Horoscope: ನಿತ್ಯ ಭವಿಷ್ಯ; ಈ ರಾಶಿಯವರು ಇಂದು ಮಾನಸಿಕ ಹಿಂಸೆಯನ್ನು ಅನುಭವಿಸುವಿರಿ
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 08 ಮೇ 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ 08) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಭರಣೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಭರಣೀ, ಯೋಗ: ಆಯುಷ್ಮಾನ್, ಕರಣ: ಚತುಷ್ಪಾತ್, ಸೂರ್ಯೋದಯ ಬೆಳಗ್ಗೆ 06 ಗಂಟೆ 08 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 50 ನಿಮಿಷಕ್ಕೆ, ರಾಹು ಕಾಲ 12:29 ರಿಂದ 14:04ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:44 ರಿಂದ 09:19ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:54 ರಿಂದ 12:29ರ ವರೆಗೆ.
ಮೇಷ ರಾಶಿ: ಇಂದು ಯಾರಿಗೂ ಹೇಳದ ಮರೆಯಲಾಗದ ಕೆಲವು ಘಟನೆಯಿಂದ ಮಾನಸಿಕ ಹಿಂಸೆಯನ್ನು ಅನುಭವಿಸುವಿರಿ. ಸವಾಲುಗಳು ಬೇಡವೆಂದರೂ ಬರುತ್ತವೆ. ಮನೆಯಲ್ಲಿ ನೆಮ್ಮದಿ ಇರದೇ ಸಿಟ್ಟು, ಕೂಗು ಇವೆಲ್ಲ ಇರಲಿವೆ. ಇಂದು ಏನನ್ನಾದರೂ ಮಾಡಿದರೆ ಯೋಚಿಸಿ ಮಾಡಿ. ಸಿಟ್ಟನ್ನು ಕಡಿಮೆ ಮಾಡಿಕೊಳ್ಳುವ ವಿಧಾನವನ್ನು ಕಂಡುಕೊಳ್ಳುವುದು ಅವಶ್ಯಕ. ಉದ್ಯೋಗದಲ್ಲಿ ಸ್ಥಿರತೆಯು ಕಾಣದ ಕಾರಣ ಬದಲಿಸುವಿರಿ. ನಿರಂತರ ಅಸ್ತಿತ್ವದಲ್ಲಿ ಇರುವಂತೆ ನಿಮ್ಮನ್ನು ಇರಿಸಿಕೊಳ್ಳಿ. ಯಾವುದೇ ದಾಖಲೆಗಳಿಲ್ಲದೇ ವ್ಯವಹಾರ ಬೇಡ. ಅನಂತರ ಅದೇ ತಿರುಗು ಬಾಣವಾಗಿ ಚುಚ್ಚುವುದು. ಕುಟುಂಬದವರ ಬಗೆಗಿನ ನಿಂದನೆಯನ್ನು ಸಹಿಸಲಾರಿರಿ. ನಿಮ್ಮ ಆದಾಯ ಮೂಲವನ್ನು ಎಲ್ಲರ ಜೊತೆ ಹಂಚಿಕೊಳ್ಳುವ ಸಂದರ್ಭವು ಬರಬಹುದು. ಆಪ್ತರನ್ನಾದರೂ ಒಂದು ಮಿತಿಯಲ್ಲಿ ಇಡಿ.
ವೃಷಭ ರಾಶಿ: ಇಂದು ನೀವು ಅಕಾರಣವಾಗಿ ಉದ್ವೇಗ ಒಳಗಾಗುವಿರಿ. ಸಂಪತ್ತು ಬರುವುದು ಮಾತ್ರ ಕಾಣಿಸುತ್ತದೆ. ನೋಡು ನೋಡುತ್ತಿದ್ದಂತೆ ಎಲ್ಲವೂ ಖಾಲಿಯಾಗುವುದು. ಕೂಡಿಟ್ಟ ಹಣವೆಲ್ಲವೂ ಕರಗುತ್ತಿದೆ ಎನ್ನುವ ಭಯವು ಉಂಟಾಗಲಿದೆ. ಒಳ್ಳೆಯ ಕಾರ್ಯಕ್ಕೆ ಹಣವನ್ನು ಖರ್ಚು ಮಾಡಿ. ವಿವೇಚನೆಯಿಂದ ನಡೆದುಕೊಳ್ಳಿ. ಹಣವನ್ನು ದುಂದುವೆಚ್ಚ ಮಾಡದೇ ಸತ್ಕಾರ್ಯಕ್ಕೆ ಕೊಡಿ. ಮಾತನಾಡುವಾಗ ಎಚ್ಚರವಿರಲಿ. ಅಪವಾದವನ್ನು ಸರಿ ಮಾಡಿಕೊಳ್ಳಲು ಬಹಳ ಪ್ರಯತ್ನಿಸುವಿರಿ. ಚಂಚಲವಾದ ಮನಸ್ಸಿನಿಂದ ನಿಮ್ಮ ನಿರ್ಧಾರವು ಪೂರ್ಣವಾಗದು. ವ್ಯವಹಾರದಲ್ಲಿ ವಂಚನೆಯಾಗುವುದು ಗೊತ್ತಾಗಿ ಸರಿ ಮಾಡಿಕೊಳ್ಳುವಿರಿ. ವಿಶ್ವಾಸಘಾತದಿಂದ ನಿಮಗೆ ಬೇಸರವಾಗಬಹುದು. ನಿಮ್ಮ ಆತ್ಮವಿಶ್ವಾಸವು ಇತರರಿಗೆ ಮಾದರಿಯಾದೀತು.
ಮಿಥುನ ರಾಶಿ: ಇಂದು ಆಹಾರದ ಸಮಯದಲ್ಲಿ ವ್ಯತ್ಯಾಸವಾಗಿ ತೊಂದರೆ ಅನುಭವಿಸುವಿರಿ. ಒಳ್ಳೆಯ ಕಾಲವನ್ನು ಎದುರುನೋಡುತ್ತ ಕುಳಿತಿರುವಿರಿ. ಮನೆಯಲ್ಲಿ ಯಾರೂ ಹೇಳಿಕೊಳ್ಳಲಾಗದ ಅಸಮಾಧಾನವಿರಲಿದೆ. ಪ್ರೀತಿಪಾತ್ರರ ಜೊತೆ ಹೆಚ್ಚು ಸಲುಗೆಯಿಂದ ಇರುವಿರಿ. ನಿಮ್ಮ ಕಷ್ಟಕ್ಕೆ ಆದವರನ್ನು ಮರೆಯಬೇಡಿ. ಸ್ತ್ರೀಮೂಲದಿಂದ ಧನಸಹಾಯವು ಸಿಗಲಿದೆ. ಅಲ್ಪ ಭೋಜನವನ್ನು ಮಾಡುವ ಸಂದರ್ಭ ಬದಲಿದೆ. ವೃತ್ತಿಯನ್ನು ಬಿಟ್ಟು ಹೆಚ್ಚಿನ ಆದಾಯದ ಕಡೆಗೆ ಗಮನಹರಿಸುವಿರಿ. ಇನ್ನೊಬ್ಬರ ಮೇಲಿನ ಆರೋಪವನ್ನು ಸತ್ಯ ಮಾಡಲು ನೀವು ಸುಳ್ಳು ಹೇಳುವಿರಿ. ನಿಮ್ಮ ಸಮಸ್ಯೆಯು ಗಂಭೀರ ರೂಪವನ್ನು ಪಡೆಯಬಹುದು. ಸಂಗಾತಿಗೆ ಸಮಯವನ್ನು ಕೊಡುತ್ತೇನೆಂದರೂ ಆಗದು. ಇಂದು ನಿಮ್ಮ ಅಗತ್ಯ ಕಾರ್ಯಗಳಿಗೆ ಸಮಯವನ್ನು ಕೊಡುವುದು ಕಷ್ಟವಾದೀತು. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವಿರಿ.
ಕಟಕ ರಾಶಿ: ನಿಮ್ಮ ಆಸೆಗಳು ಕೈಗೂಡುವ ಹಂತದಲ್ಲಿ ಇದ್ದು ಇನ್ನಷ್ಟು ಪ್ರಯತ್ನದಿಂದ ಗುರಿಯನ್ನು ಮುಟ್ಟಬಹುದು. ಅತಿಯಾದ ಪ್ರವಾಸಕ್ಕೆ ಮನಸ್ಸು ಮಾಡುವಿರಿ. ಮನಸ್ಸಿಗೆ ಹಿತವಾದ ಸಂಗತಿಗಳು ನಡೆಯಲಿದೆ. ಇಂದು ನಿಮ್ಮ ಕೆಲಸವು ಅಡೆತಡೆಗಳಿಲ್ಲದೆ ಮುಂದೆ ಸಾಗುತ್ತದೆ. ಸರ್ಕಾರಿ ನೌಕರರಿಗೂ ಈಗ ಶುಭವಾಗಲಿದೆ. ಹೊಸ ವಾಹನ ಖರೀದಿ ಯೋಗ ಇದೆ. ವಿದೇಶ ಪ್ರಯಾಣದ ಸಂದರ್ಭವೂ ಬರಬಹುದು. ಆರೋಗ್ಯ ಉತ್ತಮವಾಗಿರಲಿದೆ. ದುಂದುವೆಚ್ಚದ ಕಡೆ ಗಮನವಿರಲಿ. ಇಷ್ಟವಸದ ಸಂಗತಿಯ ಕಡೆ ತೆರಕಳಿದರೆ ಅಹಿತಕರ ಸಂಗತಿಯನ್ನು ಮರೆಯಬಹುದು. ಅವಿವಾಹಿತರಿಗೆ ವಿವಾಹದಿಂದ ಮನೆಯಲ್ಲಿ ನೆಮ್ಮದಿಯು ಇರುವುದು. ಆಸ್ತಿಯ ಖರೀದಿಗೆ ಬೇಕಾದ ಹಣವನ್ನು ನೀವು ಇನ್ನೊಬ್ಬರಿಂದ ಸಾಲವಾಗಿ ಪಡೆಯುವಿರಿ. ಭೌತಿಕ ವಸ್ತುಗಳು ನಿಮಗೆ ಅಲ್ಪಸಂತೋಷವನ್ನು ಕೊಟ್ಟೀತು. ಭವಿಷ್ಯದ ಬಗ್ಗೆ ಮನಸ್ಸಿನಲ್ಲಿ ಚಿಂತೆಗಳನ್ನು ಇನ್ನೊಬ್ಬರಿಂದ ಕೇಳುವಿರಿ.




