Horoscope: ಈ ರಾಶಿಯವರು ಯಾರನ್ನಾದರೂ ಹತ್ತಿರದವರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ
ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಮೇ.30 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಮೇ 30ರ ರಾಶಿ ಭವಿಷ್ಯದಲ್ಲಿ ಮೇಷ ರಾಶಿಯಿಂದ ಕಟಕ ರಾಶಿಯವರೆಗೆ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ವೈಧೃತಿ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 56 ನಿಮಿಷಕ್ಕೆ, ರಾಹು ಕಾಲ 14:07ರಿಂದ 15:44ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 06:04 ರಿಂದ ಬೆಳಿಗ್ಗೆ 07:41ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:17 ರಿಂದ ಬೆಳಿಗ್ಗೆ 10:540ರ ವರೆಗೆ.
ಸಿಂಹ ರಾಶಿ :ನಿಮ್ಮ ಮುಂಗೋಪವು ನಿಮ್ಮವರಿಗೆ ಮುಜುಗರವಾಗಬಹುದು. ಉದ್ಯೋಗದಿಂದ ಹೊರನಡೆಯುವ ಸಾಧ್ಯತೆ ಇದೆ. ನೆಮ್ಮದಿಯನ್ನು ಕಾಣುವಾಗಲೇ ಈ ಘಟನೆ ನಿಮ್ಮನ್ನು ಆತಂಕಕ್ಕೆ ದೂಡಲಿದೆ. ಪ್ರೇಮಕ್ಕೆ ಸಂಬಂಧಿಸಿದಂತೆ ಹೆಚ್ಚು ಬೇಡಿಕೆಗಳು ಬರಬಹುದು. ಆಪ್ತರ ಜೊತೆ ಹೊಸ ಉದ್ಯೋಗವನ್ನು ಆರಂಭಿಸುವ ಆಲೋಚನೆ ಮಾಡುವಿರಿ. ನಿಮ್ಮ ಬುದ್ಧಿವಂತಿಕೆಯಿಂದ ಸುಲಭವಾಗಿ ಸೋಲಿಸಲು ಸಾಧ್ಯವಾಗುತ್ತದೆ. ಶತ್ರುಗಳ ಬಗ್ಗೆ ಆತಂಕ ಇರವುದು. ದೊಡ್ಡ ಮೊತ್ತದ ವ್ಯವಹಾರವನ್ನು ಮಾಡುವಾಗ ಭಯವಿರುವುದು. ನಿಮ್ಮ ಶಾಂತವಾದ ಮನಸ್ಸೇ ಹಲವು ಸಮಸ್ಯೆಗಳನ್ನು ದೂರ ಮಾಡುವುದು. ಪ್ರಾಮಾಣಿಕತೆಯು ಇಂದು ನಿಮಗೆ ವರದಾನವಾಗುವುದು. ಅಪರಿಚಿತ ಸ್ಥಳದಿಂದ ಭೀತಿಯಾಗಬಹುದು. ಈಅಪರೂಪದ ವ್ಯಕ್ತಿಗಳ ಭೇಟಿಯಾಗಲಿದೆ. ನಿಮ್ಮ ಸರಳತೆಯು ನಿಮಗೆ ಧನಾತ್ಮಕ ಅಂಶಗಳನ್ನು ತಂದುಕೊಡುವುದು.
ಕನ್ಯಾ ರಾಶಿ :ಇಂದು ಸ್ನೇಹಿತರ ಒತ್ತಾಯಕ್ಕೆ ಮೋಜಿಗಾಗಿ ಹಣವನ್ನು ಹಾಕಿ ಕಳೆದುಕೊಳ್ಳುವಿರಿ. ಮನೆಯ ಬಗ್ಗೆ ನಿಮಗೆ ಒಲವು ಕಡಮೆಯಾದೀತು. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ನಿಮ್ಮ ಹೆಚ್ಚಿನ ವಿಷಯಗಳ ಮೇಲೆ ನೀವು ಹಿಡಿತ ಸಾಧಿಸಲು ಸಾಧ್ಯವಿದೆ. ಸಂಗಾತಿಯ ಒತ್ತಡದಿಂದ ಕೆಲವು ತೀರ್ಮಾನವನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗುವುದು. ನಿಮಗೆ ನಿಶ್ಚಯವಿಲ್ಲದೇ ಯಾವುದನ್ನೂ ಮಾಡಲು ಹೋಗುವುದು ಬೇಡ. ಕೆಲಸದ ವೇಗವು ನಿರೀಕ್ಷೆಯಂತೆ ಇರುತ್ತದೆ. ಕಾನೂನಾತ್ಮಕ ವಿಷಯಕ್ಕೆ ಸರಿಯಾದ ಸಲಹೆಯನ್ನು ಪಡೆಯುವಿರಿ. ನೀವು ಸ್ನೇಹಿತನೊಂದಿಗೆ ಯಾವುದೇ ವಿವಾದವನ್ನು ಹೊಂದಿದ್ದರೆ, ಅವರು ನಿಮ್ಮನ್ನು ಸಮಾಧಾನಪಡಿಸಲು ಬರಬಹುದು. ಹಿರಿಯರಿಗೆ ಕೊಡಬೇಕಾದ ಗೌರವವನ್ನು ಕೊಡಿ. ಹಳೆಯ ತಪ್ಪಿನಿಂದ ಪಾಠ ಕಲಿಯಬೇಕು. ಮಾಡುವ ಕೆಲಸದಲ್ಲಿ ಶ್ರದ್ಧೆಯು ಕಡಿಮೆ ಆಗುವುದು. ಕಳೆದುಹೋದ ವಿಚಾರಕ್ಕೆ ಸಂಗಾತಿಯ ಜೊತೆ ಪುನಃ ಜಗಳವಾಡುವಿರಿ.
ತುಲಾ ರಾಶಿ :ಇಂದು ನಿಮ್ಮ ಕೆಲಸದ ಮೇಲೆ ಮಾತ್ರ ಗಮನಹರಿಸಿದರೆ ಉತ್ತಮ. ಏನಾದರೂ ಬಾಲಿಶವಾದದ್ದನ್ನು ಮಾಡುವ ಮೊದಲು ನಿಮ್ಮ ವರ್ತನೆಯ ಪರಿಣಾಮದ ಬಗ್ಗೆ ಆಲೋಚಿಸಿ. ವಿದ್ಯಾರ್ಥಿಗಳ ಚಂಚಲಮನಸ್ಸು ಸಲ್ಲದನ್ನು ಮಾಡಿಸಬಹುದು. ಹತ್ತಿರದವರನ್ನು ಯಾರನ್ನಾದರೂ ಕಳೆದುಕೊಳ್ಳುವ ಸಾಧ್ಯತೆ ಇದೆ. ಎಂದೋ ಮಾಡಿದ ಸಹಾಯ ಇಂದು ನಿಮ್ಮ ಕೈ ಹಿಡಿಯುವುದು. ನೀವು ಆಗದಿರುವ ಕೆಲಸಗಳಿಂದ ನಿರಾಸೆಯನ್ನು ಅನುಭವಿಸುವುದು ಬೇಡ. ಅದು ದೈವೇಚ್ಛೆ ಎಂದು ಬಿಟ್ಟು ಮುಂದಿನ ಕೆಲಸಕ್ಕೆ ತೆರಳಿ. ಕುಟುಂಬದ ಸದಸ್ಯರಿಂದ ನೀವು ಆಶ್ಚರ್ಯಕರ ಉಡುಗೊರೆಯನ್ನು ಪಡೆಯಬಹುದು. ಇದರಿಂದ ನಿಮ್ಮ ಮೇಲಿರುವ ಭಾವನೆಯು ಬದಲಾಗುವುದು. ಕೃತಜ್ಞತೆಯನ್ನು ಸ್ಮರಿಸಿಕೊಳ್ಳುವಿರಿ. ಇಂದು ಕೆಲಸಕ್ಕಾಗಿ ಓಡಾಡುವುದು ವ್ಯರ್ಥವೇ ಆಗುವುದು. ನಿಮ್ಮ ಅಧ್ಯಯನವು ಕಡಿಮೆಯಾಗಲಿದೆ. ನಿಮ್ಮ ನಿರ್ಧಾರವನ್ನು ಮತ್ತೊಬ್ಬರಿಗೆ ಹೇರಿ ಖುಷಿಪಡುವಿರಿ.
ವೃಶ್ಚಿಕ ರಾಶಿ :ಇಂದು ನಿಮ್ಮ ಮಾತು ಕಡಿಮೆ ಇದ್ದಷ್ಟೂ ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದು. ಅವಿವಾಹಿತರಿಗೆ ಮಾಂಗಲ್ಯ ಭಾಗ್ಯ ಕೂಡಿಬರಲಿದೆ. ಕ್ರೀಡೆಯಲ್ಲಿ ಜಯಗಳಿಸುವ ಸಾಧ್ಯತೆ ಇದೆ. ವಿಳಂಬವಾಯಿತು ಎಂದು ಬೇಸರಿಸದೇ ಖುಷಿಯಿರಿ. ಯಾವುದನ್ನು ಯಾವಾಗಾ ಮಾಡಿಸಬೇಕು ಎನ್ನುವುದು ಗೊತ್ತಿದೆ ವಿಧಿಗೆ. ಸ್ನೇಹವನ್ನು ಬಲಪ್ರಯೋಗದಿಂದ ಮಾಡಲಾಗದು. ಮನಸ್ಸಿನಲ್ಲಿ ಉಂಟಾಗಬೇಕು. ಸ್ನೇಹಿತರ ಸಾಲವು ತೀರುವುದು. ಪ್ರೇಯಸಿ ಜೊತೆಯಲ್ಲಿ ಹೊರಗೆ ವಾಯುವಿಹಾರಕ್ಕೆ ಹೋಗುವಿರಿ. ನೀವು ವ್ಯವಹಾರದಲ್ಲಿ ಪಾಲುದಾರರಾಗುವುದು ಉತ್ತಮ, ಇದು ನಿಮ್ಮ ವ್ಯವಹಾರವನ್ನು ಇನ್ನಷ್ಟು ವಿಸ್ತರಿಸುತ್ತದೆ. ಯಾವುದೇ ಕೆಲಸಕ್ಕೆ ಬೇರೆಯವರ ಮೇಲೆ ಅವಲಂಬಿತರಾಗಬೇಡಿ. ಉದ್ಯಮವು ದಿಕ್ಕು ತಪ್ಪದಂತೆ ನೋಡಿಕೊಳ್ಳಿ. ಹೊರದೇಶಕ್ಕೆ ನೀವು ಹೋಗಬೇಕಾದ ಸ್ಥಿತಿಯು ಬರಬಹುದು. ನಿಮ್ಮ ಉದ್ಯಮದ ಅಭಿವೃದ್ಧಿಗೆ ತುರ್ತು ಸಭೆಯನ್ನು ಮಾಡಬೇಕಾದೀತು.