ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ 15) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಆಶ್ಲೇಷ, ಯೋಗ: ಗಂಡ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 52 ನಿಮಿಷಕ್ಕೆ, ರಾಹು ಕಾಲ 12:29 ರಿಂದ 14:05ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:42 ರಿಂದ 09:18ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:53 ರಿಂದ ಮಧ್ಯಾಹ್ನ 12:29ರ ವರೆಗೆ.
ಧನು ರಾಶಿ :ಇಂದು ವ್ಯಾಪಾರದಲ್ಲಿ ಉತ್ತಮ ಪ್ರಗತಿಯನ್ನು ಕಾಣುವಿರಿ. ಏನೋ ಮಾಡಲು ಹೋದ ಶತ್ರುಗಳಿಂದ ನಿಮಗೆ ಅನುಕೂಲವೇ ಆಗುವುದು. ಉದ್ಯೋಗವನ್ನು ಹುಡುಕುತ್ತಿರುವವರಿಗೆ ಉದ್ಯೋಗ ಲಾಭವಾಗಲಿದೆ. ಆರ್ಥಿಕವಾಗಿ ನಿಮ್ಮ ಬೆಳವಣಿಗೆಯಿಂದ ಕುಟುಂಬದವರಿಗೆ ಖುಷಿಯಾಗುವುದು. ರಾಜಕೀಯದಲ್ಲಿ ಕೈಜೋಡಿಸುವ ಬಗ್ಗೆ ಕುತೂಹಲವಿರುವುದು. ಸಾಮಾಜಿಕ ಕಾರ್ಯವು ನಿಮ್ಮನ್ನು ಸೆಳೆಯುವುದು. ಏಕಾಗ್ರತೆಯಿಂದ ನಿಮ್ಮ ಮತ್ತೆಲ್ಲ ಕಾರ್ಯಗಳೂ ನಿಧಾನವಾಗಬಹುದು. ನೀವೇ ಆರಿಸಿಕೊಂಡ ವೃತ್ತಿಯಲ್ಲಿ ತೃಪ್ತಿಯು ಸಿಗಲಿದೆ. ದೂರದೃಷ್ಟಿಯಿಂದ ಕೆಲಸವನ್ನು ಮಾಡಿ. ನಿಮ್ಮ ಮಾತುಗಳೇ ನಿಮಗೆ ಮುಳುವಾಗುವ ಸಾಧ್ಯತೆ ಇದೆ. ಉದ್ಯೋಗವಿಲ್ಲದೇ ಬೇಸರಗೊಂಡ ನಿಮಗೆ ಬೇರೆಕಡೆಯಲ್ಲಿ ಕೆಲಸವು ಸಿಗುವುದು. ಕೆಲವರ ಮಾತಿನಿಂದ ನಿಮ್ಮ ವ್ಯಕ್ತಿತ್ವವು ಬದಲಾಗುವುದು.
ಮಕರ ರಾಶಿ :ಇಂದು ನಿಮ್ಮ ಹದಗೆಟ್ಟ ಆರೋಗ್ಯವನ್ನು ನಿರ್ಲಕ್ಷ್ಯ ಮಾಡದೇ ತುರ್ತು ಚಿಕಿತ್ಸೆಯನ್ನು ಪಡೆದು ಮುಂದುವರಿಯಿರಿ. ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ನಿಮಗೆ ಅನಾನುಕೂಲ ಉಂಟಾಗುವುದು. ಬಂಧುಗಳಿಗೆ ನಿಮ್ಮ ಮೇಲೆ ಅಸಮಾಧಾನ ಬರಬಹುದು. ಹಣದ ಸಹಾಯ ಮಾಡಲು ಸ್ನೇಹಿತರು ಒಪ್ಪದೇ ಮಾತು ಬೆಳೆಯಬಹುದು. ಆರ್ಥಿಕತೆಯಲ್ಲಿ ನೀವು ನಂಬಿಕೆಯನ್ನು ಉಳಿಸಿಕೊಳ್ಳಬೇಕಾಗುವುದು. ಹೇಳಿಕೊಳ್ಳಲಾಗದ ಸಂಕಟವನ್ನು ಮನಸ್ಸಿನಲ್ಲಿಯೇ ನುಂಗುವಿರಿ. ಮೇಲಧಿಕಾರಿಗಳ ಜೊತೆಗಿನ ಸಲುಗೆಯು ದುರುಪಯೋಗವಾಗುವುದು. ವ್ಯವಹಾರದಲ್ಲಿ ಚುರುಕು ಸಾಲದು. ನಿಮ್ಮ ಸರಳತೆಯು ಜೊತೆಗಾರರಿಗೆ ಇಷ್ಟವಾಗುವುದು. ಉದ್ಯೋಗದಲ್ಲಿ ದಿನದಿಂದ ದಿನಕ್ಕೆ ಉಂಟಾದ ಒತ್ತಡದಿಂದ ಉದ್ಯೋಗವನ್ನು ಬದಲಿಸಲು ಯೋವಿಸುವಿರಿ. ವಿಲಾಸಿ ಜೀವನದ ಕನಸಿನಲ್ಲಿ ಇರುವಿರಿ. ಪ್ರೀತಿಯನ್ನು ಕುಟುಂಬದ ಜೊತೆ ಹಂಚಿಕೊಳ್ಳುವಿರಿ.
ಕುಂಭ ರಾಶಿ :ಇಂದು ನಿಮ್ಮ ಪ್ರಯಾಣದಿಂದ ಆಗಬೇಕಾದ ಕೆಲಸವಾಗಿ ಸಂತೋಷವಾಗುವುದು. ನೆರೆ ಹೊರೆಯವರು ನಿಮಗೆ ಸಹಕಾರ ನೀಡದೇ ಕಷ್ಟವಾಗುವುದು. ಆದಾಯಕ್ಕಿಂತ ಅಧಿಕ ಖರ್ಚನ್ನು ಮಾಡಬೇಕಾಗುವುದು. ಅಪರೂಪದ ಮಿತ್ರರು ನಿಮ್ಮನ್ನು ಭೇಟಿ ಮಾಡುವರು. ಮನೆಗೆ ಅತಿಥಿಗಳ ಆಗಮನವಾಗಬಹುದು. ನಿಮಗೆ ಕಾರ್ಯಗಳು ನಿಮಗೆ ತೃಪ್ತಿಯನ್ನು ಕೊಡುವಂತಿರಲಿ. ಆತುರದಲ್ಲಿ ಯಾವ ನಿರ್ಧಾರಕ್ಕೂ ಬರದೇ, ತಾಳ್ಮೆಯಿಂದ ಎಲ್ಲವೂ ತಿಳಿಯಾದಮೇಲೆ ನಿರ್ಧರಿಸಿ. ಎಲ್ಲವೂ ಸರಿಯಾಗುವುದು. ನಿಮ್ಮ ಮಕ್ಕಳನ್ನು ಓದಿಸಲು ಹೊರಗೆ ಕಳುಹಿಸುವ ನಿರ್ಧಾರವಿರಲಿದೆ. ಸಂಗಾತಿಯ ಜೊತೆ ಮನಸ್ತಾಪ ಬರುವ ಕಾರಣ, ನಿಮ್ಮ ಕೆಲಸ ಕಾರ್ಯಗಳಲ್ಲಿ ಒಂದಿಲ್ಲೊಂದು ಕಿರಿಕಿರಿ ಇರುವುದು. ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳಲು ನೀವು ಸಫಲರಾಗುವುದಿಲ್ಲ. ಏಕಪಕ್ಷೀಯ ನಿರ್ಧಾರದಿಂದ ನಿಮ್ಮವರಿಗೆ ಬೇಸರವಾಗಬಹುದು.
ಮೀನ ರಾಶಿ :ಇಂದು ನಿಮ್ಮ ವ್ಯಾಪಾರದ ಬೆಳವಣಿಗೆಯು ಚೆನ್ನಾಗಿ ಇರಲಿದ್ದು, ಆದಾಯವನ್ನು ಹೂಡಿಕೆ ಮಾಡವಿರಿ. ವಾಹನ ಚಾಲನೆಯಿಂದ ಅಪಘಾತ ಸಂಭವಿಸಬಹುದು. ನ್ಯಾಯಾಲಯದ ಬಗ್ಗೆ ನಿಮಗೆ ಬಹಳ ಚಿಂತೆ ಕಾಡುವುದು. ಮಾತಿನಿಂದ ಅಧಿಕಾರಿಗಳ ಜೊತೆ ಸಮಸ್ಯೆ ತಂದುಕೊಳ್ಳುವಿರಿ. ಸಂತೋಷದ ಕೂಟದಲ್ಲಿ ಭಾಗವಹಿಸುವಿರಿ. ಧನನಷ್ಟವನ್ನು ನೀವು ಸಹಿಸಲಾರಿರಿ. ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಮಾರ್ಗದರ್ಶನ ಅಭಾವವು ಹೆಚ್ಚು ತೋರುವುದು. ಸನ್ನಿವೇಶಕ್ಕೆ ಯೋಗ್ಯವಾದ ಮಾತುಗಳನ್ನಾಡಿ. ಇಂದಿನ ವ್ಯವಹಾರದಲ್ಲಿ ನಿಮಗೆ ತೊಡಕಿರುವುದು. ಮನೆಯ ಎಷ್ಟೋ ವಿಚಾರಗಳು ನಿಮಗೆ ಗೊತ್ತಾಗದೇ ಹೋಗಬಹುದು. ಒತ್ತಾಯ ಪೂರ್ವಕವಾಗಿ ಯಾವುದನ್ನೂ ಮಾಡಿಸುವುದು ಬೇಡ. ಅದು ಆಗುವುದಿಲ್ಲ. ಆಂತರಿಕ ಕಲಹವು ಎಲ್ಲರಿಗೂ ಗೊತ್ತಾಗುವಂತೆ ಮಾಡಿಕೊಳ್ಳುವಿರಿ. ನಿಮ್ಮ ಅನುಪಮ ಜ್ಞಾನವು ಸದುಪಯೋಗ ಆಗಬಹುದು.
-ಲೋಹಿತ ಹೆಬ್ಬಾರ್ – 8762924271 (what’s app only)