Horoscope: ದಿನ ಭವಿಷ್ಯ; ಅಪರಿಚಿತರ ಜೊತೆ ಹಣದ ವ್ಯವಹಾರ ಮಾಡಬೇಡಿ

ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ.ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ, ಜೂ. 09 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ದಿನ ಭವಿಷ್ಯ; ಅಪರಿಚಿತರ ಜೊತೆ ಹಣದ ವ್ಯವಹಾರ ಮಾಡಬೇಡಿ
ರಾಶಿ ಭವಿಷ್ಯ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 09, 2024 | 12:45 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಭಾನುವಾರ(ಜೂನ್ 09) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠಾ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಆರ್ದ್ರಾ, ಯೋಗ: ಗಂಡ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಸಂಜೆ 05:23 ರಿಂದ 06:59ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:32 ರಿಂದ 02:09ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:46 ರಿಂದ 05:23ರ ವರೆಗೆ.

ಧನು ರಾಶಿ: ಇಂದು ನೀವು ಉದ್ಯಮದ ಕಾರಣಕ್ಕೆ ಕೈಗೊಂಡ ಪ್ರಯಾಣವು ಪ್ರಯೋಜನಕಾರಿಯಾಗಲಿದೆ. ಅನಿರೀಕ್ಷಿತ ರೂಪದಲ್ಲಿ ವೈವಾಹಿಕ ಸಂಬಂಧಗಳು ಕೂಡಿ ಬರಲಿದೆ. ನಿಮ್ಮ ವೃತ್ತಿಯ ಬಗ್ಗೆ ನಿಮಗೆ ಕೀಳರಿಮೆ ಬರಬಹುದು. ವಿನಾಕಾರಣ ಯಾರ ಮೇಲೂ ಸಿಟ್ಟಾಗಬೇಡಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಿಮ್ಮ ಆಸಕ್ತಿಯು ಹೆಚ್ಚಾಗುತ್ತದೆ. ನೀವು ದೊಡ್ಡ ವ್ಯಕ್ತಿಗಳ ಭೇಟಿಯಾಗಲಿದೆ. ಒಟ್ಟಿಗೆ ಬದುಕುವ ಆನಂದವನ್ನು ಅನುಭವಿಸುವಿರಿ. ಅವಿವಾಹಿತರು ವಿವಾಹಕ್ಕೆ ಸಂಬಂಧಿಸಿದ ಶುಭ ಸುದ್ದಿಗಳನ್ನು ಪಡೆಯುವಿರಿ. ಸುಮ್ಮನಿರುವ ಶತ್ರುಗಳನ್ನು ತಟ್ಟಿ ಎಬ್ಬಿಸಬೇಡಿ. ನಿಮ್ಮ ಕಾರ್ಯವನ್ನು ಮೊದಲು ಪೂರ್ತಿ ಮಾಡಿಕೊಳ್ಳಿ. ವಿದೇಶಕ್ಕೆ ಬೇಕಾದ ತಯಾರಿಗಳನ್ನು ಮಾಡುವಿರಿ. ಸ್ನೇಹಿತನ ಮನೆಯಲ್ಲಿ ಇಂದು ಹಬ್ಬದ ವಾತಾವರಣವು ಇರಲಿದೆ. ನಂಬಿಕೆಯಿಂದ ಕೆಲಸವನ್ನು ಮಾಡುವಿರಿ. ಪ್ರಯತ್ನಿಸಿದ ಕಾರ್ಯಗಳು ನಿಮಗೆ ಬಹುಪಾಲು ಉತ್ತಮ‌ ಫಲಿತಾಂಶವು ಕೊಡುವುದು.

ಮಕರ ರಾಶಿ: ಇಂದು ನೀವು ಜಾಗರೂಕತೆಯಿಂದ ಆಯೋಜಿಸಿ ಕಾರ್ಯವನ್ನು ಸಾಧಿಸಿ. ಸುತ್ತಲೂ ನಿಮ್ಮ ಪ್ರಿಯತಮೆಯ ಪ್ರೀತಿಯನ್ನು ಅನುಭವಿಸುತ್ತೀರಿ.‌ ಕುಟುಂಬದಲ್ಲಿ ಕೆಲವು ಸಮಸ್ಯೆಗಳಿರುತ್ತವೆ. ಸಂಬಂಧಗಳು ಸಡಿಲವಾಗದಂತೆ ಸಂಭಾಳಿಸಿಕೊಂಡು ಹೋಗಿ. ಪ್ರಯತ್ನಪೂರ್ವಕವಾಗಿ ಮಾಡಿದ ಕೆಲಸವು ವ್ಯರ್ಥವಾಗಬಹುದು. ಬೇಸರಿಸದೇ ಅದನ್ನು ಆಸ್ವಾದಿಸಿ. ಖುಷಿಯಿಂದ ಇರಬಹುದು. ನಿಮ್ಮ ಮಕ್ಕಳು ಪ್ರಗತಿಯತ್ತ ಸಾಗುತ್ತಿರುವರು. ನಿಮ್ಮ ಇಚ್ಛೆಗೆ ಪೂರಕವಾಗಿಲ್ಲವೆಂದು ಕೋಪಗೊಳ್ಳುವುದು ಬೇಡ. ನಿಮ್ಮ ಕೆಲಸವು ಅನೇಕರಿಗೆ ಇಷ್ಟವಾಗಲಿದೆ. ನಿಮ್ಮ ಸಹನೆಯನ್ನು ಪರೀಕ್ಷಿಸುವ ಸಂದರ್ಭಗಳು ಬರಬಹುದು. ಆಸ್ತಿಯ ಭಾಗವನ್ನು ಮಾರಾಟ ಮಾಡಬೇಕಾದೀತು. ಎಷ್ಟೋ ಕೆಲಸಗಳು ನಿಮ್ಮ ಬಳಿಯೇ ಬಾಕಿ ಇರುವುದು. ಆಲಸ್ಯದಿಂದ ಮುಖ್ಯ ಕೆಲಸವನ್ನೇ ಮರೆಯುವಿರಿ.

ಕುಂಭ ರಾಶಿ: ನೀವು ಸಂಗಾತಿಯ ಜೊತೆ ಸಂತೋಷವನ್ನು ಹಂಚಿಕೊಳ್ಳುವಿರಿ. ಆದರೆ ಅವರ ಸಮಸ್ಯೆಗಳ ಬಗ್ಗೆ ಮಾತನಾಡಿ ನಿಮ್ಮನ್ನು ಇನ್ನಷ್ಟು ತೊಂದರೆಗೊಳಿಸಬಹುದು. ತಂದೆಗೆ ಸಮಾನವಾದವರ ಬಳಿ ಹಿತೋಪದೇಶವನ್ನು ಆಲಿಸಿ. ನೀವು ಉತ್ತಮ ವ್ಯಕ್ತಿಯನ್ನು ಭೇಟಿಯಾಗಿ, ಅವರ ಜೊತ ಕಾಲವನ್ನು ಕಳೆಯುವಿರಿ. ನಿಮ್ಮ ಕಠಿಣ ಪರಿಶ್ರಮದಿಂದ ನಿಮ್ಮ ಕಾರ್ಯವು ಸಾಧ್ಯವಾಗುವುದು. ನಿಮ್ಮ ಯಶಸ್ಸನ್ನು ಸಹಿಸಲಾಗದೇ ನೊಂದುಕೊಳ್ಳುವವರಿದ್ದಾರೆ. ದಾಂಪತ್ಯಜೀವನದಲ್ಲಿ ವಿವಾದವಾಗುವ ಸಾಧ್ಯತೆ ಇದೆ. ಅರ್ಥವಿಲ್ಲದ ಚರ್ಚೆಗಳಲ್ಲಿ ಸಮಯ ಮತ್ತು ಹಣ ಎರಡೂ ನಷ್ಟ ಮಾಡಿಕೊಳ್ಳಬೇಕಾಗಬಹುದು. ನಿಮ್ಮ ಮನಸ್ಸನ್ನು ಯೋಗ್ಯರ ಜೊತೆ ಹಂಚಿಕೊಳ್ಳಿ. ತೊಂದರೆಯಾಗುವುದು ಗೊತ್ತಿದ್ದರೂ ಬೇಕೆಂದೇ ಸಿಕ್ಕಿಹಾಕಿಕೊಳ್ಳುವಿರಿ. ವಿಷಯದಲ್ಲಿ ನೀವು ಗೊಂದಲವಿರಬಹುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾದ ವ್ಯವಸ್ಥೆಯನ್ನು ಮಾಡುವಿರಿ.

ಮೀನ ರಾಶಿ: ನಿಮ್ಮ ಒರಟುತನದಿಂದ ದಾಂಪತ್ಯದಲ್ಲಿ ಕಲಹವಾಗುವ ಸಾಧ್ಯತೆ ಇದೆ. ನೀವು ನಿಮ್ಮ ಕೆಲಸದ ಮೇಲೆ ಮಾತ್ರ ಗಮನಹರಿಸಿದರೆ ಉತ್ತಮ. ಅಪ್ರಬುದ್ಧರ ಎದುರು ನಿಮ್ಮ ಮನೆಯ ವ್ಯವಹಾರಗಳನ್ನು ಹೇಳಬೇಡಿ. ಅದು ಮತ್ತೇನೋ ಆಗಿ ನಿಮ್ಮ ಮರ್ಯಾದೆಗೆ ಕುತ್ತು ಬರಬಹುದು. ಸ್ವಲ್ಪ ದೇಹಕ್ಕೂ ಮನಸ್ಸಿಗೂ ವಿಶ್ರಾಂತಿಯನ್ನು ಕೊಟ್ಟರೆ ಒಳ್ಳೆಯದು. ಇದರಿಂದ ಅತ್ಯಂತ ಮಹತ್ತ್ವದ ಯೋಜನೆಯು ಪ್ರಾರಂಭವಾಗುತ್ತದೆ. ಸಂಬಂಧಗಳನ್ನು ಸರಿಯಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿ‌. ಈ ದಿನ ನಿಮ್ಮ ಆರ್ಥಿಕ ಸ್ಥಿತಿಯನ್ನು ನೋಡಿಕೊಳ್ಳಿ ಮತ್ತು ಅಪರಿಚಿತರ ಜೊತೆ ಹಣದ ವ್ಯವಹಾರ ಮಾಡಬೇಡಿ. ನಿಮ್ಮ ಆರ್ಥಿಕ ಪರಿಸ್ಥಿತಿಯು ಮೊದಲಿಗಿಂತ ಉತ್ತಮವಾಗಿದ್ದು, ಹೂಡಿಕೆಯ ಕಡೆ ಗಮನವಿರುವುದು. ನಿಮ್ಮ ಪ್ರಮುಖ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ನಿಮ್ಮ ಕೈಲಾದಷ್ಟು ಪ್ರಯತ್ನಿಸಿ.

-ಲೋಹಿತ ಹೆಬ್ಬಾರ್-8762924271 (what’s app only)

ತಾಜಾ ಸುದ್ದಿ
ಪೋಕ್ಸೋ ಕೇಸ್​: ಸಿಐಡಿ ವಿಚಾರಣೆಗೆ ಹಾಜರಾದ ಬಿಎಸ್ ಯಡಿಯೂರಪ್ಪ
ಪೋಕ್ಸೋ ಕೇಸ್​: ಸಿಐಡಿ ವಿಚಾರಣೆಗೆ ಹಾಜರಾದ ಬಿಎಸ್ ಯಡಿಯೂರಪ್ಪ
ಕಾಂಚನಜುಂಗಾ ಎಕ್ಸ್​ಪ್ರೆಸ್​ಗೆ ಗೂಡ್ಸ್​ ರೈಲು ಡಿಕ್ಕಿ, ಐದು ಸಾವು
ಕಾಂಚನಜುಂಗಾ ಎಕ್ಸ್​ಪ್ರೆಸ್​ಗೆ ಗೂಡ್ಸ್​ ರೈಲು ಡಿಕ್ಕಿ, ಐದು ಸಾವು
ಮುಸ್ಲಿಂ ಟೋಪಿ ಧರಿಸಿ ಈದ್ಗ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿದ್ದರಾಮಯ್ಯ
ಮುಸ್ಲಿಂ ಟೋಪಿ ಧರಿಸಿ ಈದ್ಗ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿದ್ದರಾಮಯ್ಯ
‘ನಾನು ಇದರಲ್ಲಿ ಮುಗ್ಧ’; ಬ್ಯಾನ್ ವಿಚಾರದಲ್ಲಿ ಸುದೀಪ್ ಹೀಗೆ ಹೇಳಿದ್ಯಾಕೆ?
‘ನಾನು ಇದರಲ್ಲಿ ಮುಗ್ಧ’; ಬ್ಯಾನ್ ವಿಚಾರದಲ್ಲಿ ಸುದೀಪ್ ಹೀಗೆ ಹೇಳಿದ್ಯಾಕೆ?
ರೇಣುಕಾ ಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟ ಪ್ರಮುಖ ಅರೆಸ್ಟ್
ರೇಣುಕಾ ಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟ ಪ್ರಮುಖ ಅರೆಸ್ಟ್
ಶುಭ ಕಾರ್ಯ ಪ್ರಾರಂಭಕ್ಕೂ ಮುನ್ನ ಓಂ ಅಂತ ಏಕೆ ಬರೆಯಬೇಕು? ಈ ವಿಡಿಯೋ ನೋಡಿ
ಶುಭ ಕಾರ್ಯ ಪ್ರಾರಂಭಕ್ಕೂ ಮುನ್ನ ಓಂ ಅಂತ ಏಕೆ ಬರೆಯಬೇಕು? ಈ ವಿಡಿಯೋ ನೋಡಿ
Daily Horoscope: ಈ ರಾಶಿಯವರಿಗೆ ಸಂಗಾತಿಯ ಆಸ್ತಿ ಬಳುವಳಿಯಾಗಿ ಬರಬಹುದು
Daily Horoscope: ಈ ರಾಶಿಯವರಿಗೆ ಸಂಗಾತಿಯ ಆಸ್ತಿ ಬಳುವಳಿಯಾಗಿ ಬರಬಹುದು
ಮೃತ ರೇಣುಕಾ ತಾಯಿ, ಪತ್ನಿ ಕಣ್ಣೀರು: ಸಾಂತ್ವನ ಹೇಳಿದ ರಂಭಾಪುರಿ ಶ್ರೀಗಳು
ಮೃತ ರೇಣುಕಾ ತಾಯಿ, ಪತ್ನಿ ಕಣ್ಣೀರು: ಸಾಂತ್ವನ ಹೇಳಿದ ರಂಭಾಪುರಿ ಶ್ರೀಗಳು
ರೇಣುಕಾ ಸ್ವಾಮಿ ಕೊಲೆ ಕೇಸ್​ನ ಆರೋಪಿ ದರ್ಶನ್​ ಬಗ್ಗೆ ಸುದೀಪ್​ ಮೊದಲ ಮಾತು
ರೇಣುಕಾ ಸ್ವಾಮಿ ಕೊಲೆ ಕೇಸ್​ನ ಆರೋಪಿ ದರ್ಶನ್​ ಬಗ್ಗೆ ಸುದೀಪ್​ ಮೊದಲ ಮಾತು
ಪವಿತ್ರಾ ಮನೆಯಲ್ಲಿ ಸ್ಥಳ ಮಹಜರು ವೇಳೆ ನಗ್ತಾ ಸಾಗಿದ ಆರೋಪಿ ಪವನ್
ಪವಿತ್ರಾ ಮನೆಯಲ್ಲಿ ಸ್ಥಳ ಮಹಜರು ವೇಳೆ ನಗ್ತಾ ಸಾಗಿದ ಆರೋಪಿ ಪವನ್