AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 25ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 25ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 25ರ ದಿನಭವಿಷ್ಯ
ಸಂಖ್ಯಾಶಾಸ್ತ್ರ
ಸ್ವಾತಿ ಎನ್​ಕೆ
| Edited By: |

Updated on: Nov 25, 2024 | 1:37 AM

Share

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಕೆಲವು ಸಂಗತಿಗಳನ್ನು ಯಾಕಾದರೂ ಹೇಳಿದೆನೋ ಎಂಬ ಪರಿಸ್ಥಿತಿ ನಿಮ್ಮದಾಗುತ್ತದೆ. ಒಂದೇ ವಿಚಾರಕ್ಕೆ ಒಬ್ಬ ವ್ಯಕ್ತಿ ಅಥವಾ ಹಲವರು ನಿಮ್ಮ ಬಳಿ ವಿಚಾರಿಸುವುದಕ್ಕೆ ಆರಂಭಿಸಬಹುದು ಅಥವಾ ತಮ್ಮ ಪರವಾಗಿ ಶಿಫಾರಸು ಮಾಡುವಂತೆ ಕೇಳಿಕೊಳ್ಳಬಹುದು. ಮಾನಸಿಕ ಹಿಂಸೆ ಆಯಿತೋ ಅಂತಲೋ ಕಿರಿಕಿರಿ ಮಾಡುತ್ತಿದ್ದಾರೆ ಎಂಬ ಕಾರಣಕ್ಕೋ ಕೋಪವನ್ನು ಹೊರ ಹಾಕುವುದಕ್ಕೆ ಹೋಗಬೇಡಿ. ಸಂಗಾತಿ ಕಡೆಯ ಸಂಬಂಧಿಕರು ಮನೆಗೆ ಬರುವಂಥ ಯೋಗ ಇದೆ. ಅವರ ಸಲುವಾಗಿ ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಖರ್ಚು- ವೆಚ್ಚಗಳನ್ನು ಮಾಡಲಿದ್ದೀರಿ. ಇನ್ನು ಈ ಹಿಂದೆ ಯಾವಾಗಲೋ ನೀವು ಮಾಡಿದ್ದ ಕೆಲಸವನ್ನೋ ಅಥವಾ ಕೈಗೊಂಡಿದ್ದ ನಿರ್ಧಾರವನ್ನೋ ನೆನಪಿಸಿ, ಮುಜುಗರ ಮಾಡಲಿದ್ದಾರೆ. ಒಟ್ಟು ಈ ದಿನ ಮನಸ್ಸು ಪ್ರಕ್ಷುಬ್ದವಾಗಿ ಇರಲಿದೆ, ಎಚ್ಚರಿಕೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನಿಮಗೆ ಒಳ್ಳೆಯದೇನೋ ಸಂಭವಿಸಲಿದೆ ಎಂಬ ಸೂಚನೆ ಈ ದಿನ ದೊರೆಯಲಿದೆ. ಒಂದು ವೇಳೆ ವಿದೇಶದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದಲ್ಲಿ ಶುಭ ಸುದ್ದಿ ಕೇಳಿಬರುವಂಥ ಯೋಗ ಇದೆ. ಅದೇ ರೀತಿ ಈಗಾಗಲೇ ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದೀರಿ ಅಂತಾದಲ್ಲಿ ಅಲ್ಲಿ ವೇತನ ಹೆಚ್ಚಳ ಅಥವಾ ಈಗ ಮಾಡುತ್ತಿರುವಂಥ ಉತ್ತಮ ಸಂಸ್ಥೆಯಲ್ಲಿ ಉದ್ಯೋಗಾವಕಾಶ ಹುಡುಕಿಕೊಂಡು ಬರಬಹುದು. ಮನೆ ಖರೀದಿಗೆ ಪ್ರಯತ್ನ ಮಾಡುತ್ತಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಸಾಧ್ಯತೆ ಇದೆ. ಅದರಲ್ಲೂ ಕಟ್ಟಿರುವ ಮನೆಯನ್ನು ಹುಡುಕುತ್ತಿದ್ದೀರಿ ಅಂತಾದಲ್ಲಿ ಅಂಥವರಿಗೆ ಇಷ್ಟವಾಗುವಂಥದ್ದು ಸಿಗುವ ಅವಕಾಶಗಳು ಬಹಳ ಹೆಚ್ಚಿಗೆ ಇವೆ. ದೇವತಾ ಕಾರ್ಯಗಳಿಗೆ ನೀವು ತೊಡಗಿಕೊಳ್ಳುವುದರಿಂದ ಒಂದು ಬಗೆಯ ಮಾನಸಿಕವಾದ ನೆಮ್ಮದಿ ದೊರೆಯಲಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಜೆಟ್ ಹಾಕಿಕೊಂಡಂತೆ ಯಾವುದೂ ಸಾಗುವುದಿಲ್ಲ. ಆರಂಭದಲ್ಲಿಯೇ ಹೇಳಿದಂತೆ ನಿಮಗೆ ಬೇಕಾದವರು ಸಹ ನಡೆದುಕೊಳ್ಳುವುದಿಲ್ಲ. ಆ ಕಾರಣಕ್ಕೆ ಹೆಚ್ಚುತ್ತಿರುವ ಖರ್ಚು ಹಾಗೂ ವೆಚ್ಚ ನಿಮ್ಮನ್ನು ಆತಂಕಕ್ಕೆ ಗುರಿ ಮಾಡಲಿದೆ. ನಿಮಗೆ ಅರಿವಿಲ್ಲದಂತೆಯೂ ಅಥವಾ ಯಾವುದೋ ಉತ್ಸಾಹದಲ್ಲಿ ಒಪ್ಪಿಕೊಂಡ ಕೆಲಸವು ಬಹಳ ಕಷ್ಟ ಎಂಬುದು ಆ ನಂತರ ಅರಿವಿಗೆ ಬರಲಿದೆ. ಸ್ವಂತ ಉದ್ಯಮ ಅಥವಾ ವ್ಯವಹಾರವನ್ನು ಮಾಡುತ್ತಿರುವಂತಹವರಿಗೆ ಆದಾಯದಲ್ಲಿನ ಇಳಿಕೆ ಆತಂಕಕ್ಕೆ ಕಾರಣ ಆಗಲಿದೆ. ಹಣಕಾಸಿನ ವಿಚಾರಕ್ಕೆ ನಿಮಗೆ ನೆರವು ನೀಡುವುದಾಗಿ ಹೇಳಿದವರು ಕೊನೆ ಕ್ಷಣದಲ್ಲಿ ತಮ್ಮಿಂದ ಆಗುವುದಿಲ್ಲ ಎಂದು ಹೇಳುವ ಸಾಧ್ಯತೆಗಳು ಹೆಚ್ಚಿವೆ. ಈಗಾಗಲೇ ಅರ್ಧದಷ್ಟು ಮುಗಿಸಿ ಆಗಿದೆ ಎಂಬಂತಹ ಕೆಲಸಗಳನ್ನು ಮತ್ತೆ ಮೊದಲಿಂದ ಆರಂಭಿಸಬೇಕಾದ ಸನ್ನಿವೇಶಗಳು ಎದುರಾಗಲಿವೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಮಕ್ಕಳು ಅಥವಾ ನಿಮಗಿಂತ ಚಿಕ್ಕ ವಯಸ್ಸಿನವರ ಜತೆಗೆ ಉತ್ತಮವಾದ ಸಮಯ ಕಳೆಯುವಂಥ ಅವಕಾಶ ನಿಮಗಿದೆ. ಈ ದಿನ ನೀವು ರುಚಿಕಟ್ಟಾದ ಊಟ ತಿಂಡಿಗಳನ್ನು ಸವಿಯುವಂಥ ಯೋಗ ಇದೆ. ಮನೆ ಜಮೀನು ಅಥವಾ ಅಪಾರ್ಟ್ ಮೆಂಟ್ ಖರೀದಿ ಮಾಡಬೇಕು ಎಂದು ಹುಡುಕುತ್ತಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಯೋಗ ಇದೆ. ಕೆಲವು ಕೆಲಸಗಳು ನೀವು ಅಂದುಕೊಂಡಿದ್ದಕ್ಕಿಂತ ಬಹಳ ವೇಗವಾಗಿ ನಡೆದು ಹೋಗಲಿವೆ. ನಿಮಗೆ ಬಹಳ ಮುಖ್ಯ ಎನಿಸಿದ ಕೆಲಸಗಳನ್ನು ಸಾಧ್ಯವಾದಷ್ಟೂ ನೀವೇ ಮಾಡುವುದಕ್ಕೆ ಪ್ರಯತ್ನಿಸಿ. ನಿಮ್ಮಲ್ಲಿ ಕೆಲವರಿಗೆ ಈ ದಿನ ಬೆಳ್ಳಿಯ ವಸ್ತುಗಳನ್ನು ಖರೀದಿ ಮಾಡುವಂತಹ ಯೋಗ ಇದೆ. ಇನ್ನೂ ಪೂರ್ತಿಯಾಗದ ಅಥವಾ ರಹಸ್ಯಗಳನ್ನು ಒಳಗೊಂಡ ವಿಚಾರಗಳನ್ನು ಯಾರ ಜೊತೆಗೂ ಈ ದಿನ ಹಂಚಿಕೊಳ್ಳಬೇಡಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಆತ್ಮವಿಶ್ವಾಸ ಇರುವುದು ಒಳ್ಳೆಯದೇ. ಆದರೆ ನಿಮಗೆ ಗೊತ್ತಿರಬೇಕಾದದ್ದು ಏನೆಂದರೆ, ಈ ದಿನ ಯಾವುದೇ ಕೆಲಸವನ್ನು ಸರಳವಾಗಿ ತೆಗೆದುಕೊಳ್ಳಬಾರದು. ನಿಮ್ಮಲ್ಲಿ ಯಾರು ಪಿತ್ರಾರ್ಜಿತ ಆಸ್ತಿಯ ನಿರೀಕ್ಷೆಯಲ್ಲಿ ಇರುವಿರೋ ಅಂತಹವರಿಗೆ ಅಂದುಕೊಂಡಂತೆ ಕೆಲವು ಬೆಳವಣಿಗೆಗಳು ಆಗಲಿವೆ. ಬಹಳ ಮುಖ್ಯವಾದ ಕಾಗದಪತ್ರಗಳು ಅಥವಾ ವಸ್ತುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆಗೆದುಕೊಂಡು ಹೋಗುತ್ತಿದ್ದೀರಿ ಎಂದಾದಲ್ಲಿ ಸಾಮಾನ್ಯ ದಿನಗಳಿಗಿಂತ ಇರಬೇಕಾದ ಎಚ್ಚರಿಕೆಗಿಂತ ಹೆಚ್ಚು ಜಾಗ್ರತೆಯನ್ನು ವಹಿಸಿ. ನೀವು ಬಳಸುವಂತಹ ಮೊಬೈಲ್ ಫೋನ್, ಗ್ಯಾಜೆಟ್ ಗಳು ಅಥವಾ ಲ್ಯಾಪ್ ಟಾಪ್ ಅನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿ. ಈಗಾಗಲೇ ಮುಗಿದು ಹೋಗಿದೆ ಅದರ ಪ್ರಾಮುಖ್ಯ ಏನೂ ಇಲ್ಲ ಎಂದು ನೀವು ಅಂದುಕೊಂಡಿದ್ದ ವಿಚಾರಗಳಿಗೆ ವಿಪರೀತ ಆದ್ಯತೆ ದೊರೆಯಲಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಕುಟುಂಬದ ಜತೆಗೆ ಕೂಡಿ ಪ್ರವಾಸಕ್ಕೆ ತೆರಳುವುದಕ್ಕೆ ಯೋಜನೆ ರೂಪಿಸಲಿದ್ದೀರಿ. ಯಾರು ನಿಮ್ಮನ್ನು ಬೇಕೆಂತಲೇ ನಂಬಿಸಿ, ಅವಮಾನಕ್ಕೆ ಗುರಿ ಮಾಡಿದರೋ ಅವರಿಗೆ ಸರಿಯಾದ ರೀತಿಯಲ್ಲಿ ಪ್ರತೀಕಾರ ಹೇಳುವುದಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳಲಿದ್ದೀರಿ. ನಿಮ್ಮಲ್ಲಿ ಕೆಲವರು ಮನೆಗೆ ಸೋಲಾರ್ ಉಪಕರಣಗಳನ್ನು ಖರೀದಿ ಮಾಡುವುದಕ್ಕೆ ತೀರ್ಮಾನ ಮಾಡಲಿದ್ದೀರಿ. ಅಥವಾ ಎಲೆಕ್ಟ್ರಿಕಲ್ ವಾಹನವನ್ನು ಖರೀದಿ ಮಾಡುವುದಕ್ಕಾದರೂ ಅಡ್ವಾನ್ಸ್ ಪಾವತಿಸಲಿದ್ದೀರಿ. ಮಕ್ಕಳ ಶಿಕ್ಷಣಕ್ಕಾಗಿ ಕೆಲವು ಆಸ್ತಿಯನ್ನು ಮಾರಾಟ ಮಾಡುವುದಕ್ಕೆ ನಿರ್ಧಾರ ಮಾಡುವ ಸಾಧ್ಯತೆಗಳಿವೆ. ಇದೇ ವೇಳೆ ಮನೆ ಬದಲಾವಣೆ ಮಾಡಿ, ಮಕ್ಕಳು ಓದುತ್ತಿರುವ ಶಿಕ್ಷಣ ಸಂಸ್ಥೆಗೆ ಹತ್ತಿರವಾಗಿ ಮನೆ ಹುಡುಕುವುದಕ್ಕೆ ಆರಂಭ ಮಾಡಲಿದ್ದೀರಿ. ಇನ್ನು ನಿಮ್ಮ ನಿರ್ಧಾರಗಳ ಬಗ್ಗೆ ಆತ್ಮವಿಶ್ವಾಸ ಹೆಚ್ಚಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ತಾಳ್ಮೆ, ಸಮಾಧಾನ, ನಿಧಾನ, ಆಲೋಚಿಸಿ ನಿರ್ಧಾರ ಮಾಡುವುದು ಇಂಥ ಯಾವುದನ್ನೂ ಈ ದಿನ ನಿಮ್ಮಿಂದ ಮಾಡುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ಮುಖ್ಯ ಸಂಗತಿಗಳು ಎಂದಾಗ ತಕ್ಷಣವೇ ಅಥವಾ ಆವೇಶದಲ್ಲಿ ಏನನ್ನೂ ಹೇಳದಿರುವುದು ಉತ್ತಮ. ನಿಮಗೆ ತಾತ್ಕಾಲಿಕವಾಗಿ ಅನುಕೂಲ ಆಗಲಿದೆ ಎಂಬ ಕಾರಣಕ್ಕೆ ದೀರ್ಘಾವಧಿ ವಿಚಾರಗಳನ್ನು ನಿರ್ಲಕ್ಷ್ಯ ಮಾಡುವುದಕ್ಕೆ ಹೋಗಬೇಡಿ. ಕುಟುಂಬದ ವ್ಯವಹಾರವನ್ನು ಮಾಡುತ್ತಾ ಬರುತ್ತಿರುವವರಿಗೆ ಈಗ ಮಾಡುತ್ತಿರುವುದರ ಜತೆಗೆ ಇನ್ನಷ್ಟು ವ್ಯವಹಾರವನ್ನು ಸೇರಿಸಿಕೊಳ್ಳಬೇಕು ಎಂಬ ಆಲೋಚನೆ ಮೂಡಬಹುದು. ಮತ್ತು ಇದನ್ನು ಮಾಡುವುದಕ್ಕೆ ಬೇಕಾದ ಹಣಕಾಸು ಹೊಂದಾಣಿಕೆ ಮಾಡುವುದಕ್ಕೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆಯುವುದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಿದ್ದೀರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಪಾರ್ಟಿ, ಗೆಟ್ ಟು ಗೆದರ್ ಗಳಲ್ಲಿ ಭಾಗವಹಿಸುವ ಸಾಧ್ಯತೆ ಈ ದಿನ ಇದೆ. ಸಂಬಂಧಿಗಳು, ಸ್ನೇಹಿತರು ಹಾಗೂ ಪರಿಚಯಸ್ಥರು ಹಲವರನ್ನು ಭೇಟಿ ಆಗಲಿದ್ದೀರಿ. ನಿಮ್ಮ ಮನಸ್ಸು ಉಲ್ಲಾಸದಿಂದ ಕೂಡಿರುತ್ತದೆ. ಹಣಕಾಸಿನ ವಿಚಾರಕ್ಕೆ ಸ್ನೇಹಿತರು ಅಥವಾ ಆಪ್ತರ ಜತೆಗೆ ಚರ್ಚೆಯನ್ನು ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ಈಗಿರುವ ಮನೆಯನ್ನು ಬದಲಾಯಿಸಿ, ಬೇರೆ ಸ್ಥಳಕ್ಕೆ ತೆರಳಬೇಕು ಎಂದೇನಾದರೂ ಆಲೋಚನೆ ಮಾಡುತ್ತಿದ್ದಲ್ಲಿ ಅಗತ್ಯ ಇರುವಂಥ ಮಾಹಿತಿ ದೊರೆಯಲಿದೆ. ಇನ್ನು ನೀವು ನಿರೀಕ್ಷೆ ಕೂಡ ಮಾಡದ ರೀತಿಯಲ್ಲಿ ಉದ್ಯೋಗ ಬದಲಾವಣೆ ಅವಕಾಶಗಳು ತೆರೆದುಕೊಳ್ಳುವಂತೆ ಕಾಣುತ್ತವೆ. ನಿಮ್ಮ ಸಾಮರ್ಥ್ಯದ ಬಗ್ಗೆ ಇತರರು ಒಳ್ಳೆ ಮಾತುಗಳನ್ನು ಆಡಲಿದ್ದಾರೆ. ವೃತ್ತಿ, ವ್ಯವಹಾರ- ವ್ಯಾಪಾರ ಮಾಡುತ್ತಾ ಇರುವವರು ದೂರ ಪ್ರಯಾಣಕ್ಕೆ ಸಿದ್ಧರಾಗಬೇಕಾಗುತ್ತದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನಿಮ್ಮ ಸಂಬಂಧಿಕರು, ಸ್ನೇಹಿತರು ಅಥವಾ ಪೋಷಕರು ಹಣಕಾಸಿನ ನೆರವು ನೀಡುವ ಬಗ್ಗೆ ಖಚಿತವಾಗಿ ಹೇಳುವ ಸಾಧ್ಯತೆ ಇದೆ. ಈ ಹಿಂದೆ ನೀವು ಹೇಳಿದ್ದ ಪ್ರಾಜೆಕ್ಟ್ ಗಾಗಿಯೋ ಅಥವಾ ವ್ಯವಹಾರದ ಮೇಲಿನ ನಂಬಿಕೆಯಿಂದಲೋ ಹಣ ಹಾಕುವುದಕ್ಕೆ ಒಪ್ಪಿಗೆ ಸೂಚಿಸುವ ಅವಕಾಶಗಳು ಹೆಚ್ಚಿಗೆ ಇವೆ. ಇನ್ನು ಈ ದಿನ ರೆಸ್ಟೋರೆಂಟ್, ಸಿನಿಮಾ ಅಥವಾ ಮನರಂಜನೆಗಾಗಿ ಅಂತಲೇ ಕೆಲವು ಸ್ಥಳಗಳಿಗೆ ಕುಟುಂಬ ಸಮೇತ ತೆರಳುವಂಥ ಯೋಗ ಕಂಡುಬರುತ್ತಿದೆ. ವಾಹನವನ್ನು ಪಾರ್ಕಿಂಗ್ ಮಾಡುವಾಗ ಸಾಮಾನ್ಯ ದಿನಗಳಿಗಿಂತ ಎಚ್ಚರಿಕೆಯಿಂದ ಇರುವುದು ಮುಖ್ಯ. ಒಂದೋ ನೋ ಪಾರ್ಕಿಂಗ್ ಸೇರಿ ಸಂಚಾರ ನಿಯಮ ಉಲ್ಲಂಘನೆಗಾಗಿ ದಂಡ ಬೀಳಬಹುದು ಅಥವಾ ಯಾವುದಾದರೂ ವಸ್ತು ನಿಮ್ಮ ವಾಹನದ ಮೇಲೆ ಬಿದ್ದು, ಅದರಿಂದ ಜಖಂ ಆಗಿ, ಹಣ ಖರ್ಚು ಮಾಡಬೇಕಾಗಲಿದೆ.

ಲೇಖನ- ಎನ್‌.ಕೆ.ಸ್ವಾತಿ

Follow Us
ಚನ್ನಪಟ್ಟಣ ನಗರಕ್ಕೇ ನುಗ್ಗಿದ ಒಂಟಿ ಸಲಗ: ಎದುರಿಗೆ ಸಿಕ್ಕಿದ್ದೆಲ್ಲ ಉಡೀಸ್​​
ಚನ್ನಪಟ್ಟಣ ನಗರಕ್ಕೇ ನುಗ್ಗಿದ ಒಂಟಿ ಸಲಗ: ಎದುರಿಗೆ ಸಿಕ್ಕಿದ್ದೆಲ್ಲ ಉಡೀಸ್​​
ಮೇ 4ಕ್ಕೆ ಪ್ರಮಾಣವಚನಕ್ಕೆ ಬರುವೆ, ಬಂಗಾಳದಲ್ಲಿ ಮೋದಿ ವಿಜಯಘೋಷ
ಮೇ 4ಕ್ಕೆ ಪ್ರಮಾಣವಚನಕ್ಕೆ ಬರುವೆ, ಬಂಗಾಳದಲ್ಲಿ ಮೋದಿ ವಿಜಯಘೋಷ
ರಕ್ಷಿತಾ-ಧ್ರುವಂತ್ ಮಧ್ಯೆ ಎಷ್ಟು ಒಳ್ಳೆಯ ಬಾಂಧವ್ಯ ಇದೆ ನೋಡಿ
ರಕ್ಷಿತಾ-ಧ್ರುವಂತ್ ಮಧ್ಯೆ ಎಷ್ಟು ಒಳ್ಳೆಯ ಬಾಂಧವ್ಯ ಇದೆ ನೋಡಿ
ರಾಜಕುಮಾರ್ ಸ್ಮಾರಕದ ಬಳಿ ಫ್ಲೆಕ್ಸ್ ಗೋಡೌನ್‌ನಲ್ಲಿ ಭೀಕರ ಅಗ್ನಿ ಅವಘಡ
ರಾಜಕುಮಾರ್ ಸ್ಮಾರಕದ ಬಳಿ ಫ್ಲೆಕ್ಸ್ ಗೋಡೌನ್‌ನಲ್ಲಿ ಭೀಕರ ಅಗ್ನಿ ಅವಘಡ
ಅಕ್ರಮದ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದ ಮಹಿಳೆಗೇ ಬಿಗ್ ಶಾಕ್!
ಅಕ್ರಮದ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದ ಮಹಿಳೆಗೇ ಬಿಗ್ ಶಾಕ್!
ಜರ್ಮನ್ ಒಪೆರಾ ಹಾಡಿದ ಸರೆಗಮಪ ಸ್ಪರ್ಧಿ; ಜಡ್ಜ್​​ಗಳೇ ಶಾಕ್ 
ಜರ್ಮನ್ ಒಪೆರಾ ಹಾಡಿದ ಸರೆಗಮಪ ಸ್ಪರ್ಧಿ; ಜಡ್ಜ್​​ಗಳೇ ಶಾಕ್ 
SSLC ಫಲಿತಾಂಶದ ವೇಳೆ ಯಡವಟ್ಟು: 92ರ ಬದಲು ವಿದ್ಯಾರ್ಥಿಗೆ ಬಂದಿದ್ದು 48 ಅಂಕ
SSLC ಫಲಿತಾಂಶದ ವೇಳೆ ಯಡವಟ್ಟು: 92ರ ಬದಲು ವಿದ್ಯಾರ್ಥಿಗೆ ಬಂದಿದ್ದು 48 ಅಂಕ
ಬ್ಲಡ್ ಬ್ಯಾಂಕ್​ಗಳಿಗೂ ತಟ್ಟಿದ ಬಿಸಿಲಿನ ಬೇಗೆ: ರಕ್ತ ಸಿಗದೇ ರೋಗಿಗಳ ಪರದಾಟ
ಬ್ಲಡ್ ಬ್ಯಾಂಕ್​ಗಳಿಗೂ ತಟ್ಟಿದ ಬಿಸಿಲಿನ ಬೇಗೆ: ರಕ್ತ ಸಿಗದೇ ರೋಗಿಗಳ ಪರದಾಟ
ಕೊಪ್ಪಳದಲ್ಲಿ ನಿಲ್ಲದ ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ ದಂಧೆ
ಕೊಪ್ಪಳದಲ್ಲಿ ನಿಲ್ಲದ ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ ದಂಧೆ
ಬೆಳ್ಳಂಬೆಳಗ್ಗೆ ಸಫಾರಿ ತೆರಳಿದವರಿಗೆ ದರ್ಶನ ಕೊಟ್ಟ ಅಪರೂಪದ ಕರಿಚಿರತೆ!
ಬೆಳ್ಳಂಬೆಳಗ್ಗೆ ಸಫಾರಿ ತೆರಳಿದವರಿಗೆ ದರ್ಶನ ಕೊಟ್ಟ ಅಪರೂಪದ ಕರಿಚಿರತೆ!