Career Horoscope: ನಿಮ್ಮ ರಾಶಿಗನುಗುಣವಾಗಿ ಮೇ 3ರಿಂದ 9ರ ವರೆಗಿನ ವಾರದ ಉದ್ಯೋಗ ಭವಿಷ್ಯ ತಿಳಿಯಿರಿ

ಮೇ 3-9ರ ವಾರದ ಉದ್ಯೋಗ ಭವಿಷ್ಯವನ್ನು ಇಲ್ಲಿ ವಿವರಿಸಲಾಗಿದೆ. ವೃತ್ತಿಜೀವನದಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ಮತ್ತು ಆದಾಯದ ಮೂಲಗಳಿಗೆ ಹಿನ್ನಡೆಯ ಸಾಧ್ಯತೆಯಿದ್ದರೂ, ಪ್ರತಿಯೊಂದು ರಾಶಿಗೂ ಎದುರಾಗುವ ಸವಾಲುಗಳು ಮತ್ತು ಅವಕಾಶಗಳನ್ನು ವಿವರಿಸಲಾಗಿದೆ. ತಾಳ್ಮೆ, ನಿರ್ಧಾರ ಶಕ್ತಿ, ಸಹೋದ್ಯೋಗಿಗಳೊಂದಿಗಿನ ಸಂಬಂಧಗಳು ಮತ್ತು ಆರ್ಥಿಕ ನಿರ್ವಹಣೆಗೆ ಸಂಬಂಧಿಸಿದ ಸಲಹೆಗಳು ನಿಮ್ಮ ವೃತ್ತಿ ಪ್ರಗತಿಗೆ ಸಹಾಯ ಮಾಡುತ್ತವೆ.

Career Horoscope: ನಿಮ್ಮ ರಾಶಿಗನುಗುಣವಾಗಿ ಮೇ 3ರಿಂದ 9ರ ವರೆಗಿನ ವಾರದ ಉದ್ಯೋಗ ಭವಿಷ್ಯ ತಿಳಿಯಿರಿ
Weekly Career Horoscope
Edited By:

Updated on: May 01, 2026 | 4:18 PM

ಮೇ 03ರಿಂದ ಮೇ 09ರವರೆಗಿನ ಮೊದಲ ವಾರವಾಗಿದ್ದು ಉದ್ಯೋಗರಂಗದಲ್ಲಿ ಅನಿರೀಕ್ಷಿತ ಬೆಳವಣಿಗೆಯಿಂದ ಆತಂಕ ಸೃಷ್ಟಿ ಆಗಬಹುದು. ಹಲವು ಆದಾಯ ಮೂಲಕ್ಕೆ ಹಿನ್ನಡೆ ಸಾಧ್ಯತೆ. ಕೆಲವರಿಗೆ ನಿರ್ವಹಣೆ ಕಷ್ಟ ಎನಿಸಬಹುದು.

​ಮೇಷ:

ಮೊದಲನೇ ವಾರದಲ್ಲಿ ನಿಮ್ಮ ರಾಶ್ಯಾಧಿಪತಿ ಕುಜನು ಸ್ವಕ್ಷೇತ್ರದಲ್ಲಿ ಬಲವಾಗಿದ್ದಾನೆ. ಉದ್ಯೋಗದಲ್ಲಿ ನಿಮ್ಮ ಶೌರ್ಯ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚಲಿದೆ. ಕಠಿಣ ಸವಾಲುಗಳನ್ನು ಸುಲಭವಾಗಿ ಗೆಲ್ಲುವಿರಿ.

​ವೃಷಭ:

ಈ ವಾರ ಕೆಲಸದ ಸ್ಥಳದಲ್ಲಿ ತಾಳ್ಮೆ ಅಗತ್ಯ. ಗ್ರಹಗಳು ಶನಿಯ ಪ್ರಭಾವದಲ್ಲಿರುವುದರಿಂದ ಕೆಲಸ ವಿಳಂಬವಾಗಬಹುದು. ಮೇಲಾಧಿಕಾರಿಗಳ ಜೊತೆ ವಾಗ್ವಾದ ಬೇಡ, ಸಮಾಧಾನದಿಂದ ಕೆಲಸ ಮುಗಿಸುವುದು ಉತ್ತಮ.

ಮಿಥುನ:

ಬುಧ ಮತ್ತು ಗುರುವಿನ ಶುಭ ದೃಷ್ಟಿಯಿಂದ ವ್ಯಾಪಾರದಲ್ಲಿ ಲಾಭದಾಯಕ ಬದಲಾವಣೆ ಕಂಡುಬರಲಿದೆ. ಹೊಸ ಉದ್ಯೋಗದ ಹುಡುಕಾಟದಲ್ಲಿದ್ದವರಿಗೆ ಉತ್ತಮ ಅವಕಾಶಗಳು ಕೈಸೇರಲಿವೆ. ಚತುರತೆಯಿಂದ ಕಾರ್ಯಸಿದ್ಧಿ ಮಾಡಿಕೊಳ್ಳುವಿರಿ

​ಕರ್ಕಾಟಕ :

ಚಂದ್ರನು ನವಾಂಶದಲ್ಲಿ ಶುಕ್ರನ ಮನೆಯಲ್ಲಿರುವುದರಿಂದ ಕಲಾತ್ಮಕ ವೃತ್ತಿಯವರಿಗೆ ಸುಸಮಯ. ಕಚೇರಿಯಲ್ಲಿ ಸ್ತ್ರೀ ಸಹೋದ್ಯೋಗಿಗಳಿಂದ ಸಹಾಯ ದೊರೆಯಲಿದೆ. ಮಾನಸಿಕ ನೆಮ್ಮದಿಯೊಂದಿಗೆ ಕೆಲಸ ನಿರ್ವಹಿಸುವಿರಿ.

ಸಿಂಹ:

ರವಿಯು ಗುರುವಿನ ದ್ರೇಕ್ಕಾಣದಲ್ಲಿ ಇದ್ದುದರಿಂದ ವೃತ್ತಿಯಲ್ಲಿ ಅತ್ಯಂತ ಪ್ರಭಾವಶಾಲಿ ಸ್ಥಾನ ದೊರೆಯಲಿದೆ. ನಿಮ್ಮ ಮಾತಿಗೆ ಬೆಲೆ ಸಿಗಲಿದ್ದು, ಆಡಳಿತಾತ್ಮಕ ಕೆಲಸಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಗೌರವ ವೃದ್ಧಿಯಾಗಲಿದೆ.

​ಕನ್ಯಾ:

ಉದ್ಯೋಗದಲ್ಲಿ ಸ್ವಲ್ಪ ಗೊಂದಲಗಳು ಉಂಟಾಗಬಹುದು. ಶ್ರಮಕ್ಕೆ ತಕ್ಕ ಫಲ ತಕ್ಷಣ ಸಿಗದಿದ್ದರೂ ಧೃತಿಗೆಡಬೇಡಿ. ವ್ಯವಹಾರದಲ್ಲಿ ಲೆಕ್ಕಾಚಾರದ ಬಗ್ಗೆ ಹೆಚ್ಚಿನ ಗಮನವಿರಲಿ. ತಾಂತ್ರಿಕ ಕೆಲಸಗಾರರಿಗೆ ಶುಭಕರ.

ತುಲಾ:

ಪಾಲುದಾರಿಕೆ ವ್ಯವಹಾರದಲ್ಲಿ ಉತ್ತಮ ಪ್ರಗತಿ ಕಾಣುವಿರಿ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಲಿವೆ. ಜನರೊಂದಿಗೆ ವ್ಯವಹರಿಸುವ ವೃತ್ತಿಯಲ್ಲಿದ್ದವರಿಗೆ ಈ ವಾರ ಅತ್ಯಂತ ಲಾಭದಾಯಕವಾಗಿರಲಿದೆ.

​ವೃಶ್ಚಿಕ:

ವೃತ್ತಿ ಜೀವನದಲ್ಲಿ ಎದುರಾಳಿಗಳ ಮೇಲೆ ಜಯ ಸಾಧಿಸುವಿರಿ. ಕುಜನ ಬಲದಿಂದ ಶಕ್ತಿಯುತವಾಗಿ ಕೆಲಸ ಮಾಡುವಿರಿ. ರಿಯಲ್ ಎಸ್ಟೇಟ್ ಅಥವಾ ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ಆದಾಯ ಹೆಚ್ಚಾಗುವ ಸಂಭವವಿದೆ.

ಧನುಸ್ಸು:

ಗುರುವಿನ ಸ್ಥಾನವು ಉದ್ಯೋಗದಲ್ಲಿ ಸ್ಥಿರತೆಯನ್ನು ನೀಡಲಿದೆ. ಬೋಧನೆ ಅಥವಾ ಸಲಹಾ ಕೇಂದ್ರಗಳಲ್ಲಿ ಕೆಲಸ ಮಾಡುವವರಿಗೆ ಮನ್ನಣೆ ಸಿಗಲಿದೆ. ದೂರದ ಪ್ರಯಾಣದಿಂದ ವೃತ್ತಿಯಲ್ಲಿ ಅನುಕೂಲವಾಗಲಿದೆ.

​ಮಕರ:

ಶನಿಯ ಪ್ರಭಾವದಿಂದ ಕೆಲಸದ ಒತ್ತಡ ಹೆಚ್ಚಿರಲಿದೆ. ಹಿರಿಯ ಅಧಿಕಾರಿಗಳಿಂದ ಟೀಕೆಗಳು ಬರಬಹುದು, ಆದರೆ ನಿಮ್ಮ ಶ್ರಮಕ್ಕೆ ಕೊನೆಯಲ್ಲಿ ಜಯ ಸಿಗಲಿದೆ. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

​ಕುಂಭ:

ಹೊಸ ಯೋಜನೆಗಳಿಗೆ ಚಾಲನೆ ನೀಡಲು ಈ ವಾರ ಪೂರಕವಾಗಿದೆ. ಸಮಾಜ ಸೇವೆಯಲ್ಲಿರುವವರಿಗೆ ಅಥವಾ ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಸಾರ್ವಜನಿಕವಾಗಿ ಹೆಸರು ಮಾಡುವ ಅವಕಾಶ ದೊರೆಯಲಿದೆ.

​ಮೀನ:

ಹಣಕಾಸಿನ ವೃತ್ತಿಯಲ್ಲಿರುವವರಿಗೆ ಅಭಿವೃದ್ಧಿ ಕಂಡುಬರಲಿದೆ. ನಿಮ್ಮ ಕ್ರಿಯಾಶೀಲತೆಗೆ ತಕ್ಕ ಪುರಸ್ಕಾರ ಸಿಗಲಿದೆ. ಮನೆಯಿಂದಲೇ ಕೆಲಸ ಮಾಡುವವರಿಗೆ ಅಥವಾ ಫ್ರೀಲಾನ್ಸಿಂಗ್ ಮಾಡುವವರಿಗೆ ಹೆಚ್ಚಿನ ಆದಾಯ ಸಿಗಲಿದೆ.

– ಲೋಹಿತ ಹೆಬ್ಬಾರ್ – 8762924271

Follow Us