AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಹೊಸ ವರ್ಷದ ಮೊದಲ ದಿನ ನಿಮ್ಮ ಭವಿಷ್ಯ ಹೇಗಿದೆ..?

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಹೊಸ ವರ್ಷದ ಮೊದಲ ದಿನ ನಿಮ್ಮ ಭವಿಷ್ಯ ಹೇಗಿದೆ..? ಇಲ್ಲಿದೆ ನೋಡಿ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಹೊಸ ವರ್ಷದ ಮೊದಲ ದಿನ ನಿಮ್ಮ ಭವಿಷ್ಯ ಹೇಗಿದೆ..?
ಸಂಖ್ಯಾಶಾಸ್ತ್ರ
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on: Jan 01, 2023 | 6:00 AM

Share

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ 2023 ಹೊಸ ವರ್ಷದ ಮೊದಲ ದಿನದ (ಜನವರಿ 1)  ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Yearly Horoscope 2023: 12 ರಾಶಿಗಳ ವರ್ಷ ಭವಿಷ್ಯ ಹೇಗಿದೆ? ಯಾರಿಗಿದೆ ಅದೃಷ್ಟ?

ಜನ್ಮಸಂಖ್ಯೆ 1

ಹೊಸ ವಿಷಯಗಳನ್ನು ಕಲಿತುಕೊಳ್ಳಲಿದ್ದೀರಿ. ವಸ್ತ್ರಾಭರಣ ಖರೀದಿಸಲಿದ್ದೀರಿ. ಗುರು- ಹಿರಿಯರ ಆಶೀರ್ವಾದ ಇರಲಿದೆ. ಸ್ನೇಹಿತರು- ಬಂಧುಗಳು ಹಣಕಾಸಿನ ನೆರವು ನೀಡಬಹುದು. ಮನರಂಜನೆಗಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಯಾರಿಗೂ ಸಾಲಕ್ಕೆ ಜಾಮೀನಾಗಿ ನಿಲ್ಲಬೇಡಿ. ಪಾರ್ಟಿಗಳಲ್ಲಿ ಭಾಗೀ ಆಗಲಿದ್ದೀರಿ.

ಜನ್ಮಸಂಖ್ಯೆ 2

ಪ್ರಭಾವಿ ವ್ಯಕ್ತಿಗಳ ಸಂಪರ್ಕಕಕ್ಕೆ ಬರಲಿದ್ದೀರಿ. ವೃತ್ತಿನಿರತರಿಗೆ ಭವಿಷ್ಯದ ಸವಾಲಿನ ಬಗ್ಗೆ ಸೂಚನೆ ದೊರೆಯಲಿದೆ. ಸೋಷಿಯಲ್ ಮೀಡಿಯಾ ಬಳಸುವವರು ಬಹಳ ಎಚ್ಚರಿಕೆಯಿಂದ ಇರಬೇಕು. ವಾಗ್ವಾದ- ಭಿನ್ನಾಭಿಪ್ರಾಯ ಇಲ್ಲದಂತೆ ನೋಡಿಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ.

ಜನ್ಮಸಂಖ್ಯೆ 3

ವಿಪರೀತ ಚಂಚಲತೆ ಇರುತ್ತದೆ. ಎಲ್ಲವೂ ಬೇಕು, ಬೇಕು ಎಂಬ ಧೋರಣೆ ಸರಿಯಲ್ಲ. ನಿಮ್ಮ ಅಗತ್ಯಗಳನ್ನು ಅರಿತುಕೊಂಡು, ಎಷ್ಟು ಬೇಕೋ ಅಷ್ಟನ್ನು ಮಾತ್ರ ಖರೀದಿಸಿ. ಕ್ರೆಡಿಟ್ ಕಾರ್ಡ್ ಬಳಕೆ ಮಾಡುವಾಗ ಬಹಳ ಎಚ್ಚರಿಕೆ ಅಗತ್ಯ. ಕಡಿಮೆ ಬಡ್ಡಿಗೆ ಅಥವಾ ಬಡ್ಡಿಯೇ ಇಲ್ಲದ ಸಾಲ ಸಿಗುತ್ತದೆ ಎಂಬ ಕಾರಣಕ್ಕೆ ಹಣ ಅಥವಾ ವಸ್ತು ತೆಗೆದುಕೊಳ್ಳಬೇಡಿ.

ಜನ್ಮಸಂಖ್ಯೆ 4

ಮನೆಗೆ ಅಗತ್ಯ ಇರುವ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ. ಈ ದಿನ ಹಲವು ಜನರ ಮಧ್ಯೆ ಇದ್ದರೂ ಒಂಟಿತನ ನಿಮ್ಮನ್ನು ಕಾಡುತ್ತದೆ, ಸ್ವಾದಿಷ್ಟವಾದ ಊಟ- ತಿಂಡಿ ಸವಿಯುವ ಯೋಗ ಇದೆ. ವಿನಾಕಾರಣವಾಗಿ ಭವಿಷ್ಯದ ಬಗ್ಗೆ ಆತಂಕಕ್ಕೆ ಒಳಗಾಗಬೇಡಿ. ಎಲ್ಲರಿಗೂ ಆಗಿದ್ದೇ ನಿಮಗೂ ಆಗಲಿದೆ. ಅದಕ್ಕೆ ಗಾಬರಿ ಏಕೆ?

ಜನ್ಮಸಂಖ್ಯೆ 5

ವ್ಯಾಪಾರ- ವ್ಯವಹಾರ ವಿಸ್ತರಣೆಗಾಗಿ ಕುಟುಂಬದಲ್ಲಿ ಚರ್ಚೆ ನಡೆಸುವ ಸಾಧ್ಯತೆ ಇದೆ. ನಿಮ್ಮ ಈ ತನಕದ ಉಳಿತಾಯ ಹಾಗೂ ತೆಗೆದುಕೊಳ್ಳಬಹುದಾದ ಸಾಲ ಮತ್ತು ವ್ಯಾಪಾರಕ್ಕೆ ಇರುವ ಅವಕಾಶಗಳನ್ನು ಚೆನ್ನಾಗಿ ಅಳೆದು, ಮುಂದಿನ ಯೋಜನೆ ರೂಪಿಸುತ್ತೀರಿ. ನಿಮ್ಮ ಸಮಯಪ್ರಜ್ಞೆಯಿಂದ ತುಂಬ ದೊಡ್ಡ ಸಹಾಯ ಆಗಲಿದೆ.

ಜನ್ಮಸಂಖ್ಯೆ 6

ಗುರುಗಳ ಅನುಗ್ರಹ ದೊರೆಯಲಿದೆ. ಹೊಸದಾಗಿ ವಾಹನ ಖರೀದಿಗಾಗಿ ಹಣ ಹೊಂದಿಕೆಗಾಗಿ ಸ್ನೇಹಿತರು- ಸಂಬಂಧಿಗಳ ಬಳಿ ಪ್ರಯತ್ನ ಮಾಡಲಿದ್ದೀರಿ. ದಾಕ್ಷಿಣ್ಯಕ್ಕೆ ಸಿಲುಕಿಕೊಂಡು ನಿಮ್ಮ ಕೈಯಾರೆ ಹಣ ಖರ್ಚು ಮಾಡಿಕೊಳ್ಳಲಿದ್ದೀರಿ. ಹಳೇ ವ್ಯಾಜ್ಯಗಳು ಇದ್ದಲ್ಲಿ ಮಾತು ಕತೆ ಮೂಲಕ ಬಗಹರಿಸಿಕೊಳ್ಳುವುದಕ್ಕೆ ದಾರಿ ಸಿಗಲಿದೆ.

ಜನ್ಮಸಂಖ್ಯೆ 7

ಭರವಸೆ ಇಟ್ಟುಕೊಂಡು ಶುರು ಮಾಡಿದ್ದ ಕೆಲಸ ಅರ್ಧಕ್ಕೆ ನಿಲ್ಲುವ ಸಾಧ್ಯತೆಗಳಿವೆ. ಇದರಿಂದಾಗಿ ನಿಮ್ಮ ವರ್ಚಸ್ಸು, ಹಣಕ್ಕೆ ಹಾನಿ ಆಗಬಹುದು. ಹೊಸಬರ ಪರಿಚಯ ಆಗುತ್ತದೆ. ಸ್ವಂತ ಉದ್ಯಮಿಗಳಿಗೆ ದೂರ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಕಣ್ಣಿನ ಅಲರ್ಜಿ ಕಾಡಬಹುದು.

ಜನ್ಮಸಂಖ್ಯೆ 8

ಹೊಸ ಕೆಲಸಕ್ಕೆ ಸಿದ್ಧತೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಅಂದರೆ ಅದಕ್ಕೆ ಬೇಕಾದಂತೆ ರೆಸ್ಯೂಮೆ, ಹೊಸ ದಿರಿಸು, ಶೂ ಖರೀದಿ ಇತ್ಯಾದಿಗಳೊಂದಿಗೆ ಸಿದ್ಧ ಆಗಲಿದ್ದೀರಿ. ತಾಯಿ ಕಡೆಯ ಸಂಬಂಧಿಕರು ಮನೆಗೆ ಬರುವಂಥ ಯೋಗ ಇದೆ. ನವ ವಿವಾಹಿತರು ಸಂತೋಷವಾಗಿ ಕಾಲ ಕಳೆಯಲಿದ್ದೀರಿ.

ಜನ್ಮಸಂಖ್ಯೆ 9

ಸಂಬಂಧ ಗಟ್ಟಿ ಆಗಲಿದೆ. ಸ್ನೇಹಿತರ ಮಾತಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಿದ್ದೀರಿ. ಮರದ ಕೆತ್ತನೆ, ಮಾರಾಟ ಮಾಡುವಂಥವರಿಗೆ ಲಾಭದ ಪ್ರಮಾಣ ಜಾಸ್ತಿ ಆಗುವ ಮಾರ್ಗ ಗೋಚರಿಸಲಿದೆ. ರಾಜಕಾರಣಿಗಳಿಗೆ ಪ್ರಭಾವ ವಿಸ್ತರಿಸಿಕೊಳ್ಳವಂಥ ದಿನ ಇದು. ಮನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಅತಿಥಿಗಳು ಬರಲಿದ್ದಾರೆ.

ಲೇಖನ- ಎನ್‌.ಕೆ.ಸ್ವಾತಿ

Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು