Pisces Yearly Horoscope 2025: ಈ ರಾಶಿಯವರಿಗೆ ಒತ್ತಡ, ಉದ್ವೇಗ, ಮನಸ್ತಾಪ ಅಧಿಕ
ಮೀನ ರಾಶಿ ವರ್ಷ ಭವಿಷ್ಯ 2025: ಮೀನ ರಾಶಿಗೆ ಈ ವರ್ಷ ಸದ್ಯದ ಪರಿಸ್ಥಿತಿಯಲ್ಲಿ ನೀವು ಸುಬ್ರಹ್ಮಣನ ಉಪಾಸನೆ ಮಾಡುವುದೇ ಉಪಾಯ. ಆರ್ಥಿಕವಾಗಿ ಸಬಲರಾಗಲು, ಧೈರ್ಯದಿಂದ ಮುನ್ನಡೆಯಲು ಸುರನಾಯಕನೇ ದಾರಿ. ಸಾಡೇಸಾಥ್ ಕೂಡ ಇರುವುದರಿಂದ ಯಾವುದರಿಂದ ನೋವು ಎನ್ನುವುದು ಅರ್ಥವಾಗದೇ ಇದ್ದೀತು. ನಿಮ್ಮ ಜೀವನದಲ್ಲಿ ಇಂತಹ ಕಷ್ಟಗಳನ್ನು ಅಭವಿಸಬಹುದು.
ಕೊನೆಯ ರಾಶಿಯವರಿಗೆ ಈ ವರ್ಷ ಮಿಶ್ರ ಫಲ. ಕಳೆದ ವರ್ಷಕ್ಕಿಂತ ಈ ವರ್ಷ ಸ್ವಲ್ಪ ಸುಧಾರಣೆ ಇರುವುದು. ಸಾಡೇಸಾಥ್ ನ ಮಧ್ಯಾವಧಿಯಲ್ಲಿ ಇರುವ ಕಾರಣ ಒತ್ತಡ, ಉದ್ವೇಗ, ಮನಸ್ತಾಪ ಅಧಿಕವಾಗಲಿದೆ. ದ್ವಾದಶದಲ್ಲಿ ರಾಹು ಹಾಗೂ ಷಷ್ಠದಲ್ಲಿ ಕೇತು ಹಾಗೂ ಚತುರ್ಥದಲ್ಲಿ ಗುರುವು ನಿಮ್ಮ ಪೂರ್ಣಬಲನಾಗಿ ಇರಲಾರನು. ಆರ್ಥಿಕತೆ ಮಧ್ಯಮ ಸ್ಥಿತಿಯಲ್ಲಿ ಇರುವುದು. ಉತ್ಸಾಹವೂ ಪರರ ಕಾರಣಗಳಿಂದ ಕಡಿಮೆಯಾಗಲಿದೆ.
ಆರೋಗ್ಯ :
ಈ ವರ್ಷ ನಿಮ್ಮ ಆರೋಗ್ಯವನ್ನು ಬುದ್ಧಿ ಪೂರ್ವಕ ಸರಿ ಮಾಡಿಕೊಳ್ಳಬೇಕು. ಯಾರಾದರೂ ಆಹಾರವನ್ನು ಒತ್ತಾಯ ಮಾಡಿ ತನ್ನಿಸಬಹುದು. ಅದೆಲ್ಲವೂ ನಿಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವುದು. ಅವಶ್ಯಕತೆ ಇರುವಷ್ಟು ಮಾತ್ರ ತಿನ್ನಿ. ಉದರಬಾಧೆ ಅಧಿಕವಾಗಿ ಕಾಡುವುದು.
ಪ್ರೇಮ ಮತ್ತು ವಿವಾಹ :
ಮೊದಲನೆಯದಾಗಿ ವಿವಾಹಕ್ಕೆ ಗುರು ಬಲ ಬರುವತನಕ ಕಾಯುವುದು ಅನಿವಾರ್ಯ. ಇನ್ನು ಪ್ರೇಮವಿದ್ದರೂ ಅದರ ಬಗ್ಗೆ ಅತಿಯಾದ ಮೋಹವಿರದು. ಆದಂತೆ ಆಗಲಿ ಎಂಬ ಮನೋಭಾವ ಇರುವುದು. ಸಮಯ ಸಂದರ್ಭ ನೋಡಿ ಅದನ್ನು ಉಳಿಸಿಕೊಳ್ಳುವ ಮನೋಭಾವ ಇರಲಿದೆ. ಶುಕ್ರನು ನಿಮ್ಮ ರಾಶಿಗೆ ಬಂದಾಗ ಪ್ರೇಮದ ಬಗ್ಗೆ ಸಣ್ಣ ಆಸೆ ಆರಂಭವಾಗುವುದು.
ಉದ್ಯಮ ಮತ್ತು ಆರ್ಥಿಕತೆ :
ವರ್ಷಾರಂಭದಲ್ಲಿ ಉದ್ಯಮಾಧಿಪತಿಯ ಸ್ಥಾನದಲ್ಲಿ ಬುಧ ಸೂರ್ಯರಿರುವರು. ವೈದ್ಯಕಾರ್ಯದಲ್ಲಿ ಇದ್ದವರಿಗೆ ಆದಾಯ ಅಧಿಕ. ಭೂ ಉದ್ಯಮದಲ್ಲಿ ತಕ್ಕಮಟ್ಟಿಗೆ ಅಭಿವೃದ್ಧಿ. ಅತಿಯಾದ ಲಾಭಕ್ಕೆ ಹೋಗಿ ಎಡವಟ್ಟು ಮಾಡಿಕೊಳ್ಳಬಹುದು. ಬೇಡದ ಕಾರ್ಯಕ್ಕೆ ರಾಹುವು ಅವಕಾಶ ಕೊಟ್ಟರೂ ಗುರುವಿನ ದೃಷ್ಟಿ ಇರುವುದು ಅದಕ್ಕೆ ಬೇರೆ ರೀತಿಯಲ್ಲಿ ಬದಲಿಸುತ್ತದೆ. ಹಿರಿಯರ ಉಪದೇಶದಿಂದ ಸರಿಯಾಗಲು ಅವಕಾಶ ಬರಲಿದೆ.
ಕುಟುಂಬ ವ್ಯವಸ್ಥೆ :
ಕೌಟುಂಬಿಕ ಜೀವನ ಬಹಳ ಡೋಲಾಯಮಾನವಾಗಿ ಕಾಣಿಸುವುದು. ಸಿಟ್ಟು ಮಾಡಿಕೊಂಡು ಎಲ್ಲವನ್ನೂ ಎಲ್ಲರನ್ನೂ ತೆಗಳುವಿರಿ. ದೊಡ್ಡ ಮನೆಯಲ್ಲಿ ಈ ವರ್ಷ ಹೆಚ್ಚು ದಿನ ವಾಸ ಮಾಡುವಿರಿ. ಸದ್ಯ ಕುಜ ದಶೆ ನಿಮಗೆ ಒಳ್ಳೆಯದಲ್ಲ.
ಶತ್ರುಬಾಧೆ :
ವರ್ಷದ ಮಧ್ಯಭಾಗದಿಂದ ಕೇತುವಿನ ಸಂಚಾರ ಷಷ್ಠಸ್ಥಾನದಲ್ಲಿ. ಕ್ಷುಲ್ಲಕ ಕಾರಣಕ್ಕೆ ಶತ್ರುತ್ವ ಹುಟ್ಟಿಕೊಳ್ಳುವುದು. ಅದನ್ನು ದೊಡ್ಡದಾಗಿ ನೀವೇ ಮಾಡಿಕೊಳ್ಳುವಿರಿ. ನಿರ್ಲಕ್ಷ್ಯ ತೋರಿದಷ್ಟು ಅಲ್ಲೇ ಮುಕ್ತಾಯವಾಗುವುದು.
ಅದೃಷ್ಟ :
ನಿಮ್ಮ ಅದೃಷ್ಟ ಸ್ಥಾನ ಹಾಗೂ ಆರ್ಥಿಕ ವ್ಯವಹಾರ ಸ್ಥಾನದ ಅಧಿಪತಿ ಒಬ್ಬರೇ. ಅವನು ನೀಚನಾಗಿದ್ದು ಮೇ ತನಕ ಯಾವ ಕೆಲಸವೂ ತೃಪ್ತಿ ಕೊಡದು. ನಿಮ್ಮ ಪ್ರಯತ್ನವೇ ಪೂರ್ಣವಾಗಿ ಬೇಕು. ದೈವವನ್ನು ನಂಬಿಮಾಡಲಾಗದು. ಕುಜದಶೆ ಇದ್ದವರಿಗೆ ಅತಿಯಾದ ದುಃಸ್ಥಿತಿ ಬರಲಿದೆ.
ಸದ್ಯದ ಪರಿಸ್ಥಿತಿಯಲ್ಲಿ ನೀವು ಸುಬ್ರಹ್ಮಣನ ಉಪಾಸನೆ ಮಾಡುವುದೇ ಉಪಾಯ. ಆರ್ಥಿಕವಾಗಿ ಸಬಲರಾಗಲು, ಧೈರ್ಯದಿಂದ ಮುನ್ನಡೆಯಲು ಸುರನಾಯಕನೇ ದಾರಿ. ಸಾಡೇಸಾಥ್ ಕೂಡ ಇರುವುದರಿಂದ ಯಾವುದರಿಂದ ನೋವು ಎನ್ನುವುದು ಅರ್ಥವಾಗದೇ ಇದ್ದೀತು.
– ಲೋಹಿತ ಹೆಬ್ಬಾರ್, ಇಡುವಾಣಿ