Weekly Horoscope: ವಾರ ಭವಿಷ್ಯ: ಮಾ 17 ರಿಂದ 23 ರವರೆಗೆ ವಾರ ಭವಿಷ್ಯ
ಇದು ಮಾರ್ಚ್ ತಿಂಗಳ ನಾಲ್ಕನೇ ವಾರವಿದಾಗಿದೆ. ೧೭-೦೩-೨೦೨೫ರಿಂದ ೨೩-೦೩-೨೦೨೫ರವರೆಗೆ ಇರಲಿದೆ. ಅನೇಕ ಗ್ರಹಗಳು ಶುಭಸ್ಥಾನದಲ್ಲಿ ಇದ್ದು ಫಲಕೊಡುವುವು, ಇನ್ನೂ ಕೆಲವು ಮಧ್ಯಮಫಲ, ಮತ್ತೂ ಕೆಲವು ಅಶುಭ ಫಲ. ಯಾವ ಅಶುಭ ಗ್ರಹಗಳ ದಶೆ ನಡೆಯುತ್ತಿದೆ ಎಂದು ತಿಳಿದು ಪರಿಹಾರ ಮಾಡಿಕೊಂಡರೆ ಜೀವನ ಸುಗಮ.

ಬೆಂಗಳೂರು, ಮಾರ್ಚ್ 16: ಇದು ಮಾರ್ಚ್ ತಿಂಗಳ ನಾಲ್ಕನೇ ವಾರವಿದಾಗಿದೆ. ೧೭-೦೩-೨೦೨೫ರಿಂದ ೨೩-೦೩-೨೦೨೫ರವರೆಗೆ ಇರಲಿದೆ. ಅನೇಕ ಗ್ರಹಗಳು ಶುಭಸ್ಥಾನದಲ್ಲಿ ಇದ್ದು ಫಲಕೊಡುವುವು, ಇನ್ನೂ ಕೆಲವು ಮಧ್ಯಮಫಲ, ಮತ್ತೂ ಕೆಲವು ಅಶುಭ ಫಲ. ಯಾವ ಅಶುಭ ಗ್ರಹಗಳ ದಶೆ ನಡೆಯುತ್ತಿದೆ ಎಂದು ತಿಳಿದು ಪರಿಹಾರ ಮಾಡಿಕೊಂಡರೆ ಜೀವನ ಸುಗಮ.
ಮೇಷ ರಾಶಿ: ಮಾರ್ಚ್ ತಿಂಗಳ ಈ ವಾರ ವಿದ್ಯಾರ್ಥಿಗಳಾಗಿದ್ದಾರೆ ವಿದ್ಯಾಭ್ಯಾಸದಲ್ಲಿ ಅಭಿವೃದ್ಧಿಯನ್ನು ಕಾಣುವಿರಿ. ನಿಮ್ಮ ಪ್ರಯತ್ನಕ್ಕೆ ದೃಷ್ಟವು ಜೊತೆಗಿರಲಿದೆ. ನೀವು ಅಲ್ಪ ಪ್ರಯತ್ನದಿಂದ ಕೆಲಸವನ್ನು ಸಾಧಿಸಿಕೊಳ್ಳಬಹುದು. ಬಂದಿರುವ ಕೆಲಸಗಳನ್ನು ಒಂದೊಂದಾಗಿಯೇ ಮುಗಿಸುತ್ತ ಬನ್ನಿ. ಈ ವಾರ ಒತ್ತಡದ ಕೆಲಸಗಳನ್ನು ನಿರ್ವಹಿಸಬೇಕಾಗಬಹುದು. ಮೆಚ್ಚುಗೆಯು ನಿಮ್ಮ ಕೆಲಸಕ್ಕೆ ಸಿಗಲಿದೆ. ಮೇಲಧಿಕಾರಿಗಳಿಂದ ಪ್ರೋತ್ಸಾಹ ಮತ್ತು ಪ್ರಶಂಸೆಯು ಸಿಗಲಿದೆ ಹಾಗೆಯೇ ಉದ್ವಿಗ್ನತೆಗೆ ಒಳಗಾಗದೇ ಎಚ್ಚರಿಕೆಯಿಂದ ಕೆಲಸವನ್ನು ಮಾಡಿ ಮುಗಿಸಿ. ದಾಂಪತ್ಯದಲ್ಲಿ ಸುಖವಿರಲಿದೆ. ರಾಯರ ಸ್ಮರಣೆ ಮಾಡಿ.
ವೃಷಭ ರಾಶಿ: ಈ ತಿಂಗಳ ನಾಲ್ಕನೇ ವಾರದಲ್ಲಿ ವ್ಯವಹಾರದಲ್ಲಿ ನಿಮಗೆ ಕೆಲವು ಗೊಂದಲಗಳು ಬರುವುದು. ಮನಸ್ಸು ಬಹಳ ಚಂಚಲವಾಗಿರಲಿದೆ. ಅನಗತ್ಯ ಖರ್ಚುಗಳು ಆಗಬಹುದಾಗಿದೆ. ಸಿಕ್ಕ ಸೌಕರ್ಯಗಳಿಂದ ಕೆಲವು ತೊಂದರೆಗಳನ್ನು ಅನುಭವಿಸಬೇಕಾಗಬಹುದು. ನಿಮ್ಮ ರಹಸ್ಯವು ಬಯಲಾಗುವ ಸಾಧ್ಯತೆ ಇದೆ. ಈ ವಾರದಲ್ಲಿ ವೈವಾಹಿಕ ಜೀವನದಲ್ಲಿ ಕಲಹವಿದ್ದರೂ ಎಲ್ಲವೂ ಮರೆಯಾಗಿ ಸುಂದರವಾಗಿರಲಿದೆ. ಸಂಗಾತಿಗಳು ಪರಸ್ಪರ ಅನ್ಯೋನ್ಯವಾಗಿ ಇರಲಿದ್ದೀರಿ. ಹೊಂದಾಣಿಕೆಯ ಬದುಕು ನಿಮ್ಮದಾಗಲಿದೆ. ಸಹೋದರರ ಜೊತೆ ವಿವಾದಗಳು ಆಗಬಹುದು. ತಾಳ್ಮೆಯಿಂದ ವಾದವನ್ನು ತಣ್ಣಗಾಗಿಸಿಕೊಳ್ಳಿ. ದೂರದ ಪ್ರಯಾಣವು ಸುಖದಾಯಕವಲ್ಲ. ಮಹಾಮೃತ್ಯುಂಜ ಮಂತ್ರವನ್ನು ಪಠಿಸಿ.
ಮಿಥುನ ರಾಶಿ; ಇದು ಮೂರನೇ ರಾಶಿಯಾಗಿದ್ದು, ಈ ವಾರ ನಿಮ್ಮ ಆಸ್ತಿಯ ಮಾರಾಟ ಮಾಡುವ ಯೋಚನೆ ಮಾಡುವಿರಿ. ಮಾನಸಿಕ ಒತ್ತಡದಿಂದ ಹೊರಬರಲು ಪ್ರಯತ್ನಿಸಿ. ನಿಮ್ಮ ಉದ್ಯೋಗದ ಕಡೆಗೆ ಹೆಚ್ಚು ಗಮನವಿರಲಿ, ಲಾಭವಾದೀತು. ನಿಮ್ಮ ವರ್ತನೆಯಿಂದ ಸ್ನೇಹಿತರು ಬೇಸರಗೊಂಡಾರು. ಶರೀರಕ್ಕೆ ಅತಿಯಾಗಿ ಆಯಾಸವಾಗುವ ಕೆಲಸಗಳನ್ನು ಮಾಡಬೇಡಿ, ಅಶಕ್ತತೆಯು ಉಂಟಾಗಬಹುದು. ಈ ವಾರ ನಿಮ್ಮ ಕಛೇರಿಯಲ್ಲಿ ಕಾರ್ಯಗಳು ಬಹಳ ನಿಧಾನವಾಗಿ ಸಾಗಬಹುದು. ಆಲಸ್ಯವನ್ನು ಬಿಟ್ಟು ಕೆಲಸ ಮಾಡಿ. ಖರ್ಚನ್ನು ಕಡಿಮೆ ಮಾಡಲು ಹೊರಟರೂ ಅನಿವಾರ್ಯವಾಗಿ ಖರತಚಾಗುವುದು. ಹೊಸ ಪ್ರೇಮವು ಅಂಕುರಿಸು ಸಾಧ್ಯತೆ. ಪ್ರೇಮಿಸುವ ವ್ಯಕ್ತಿಗಳ ಬಗ್ಗೆ ಮಾಹಿತಿ ಇರಲಿ. ಪ್ರಸನ್ನಾಂಜನೇಯನನ್ನು ಭಜಿಸಿ.
ಕರ್ಕಾಟಕ ರಾಶಿ: ಇದು ನಾಲ್ಕನೇ ವಾರವಾಗಿದ್ದು ಎಲ್ಲ ಕಾರ್ಯದಲ್ಲಿ ನೀವು ಭಯದ ವಾತಾವರಣದಲ್ಲಿ ಇರುವಿರಿ. ಆದರೂ ನಿಮ್ಮ ಕೆಲಸವನ್ನು ಬದಿಗಿರಿಸಿ ನಿಮಗೆ ಸಿಕ್ಕ ಕೀರ್ತಿಯನ್ನು ಅನುಭವಿಸಿ. ಹಣದ ವಿಷಯದಲ್ಲಿ ಏರಿಳಿತಗಳು ಆಗಬಹುದು. ನಿಮ್ಮ ಮತ್ತು ಪ್ರೇಮಿಯ ನಡುವೆ ಇಗೋ ಉಂಟಾಗಿ ಘರ್ಷಣೆಯಾಗಲಿದೆ. ಈ ವಾರ ನಿಮ್ಮ ಹೆತ್ತವರ ಆಲೋಚನೆಗಳು ಪ್ರೀತಿಯ ಜೀವನದಲ್ಲಿ ಪ್ರಾಬಲ್ಯವನ್ನು ಹೆಚ್ಚಿಸುತ್ತವೆ. ನಿಮಗೆ ಯಾವುದೇ ಸಮಸ್ಯೆಗಳಿದ್ದರೆ ಪ್ರಪಂಚದಿಂದ ಮರೆ ಮಾಡುವ ಅಗತ್ಯವಿಲ್ಲ. ನೀವು ವಿದ್ಯಾರ್ಥಿಯಾಗಿದ್ದರೆ ಮತ್ತು ನಿಮ್ಮ ಅಧ್ಯಯನದಲ್ಲಿ ನಿಮಗೆ ಯಾವುದೇ ಸಮಸ್ಯೆ ಬಂದಲ್ಲಿ ಧೈರ್ಯವಾಗ ಮಾತನಾಡಿ ಪರಿಹಾರ ಕಂಡುಕೊಳ್ಳುವಿರಿ.
ಸಿಂಹ ರಾಶಿ; ಐದನೇ ರಾಶಿಯವರಿಗೆ ಈ ವಾರದಲ್ಲಿ ಪ್ರೀತಿಪಾತ್ರರಿಗೆ ಯಾವಾಗಲೂ ಸಹಾಯ ಮಾಡಲು ಸಿದ್ಧರಾಗಿರುವಿರಿ. ಈ ವಾರ ನೀವು ಏನನ್ನಾದರೂ ಸಾಧಿಸುವಾಗ ನಿಮ್ಮ ಹೋರಾಟದಲ್ಲಿ ಸ್ವಲ್ಪ ನಿರ್ದಯೆಯನ್ನು ತೋರಿಸುವಿರಿ. ಬೆಳಗಿನಲ್ಲಿ ಕೇಳಿದ ಸಂಗೀತ ನಿಮಗೆ ಹೆಚ್ಚಿನ ಶಕ್ತಿ ಮತ್ತು ಉತ್ಸಾಹವನ್ನು ನೀಡುತ್ತದೆ. ಇದು ನಕಾರಾತ್ಮಕ ಸಂದರ್ಭದ ವಿರುದ್ಧ ಹೋರಾಡುವಿರಿ. ಮೊದಲು ಮಾಡಿದ ಎಲ್ಲಾ ಶ್ರಮದ ಫಲವನ್ನು ನೀವು ಪಡೆಯಲಿದ್ದೀರಿ. ಇದು ತಾಳ್ಮೆಯಿಂದಿರಬೇಕಾದ ಸಮಯವಾಗಿದೆ. ಶಾಂತ ಮನಸ್ಸಿನಿಂದ ಮಾಡಿದ ಕೆಲಸವು ಹೆಚ್ಚು ಸುಲಭವಾಗಿ ಫಲ ನೀಡುತ್ತದೆ. ಈ ವಾರ ಯಾವುದಾರೂ ಸಾಮಾಜಿಕ ವಿವಾದದಲ್ಲಿ ಸಿಲುಕಿಕೊಳ್ಳಬಹುದು. ಈ ವಾರ ನಿಮ್ಮ ವೃತ್ತಿಯನ್ನು ಬದಲಾಯಿಸಲು ನೀವು ಯೋಚಿಸುವಿರಿ.
ಕನ್ಯಾ ರಾಶಿ: ಇದು ರಾಶಿ ಚಕ್ರದ ಆರನೇ ರಾಶಿಯಾಗಿದ್ದು, ಈ ವಾರದಲ್ಲಿ ನಿಮ್ಮ ಕೌಟುಂಬಿಕ ಜೀವನ ಸರಳವೂ ಸುಂದರವೂ ಆಗಿದ್ದು ಉತ್ತಮವಾಗಿರುತ್ತದೆ. ಸಣ್ಣಪುಟ್ಟ ಕಲಹಗಳಿದ್ದರೂ ಮನೆಯಲ್ಲಿ ಸುಖ-ಶಾಂತಿಯ ವಾತಾವರಣ. ನಿಮ್ಮ ಕೌಟುಂಬಿಕ ಜೀವನದಲ್ಲಿ ನೀವು ತೃಪ್ತರಾಗಿರುವಿರಿ. ಕುಟುಂಬದಲ್ಲಿ ಪ್ರೀತಿಯ ಭಾವನೆ ಇರುತ್ತದೆ. ಈ ವಾರ ನೀವು ಹೊಸ ಮನೆ ನಿರ್ಮಾಣದ ಬಗ್ಗೆ ಯೋಚಿಸಬಹುದು. ಕೆಲವು ಒಳ್ಳೆಯ ಸುದ್ದಿಗಳು ಮನೆಯ ಸಂತೋಷವನ್ನು ಇಮ್ಮಡಿ ಮಾಡುತ್ತವೆ. ಪೂರ್ವಜರ ಆಸ್ತಿಯಲ್ಲಿ ಹೆಚ್ಚಳದ ಸಾಧ್ಯತೆಗಳು ಪ್ರಬಲವಾಗಿವೆ. ಪ್ರೀತಿಯ ಜೀವನವು ಮಿಶ್ರವಾಗಿರಬಹುದು. ಸಂಗಾತಿಯ ಜೊತೆ ವಿವಾದವು ಆಗಬಹುದು.
ತುಲಾ ರಾಶಿ: ಮಾರ್ಚ್ ತಿಂಗಳ ಈ ವಾರ ನಿಮ್ಮ ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯಲು ಶ್ರಮಿಸಬೇಕಾಗುತ್ತದೆ. ನಿಮ್ಮ ಉದ್ಯೋಗ ಮತ್ತು ವ್ಯವಹಾರದಲ್ಲಿ ಯಶಸ್ಸಿಗೆ ನೀವು ಹೊಸ ಆಲೋಚನೆಯ ಜೊತೆ ಮುಂದುವರಿಯಬೇಕು. ಈ ವಿಷಯದಲ್ಲಿ, ಹಿರಿಯ ಅಧಿಕಾರಿಗಳ ಸಲಹೆಯು ನಿಮಗೆ ಪ್ರಯೋಜನಕಾರಿಯಾಗಿದೆ. ಈ ವಾರ ಹಣಕಾಸಿನ ವಿಚಾರದಲ್ಲಿ ಹೊಸ ಯೋಜನೆಯನ್ನು ಮಾಡಲಿದ್ದೀರಿ. ಹಣವನ್ನು ಉಳಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ವ್ಯಾಪಾರದಲ್ಲಿ ಕೆಲವು ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಉತ್ತಮ. ಸಂಗಾತಿಯ ಜೊತೆ ಸಮಯವನ್ನು ಸಂತೋಷದಿಂದ ಕಳೆಯುವಿರಿ. ನಿಮ್ಮ ಜೀವನದ ಮೇಲೆ ನಿಮಗೆ ಹೆಮ್ಮೆಯಿರಲಿದೆ. ನಿಮಗೆ ಇಷ್ಟವಾದವರ ಜೊತೆ ಕುಳಿತು ಹರಟೆ ಹೊಡೆಯುವಿರಿ. ನಿಮ್ಮ ಸಂಬಂಧವನ್ನು ಒಂದು ಹೆಜ್ಜೆ ಮುಂದೆ ಇಡಲು ಯೋಚಿಸುತ್ತೀರಿ. ನೀವು ಕಷ್ಟಪಟ್ಟು ಕೆಲಸ ಮಾಡಿದರೆ ಅರ್ಧ ಫಲ.
ವೃಶ್ಚಿಕ ರಾಶಿ: ಈ ವಾರ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳ ಶ್ರಮ ಸಫಲವಾಗುವುದು. ಸಂಶೋಧನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಶಂಸೆ ಸಿಗಲಿದೆ. ಸಂದರ್ಭಗಳು ನಿಮಗೆ ಅನುಕೂಲಕರವಾಗಿರುತ್ತವೆ. ಈ ವಾರ ನಿಮ್ಮ ಹೊಸ ಪ್ರೇಮ ಪ್ರಕರಣವು ಹೊಸ ರೂಪವನ್ನು ಪಡೆಯುವುದು. ಪ್ರೀತಿಪಾತ್ರರ ಜೊತೆ ಉದ್ವಿಗ್ನತೆಗೆ ಒಳಗಾಗಿ ಮಾತನಾಡಬೇಡಿ. ಕೈ ಮೀರುವ ಪರಿಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸಿ. ಸಹೋದ್ಯೋಗಿಗಳ ಜೊತೆ ನೀವು ವಿವಾದವನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ. ಅಂತಹ ಸಂದರ್ಭದಲ್ಲಿ ಎಚ್ಚರದಿಂದಿರಿ. ನೀಮ್ಮ ಕೆಲಸವು ನಿಮಗೆ ಸಂತೋಷವನ್ನು ತರುತ್ತದೆ. ನಿಮ್ಮ ಕೆಲಸದಿಂದ ಮೇಲಧಿಕಾರಿಗಳು ಬೆಂಬಲವನ್ನು ವ್ಯಕ್ತಪಡಿಸುವರು ಪ್ರಶಂಸೆಯೂ ಸಿಗಲಿದೆ. ಸುಬ್ರಹ್ಮಣ್ಯನನ್ನು ಆದಿಯಲ್ಲಿ ಪ್ರಾರ್ಥಿಸಿ.
ಧನುಸ್ಸು ರಾಶಿ: ಈ ತಿಂಗಳ ನಾಲ್ಕನೆಯ ವಾರದಲ್ಲಿ ಕುಟುಂಬ ಸದಸ್ಯರ ಜೊತೆ ಯಾವುದಾದರೂ ಖರೀದಿಯ ವಿಚಾರಕ್ಕೆ ಜಗಳಗಳಾಗುವ ಸಾಧ್ಯತೆಯಿದೆ. ನಿಮ್ಮ ಕೋಪವನ್ನು ನಿಯಂತ್ರಿಸಲು ಪ್ರಯತ್ನಿಸುವುದು ಬಹಳ ಮುಖ್ಯ. ಇಂದು ನೀವು ಬಹಳ ಮುಖ್ಯವಾದ ಮತ್ತು ನಿಮಗೆ ಪ್ರಿಯವಾದ ವಸ್ತುವೊಂದನ್ನು ಪಡೆಯಬಹುದು. ಇದು ಉಡುಗೊರೆಯೂ ಆಗಿರಬಹುದು. ಅಮೂಲ್ಯವಾದ ವಸ್ತುವೂ ಆಗಿರಬಹುದು. ಅದನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಈ ವಾರ ಪ್ರೇಮ ವ್ಯವಹಾರಗಳು ಕುಟುಂಬ ಜೀವನಕ್ಕೆ ಸ್ವಲ್ಪ ಸವಾಲಾಗುವುದು. ನಿಮ್ಮ ಭಾವನೆಗಳಿಗೆ ಅನುಗುಣವಾಗಿ ವರ್ತಿಸುವ ನಿಮ್ಮ ಸಂಗಾತಿಯ ಬಗ್ಗೆ ಯೋಚಿಸುವುದು ಉತ್ತಮ. ವಿದೇಶಿ ವ್ಯಾಪಾರ ಹೊಂದಿರುವವರಿಗೆ ತೊಂದರೆ ಎದುರಾಗಬಹುದು. ಗುರು ಚರಿತ್ರಯ ಶ್ರವಣದಿಂದ ಅಡ್ಡಿಗಳು ಮಾಯ.
ಮಕರ ರಾಶಿ; ಹತ್ತನೇ ರಾಶಿಯಾದ ನಿಮಗೆ ಈ ವಾರದಲ್ಲಿ ನಿಮ್ಮ ಜೀವನದಲ್ಲಿ ಕೆಲವರ ಬಗ್ಗೆ ತಪ್ಪು ತಿಳುವಳಿಕೆ ಆಕಸ್ಮಿಕವಾಗಿ ಉಂಟಾಗಬಹುದು. ನಿಮ್ಮ ಮಾತಿನ ಮೇಲೆ ಗಮನವಿರಲಿ. ನೀವು ಶಾಂತವಾಗಿ ಇದ್ದಷ್ಟೂ ನಿಮ್ಮ ಸಂಬಂಧವನ್ನು ಗಟ್ಟಿಯಾಗುವುದು. ಕಚೇರಿ ಸ್ವಲ್ಪ ಒತ್ತಡವನ್ನು ಅನುಭವಿಸಬೇಕಾದೀತು. ನಿಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲು ನೀವು ಪ್ರಯತ್ನಿಸುವಿರಿ. ಈ ವಾರ ಅಸಾಧಾರಣ ಆಲೋಚನೆಗಳಿಂದ ತುಂಬಿದ್ದರೂ ಅವುಗಳನ್ನು ಸರಿಯಾಗಿ ವ್ಯಕ್ತಪಡಿಸಲು ನಿಮಗೆ ಸಾಧ್ಯವಾಗದು. ಕೆಲಸದ ವಿಷಯದಲ್ಲಿ ಸ್ವಲ್ಪ ಉದ್ವೇಗ ಉಂಟಾಗಬಹುದು. ನೀವು ಕಾನೂನುಬಾಹಿರ ಕೃತ್ಯವನ್ನು ಮಾಡಿದರೆ ಆದಷ್ಟು ಬೇಗ ಅದನ್ನು ಬಿಟ್ಟುಬಿಡುವುದು ಉತ್ತಮ. ಇಲ್ಲವಾದರೆ ಮುಂದೆ ನೀವು ನಷ್ಟವನ್ನೂ ಕಷ್ಟವನ್ನೂ ಕಾಣಬೇಕಾಗಬಹುದು. ಶಿವನಿಂದ ಎಲ್ಲವೂ ಶಿವಮಯವಾಗುವುದು.
ಕುಂಭ ರಾಶಿ: ಈ ವಾರದಲ್ಲಿ ಆಸ್ತಿಯ ವಿಚಾರಕ್ಕೆ ಮನೆಯಲ್ಲಿ ಉಂಟಾದ ಸೂಕ್ಷ್ಮ ಸಮಸ್ಯೆಗಳನ್ನು ಪರಿಹರಿಸಲು ಬುದ್ಧಿವಂತಿಕೆಯನ್ನು ಬಳಸಬೇಕಾಗುತ್ತದೆ. ಹಾಗಾದಾಗ ನಿಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಲು ಸಾಧ್ಯವಾಗುವುದು. ನಿಮ್ಮ ಮಹಾಗುರಿಯನ್ನು ಸಾಧಿಸುವ ವಿಶ್ವಾಸವನ್ನು ಬಿಟ್ಟುಕೊಳ್ಳಬೇಡಿ. ನೀವು ನಿಮ್ಮ ಕೆಟ್ಟ ಅಭ್ಯಾಸಗಳನ್ನು ಬಿಟ್ಟು ಒಳ್ಳೆಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಬಯಸುವಿರಿ. ಈ ವಾರ ಉಮಯಾರ ಜೊತೆಗಾದರೂ ಭಿನ್ನಾಭಿಪ್ರಾಯಗಳು ಬಂದರೆ ಮರೆತು ನಿಮ್ಮ ಸಂಬಂಧವನ್ನು ಕಾಪಾಡಿಕೊಳ್ಳಿ. ನಿಮ್ಮ ಆಲೋಚನೆಯನ್ನು ಧನಾತ್ಮಕವಾಗಿ ಇರಿಸಿದರೆ ನಿರ್ಧಾರಗಳನ್ನು ಸರಿಯಾಗಿರುತ್ತವೆ. ಮನೆಯನ್ನು ಖರೀದಿಸುವ ಯೋಚನೆಯನ್ನು ಮಾಡುವಿರಿ. ಹನುಮನ ಸ್ಮರಣೆಯಿಂದ ಅಲಭ್ಯವಾದುದು ಲಾಭವಾಗಲಿದೆ.
ಮೀನ ರಾಶಿ; ಈ ತಿಂಗಳ ನಾಲ್ಕನೇ ವಾರ ಅದೃಷ್ಟ ನಿಮ್ಮ ಕಡೆ ಇದೆ ಎಂಬುದು ಸತ್ಯವಾದರೂ ಆತುರದಿಂದ ಅನಾಹುತವಾಗಬಹುದು. ನಿಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳು ನಿಮಗೆ ಸಹಾಯ ಮಾಡುವರು. ಸವಾಲಿನ ಪರಿಸ್ಥಿತಿಗಳು ಬರಬಹುದು. ನೀವು ಅವುಗಳನ್ನು ಸುಲಭವಾಗಿ ಎದುರಿಸಲು ಸಾಧ್ಯವಿದೆ. ನೀವು ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ನಿಮ್ಮ ಕಠಿಣ ಪರಿಶ್ರಮ ಮೆಚ್ಚಗೆಯು ಸಿಗಲಿದೆ. ನಿಮ್ಮ ಕೆಲಸಕ್ಕೆ ಇದು ಉತ್ತೇಜಕವಿದ್ದಂತೆ. ಈ ವಾರವೂ ಇನ್ನೊಬ್ಬರ ಮನಃಸ್ಥಿತಿಯನ್ನು ನಿರ್ಣಯಿಸಲು ಸಾಧ್ಯವಾಗದು. ನೀವು ಕೆಲ ಕಾಲ ಹೊಸ ಉದ್ಯಮದಲ್ಲಿ ಪಾಲುದಾರರಾಗುವುದು ಬೇಡ. ಸಂಗಾತಿಯ ಆಸೆಗಳನ್ನು ತಿಳಿದುಕೊಳ್ಳಿ. ಕೆಲವನ್ನು ಪೂರೈಸಿ. ಚಿಂತಾಮಣಿಸ್ತೋತ್ರದಿಂದ ಅಲ್ಪವೂ ಅನಂತವಾಗುವಂತೆ ಬರುವುದು.
ಲೋಹಿತ ಹೆಬ್ಬಾರ್ – 8762924271 (what’s app only)




