AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ದಿನಭವಿಷ್ಯ: ಇಂದು ನಿಮ್ಮವರು ಆಡಿದ ಮಾತುಗಳು ಹಿಂಸೆಯನ್ನು ಕೊಡಬಹುದು

ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ, ಮೇ 08 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ: ಇಂದು ನಿಮ್ಮವರು ಆಡಿದ ಮಾತುಗಳು ಹಿಂಸೆಯನ್ನು ಕೊಡಬಹುದು
ರಾಶಿ ಭವಿಷ್ಯ
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on: May 08, 2024 | 12:45 AM

Share

ಆರ್ಥಿಕಸ್ಥಿತಿ ಸುಧಾರಣೆ, ನೆಚ್ಚಿನ ವ್ಯಕ್ತಿಯ ಭೇಟಿ ಮಾರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ​​​​​ 08) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ. ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಭರಣೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಭರಣೀ, ಯೋಗ: ಆಯುಷ್ಮಾನ್, ಕರಣ: ಚತುಷ್ಪಾತ್, ಸೂರ್ಯೋದಯ ಬೆಳಗ್ಗೆ 06 ಗಂಟೆ 08 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 50 ನಿಮಿಷಕ್ಕೆ, ರಾಹು ಕಾಲ 12:29 ರಿಂದ 14:04ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:44 ರಿಂದ 09:19ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:54 ರಿಂದ 12:29ರ ವರೆಗೆ.

ಧನು ರಾಶಿ :ಇನ್ನೊಬ್ಬರ ನಡತೆ ಇಷ್ಟವಾಗದೇ ಇದ್ದರೆ ಅದನ್ನು ಹೇಳುವ ಕ್ರಮದಲ್ಲಿ ಹೇಳಿ. ಇಲ್ಲವಾದರೆ ಕಲಹವಾಗುವುದು. ವಿದೇಶಿ ವಸ್ತುಗಳ ವ್ಯವಹಾರ ಮಾಡುವವರಿಗೆ ಸ್ವಲ್ಪ ಹಿನ್ನಡೆ ಆಗಬಹುದು. ಸಹೋದರನ ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು. ಉದ್ಯಮದಲ್ಲಿ ಪ್ರೇಮವಾಗಬಹುದು. ಸಂಗಾತಿಯೇ ನಿಮ್ಮ ಕೆಲಸಗಳಿಗೆ ಮುನ್ನುಗ್ಗಿ ಸಹಾಯ ಮಾಡುವರು. ಸರ್ಕಾರಿ ಕಚೇರಿಯ ಕೆಲಸಗಳಲ್ಲಿ ಸ್ವಲ್ಪ ಚುರುಕುತನ ಕಾಣಬಹುದು. ಧಾರ್ಮಿಕ ಕೆಲಸವನ್ನು ಮಾಡುವವರಿಗೆ ಸಮಾಜದಿಂದ ಸಾಕಷ್ಟು ಸಹಾಯ ದೊರೆಯುತ್ತದೆ. ಯಾರದ್ದಾದರೂ ಮನವೊಲಿಸುವ ಕೆಲಸವು ನಿಮಗೆ ಬರಬಹುದು. ಇದರಿಂದ‌ ನಿಮ್ಮ ಅಳಿದುಳಿದ ಶತ್ರುಗಳು ನಾಶವಾಗುವರು. ಋಣವನ್ನು ಸ್ವಲ್ಪವೂ ಉಳಿಸದೇ ಮುಗಿಸಿ. ನಿಮ್ಮದೇ ಶ್ರಮದಿಂದ ಭೂಲಾಭವನ್ನು ಮಾಡಿಕೊಂಡರೂ ನಿಮಗೆ ಸಲ್ಲದ ಮಾತುಗಳನ್ನು ಕೇಳಬೇಕಾದೀತು. ಆಸ್ತಿಯ ಗಳಿಕೆಯಲ್ಲಿ ಇಂದು ಅನಾಯಾಸವಾಗಿ ಯಾವುದೂ ನಡೆಯದು.

ಮಕರ ರಾಶಿ :ನಿಮ್ಮನ್ನು ವಿರೋಧಿಸುವವರು ನಿಮ್ಮ ಬಗ್ಗೆ ಬೇಡದ ಸಂಗತಿಗಳನ್ನು ಹರಿದುಬಿಡುವರು. ಸಂಗಾತಿಯೊಂದಿಗೆ ಸ್ನೇಹದಿಂದ ವರ್ತಿಸಿ. ಇಲ್ಲವಾದರೆ ಭಿನ್ನಾಭಿಪ್ರಾಯಗಳು ಸವಕಾಶ ಸಿಗುತ್ತದೆ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ. ಬಹುಜನರ ಅಭಿಪ್ರಾಯವನ್ನು ಹೆಚ್ಚಿಗೆ ಗೌರವಿಸುವುದು ಒಳ್ಳೆಯದು. ಮಾತಿನಲ್ಲಿ ಹೆಚ್ಚಿನ ಎಚ್ಚರವಿರಲಿ, ಯಾರ ವಿರುದ್ಧವೂ ಕುಹುಕ ಮಾಡುವುದು ಬೇಡ. ವಿವಾಹದ ಬಗ್ಗೆ ಬೇಸರವುಂಟಾಗುವುದು. ಹಣದ ಹರಿವು‌ ಕಡಿಮೆ ಇರುವುದರಿಂದ ಖರ್ಚನ್ನು ಸರಿಯಾಗಿ ನಿಭಾಯಿಸುವುದು ಒಳ್ಳೆಯದು. ಸಾಲದಿಂದ ಬಿಡುಗಡೆ ಹೊಂದಲು ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳುವಿರಿ. ಸ್ಥಿರಾಸ್ತಿಯ ಸಂಪಾದನೆಗೆ ಆಪ್ತರ ಮಾರ್ಗದರ್ಶನವನ್ನು ಪಡೆದುಕೊಳ್ಳುವುದು ಉತ್ತಮ. ಕೊಡುಕೊಳ್ಳುವ ವ್ಯವಹಾರದಲ್ಲಿ ದಾಖಲೆಗಳು ಸರಿಯಾಗಿರಲಿ.

ಕುಂಭ ರಾಶಿ :ವಿದ್ಯಾರ್ಥಿಗಳಿಗೆ ಎಲ್ಲರಿಂದ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ. ವ್ಯವಹಾರಗಳ ಬಗ್ಗೆ ಪಾಲುದಾರರ ಜೊತೆ ತಕ್ಷಣದಲ್ಲಿ ಮಾತನಾಡಬೇಕಾದ ಹಾಗೂ ತೀರ್ಮಾನ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಮಾತಿನಿಂದ ಕಾರ್ಯ ಸಾಧನೆ ಮಾಡಿ ಮೆಚ್ಚುಗೆ ಪಡೆಯುವಿರಿ. ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಿ. ಹಣದ ಒಳಹರಿವು ಸಾಮಾನ್ಯವಾಗಿರುತಗತವೆ. ಗೃಹ ನಿರ್ಮಾಣದ ಕೆಲಸದಲ್ಲಿ ಅತಿ ಆತುರ ಬೇಡ. ಆರೋಪ ಪ್ರತ್ಯಾರೋಪವೇ ಹೆಚ್ಚಾಗಿತ್ತದೆ. ಮನಸ್ಸಿಗೆ ನಿಮ್ಮವರು ಆಡಿದ ಮಾತುಗಳು ಹಿಂಸೆಯನ್ನು ಕೊಡಬಹುದು. ಇಂದಿನ ವ್ಯರ್ಥ ಓಡಾಟದಿಂದ ನಿಮಗೆ ಆಯಾಸವಾಗುವುದು. ಇಷ್ಟರೊಳಗೆ ಆಗಬೇಕಾದ ಸರ್ಕಾರಿ ಕೆಲಸವು ಮತ್ತೂ ಮುಂದಕ್ಕೆ ಹೋಗುವುದು. ಯಂತ್ರಗಳಿಂದ ದೇಹಕ್ಕೆ ಆಕಸ್ಮಿಕವಾಗಿ ತೊಂದರೆ ಆಗಬಹುದು. ಕೆಲವರಿಂದ ದೂರ ಇರವುದು ಉತ್ತಮ.

ಮೀನ ರಾಶಿ :ಇಂದು ಕೆಲವು ವಿಷಯಗಳಲ್ಲಿ ಕಠಿಣ ನಿರ್ಧಾರ ಬೇಕಾಗುತ್ತದೆ. ನೀವು ಅಪೇಕ್ಷಿಸಿದ್ದ ಯಾತ್ರೆಗೆ ಸಿದ್ಧತೆ ಮಾಡಿಕೊಳ್ಳುವಿರಿ. ವೃತ್ತಿರಂಗದಲ್ಲಿ ನಿಮ್ಮ ಸ್ಥಾನವು ಹೆಚ್ಚಾಗುವುದಿಲ್ಲ. ಕೆಲಸಕ್ಕೂ ಇನ್ನೊಬ್ಬರ ಮೇಲೆ ಅವಲಂಬಿಸಬೇಡಿ. ಹೆಚ್ಚು ಚುರುಕಾಗಿ ಜನಗಳ ಮಧ್ಯೆ ಓಡಾಡುವುದು ಅತಿ ಅಗತ್ಯ. ಹಣದ ಒಳಹರಿವು ನಿಮ್ಮ ಅಗತ್ಯಕ್ಕೆ ತಕ್ಕಂತೆ ಇರುತ್ತದೆ. ಎಲ್ಲದಕ್ಕೂ ನಿಮ್ಮನ್ನು ಕೇಳಬೇಕು ಎನ್ನುವುದು ಅಸಾಧ್ಯವಾದುದು. ಸ್ಥಿರಾಸ್ತಿ ವಿಚಾರಗಳನ್ನು ತೀರ್ಮಾನ ಮಾಡಲು ಹೋದ ನಮಗೆ ನಮ್ಮ ಗೋಜಲುಗಳನ್ನು ಕಂಡು ಗಾಬರಿಯಾಗುವುದು ಬೇಡ. ಇಂದಿನ ಕಾರ್ಯಗಳಲ್ಲಿ ಪ್ರಗತಿ ಇರಲಿದ್ದು ಸಂತೋಷವಾಗುವುದು. ಉದ್ಯೋಗದಲ್ಲಿ ಭಡ್ತಿಗಾಗಿ ಪ್ರಯತ್ನಿಸುವಿರಿ. ಬೆರೆಯುವುದು ಕಷ್ಟವಾದೀತು. ಗೊಂದಲದಿಂದ ಇರುವ ಮನಸ್ಸು ಇಂದು ಪ್ರಶಾಂತವಾಗಲಿದೆ. ಸಹೋದ್ಯೋಗಿಗಳ‌ ಜೊತೆ ಭಿನ್ನಾಭಿಪ್ರಾಯ ಬಂದು ಅದು ವೈಯಕ್ತಿಕ ಶತ್ರುತ್ವ ಬರಬಹುದು.

-ಲೋಹಿತ ಹೆಬ್ಬಾರ್ – 8762924271 (what’s app only)