Daily Horoscope: ಇಂದಿನ ರಾಶಿಭವಿಷ್ಯ, ಹಣಕಾಸಿನ ಕೊರತೆಯಿಂದ ಈ ರಾಶಿಯವರ ನೆಮ್ಮದಿ ಕಡಿಮೆಯಾದೀತು

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 25) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಇಂದಿನ ರಾಶಿಭವಿಷ್ಯ, ಹಣಕಾಸಿನ ಕೊರತೆಯಿಂದ ಈ ರಾಶಿಯವರ ನೆಮ್ಮದಿ ಕಡಿಮೆಯಾದೀತು
ಇಂದಿನ ರಾಶಿಭವಿಷ್ಯImage Credit source: freepik
Follow us
Rakesh Nayak Manchi
|

Updated on: Jun 25, 2023 | 12:30 AM

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಕೆಲವರು ಬೆಳಗ್ಗೆ ಎದ್ದ ಕೂಡಲೇ ರಾಶಿ ಭವಿಷ್ಯ (Daily horoscope) ತಪ್ಪದೇ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯದಿಂದ ತಿಳಿದುಕೊಳ್ಳುತ್ತಾರೆ. ಅದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜೂನ್​ 25) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ?, ಯಾರಿಗೆ ಲಾಭ?, ಯಾರಿಗೆ ನಷ್ಟ?, ಯಾರಿಗೆ ಶುಭ, ಅಶುಭ? ಇಲ್ಲಿ ನೋಡಿ ನಿಮ್ಮ ಭವಿಷ್ಯ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ಸಾಧ್ಯಮ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಸಂಜೆ 05:26 ರಿಂದ 07:03ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:35 ರಿಂದ 02:12ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:49 ರಿಂದ 05:26ರ ವರೆಗೆ.

ಸಿಂಹ: ಇಂದು ನೀವು ಇನ್ನೊಬ್ಬರ ಶ್ರೇಯಸ್ಸಿಗೆ ಕೆಲಸವನ್ನು ಮಾಡಲು ಇಚ್ಛಿಸುವಿರಿ. ಸಾಮಾಜಿಕ ಕೆಲಸವು ನಿಮಗೆ ಪ್ರಿಯವಾದುದಾಗಿದೆ. ಆಭರಣದ ಮೇಲೆ‌ ಹೂಡಿಕೆ ಮಾಡಲು ಬಯಸುವಿರಿ. ನೂತನ ವಸ್ತುಗಳನ್ನು ಧರಿಸಿ ಸಂತೋಷ ಪಡುವಿರಿ.‌ ದಾಂಪತ್ಯದಲ್ಲಿ ಸುಖವಾಗಿರಬೇಕೆಂಬ ವಿಷಯವನ್ನು ಸಂಗಾತಿಯ ಜೊತೆ ಹಂಚಿಕೊಳ್ಳುವಿರಿ. ಹಣಕಾಸಿನ ಕೊರತೆಯಿಂದ ನಿಮಗೆ ನೆಮ್ಮದಿ ಕಡಿಮೆಯಾದೀತು. ಹೆಚ್ಚಿನ ದುಡಿಮೆಗೆ ಪ್ರತ್ನಿಸುವಿರಿ. ಅನ್ಯರನ್ನು ಅನುಸರಿಸಲು ನಿಮಗೆ ಇಷ್ಟವಾಗದು. ನಿಮ್ಮದೇ ಚಿಂತನೆಯನ್ನು ಬೆಳೆಸಿಕೊಳ್ಳಲು ಬಯಸುವಿರಿ. ಸಮಯದ ಬೆಲೆಯನ್ನು ಅನ್ಯರಿಂದ ಪಡೆಯುವಿರಿ. ಉನ್ನತ ಅಧಿಕಾರಕ್ಕೆ ಹೋಗುವ ಸಂಭವಿದ್ದರೂ ಹಿತಶತ್ರುಗಳ ಪಿತೂರಿಯಿಂದ ಅಥವಾ ಹಿಂದೆಂದೋ ಆಡಿದ ಮಾತಿನ್ನೇ ಇಟ್ಟುಕೊಂಡು ನಿಮಗೆ ಹುದ್ದೆಯನ್ನು ಕೊಡದೇಹೋಗಬಹುದು. ನಿಮ್ಮ ಸ್ಥಿರಾಸ್ತಿಯನ್ನು ಅತಿಕ್ರಮಣ ಮಾಡಲು ಹೊಂಚುಹಾಕುತ್ತಿದ್ದಾರೆ. ನೀವು ಎಚ್ಚೆತ್ತುಕೊಳ್ಳಬೇಕಾಗಿದೆ. ರಾಜಕೀಯದ ಹಿನ್ನೆಯನ್ನು ಇಟ್ಟುಕೊಂಡು ನೀವು ಮುಂದುವರಿಯಬೇಕು. ಹೊಂದಾಣಿಕೆಯಿಂದ ಕಲಹವನ್ನು ಸರಿಮಾಡಿಕೊಳ್ಳಿ. ಇಂದು ನಿಮಗೆ ಹೋಗಬೇಕಾದಲ್ಲಿಗೆ ಹೋಗಲು ಆಗಲಿಲ್ಲ ಎಂದು ಬಹಳ ಬೇಸರವಾದೀತು. ಮನೆಯವರನ್ನು ಶಪಿಸಲೂಬಹುದು. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ಸಕಾಲವಾಗಿದೆ.

ಕನ್ಯಾ: ಇಂದು ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿಯನ್ನು ಓದಿನಲ್ಲಿ ತೋರಿಸುವರು. ಜನರ ಜೊತೆ ಬೆರೆಯುವ ಮನಸ್ಸಾಗುವುದು. ದೂರದಲ್ಲಿ‌ ಇರುವವರು ಮನೆಗೆ ಹೋಗಲಿದ್ದಾರೆ. ಆಹಾರದ ಅಭಾವವು ನಿಮಗೆ‌ ಆಗಬಹುದು. ಆಸ್ತಿಯ ವಿಚಾರವಾಗಿ ನೆರೆ ಹೊರೆಯಲ್ಲಿ‌‌ ಕಲಹವಾಗಬಹುದು. ವಿದೇಶದ ವ್ಯಾಪಾರದಲ್ಲಿ ಸ್ವಲ್ಪ ಹಿನ್ನಡೆಯಾಗಬಹುದು. ಕಲಾವಿದರು‌‌ ಮನೆಯಲ್ಲಿಯೇ ಇರಬೇಕಾದೀತು.‌ ನಿಮಗೆ ಬಹಳ ಕಿರಿಕಿರಿಯ ದಿನವು ಇಂದಾಗಲಿದೆ. ಸಂಗಾತಿಯೂ ನಿಮ್ಮ ಜೊತೆ ಸರಿಯಾಗಿ ಮಾತನಾಡುವುದಿಲ್ಲ. ಏಕಾಂತವಾಗಿ ಒಂದು‌ಕಡೆ ಕುಳಿತು ಚಿಂತಾಮಗ್ನರಾಗುವಿರಿ.

ತುಲಾ: ಇಂದು ನಿಮ್ಮ ಮನಸ್ಸನ್ನು ಸಂತೋಷವಾಗಿರಿಸುವ ಸಂಗತಿಗಳು ನಡೆಯಬಹುದು. ಹಿರಿಯರ ಜೊತೆ ಸಮಯವನ್ನು ಕಳೆಯಲು ಅವಕಾಶ ಸಿಗಲಿದೆ. ಆರ್ಥಿಕ‌ವ್ಯವಹಾರಗಳನ್ನು ಇಂದು ಸರಿಯಾಗಿ‌ ತಿಳಿದುಕೊಳ್ಳುವಿರಿ. ಅಶ್ಲೀಷಪದಗಳನ್ನು ಬಳಸಿ ಹಿರಿಯರಿಂದ ಬೈಗುಳ ಪಡೆಯುವಿರಿ. ಹೊಸ ಆದಾಯದ ಮೂಲವನ್ನು ಸಿದ್ಧಪಡಿಸಿಕೊಳ್ಳುವಿರಿ. ಸಭೆಗಳಿಗೆ ಭಾಗವಹಿಸಲು ಹೋಗುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಬಹುದು. ನಿಮ್ಮ ವ್ಯಕ್ತಿತ್ವವನ್ನು ಸರಿಮಾಡಿಕೊಳ್ಳಲು ಬಯಸುವಿರಿ. ಆಪ್ತರ ಜೊತೆ ಹರಟೆ ಹೊಡೆಯುವಿರಿ.

ವೃಶ್ಚಿಕ: ಇಂದು ನೀವು ಅಧಿಕಾರಿಗಳ ಜೊತೆ ಬಹಳ ಆಪ್ತತೆಯಿಂದ ವ್ಯವಹರಿಸುವಿರಿ. ಇನ್ನೊಬ್ಬರಿಗೆ ಸಾಲವಾಗಿ ನೀಡಿದ ಹಣವನ್ನು ಸ್ವೀಕರಿಸಬಹುದು. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಸಂಪತ್ತನ್ನು ಉಳಿಸಿಕೊಳ್ಳಿ. ಸ್ನೇಹಿತರ ಜೊತೆ ಮೋಜಿನಲ್ಲಿ ಸಮಯವನ್ನು ಕಳೆಯುವಿರಿ. ನಿಮ್ಮದು ರಾಜಕೀಯ ಪ್ರೇರಿತ ಮನಸ್ಸಾಗಿದ್ದು ಎಲ್ಲದರಲ್ಲಿಯೂ ಅದನ್ನೇ ಕಾಣುವಿರಿ. ಸಹಾಯ ಮಾಡುವ ಮನಸ್ಸು ಇಂದು ನಿಮ್ಮಲ್ಲಿ ಇಲ್ಲವಾದೀತು. ಅತಿಯಾದ ವಿಶ್ವಾಸವು ನಿಮಗೆ ಹಿನ್ನಡೆಯನ್ನು ತಂದೀತು. ನೀವಂದುಕೊಂಡಂತೆ ಇಂದಿನ‌ ಕೆಲಸವು ಸಾಗದು. ಇಂದು ಸ್ವಲ್ಪ ಆಲಸ್ಯವೂ ಇರಬಹುದು.

-ಲೋಹಿತಶರ್ಮಾ ಇಡುವಾಣಿ

ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ