Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 31ರ ದಿನಭವಿಷ್ಯ

ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಈ ವರ್ಷದ ಕೊನೆ ದಿನ ಅಂದರೆ ಡಿಸೆಂಬರ್ 31ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳಿ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 31ರ ದಿನಭವಿಷ್ಯ
ಸಂಖ್ಯಾಶಾಸ್ತ್ರ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Dec 31, 2022 | 6:15 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 31ರ ಶನಿವಾರದ ದಿನ ಭವಿಷ್ಯ (numerology daily horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1

ಹೋಮ್ ಲೋನ್, ವೆಹಿಕಲ್ ಲೋನ್, ಪರ್ಸನಲ್ ಲೋನ್ ಅಥವಾ ವ್ಯಾಪಾರದ ಸಲುವಾಗಿ ಸಾಲ ಹೀಗೆ ಯಾವುದಾದರೂ ಸಾಲಕ್ಕೆ ಪ್ರಯತ್ನಿಸುವ ಅಥವಾ ಆ ಬಗ್ಗೆ ವಿಚಾರಿಸುವ ಸಾಧ್ಯತೆ ಇದೆ. ನಿಮ್ಮ ಅಗತ್ಯ ಅಥವಾ ಆ ಪ್ರಾಜೆಕ್ಟ್‌ಗೆ ಎಷ್ಟು ಅಗತ್ಯವೋ ಅಷ್ಟು ಮಾತ್ರ ಸಾಲ ಮಾಡಿ. ಬಡ್ಡಿ ಕಡಿಮೆ ಅಥವಾ ಇಎಂಐ ಕಡಿಮೆ ಅಂತ ಜಾಸ್ತಿ ಸಾಲಕ್ಕೆ ಹೋಗಬೇಡಿ.

ಜನ್ಮಸಂಖ್ಯೆ 2

ಮಸಾಲೆಯುಕ್ತ ಪದಾರ್ಥಗಳಿಂದ ದೂರ ಇರಿ. ದೂರದ ಊರು, ದೇಶಗಳಿಂದ ಆಪ್ತರು ಬರುವ ಸುದ್ದಿ ದೊರೆಯಲಿದೆ ಅಥವಾ ಹಾಗಲ್ಲದಿದ್ದರೆ ನೀವೇ ಅವರನ್ನು ಭೇಟಿ ಆಗಲು ತೆರಳುವ ಅವಕಾಶ ಸಿಗಬಹುದು. ಹೆಚ್ಚು ಹೊತ್ತು ಲ್ಯಾಪ್‌ಟಾಪ್ ಮುಂದೆ ಕೂರುವಂಥವರು ಅಥವಾ ಒಂದೇ ಕಡೆ ನಿಂತು ಅಥವಾ ಕೂತು ಕೆಲಸ ಮಾಡುವಂಥವರು ಆರೋಗ್ಯದ ಕಡೆ ಗಮನ ನೀಡಿ.

ಜನ್ಮಸಂಖ್ಯೆ 3

ನಿಮ್ಮ ಸಾಲದ ಬಗ್ಗೆ ಒಂದಿಷ್ಟು ಕ್ಯಾಲ್ಕುಲೇಟರ್ ಹಿಡಿದು, ಲೆಕ್ಕ ಹಾಕಿಕೊಳ್ಳುವ ಸಮಯ. ಸಂಗಾತಿ ಏನಾದರೂ ಹೇಳುತ್ತಿದ್ದಾರೆ ಅಂದರೆ ಸ್ವಲ್ಪ ಕೇಳಿಸಿಕೊಳ್ಳಿ. ಇದರಿಂದ ತುಂಬ ದೊಡ್ಡ ಸಹಾಯ ಆಗುತ್ತದೆ ಅಂತಲ್ಲ, ಸಂಬಂಧ ಸುಧಾರಿಸುತ್ತದೆ. ನೆಮ್ಮದಿ ವಾತಾವರಣ ಸೃಷ್ಟಿ ಆಗುತ್ತದೆ. ನಿಮ್ಮಿಂದ ಸಾಧ್ಯವಾದಲ್ಲಿ, ಅನುಕೂಲ ಇದ್ದಲ್ಲಿ ಪಾರಿವಾಳಗಳಿಗೆ ಕೈಲಾದಷ್ಟು ಆಹಾರ ಹಾಕಿ.

ಜನ್ಮಸಂಖ್ಯೆ 4

ಎಷ್ಟು ಪ್ರಯತ್ನ ಪಟ್ಟರೂ ನನ್ನ ಕೆಲಸ ತುದಿ ಮುಟ್ಟುತ್ತಿಲ್ಲ ಅಂದುಕೊಳ್ಳುತ್ತಿರುವವರಿಗೆ ಇವತ್ತು ಒಂದಿಷ್ಟು ಸಮಾಧಾನ ದೊರೆಯುತ್ತದೆ. ಕಣ್ಣು- ಕಿವಿಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ಆ ಬಗ್ಗೆ ನಿರ್ಲಕ್ಷ್ಯ ಮಾಡದೆ ತಕ್ಷಣ ವೈದ್ಯರಲ್ಲಿ ತೋರಿಸಿ. ಇನ್ನು ಸಾಧ್ಯವಾದಲ್ಲಿ ತುಳಸೀ ಗಿಡಕ್ಕೆ ಒಂದು ತಂಬಿಗೆಯಷ್ಟು ನೀರನ್ನು ಹಾಕಿ. ಯಾವುದಾದರೂ ಕಾರಣಕ್ಕೆ ನೀವು ಹಾಕುವಂತಿಲ್ಲ ಅಂತಾದರೆ ಬೇರೆಯವರಿಂದಲಾದರೂ ಹಾಕಿಸಿ.

ಜನ್ಮಸಂಖ್ಯೆ 5

ಬಹಳ ಸಮಯದಿಂದ ನೀವು ಅಂದುಕೊಳ್ಳುತ್ತಿದ್ದ ವಿಚಾರ ಈ ದಿನ ಹೇಳೇ ಬಿಡುವ ಸಾಧ್ಯತೆಗಳು ಹೆಚ್ಚಿವೆ. ಆದರೆ ಇಲ್ಲೊಂದು ಟ್ರಿಕ್ ಇದೆ. ಇದರಿಂದ ನಿಮಗೆ ಶೇಕಡಾ ಐವತ್ತರಷ್ಟು ಒಳ್ಳೆಯದು, ಇನ್ನು ಐವತ್ತರಷ್ಟು ಕೆಟ್ಟದ್ದಿದೆ. ಇನ್ನು ನಿಮ್ಮ ಮರೆವಿನಿಂದ ದೊಡ್ಡ ಅನುಕೂಲವೊಂದರಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 6

ನೀವು ಭಾವನಾತ್ಮಕವಾಗಿದ್ದ ಸಂದರ್ಭದಲ್ಲಿ ಕೊಟ್ಟ ಮಾತು ನಿಮ್ಮ ಪಾಲಿಗೆ ಮಗ್ಗುಲ ಮುಳ್ಳಾಗಿ ಚುಚ್ಚಲಿದೆ. ಇದು ಕನಿಷ್ಠ ಪಕ್ಷ ಇವತ್ತಿಗೆ ನಿಮಗೆ ಅನಿಸದಿರಬಹುದು. ಆದರೆ ಈ ಬಗ್ಗೆ ಮುಂದೊಂದು ದಿನ ಭಾರೀ ಬೇಜಾರು ಮಾಡಿಕೊಳ್ಳಲಿದ್ದೀರಿ. ವಾಹನದ ಪಾರ್ಕಿಂಗ್ ಬಗ್ಗೆ ಹೆಚ್ಚು ಲಕ್ಷ್ಯ ವಹಿಸಿ, ದಂಡ ಕಟ್ಟುವ ಪ್ರಸಂಗ ಎದುರಾದೀತು.

ಜನ್ಮಸಂಖ್ಯೆ 7

ನೀವಾಡಿದ ಅಥವಾ ಆಡುವ ಮಾತಿಗೆ ಬೇರೆ ಬೇರೆ ಅರ್ಥಗಳನ್ನು ಕಲ್ಪಿಸಲಾಗುತ್ತದೆ. ದೀರ್ಘ ಕಾಲದ ಗೆಳೆಯ ಅಥವಾ ಗೆಳತಿಯರ ಬಗ್ಗೆ ಆಕ್ಷೇಪಗಳನ್ನು ಕೇಳಬೇಕಾಗುತ್ತದೆ. ಯಾರಾದರೂ ಸರಿ, ಅವರೊಂದಿಗೆ ವಾದಕ್ಕೆ ಇಳಿಯಬೇಡಿ. ನಿಮ್ಮ ಕಷ್ಟಕಾಲದಲ್ಲಿ ಆಗಿದ್ದವರು ಈಗ ಸಹಾಯ ಕೇಳಿಬಂದಲ್ಲಿ ನಿಮ್ಮಿಂದಾದ ನೆರವು ನೀಡಿ. ಈ ದಿನ ವಿಷ್ಣು ಸಹಸ್ರ ನಾಮವನ್ನು ಶ್ರವಣ ಮಾಡಿ.

ಜನ್ಮಸಂಖ್ಯೆ 8

ಈ ದಿನ ಪಾರ್ಟಿಗಳಲ್ಲಿ ಭಾಗೀ ಆಗುವ ಅವಕಾಶಗಳು ಬರಲಿವೆ. ನಿಮ್ಮ ಸೋಷಿಯಲ್ ಕಾಂಟ್ಯಾಕ್ಟ್‌ಗಳು ವಿಸ್ತರಣೆ ಮಾಡಿಕೊಳ್ಳುವ ಅವಕಾಶಗಳಿವೆ. ಹೊಸದಾಗಿ ಪ್ರಾಜೆಕ್ಟ್‌ಗಳನ್ನು ಶುರು ಮಾಡಬೇಕು ಎಂದುಕೊಂಡವರಿಗೆ ಸೂಕ್ತ ಮಾರ್ಗದರ್ಶನ ದೊರೆಯಲಿದ್ದು, ಪ್ರಯತ್ನಗಳು ಯಶ ಕಾಣಲಿವೆ. ಪ್ರೇಮಿಗಳು ಸ್ವಲ್ಪ ಮಟ್ಟಿಗೆ ಪರೀಕ್ಷೆಯ ದಿನ. ಯಾವುದೇ ವಾದ- ವಿವಾದ ಬೇಡ.

ಜನ್ಮಸಂಖ್ಯೆ 9

ಅನಿರೀಕ್ಷಿತ ಅತಿಥಿಗಳ ಆಗಮನ ಆಗುತ್ತದೆ. ಯಾವುದೋ ಕಾಲದಿಂದ ಪ್ರಯತ್ನ ಮಾಡುತ್ತಿದ್ದ ಸಾಲವು ದೊರೆಯುವ ಸೂಚನೆಗಳು ಸಿಗಲಿವೆ. ಸ್ನೇಹಿತರು- ಸ್ನೇಹಿತೆಯರ ವೈಯಕ್ತಿಕ ವಿಚಾರಗಳಿಗೆ ಮೂಗು ತೂರಿಸಬೇಡಿ. ನಿಮ್ಮ ಒಳ್ಳೆಯತನವನ್ನು ಇತರರು ದುರುಪಯೋಗ ಮಾಡಿಕೊಳ್ಳದಂತೆ ಎಚ್ಚರ ವಹಿಸಿ. ಕ್ರಿಯೇಟಿವ್ ಕ್ಷೇತ್ರದಲ್ಲಿ ತೊಡಗಿಕೊಂಡವರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ.

ಲೇಖನ- ಎನ್‌.ಕೆ.ಸ್ವಾತಿ

ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ