AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ರಾಶಿಭವಿಷ್ಯ, ಭವಿಷ್ಯದ ಬಗ್ಗೆ ಇರಬೇಕಾದ ಕಾಳಜಿಯು ಕಡಿಮೆ ಆಗುವುದು, ಕೆಲಸಕ್ಕೆ ಪ್ರಶಂಸೆ ಸಿಗಲಿದೆ

ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ನವೆಂಬರ್​ 16) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ರಾಶಿಭವಿಷ್ಯ, ಭವಿಷ್ಯದ ಬಗ್ಗೆ ಇರಬೇಕಾದ ಕಾಳಜಿಯು ಕಡಿಮೆ ಆಗುವುದು, ಕೆಲಸಕ್ಕೆ ಪ್ರಶಂಸೆ ಸಿಗಲಿದೆ
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on: Nov 16, 2023 | 12:10 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ನವೆಂಬರ್​​​ 16 ಗುರುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ತುಲಾ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ತೃತೀಯಾ, ನಿತ್ಯನಕ್ಷತ್ರ: ಮೂಲಾ, ಯೋಗ: ಸುಕರ್ಮಾ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 34 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05-59 ಗಂಟೆ, ರಾಹು ಕಾಲ ಮಧ್ಯಾಹ್ನ 01:43 ರಿಂದ 03:08ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:35 ರಿಂದ 08:00ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:26 ರಿಂದ 10:52ರ ವರೆಗೆ.

ಮೇಷ ರಾಶಿ: ನಿಮ್ಮ ಬಗ್ಗೆ ಕೆಲವು ಅಪಸ್ವರಗಳು ಬಂದರೂ ಆ ಬಗ್ಗೆ ಕಿವಿಗೊಡದೆ ಸ್ಥೈರ್ಯವನ್ನು ಕಾಪಾಡಿಕೊಳ್ಳಿ. ಅಸಂಗತ ಸಮಾಚಾರವನ್ನು ಒಪ್ಪಬೇಕಿಲ್ಲ. ನಿಮ್ಮನ್ನು ಲಕ್ಷಿಸಲು ಸಾಧ್ಯವಾಗದ ದೊಡ್ಡ ವ್ಯಕ್ತಿತ್ವ ನಿಮ್ಮದಾಗುವುದು. ಸ್ವಕೀಯರೇ ನಿಮ್ಮ ನಿಜವಾದ ವೇಗವನ್ನು ಕುಂಠಿತಗೊಳಿಸುವರು. ಕಣ್ಣಿಗೆ ಪ್ರತ್ಯಕ್ಷ ಕಂಡರೂ ಪ್ರಾಮಾಣಿಸಿ ನೋಡು ಎನ್ನುವಂತೆ ಪರಿಶೀಲಿಸಿ ಕಾರ್ಯ ಪ್ರವೃತ್ತರಾಗಿ. ನಿಮ್ಮ ಪ್ರಯತ್ನವನ್ನು ಇತರರಿಗೂ ತಿಳಿಸುವ ಸಮಯ ಇಂದು. ತಪ್ಪು ಮಾಹಿತಿ ನೀಡಿ ನಿಮ್ಮ ದಾರಿ ತಪ್ಪಿಸಬಹುದು. ಕೆಟ್ಟ ಆಹಾರ ಸೇವನೆಯಿಂದ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು. ನಿಮ್ಮ ಮೇಲೆ ಅರೋಪವು ಬರುವ ಸಾಧ್ಯತೆ ಇದ್ದೆ. ಕೆಲವು ಸಮಸ್ಯೆಯು ನಿಮ್ಮ ಮಾನಸಿಕತೆಯಿಂದಾಗಿಯೇ ಇರುವುದು. ಇದು ಶಾಶ್ವತವಾಗಿ ಇರದು ಎಂಬುದನ್ನು ಮರೆಯಬಾರದು.

ವೃಷಭ ರಾಶಿ: ಭವಿಷ್ಯದ ಬಗ್ಗೆ ಇರಬೇಕಾದ ಕಾಳಜಿಯು ಕಡಿಮೆ ಆಗುವುದು. ಸ್ನೇಹಿತರ ಬೆಂಬಲವನ್ನು ನೀವು ಪೂರ್ಣವಾಗಿ ಒಪ್ಪಲಾರಿರಿ. ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗುವುದು. ನಿಮ್ಮ ಏಳಿಗೆ ಕಂಡು ಅಸೂಯೆ ಪಡುವವರ ಸಂಖ್ಯೆ ಹೆಚ್ಚಾಗಲಿದೆ. ಅದಕ್ಕೆ ತಲೆ ಕೆಡಿಸಿಕೊಳ್ಳದೆ ನಿಮ್ಮ ಕಾರ್ಯದಲ್ಲಿ ಪ್ರವೃತ್ತರಾಗಿ ಕಾರ್ಯದಲ್ಲಿ ನಿಷ್ಠೆಯನ್ನು ತೋರಿಸಿ. ಪ್ರೀತಿಯ ಸುಖದಿಂದ ವಂಚಿತರಾಗುವಿರಿ. ವಿದೇಶಪ್ರಯಾಣದ ಗುಂಗಿನಿಂದ ಹೊರಬನ್ನಿ. ಕುಟುಂಬದ ಪ್ರೋತ್ಸಾಹವು ನಿಮಗೆ ಸಿಗಬಹುದು. ಸಂಗಾತಿಯ ಜೊತೆ ಸಮಯವನ್ನು ಕಳೆಯಬೇಕು ಎನಿಸಬಹುದು. ಶೈಕ್ಷಣಿಕವಾಗಿ ಹೆಚ್ಚಿನ ಪ್ರಗತಿಯನ್ನು ವಿದ್ಯಾರ್ಥಿಗಳು ಸಾಧಿಸುವರು.

ಮಿಥುನ ರಾಶಿ: ಹೂಡಿಕೆಯ ವಿಚಾರ‌ ಬಂದಾಗ ಆಮೂಲಾಗ್ರ ದೃಷ್ಟಿಯು ಇರಲಿ. ಸುಮ್ಮನೇ ಒಪ್ಪಿಗೆ ಬೇಡ. ಮಾನಸಿಕ ನೋವನ್ನು ಸಹಿಸಲಾಗದು. ನಿಮ್ಮ ಒಳ್ಳೆಯತನವನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಕೆ ಆದೀತು. ಜಾಗರೂಕರಾಗಿ ಜನರಿಂದ ದೂರವಿರುವುದು ಒಳ್ಳೆಯದು. ನಿಮ್ಮದೇ ಆದ ಕುಟುಂಬದಲ್ಲಿ ಹಲವರು ಕಿರಿಕಿರಿ ಮಾಡಬಹುದು. ಹಿಂದೆ ಮುಂದೆ ಯೋಚಿಸದೆ ಏಕಾಏಕಿಯಾಗಿ ಯಾರಿಗೂ ಮಾತು ಕೊಡುವುದು ಬೇಡ. ಪ್ರತ್ಯಕ್ಷವಾಗಿ ಕಾಣುವ ವ್ಯಕ್ತಿಗಳಿಗೆ ನಿಮ್ಮ ಬಗೆಗಿನ ದೃಷ್ಟಿಕೋನವೇ ಬದಲಾಗುವುದು. ಆರ್ಥಿಕತೆಯ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಕೈಯಲ್ಲಿ ಹಣವಿದ್ದಷ್ಟು ಖರ್ಚು ತಾನಾಗಿಯೇ ಹುಡುಕಿಕೊಂಡು ಬರಬಹುದು. ಕೃಷಿ ಚಟುವಟಿಕೆಗಳ ಬಗ್ಗೆ ನಿಮಗೆ ಅಸಕ್ತಿಯು ಹೆಚ್ಚಿರುವುದು. ಅನನುಕೂಲತೆಯನ್ನು ಬಳಸಿಕೊಂಡು ಸಕಾರಾತ್ಮಕವಾಗಿ ಸಾಧಿಸುವಿರಿ.

ಕಟಕ ರಾಶಿ: ಅನವಶ್ಯಕ ವಸ್ತುಗಳನ್ನು ದೂರ ಮಾಡುವಿರಿ. ಸಂಯಮದಿಂದ ವರ್ತಿಸುವುದು ಅವಶ್ಯಕ. ಇಂದು ನಿಮ್ಮ ಜೇಬು ತುಂಬಿದಂತೆ ಕಂಡರೂ ಒಳಗೆ ರಂಧ್ರವಿರುವುದು ಗೊತ್ತಾಗದೇ ಹೋಗುವುದು. ಮನಸ್ಸಿಗೆ ಮಂಕು ಕವಿದಂತೆ ಇರುವಿರಿ. ಜೀವನವು ಅಸಾರವಾದುದ್ದು ಎಂಬ ಭಾವವು ಬರಬಹುದು. ಜೀವನದಲ್ಲಿ ಚುರುಕುತನ ಕಂಡುಕೊಳ್ಳಲು ದಾರಿಯನ್ನು ಕಂಡುಕೊಳ್ಳಿ. ಒತ್ತಡವನ್ನು ಹೇರಿ ಕೆಲಸವನ್ನು ಮಾಡಿಸಿಕೊಳ್ಳುವಿರಿ. ನಿಮ್ಮ ವಿಚಾರದಲ್ಲಿ ಅನ್ಯರ ಹಸ್ತಕ್ಷೇಪ, ಮೇಲಧಿಕಾರಿಗಳೊಂದಿಗೆ ಗುಟ್ಟಾಗಿ ನಿಮ್ಮ ಬಗ್ಗೆ ಚಾಡಿ ಮಾತುಗಳು ಒಂದಾದಮೇಲೊಂದು ಬರುವುವು. ನಿಮ್ಮ ಕಾರ್ಯವೇ ಉತ್ತರವಾಗಿರಲಿ. ಬಂಧುಗಳು ನಿಮ್ಮನ್ನು ಪ್ರಶಂಸಿಸಿ ಕಾರ್ಯವನ್ನು ಸಾಧಿಸಿಕೊಳ್ಳುವರು. ವಾಸದ ಸ್ಥಳವನ್ನು ನೀವು ಬದಲಿಸಬೇಕಾಗಬಹುದು.

Follow Us
Gangadhar Saboji
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ