Horoscope: ಹಣಕಾಸಿನ ವಿಚಾರದಲ್ಲಿ ಸಂಗಾತಿಯ ಜೊತೆ ಜಗಳವಾಡುವಿರಿ

27 ಅಕ್ಟೋಬರ್​ 2024: ಭಾನುವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಸಹೋದ್ಯೋಗಿಗಳ ಕಿರಿಕಿರಿಯನ್ನು ಸಹಿಸಿಕೊಳ್ಳಲು ಕಷ್ಟವಾಗುವುದು. ಸ್ನೇಹಿತರ ಸಹಕಾರದಿಂದ ಪ್ರವಾಸ ಹೋಗುವಿರಿ. ದೂರದ ಬಂಧುಗಳ ಭೇಟಿಯು ಸಂತೋಷ ಕೊಡುವುದು.‌ ಹಾಗಾದರೆ ಅಕ್ಟೋಬರ್ 27ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ಹಣಕಾಸಿನ ವಿಚಾರದಲ್ಲಿ ಸಂಗಾತಿಯ ಜೊತೆ ಜಗಳವಾಡುವಿರಿ
ಹಣಕಾಸಿನ ವಿಚಾರದಲ್ಲಿ ಸಂಗಾತಿಯ ಜೊತೆ ಜಗಳವಾಡುವಿರಿ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Oct 27, 2024 | 12:05 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ತುಲಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಮಘಾ, ಯೋಗ: ಬ್ರಹ್ಮ​​, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 27 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 05 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 04:38 ರಿಂದ ಸಂಜೆ 08:05 ರವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:16 ರಿಂದ 03:44ರವರೆಗೆ, ಗುಳಿಕ ಕಾಲ ಮಧ್ಯಾಹ್ನ 03:11 ರಿಂದ 04:38 ರವರೆಗೆ.

ಮೇಷ ರಾಶಿ: ನಿಮ್ಮ ದಾಖಲೆಗಳು ಕಳ್ಳತನವಾಗುವ ಸಾಧ್ಯತೆ ಇದೆ. ಇಂದು ನೀವು ಎಲ್ಲ ಕಾರ್ಯವನ್ನೂ ಅಚ್ಚುಕಟ್ಟಾಗಿ ಮಾಡಲು ಬಯಸುವಿರಿ. ನಿಮ್ಮ ಕೈಯ್ಯಲ್ಲಿ ಒಗ್ಗೂಡಿಸುವಿಕೆ ಇರಲಿದೆ. ಸಹೋದರರ ಜೊತೆ ಮನೆಯ ಆಸ್ತಿಯ ಬಗ್ಗೆ ಕುಳಿತು ಮಾತನಾಡುವಿರಿ. ವ್ಯವಹಾರದಲ್ಲಿ ಸಡಿಲಮಾಡಿಕೊಳ್ಳುವಿರಿ. ಮನಸ್ಸು ಹಗುರರಾಗಿದ್ದು ಉತ್ಸಾಹವು ನಿಮ್ಮ ಮುಖದಲ್ಲಿ ಕಾಣುವುದು. ನಿಮ್ಮ ನಿಯಮಗಳೇ ನಿಮಗೆ ಹಿಂಸೆಯಾಗುವುದು. ಆರ್ಥಿಕ ಹಿಂಜರಿಕೆಯು ನಿಮಗೆ ಅರಗಿಸಿಕೊಳ್ಳಲು ಕಷ್ಟವಾದೀತು. ಎಲ್ಲರ ಮೇಲಿನ ನಂಬಿಕೆಯನ್ನು ನೀವು ಕಳೆದುಕೊಂಡು ಆರಾಮಾಗಿ ಇರುವಂತೆ ನಟಿಸುವಿರಿ. ಇಂದಿನ ಮಂದಗತಿಯ ಕೆಲಸಗಳಿಗೆ ಚುರುಕು ನೀಡುವಿರಿ. ಸಮಾರಂಭಕ್ಕೆ ಆಪ್ತರು ಒತ್ತಾಯ ಮಾಡಬಹುದು. ಸಹೋದರನಿಂದ ನಿಮಗೆ ಸಲಹೆಗಳು ಸಿಗಬಹುದು. ಕಛೇರಿಯಲ್ಲಿ ಇಂದು ಕೆಲಸ ಮಾಡಲು ಆಸಕ್ತಿ ಕಡಿಮೆ ಇರಲಿದೆ.

ವೃಷಭ ರಾಶಿ: ಕಛೇರಿಯ ಕೆಲಸವನ್ನು ಬಿಡುವಿನ ವೇಳೆಯಲ್ಲಿ ಮಾಡುವಿರಿ. ಇಂದು ನೀವು ಯಾರ ಮಾತನ್ನು ಒಪ್ಪಿದರೂ ನಿಮ್ಮ ಆಲೋಚನೆಯನ್ನು ಬದಲಾಯಿಸುವುದಿಲ್ಲ. ಹಿರಿಯರ ಮಾರ್ಗದರ್ಶನದಲ್ಲಿ ಇಂದಿನ ದಿನವನ್ನು ಕಳೆಯುವಿರಿ. ಮನೆಯ ಕಾರ್ಯಕ್ಕಾಗಿ ನೀವು ಓಡಾಟ ಮಾಡಬೇಕಾಗುವುದು. ಹೆಚ್ಚಿನ ಶ್ರಮವು ವಿದ್ಯಾರ್ಥಿಗಳಿಗೆ ಅವಶ್ಯಕ. ಕೆಟ್ಟವರನ್ನೇ ಮತ್ತು ನಂಬುವ ಸ್ಥಿತಿ ಬರಬಹುದು. ಇಂದು ಹೆಚ್ಚಿನ ಸಮಯವನ್ನು ಸ್ನೇಹಿತರ ಜೊತೆ ಮನೋರಂಜನೆಯಲ್ಲಿ‌ ಕಳೆಯುವಿರಿ. ನಿಮ್ಮ‌ ಮಾನಸಿಕತೆಯನ್ನು ತಿಳಿಯಲು ಕಷ್ಟಪಡುವರು. ಪರರ ಭಾವನೆಗೆ ಅನಾದರ ತೋರುವುದು ಬೇಡ. ಅನಿವಾರ್ಯವಾಗಿ ಬೇರೆ ಸ್ಥಳದಲ್ಲಿ ವಾಸಮಾಡಬೇಕಾಗುವುದು. ತೆರೆಯಲ್ಲಿರುವುದನ್ನು ಕಾಣಲು ಪರದೆ ಸರಿಯಬೇಕು. ನಿಮ್ಮ ಮೇಲಿಟ್ಟ ನಂಬಿಕೆಯನ್ನು ಕಷ್ಟಪಟ್ಟು ಉಳಿಸಿಕೊಳ್ಳಬೇಕಾದೀತು.

ಮಿಥುನ ರಾಶಿ: ವ್ಯಾಪಾರದ ಆಗುಹೋಗುಗಳನ್ನು ಬೇರೆ ರೀತಿಯಲ್ಲಿ ಸರಿಮಾಡಿಕೊಳ್ಳುವಿರಿ. ಇನ್ನೊಬ್ಬರ ವೈಯಕ್ತಿಕ ಬದುಕನ್ನು ಆಡಿಕೊಳ್ಳುವಿರಿ. ಇಂದು ತಂದೆಯು ಯಾವುದೋ ಕಾರ್ಯಕ್ಕೆ ನಿಮ್ಮಿಂದ ಧನವನ್ನು ನಿರೀಕ್ಷಿಸಬಹುದು. ಸಂಗಾತಿಯ ಜೊತೆ ಹಣಕಾಸಿನ ವಿಚಾರಕ್ಕೆ ಜಗಳವಾಗಲಿದೆ. ನಿಮಗೆ ಅರ್ಥವಾಗದ ವಿಚಾರವನ್ನು ಬೇರೆಯವರ‌ ಬಳಿ ಪಡೆಯುವಿರಿ. ಅಪರೂಪದ ಬಂಧುಗಳ ಜೊತೆ ಸಮಯ ಕಳೆಯುವುದು. ಏಕಾಂಗಿಯಾಗಿ ಎಲ್ಲಿಗಾದರೂ ದೂರ ಹೋಗುವಿರಿ. ಅಶಿಸ್ತಿನಿಂದ ವರ್ತಿಸಿದ್ದಕ್ಕೆ ನಿಮಗೆ ಎಲ್ಲರೆದುರು ಅಪಮಾನವಾಗಬಹುದು. ಹೊಸ ಉದ್ಯೋಗದ ಅನ್ವೇಷಣೆಯಲ್ಲಿ ನೀವು ಮಗ್ನರಾಗುವಿರಿ. ಅಂದುಕೊಂಡಿದ್ದು ಹಾಗೆಯೇ ಆಗಿದ್ದು ನಿಮಗೂ ಅಚ್ಚರಿಯಾಗಲಿದೆ. ಯಾರನ್ನೂ ಮೆಚ್ಚಿಸುವುದು ನಿಮಗೆ ಇಷ್ಟವಾಗದು. ದುಷ್ಕೃತ್ಯಕ್ಕೆ ಅಪ್ರತ್ಯಕ್ಷವಾಗಿ ಅನುಮೋದನೆ ಸಿಗಲಿದೆ. ಕೊಟ್ಟ ಹಣವನ್ನು ಹೊಂಪಡೆಯುವುದು ಕಷ್ಟ.

ಕರ್ಕಾಟಕ ರಾಶಿ: ವೃತ್ತಿಗಿಂತ ಹೆಚ್ಚು ಬೇರೆ ಕೆಲಸದಿಂದ ಹಣವನ್ನು ಗಳಿಸುವಿರಿ. ಇಂದು ನೀವು ಉದ್ಯೋಗದ ಕಾರಣಕ್ಕೆ ಬೇರೆ ಕಡೆಗೆ ಹೋಗುವಿರಿ. ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಿತಿಯು ಬರಲಿದೆ. ಮನೆಯಿಂದ ಹೊರ ಹೋಗುವುದು ನಿಮಗೆ ಇಂದು ನಿಮಗೆ ಇಷ್ಟವಾಗದು.‌ ಶರೀರವು ದುರ್ಬಲವಾಗಲು ಬಿಡದೇ ಬೇಕಾದ ಆಹಾರವನ್ನು ಕೊಡಿ. ಯಾರ ಒತ್ತಡಕ್ಕೂ ನೀವು ಮಣಿಯದವರು ಇಂದು ಮಣಿಯುವಿರಿ.‌ ಪಾಲುದಾರಿಕೆಯಲ್ಲಿ ನಿಮ್ಮ ಶ್ರಮವೇ ಹೆಚ್ಚಿರಲಿದೆ. ನಿಮಗೆ ಇಷ್ಟವಾಗದ ಜವಾಬ್ದಾರಿಗಳು ಬಂದಾಗ ನೀವು ತಪ್ಪಿಸಿಕೊಳ್ಳುವಿರಿ. ಮನಸ್ಸು ಭಾರವಾಗಿದ್ದು ಎಲ್ಲರಿಂದ ದೂರವಿರಲು ಇಷ್ಟಪಡುವಿರಿ. ಹೊಸ ಮನೆಯ ಖರೀದಿಗೆ ಸಣ್ಣ ಹೆಜ್ಜೆಯನ್ನು ಇಡುವಿರಿ. ಆದಾಯವು ಮತ್ತಷ್ಟು ಬೇಕೆನಿಸುವುದು. ಸ್ಥಾನವನ್ನು ಬಯಸಿ ನೀವು ಇಂದು ಕೆಲಸವನ್ನು ಮಾಡುವಿರಿ. ಸಮಾರಂಭಗಳು ಇಂದು ನಿಮಗೆ ಸಪ್ಪೆ ಅನ್ನಿಸಬಹುದು. ದಾಂಪತ್ಯದಲ್ಲಿ ಹೊಂದಾಣಿಕೆಯು ಕಷ್ಟವಾದೀತು. ಅಪರಿಚಿತ ಸ್ತ್ರೀಯಿಂ ಮೋಸ ಹೋಗುವಿರಿ.

ಸಿಂಹ ರಾಶಿ: ನಿಮ್ಮೊಳಗೆ ಎಲ್ಲವನ್ನೂ ಬಿಡುವ ಆಲೋಚನೆ ಬರುವುದು. ಇಂದು ಉದ್ಯೋಗದಲ್ಲಿ ನಿಮಗೆ ಬದಲಾವಣೆ ಬೇಕು ಎಂದು ಎನಿಸುವುದು. ಸಹೋದ್ಯೋಗಿಗಳ ಕಿರಿಕಿರಿಯನ್ನು ಸಹಿಸಿಕೊಳ್ಳಲು ಕಷ್ಟವಾಗುವುದು. ಸ್ನೇಹಿತರ ಸಹಕಾರದಿಂದ ಪ್ರವಾಸ ಹೋಗುವಿರಿ. ದೂರದ ಬಂಧುಗಳ ಭೇಟಿಯು ಸಂತೋಷ ಕೊಡುವುದು.‌ ಸಂಗಾತಿಯನ್ನು ಮಾತನಾಡಿಸಲು ಹೋಗಿ ಕಲಹವಾಗುವುದು. ಶಕ್ತಿಮೀರಿ ದುಡಿಯಲು ಹೋಗುವುದು ಬೇಡ. ನಿಮಗೆ ಇಂದು ಕಲೆಯ ಬಗ್ಗೆ ನಿಮಗೆ ಆಸಕ್ತಿ ಕಡಿಮೆಯಾಗುವುದು. ಉದ್ಯೋಗವನ್ನು ಬದಲಾಯಿಸುವ ಯೋಚನೆ ಇರಲಿದೆ. ಸುಖಜೀವನದ ನಿರೀಕ್ಷೆಯಲ್ಲಿ ಇರುವಿರಿ. ಯಾವುದನ್ನೂ ಪೂರ್ಣವಾಗಿ ಒಪ್ಪಲಾರಿರಿ. ಆಕಸ್ಮಿಕ ಓಡಾಟದಿಂದ ಆಯಾಸವಾಗುವುದು. ಸಮಾರಂಭಗಳಿಗೆ ಆಹ್ವಾನವಿದ್ದರೂ ಹೋಗುವ ಮನಸ್ಸಾಗದು. ಲೆಕ್ಕಪತ್ರದ ವ್ಯವಹಾರದಲ್ಲಿ ಕಲಹವಾಗವುದು.

ಕನ್ಯಾ ರಾಶಿ: ನಿಮಗೆ ಇಂದು ಮಾಡಲಾಗದ ಕಾರ್ಯವನ್ನು ಇನ್ನೊಬ್ಬರಿಗೆ ವಹಿಸಿಕೊಡುವಿರಿ. ಇಂದು ನೀವು ದಾಂಪತ್ಯದಲ್ಲಿ ಕಲಹ ಸಹಜವೆಂದು ಸುಮ್ಮನಿರಬೇಡಿ. ಹಣದ ಹೂಡಿಕೆಯನ್ನು ಮಾಡುವ ಆಲೋಚನೆಯು ಇರಲಿದೆ. ಪ್ರೇಮದಲ್ಲಿ ನೀವು ಬೀಳಲಿದ್ದೀರಿ. ಸರಿಯಾದ ತಜ್ಞರ ಜೊತೆ ಆರೋಗ್ಯವನ್ನು ತೋರಿಸಿ. ಹಳೆಯ ಖಾಯಿಲೆಯು ಕಾಣಿಸಿಕೊಳ್ಳಬಹುದು. ರಪ್ತು ವ್ಯವಹಾರದಲ್ಲಿ ಪ್ರಗತಿ ಕಾಣಿಸುವುದು. ಹಿರಿಯರ ಮಾತನ್ನು ನಿರ್ಲಕ್ಷಿಸುವಿರಿ. ನಿಮ್ಮ ಪ್ರಯತ್ನಕ್ಕೆ ಇಂದೇ ಫಲವು ಸಿಗಬೇಕೆಂದು ಅಂದುಕೊಳ್ಳುವಿರಿ. ನಿಮಗಿಂತ ಬಲವುಳ್ಳವರ ಮೇಲೆ ದ್ವೇಷವನ್ನು ಸಾಧಿಸುವಿರಿ. ‌ವೆಚ್ಚಕ್ಕೆ ನೀವು ಕಡಿವಾಣ ಹಾಕಲಿದ್ದೀರಿ. ಮಕ್ಕಳ‌ ಸಂತೋಷದಲ್ಲಿ ಭಾಗಿಯಾಗುವಿರಿ. ಉತ್ತಮ‌ ಆಹಾರವನ್ನು ಸ್ವೀಕರಿಸುವಿರಿ. ನಿಮ್ಮ‌‌‌ ಕೆಲವು ಮಾತುಗಳು ಬೇರೆಯವರಿಗೆ ಬೇಸರ ತರಿಸಬಹುದು. ಮಕ್ಕಳನ್ನು ಪಡೆಯುವ ಆಸೆಯಾಗಲಿದೆ. ನೌಕರರಿಂದ ಅಸಮಾಧಾನವಾಗಲಿದೆ. ಎಲ್ಲವನ್ನೂ ನೀವು ನಿಮ್ಮ ಊಹೆಯ ಆಧಾರದ ಮೇಲೆ ನಿರ್ಣಯಿಸುವಿರಿ.

ಬಿಗ್ ಬಾಸ್​ನಲ್ಲಿ ಹನುಮಂತ ಸ್ಪರ್ಧಿಯೇ ಅಲ್ಲ? ಹಾಗಾದ್ರೆ ಮತ್ತಿನ್ನೇನು?
ಬಿಗ್ ಬಾಸ್​ನಲ್ಲಿ ಹನುಮಂತ ಸ್ಪರ್ಧಿಯೇ ಅಲ್ಲ? ಹಾಗಾದ್ರೆ ಮತ್ತಿನ್ನೇನು?
ಹರಿದ್ವಾರದ ಬೆಟ್ಟದಲ್ಲಿ ರೀಲ್ಸ್ ಮಾಡುವಾಗ ಆಳದ ಕಂದಕಕ್ಕೆ ಬಿದ್ದ ಮಹಿಳೆ
ಹರಿದ್ವಾರದ ಬೆಟ್ಟದಲ್ಲಿ ರೀಲ್ಸ್ ಮಾಡುವಾಗ ಆಳದ ಕಂದಕಕ್ಕೆ ಬಿದ್ದ ಮಹಿಳೆ
ಹನುಮಂತನ ಕಂಡ್ರೆ ಯೋಗರಾಜ್​ ಭಟ್​ಗೆ ವಿಶೇಷ ಪ್ರೀತಿ
ಹನುಮಂತನ ಕಂಡ್ರೆ ಯೋಗರಾಜ್​ ಭಟ್​ಗೆ ವಿಶೇಷ ಪ್ರೀತಿ
ಸಮನ್ವಯ ಸಭೆಯಲ್ಲಿ ಕಾಮರಾಡರೀ ಪ್ರದರ್ಶಿಸಿದ ವಿಜಯೇಂದ್ರ ಮತ್ತು ನಿಖಿಲ್
ಸಮನ್ವಯ ಸಭೆಯಲ್ಲಿ ಕಾಮರಾಡರೀ ಪ್ರದರ್ಶಿಸಿದ ವಿಜಯೇಂದ್ರ ಮತ್ತು ನಿಖಿಲ್
ಬಿಜೆಪಿ ಕಚೇರಿಗೆ ಬಂದ ನಿಖಿಲ್ ಕುಮಾರಸ್ವಾಮಿಗೆ ಸಿಕ್ಕಿತು ಅದ್ದೂರಿ ಸ್ವಾಗತ
ಬಿಜೆಪಿ ಕಚೇರಿಗೆ ಬಂದ ನಿಖಿಲ್ ಕುಮಾರಸ್ವಾಮಿಗೆ ಸಿಕ್ಕಿತು ಅದ್ದೂರಿ ಸ್ವಾಗತ
ಶಿಗ್ಗಾವಿ ಚುನಾವಣೆಯಲ್ಲಿ ಲಿಂಗಾಯತರು ಕಾಂಗ್ರೆಸ್​ಗೆ​ ಮತ ನೀಡುತ್ತಾರೆ: ಸಚಿವ
ಶಿಗ್ಗಾವಿ ಚುನಾವಣೆಯಲ್ಲಿ ಲಿಂಗಾಯತರು ಕಾಂಗ್ರೆಸ್​ಗೆ​ ಮತ ನೀಡುತ್ತಾರೆ: ಸಚಿವ
ಯೋಗೇಶ್ವರ್ ಸ್ಪರ್ಧಿಯಾದರೂ ಶಿವಕುಮಾರ್ ಹೆಸರಲ್ಲಿ ಮತಯಾಚನೆ: ಸುರೇಶ್
ಯೋಗೇಶ್ವರ್ ಸ್ಪರ್ಧಿಯಾದರೂ ಶಿವಕುಮಾರ್ ಹೆಸರಲ್ಲಿ ಮತಯಾಚನೆ: ಸುರೇಶ್
ಯೋಗರಾಜ್ ಭಟ್ ಎದುರು ಅನಾವರಣವಾಯಿತು ಹನುಮಂತನ ನಿಜವಾದ ಬಣ್ಣ
ಯೋಗರಾಜ್ ಭಟ್ ಎದುರು ಅನಾವರಣವಾಯಿತು ಹನುಮಂತನ ನಿಜವಾದ ಬಣ್ಣ
ಬಿಜೆಪಿ ಜೊತೆ ಮೈತ್ರಿ ಬೆಳಸುವಂತೆ ಕುಮಾರಸ್ವಾಮಿಗೆ ಹೇಳಿದ್ದೇ ನಾನು: ಸಿಪಿವೈ
ಬಿಜೆಪಿ ಜೊತೆ ಮೈತ್ರಿ ಬೆಳಸುವಂತೆ ಕುಮಾರಸ್ವಾಮಿಗೆ ಹೇಳಿದ್ದೇ ನಾನು: ಸಿಪಿವೈ
IND vs NZ: ಓಡ್ಲಿಕ್ಕೆ ಆಗದಿದ್ದರೂ, ಓಡಿ ಹೋಗಿ ರನೌಟ್ ಆದ ರಿಷಭ್ ಪಂತ್
IND vs NZ: ಓಡ್ಲಿಕ್ಕೆ ಆಗದಿದ್ದರೂ, ಓಡಿ ಹೋಗಿ ರನೌಟ್ ಆದ ರಿಷಭ್ ಪಂತ್