ಶನಿಯ ಸ್ಥಾನ ಬದಲಾವಣೆ, ಯಾರಿಗೆಲ್ಲ ಬವಣೆ? ಮಾಡಬೇಕಾದುದೇನು?
ಶನಿಯ ಚಲನೆ ಉಳಿದ ಗ್ರಹಗಳ ಚಲನೆಗಿಂತ ವಿಶೇಷವೂ ಆಗಿದೆ. ಶನಿ ಸಂಚರಿಸುವ ರಾಶಿ, ಅದಕ್ಕೂ ಹಿಂದು ಮುಂದಿನ ರಾಶಿಗೂ ಅವನ ಪ್ರಭಾವ ಇರುವುದರಿಂದ ಅದನ್ನು ಸಾಡೇಸಾಥ್ ಎಂಬುದಾಗಿ ಕರೆದಿದ್ದಾರೆ. ಸ್ಥಾನ ಬದಲಾವಣೆಯ ಅನಂತರ ಮಕರ ರಾಶಿಗೆ ಶನಿಯಿಂದ ಮುಕ್ತಿ ಹಾಗೂ ಮೇಷ ರಾಶಿಗೆ ಶನಿಯ ಪ್ರಭಾವ ಉಂಟಾಗಲಿದೆ.

ಕಳೆದ ಎರಡುವರೆ ವರ್ಷಗಳಿಂದ ಶನಿಯು ತನ್ನ ಸ್ವಕ್ಷೇತ್ರದಲ್ಲಿ, ಅದರಲ್ಲಿಯೂ ಶನಿಯ ತ್ರಿಕೋನದಲ್ಲಿ ಇದ್ದ. ಈ ತಿಂಗಳ ಕೊನೆಯ ಶನಿವಾರದಿಂದ ಮೀನ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಶನಿಯ ಚಲನೆ ಉಳಿದ ಗ್ರಹಗಳ ಚಲನೆಗಿಂತ ವಿಶೇಷವೂ ಆಗಿದೆ. ಶನಿ ಸಂಚರಿಸುವ ರಾಶಿ, ಅದಕ್ಕೂ ಹಿಂದು ಮುಂದಿನ ರಾಶಿಗೂ ಅವನ ಪ್ರಭಾವ ಇರುವುದರಿಂದ ಅದನ್ನು ಸಾಡೇಸಾಥ್ ಎಂಬುದಾಗಿ ಕರೆದಿದ್ದಾರೆ. ಸ್ಥಾನ ಬದಲಾವಣೆಯ ಅನಂತರ ಮಕರ ರಾಶಿಗೆ ಶನಿಯಿಂದ ಮುಕ್ತಿ ಹಾಗೂ ಮೇಷ ರಾಶಿಗೆ ಶನಿಯ ಪ್ರಭಾವ ಉಂಟಾಗಲಿದೆ. ಶನಿ ಇರುವ ರಾಶಿಯಲ್ಲಿ ಆ ರಾಶಿಯವರಿಗೆ ಮಾನಸಿಕ ಕ್ಲೇಶಗಳನ್ನು ಸಹಿಸುವ ಶಕ್ತಿ ಇರದು. ಹಿಂದಿನ ರಾಶಿಗೆ ಆರೋಗ್ಯ ಹಾನಿ ಹಾಗೂ ಮುಂದಿನ ರಾಶಿಗೆ ಸೌಖ್ಯ ನಾಶವಾಗದಲಿದೆ.
ಮೀನ ರಾಶಿ :
ಈ ರಾಶಿಯವರು ದುಃಖವನ್ನು ಹೆಚ್ಚು ಅನುಭವಿಸುವರು. ಲೌಕಿಕ ಸುಖದ ಬಗ್ಗೆ ಆಸಕ್ತಿಯೇ ಹೋಗವಂತೆ ಆಗಲಿದೆ. ಯಾವ ಭೋಗಗಳಿಗೂ ಅನಾದರ ತೋರುವರು. ಜನನ ಕಾಲದಲ್ಲಿ ಶುಭಸ್ಥಾನದಲ್ಲಿ ಶನಿ ಇದ್ದರೆ ಅಥವಾ ಉಚ್ಚನಾಗಿದ್ದರೆ, ತೊಂದರೆ ಗೊತ್ತಾಗು, ಒಮ್ಮೆ ಆದರೂ ಅನಂತರದ ಶುಭವನ್ನು ನಿರೀಕ್ಷಿಸಬಹುದು. ಅದಲ್ಲದೇ ಹೋದರೆ ಕಷ್ಟ.
ಮೇಷ ರಾಶಿ :
ಸಾಡೇಸಾಥ್ ನ ಆರಂಭದ ರಾಶಿಯಾಗಿದೆ. ಆರೋಗ್ಯ ಬಗ್ಗೆ ಗಮನ ಬೇಕು. ಅಪರಿಚಿತರಿಂದ ಅಪಮಾನ, ಸೇವಕರಿಂದ ಕಿರಿಕಿರಿಗಳು ಕಾಣಿಸುವುದು. ಮಿತ್ರನ ರಾಶಿಯಾದ ಕಾರಣ ಸ್ವಲ್ಪ ಮಟ್ಟಿನ ಕರುಣೆ ಇರಲಿದೆ.
ವೃಷಭ ರಾಶಿ :
ಸಾಡೇಸಾಥ್ ಇರದಿದ್ದರೂ ಶನಿಯ ದೃಷ್ಟಿ ಇರುವ ರಾಶಿ. ರಾಶಿ ಬದಲಾವಣೆಯಾದ ಕೆಲವು ದಿನಗಳ ವರೆಗೆ ನೆಮ್ಮದಿ. ಅನಂತರ ದಾಂಪತ್ಯದಲ್ಲಿ ಮನಸ್ತಾಪ ಬರುವುದು.
ಸಿಂಹ ರಾಶಿ :
ಆರೋಗ್ಯದಲ್ಲಿ ವ್ಯತ್ಯಾಸ ಹಾಗೂ ಇದಕ್ಕಾಗಿ ಧನ ನಷ್ಟವಾಗಲಿದೆ. ದೇಹಾರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ. ಪುಣ್ಯಕ್ಷೇತ್ರ ಹಾಗೂ ಮಹಾತ್ಮರ ಸಹವಾಸದಲ್ಲಿ ಇರಿ.
ಕನ್ಯಾ ರಾಶಿ :
ಈ ರಾಶಿಗೆ ಶನಿ ದೃಷ್ಟಿ ಇರಲಿದೆ. ಸೇವಾ ಕಾರ್ಯಗಳಲ್ಲಿ ಆಸಕ್ತಿ ಇರುವುದು. ಫಲಾಪೇಕ್ಷೆ ಇಲ್ಲದೇ ಸಾಮಾಜಿಕ ಚಟುವಟಿಕೆಯಲ್ಲಿ ಭಾಗವಹಿಸುವನು.
ವೃಶ್ಚಿಕ ರಾಶಿ :
ಈ ರಾಶಿಗೆ ಪಂಚಮದಲ್ಲಿ ಶನಿ. ಇವರಿಗೆ ಕಷ್ಟದ ದಿನಗಳಿವು. ಮಾನಸಿಕ ನೆಮ್ಮದಿ ಹಾಳಾಗುವುದು. ಕಾರ್ಯಕ್ಷೇತ್ರದಲ್ಲಿ ಅಪಮಾನ, ಹಿಂಬಡ್ತಿ, ಸಾಲ ಮಾಡುವ ಸ್ಥಿತಿಗಳು ಬರಲಿವೆ. ಮಾಡುವ ಒಳ್ಳೆಯ ಕೆಲಸವು ವಿಪರೀತ ಪರಿಣಾಮವನ್ನು ನೀಡುವುದು.
ಧನು ರಾಶಿ :
ಇದೂ ಶನಿಯ ದೃಷ್ಟಿಯುಳ್ಳ ರಾಶಿಯಾಗಿದ್ದು, ಕೆಲಸ ಕಾರ್ಯಗಳಲ್ಲಿ ಹಠ. ಯಾರ ಮಾತನ್ನೂ ಕೇಳುವ ಸ್ಥಿತಿ ಇರದು. ತಾನೇ ಸರಿ ಎನ್ನುವ ಹುಂಬುತನ ಕಾಣಿಸುವುದು. ಒರಟುತನದಿಂದ ಸಂಬಂಧಗಳು ಹಾಳಾಗುವುದು.
ಹೀಗೆ ಕರ್ಮಾಧಿಪತಿ ಪೂರ್ವಜನ್ಮದ ಪಾಪಕರ್ಮಗಳನ್ನು ತೀರಿಸಿಕೊಳ್ಳಲು ಬೇಕಾದ ವ್ಯವಸ್ಥೆಯನ್ನು ಕಲ್ಪಿಸಿಕೊಡಲಿದ್ದಾನೆ. ಅದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಂಡರೆ ದುಃಖಗಳು ಕಡಿಮೆ. ಪೂರ್ವಾಗ್ರಹ ಬುದ್ಧಿ ಅಥವಾ ಅನಿರೀಕ್ಷಿತ ಎಂದು ಆದಾಗ ಮಾತ್ರ ಸಂಕಟಗಳು ಬರುವುದು. ಬರುವ ತೊಂದರೆಯನ್ನು ಮೊದಲೇ ತಿಳಿದರೆ ಜೀವನ ಸುಖಮಯ.
ಶನಿಯು ಜಾತಕದಲ್ಲಿ ಶುಭ ಸ್ಥಾನದಲ್ಲಿ ಇದ್ದು, ಶನಿ ದಶೆ ನಡೆಯುವವರಿಗೆ ಅತಿಯಾದ ತಾಪತ್ರಯಗಳ ಇರದಿದ್ದರೂ, ಶನಿ ಅನುಗ್ರಹ ಸದಾ ಇರಬೇಕಾದ ಕಾರಣ ಶನಿಯ ಸ್ತೋತ್ರ, ಹನುಮಾನ್ ಚಾಲಿಸ್, ಶಿವಾರಾಧನೆಯನ್ನು ಪ್ರಾತಃಕಾಲದಲ್ಲಿ ದೇಹ ಮತ್ತು ಮನಸ್ಸಿನ ಶುದ್ಧಿಯನ್ನು ಮಾಡಿಕೊಂಡು ಮಾಡಿ. ದಾನಕ್ಕೆ ಮಹತ್ತ್ವ ಇದೆ. ಒಳ್ಳೆಯ ವಸ್ತುಗಳನ್ನು ದೋಷಪರಿಹಾರದ ಸಂಕಲ್ಪ ಮಾಡಿ ಕಪ್ಪುವಸ್ತ್ರ, ಎಳ್ಳು, ಶಮೀ ದಾನ, ಸತ್ಕಾರ್ಯಕ್ಕೆ ನಿಮ್ಮಿಂದಾಗುವ ಸಹಾಯವನ್ನು ಮಾಡಿ. ಯಾರ ಬಗ್ಗೆಯೂ ನಕಾರಾತ್ಮಕ ಯೋಚನೆ, ಹೇಳಿಕೆಗಳನ್ನು ಕೊಡುತ್ತಾ ಕಾಲ ಕಳೆಯುವುದು ಬೇಡ. ಇದು ವಿಪರೀತ ಪರಿಣಾಮಕಾರಿಯಾಗಿ ನೀಡುವುದು. ಸದ್ಭಾವದಿಂದ ಶನಿಯ ಅನುಗ್ರಹವನ್ನು ಪಡೆಯಬೇಕು.
– ಲೋಹಿತ ಹೆಬ್ಬಾರ್ – 8762924271




