಾನದ ಅಭ್ಯಾಸ ಇರುವವರು ಸಾಧ್ಯವಾದಷ್ಟೂ ಈ ದಿನ ಅದರಿಂದ ದೂರ ಇರಿ. ಏಕೆಂದರೆ ನಿಮ್ಮ ಸ್ವಭಾವವನ್ನು ಯಾರೋ ಗಮನಿಸುತ್ತಿದ್ದಾರೆ. ಒಂದೊಳ್ಳೆ ಫಲ ದೊರೆಯುವ ಹೊತ್ತಿನಲ್ಲಿ ಅದನ್ನು ತಪ್ಪಿಸಿಕೊಳ್ಳದಿರಿ.
ಜನ್ಮಸಂಖ್ಯೆ 5
ತೀರ್ಥ ಕ್ಷೇತ್ರಗಳಿಗೆ ತೆರಳುವಂಥ ಯೋಗ ಇದೆ. ಪ್ರೀತಿಪಾತ್ರರ ಸಲುವಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಲಿದ್ದೀರಿ. ನಿಮ್ಮದಲ್ಲದ ತಪ್ಪಿಗೆ ನಿಂದನೆಯನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಎದುರಿನವರಿಗೆ ಅವರ ತಪ್ಪಿನ ಅರಿವಾಗುವಂತೆ ಮಾಡುತ್ತೇನೆ ಎಂದು ಹೊರಟು ನಿಲ್ಲಬೇಡಿ. ಇದರಿಂದ ಏನೂ ಪ್ರಯೋಜನ ಇಲ್ಲ.
ಜನ್ಮಸಂಖ್ಯೆ 6
ನಿಮ್ಮ ಮನಸಿಗೆ ಒಪ್ಪುವಂತಹ ಹುಡುಗ/ಹುಡುಗಿ ದೊರೆಯುವ ಅವಕಾಶಗಳಿವೆ. ಹಾಗಂತ ನೋಡಿದಾಕ್ಷಣ ಪ್ರೇಮ ನಿವೇದನೆ ಮಾಡಬೇಕು ಅಂತ ಅಲ್ಲ. ಪರಸ್ಪರರು ಸ್ನೇಹದಿಂದ ಇರಲು, ಅಭಿರುಚಿ ಬಗ್ಗೆ ತಿಳಿಯಲು ಸಮಯ ಮಾಡಿಕೊಳ್ಳಿ. ಆದರೆ ಸಂಬಂಧ ಗಟ್ಟಿ ಆಗುವುದಕ್ಕೆ ಸಮಯ ನೀಡಿ.
ಜನ್ಮಸಂಖ್ಯೆ 7
ದೇವತಾರಾಧನೆ, ಪೂಜೆ ಕಾರ್ಯಗಳು, ಔತಣ ಕೂಟ ಇಂಥದ್ದಕ್ಕೆ ನಿಮಗೆ ಆಹ್ವಾನ ಇರಲಿದೆ. ನಿಮ್ಮ ವ್ಯಾಪ್ತಿಗೆ ಅಥವಾ ಸಂಬಂಧ ಪಡದ ವಿಚಾರಗಳಿಗೆ ಮೌನವಾಗಿದ್ದು ಬಿಡುವುದು ಒಳಿತು. ವಿನಾಕಾರಣದ ಖರ್ಚುಗಳು ಒಂದಷ್ಟು ಹುಡುಕಿಕೊಂಡು ಬರಲಿವೆ. ಅದಕ್ಕೆ ಸಿದ್ಧವಾಗಿರುವುದು ಅಗತ್ಯ.
ಜನ್ಮಸಂಖ್ಯೆ 8
ಬಂದದ್ದೆಲ್ಲ ಬರಲಿ, ಆ ಭಗವಂತನ ದಯೆ ಒಂದಿರಲಿ ಎಂದು ಈ ದಿನ ನಿಮ್ಮ ಪಾಲಿಗೆ ಏನು ಬರುತ್ತದೋ ಅದು ಸ್ವೀಕರಿಸಿ. ವ್ಯಾಪಾರ- ವ್ಯವಹಾರ ಮಾಡುವವರಿಗೆ ಇತರರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಬಹಳವಾಗಿ ಅನಿಸುತ್ತದೆ. ದೂರದ ಊರುಗಳಿಂದ ಬರಬೇಕಾದ ವಸ್ತುಗಳು ನಿಮ್ಮನ್ನು ತಲುಪುವುದು ತಡ ಆಗಬಹುದು.
ಜನ್ಮಸಂಖ್ಯೆ 9
ಒಂದು ಹೊಸ ಉತ್ಸಾಹದಲ್ಲಿ, ಹೊಸ ಕೆಲಸದಲ್ಲಿ ತೊಡಗಿಕೊಳ್ಳುವುದಕ್ಕೆ ಈ ದಿನ ಸೂಕ್ತವಾಗಿದೆ. ನಿಮ್ಮದೇ ಬದುಕಿನ ಮರೆತು ಹೋಗಬೇಕು ಅಂದುಕೊಂಡಿದ್ದ ಪುಟವೊಂದು ಮತ್ತೆ ತೆರೆದುಕೊಳ್ಳಲಿದೆ. ನಿಮ್ಮ ವೈಫಲ್ಯದ ಹೊಣೆಯನ್ನು ಇನ್ನೊಬ್ಬರಿಗೆ ವರ್ಗಾವಣೆ ಮಾಡಬೇಡಿ. ಒಂದಿಷ್ಟು ಸಾಲ ಮಾಡಬೇಕಾದ ಪರಿಸ್ಥಿತಿ ಬರಲಿದೆ.
ಲೇಖನ- ಎನ್.ಕೆ.ಸ್ವಾತಿ
ಇನ್ನಷ್ಟು ಭವಿಷ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ