Weekly Horoscope in Kannada: ವಾರ ಭವಿಷ್ಯ: ಅಕ್ಟೋಬರ್ 13 ರಿಂದ 20 ರವರೆಗೆ ವಾರ ಭವಿಷ್ಯ, ಇಲ್ಲಿದೆ
ಇದು ಅಕ್ಟೋಬರ್ ತಿಂಗಳ ಮೂರನೇ ವಾರ. 13 ರಿಂದ 20 ರವರೆಗೆ ಇರಲಿದೆ. ಶುಕ್ರನು ಈ ವಾರದಲ್ಲಿ ಮಿತ್ರ ಕ್ಷೇತ್ರಕ್ಕೆ ಹಾಗೂ ಸೂರ್ಯನು ನೀಚಕ್ಷೇತ್ರಕ್ಕೆ, ಕುಜನೂ ನೀಚನಾಗಿ ಇರುವ ಸಂದರ್ಭ. ಎಲ್ಲ ರಾಶಿಯವರೂ ಜಾಗರೂಕತೆಯಿಂದ ಹೆಜ್ಜೆ ಇಡುವುದು ಒಳ್ಳೆಯದು. ಎಲ್ಲದಕ್ಕೂ ದೈವಬಲವು ಇರಲೆಂದು ಕೇಳಿಕೊಳ್ಳಿ.
ಇದು ಅಕ್ಟೋಬರ್ ತಿಂಗಳ ಮೂರನೇ ವಾರ. 13 ರಿಂದ 20 ರವರೆಗೆ ಇರಲಿದೆ. ಶುಕ್ರನು ಈ ವಾರದಲ್ಲಿ ಮಿತ್ರ ಕ್ಷೇತ್ರಕ್ಕೆ ಹಾಗೂ ಸೂರ್ಯನು ನೀಚಕ್ಷೇತ್ರಕ್ಕೆ, ಕುಜನೂ ನೀಚನಾಗಿ ಇರುವ ಸಂದರ್ಭ. ಎಲ್ಲ ರಾಶಿಯವರೂ ಜಾಗರೂಕತೆಯಿಂದ ಹೆಜ್ಜೆ ಇಡುವುದು ಒಳ್ಳೆಯದು. ಎಲ್ಲದಕ್ಕೂ ದೈವಬಲವು ಇರಲೆಂದು ಕೇಳಿಕೊಳ್ಳಿ.
ಮೇಷ ರಾಶಿ : ಅಕ್ಟೋಬರ್ ತಿಂಗಳ ಮೂರನೇ ವಾರದಲ್ಲಿ ರಾಶಿ ಚಕ್ರದ ಮೊದಲ ರಾಶಿಗೆ ಶುಭಾಶುಭವಿದೆ. ನೀಚದಲ್ಲಿ ಸೂರ್ಯ ಸಪ್ತಮದಲ್ಲಿ ಇರುವನು. ಸಂಗಾತಿಯ ಬಗ್ಗೆ ನಿಮಗೆ ಒಳ್ಳೆಯ ಅಭಿಪ್ರಾಯ ಇರದು. ಶುಕ್ರನು ಅಷ್ಟಮದಲ್ಲಿ ಇರುವುದು ವಾಹನ ಸಂಚಾರದಿಂದ ತೊಡಕಾಗುವುದು. ಎಚ್ಚರಿಕೆಯಿಂದ ಚಾಲನೆ ಮಾಡಬೇಕಾಗುವುದು. ಕುಜನು ಚತುರ್ಥದಲ್ಲಿ ಇದ್ದು ವಿದೇಶೀಯ ವ್ಯವಹಾರದಲ್ಲಿ ನಿಮಗೆ ನಷ್ಟ. ಅದನ್ನು ಭರಿಸಲೂ ಕೂಡ ಕಷ್ಟವಾಗುವುದು. ನಾಗಾರಾಧನೆಯನ್ನು ಭಕ್ತಿಯಿಂದ ಮಾಡಿ.
ವೃಷಭ ರಾಶಿ : ರಾಶಿ ಚಕ್ರದ ಎರಡನೇ ರಾಶಿಯವರಿಗೆ ಈ ತಿಂಗಳಲ್ಲಿ ಮಿಶ್ರಫಲ. ಸಪ್ತಮದಲ್ಲಿ ಶುಕ್ರನು ದಾಂಪತ್ಯದಲ್ಲಿ ನೆಮ್ಮದಿ ಸಂತೋಷವನ್ನು ಇಡುವನು. ಆದರೆ ಷಷ್ಠ ಸ್ಥಾನದಲ್ಲಿ ಸೂರ್ಯನು ಇರುವುದು ತಂದೆಯ ನಡುವಿನ ಸಂಬಂಧವನ್ನು ತಿಳಿಸುತ್ತದೆ. ನಿಮ್ಮ ಬಗ್ಗೆ ತಂದೆಗೂ ಪೂರ್ಣ ಸಮಾಧಾನ ಇರದು. ತೃತೀಯದಲ್ಲಿ ನೀಚ ಕುಜನು ಸಹೋದರರ ನಡುವೆ ವೈಷಮ್ಯವನ್ನು ಕೊಡಿಸುವನು. ತ್ರಿಪುರಸುಂದರಿಯ ಆರಾಧನೆಯಿಂದ ಶುಭ.
ಮಿಥುನ ರಾಶಿ : ರಾಶಿ ಚಕ್ರದ ಮೂರನೇ ರಾಶಿಯವರಿಗೆ ಈ ವಾರ ಶುಭವಾಗಿಲ್ಲ. ಪಂಚಮದಲ್ಲಿ ಸೂರ್ಯನು ನೀಚನಾಗಿದ್ದು ನಿಮಗೆ ವಿದ್ಯಾರ್ಥಿಗಳಿಗೆ ಪ್ರಗತಿ ಇರದು. ಉನ್ನತ ವಿದ್ಯಾಭ್ಯಾಸದಲ್ಲಿ ಅನಾಸಕ್ತಿ ಇರುವುದು. ಶುಕ್ರನು ಷಷ್ಠದಲ್ಲಿ ಇದ್ದು ಸಂಗಾತಿಯ ಜೊತೆ ಕಲಹವಾಗಲಿದೆ. ಗುರುವೂ ದುರ್ಬಲನಾಗಿ ನಿಮ್ಮ ಶ್ರೇಯಸ್ಸಿಗೂ ಧಕ್ಕೆ ಬರಬಹುದು. ದ್ವಿತೀಯದಲ್ಲಿ ಕುಜನು ಇರುವ ಕಾರಣ ಕೃತಕ ಮಾತಿನಿಂದ ಮರುಳುಮಾಡುವಿರಿ. ಲಕ್ಷ್ಮೀನಾರಾಯಣರ ಆರಾಧನೆಯಿಂದ ಪ್ರಗತಿ ಕಾಣಿಸುವುದು.
ಕರ್ಕಾಟಕ ರಾಶಿ : ಇದು ಅಕ್ಟೋಬರ್ ತಿಂಗಳ ಮೂರನೇ ವಾರವಾಗಿದ್ದು, ನಿಮಗೆ ಶುಭಫಲವಿದೆ. ಸೂರ್ಯ ಹಾಗೂ ಶುಕ್ರನು ಬದಲಾವಣೆ ಈ ವಾರವಾಗಿದೆ. ಶುಕ್ರನು ಪಂಚಮದಲ್ಲಿ ಇರುವ ಕಾರಣ ಪುತ್ರಿಯರಿಂದ ನಿಮಗೆ ಸಂತೋಷವಿದೆ. ಕಲಾವಿದರಿಗೆ ಉತ್ತಮ ಅವಕಾಶವಿದೆ. ನೀಚಸ್ಥನಾದ ಕಾರಣ ಕೌಟುಂಬಿಕ ಕಿರಿಕಿರಿ. ವಿದೇಶ ವ್ಯಾಪಾರದಲ್ಲಿ ಅಸ್ತವ್ಯಸ್ಥವಾಗಲಿದೆ. ವಿದೇಶದಲ್ಲಿ ವಾಸಿಸುವವರಿಗೆ ಕೂಡ ಆತಂಕ ಬರಬಹುದು. ಇನ್ನೊಬ್ಬರ ವಿರುದ್ಧ ಕತ್ತಿ ಮಸೆಯುವಿರಿ. ಇದನ್ನು ಬಿಡುವುದು ಉತ್ತಮ. ಇಷ್ಟದೇವರ ಆರಾಧನೆಯಿಂದ ಒಳ್ಳೆಯ ಮಾರ್ಗವು ಕಾಣಿಸುವುದು.
ಸಿಂಹ ರಾಶಿ : ಅಕ್ಟೋಬರ್ ತಿಂಗಳಲ್ಲಿ ರಾಶಿ ಚಕ್ರದ ಐದನೇ ರಾಶಿಯವರಿಗೆ ಶುಭಾಶುಭ ಮಿಶ್ರಫಲವು ರವಿ ಹಾಗೂ ಶುಕ್ರರಿಂದ ಲಭಿಸಲಿದೆ. ನಿಮ್ಮ ಶ್ರಮವು ಎಲ್ಲವೂ ವ್ಯರ್ಥವಾಗಲಿದೆ. ಅನ್ಯಪರಿಣಾಮವನ್ನೂ ಬೀರುವ ಸಾಧ್ಯತೆ ಇದೆ. ತಾಯಿಯ ಮೇಲೆ ಪ್ರೀತಿ ಅಧಿಕವಾಗುವುದು. ಕಾರ್ಯಕ್ಷೇತ್ರದಲ್ಲಿ ಸ್ವಾವಲಂಬಿಯಾಗಲು ಪ್ರಯತ್ನಿಸುವಿರಿ. ವೈರವನ್ನು ಕಡಿಮೆ ಮಾಡಿಕೊಂಡು ವರ್ತಿಸಿದರೆ ಕ್ಷೇಮ. ಕುಜನು ದ್ವಾದಶದಲ್ಲಿ ಇದ್ದು ನಾನಾರೀತಿಯ ಪೆಟ್ಟುನ್ನು ತಿನ್ನಬೇಕಾದೀತು. ವಿವಾಹಿತರು ಬಹಳ ಜಾಗರೂಕತೆಯಿಂದ ನಡೆದುಕೊಳ್ಳಬೇಕಾದೀತು. ಸುಬ್ರಹ್ಮಣ್ಯನನ್ನು ವಿಶೇಷ ನೈವೇದ್ಯವನ್ನು ಮಾಡಿ.
ಕನ್ಯಾ ರಾಶಿ : ರಾಶಿ ಚಕ್ರದ ಆರನೇ ರಾಶಿಯವರಿಗೆ ಈ ತಿಂಗಳಲ್ಲಿ ಮಿಶ್ರಫಲವಿರುವುದು. ದ್ವಿತೀಯದಲ್ಲಿ ಸೂರ್ಯನು ನೀಚನಾಗಿ ಕೌಟುಂಬಿಕ ಕಿರಿಕಿರಿಯನ್ನು ಎದುರಿಸಬೇಕಾದೀತು. ಬರಬೇಕಾದ ಸಂಪತ್ತು ನಿಮಗೆ ಸಿಗದೇ ಒದ್ದಾಡಬೇಕಾದೀತು. ಶುಕ್ರನು ತೃತೀಯದಲ್ಲಿ ಇರುವುದು ಬಹಳ ಚಾಣಾಕ್ಷತೆಯನ್ನು ತೋರಿಸುವಿರಿ. ನಿಜಗುಣವನ್ನು ಮರೆಮಾಚಿ ನೀವು ನಡೆದುಕೊಳ್ಳುವರಿ. ಆರೋಗ್ಯದಲ್ಲಿ ವ್ಯತ್ಯಾಸ ಕಂಡರೆ ವೈದ್ಯರನ್ನು ಭೇಟಿಯಾಗಿ ಔಷಧವನ್ನು ಮಾಡಿ. ಕುಟುಂಬದ ನಿರ್ವಹಣೆಯನ್ನು ಬಹಳ ಜವಾಬ್ದಾರಿಯಿಂದ ನಿರ್ವಹಿಸುವಿರಿ. ದುರ್ಗಾಮಾತೆಯನ್ನು ಆರಾಧಿಸಿ.
ತುಲಾ ರಾಶಿ : ಈ ತಿಂಗಳ ಮೂರನೇ ವಾರದಲ್ಲಿ ನಿಮಗೆ ಶುಕ್ರ ಹಾಗು ರವಿಯ ಸಂಚಾರದಿಂದ ಶುಭಾಶುಭಗಳೆರಡೂ ಅಲ್ಪವಾಗಿ ಸಿಗಲಿದೆ. ಶುಕ್ರನು ದ್ವಿತೀಯದಲ್ಲಿ ಇರುವ ಕಾರಣ ಭೋಗಜೀವನ ಹಾಗೂ ಭೋಗವಸ್ತುಗಳನ್ನು ಹೆಚ್ಚು ಇಷ್ಟಪಡುವಿರಿ. ಆದರೆ ಅದನ್ನು ಪಡೆಯಲು ನಿಮಗೆ ಕಷ್ಟವಾಗುವುದು ಅಥವಾ ವಿಳಂಬವೂ ಆಗುವುದು. ರವಿಯು ನೀಚನಾಗಿ ನಿಮ್ಮ ರಾಶಿ ಆರೋಗ್ಯದ ಹದ ತಪ್ಪುವುದು. ಸರ್ಕಾರದ ಕಾರ್ಯದಲ್ಲಿ ಮುಂದುವರಿಯಲು ಮಾರ್ಗವೇ ಸಿಗದು ಎನ್ನುವಷ್ಟು ತೊಂದರೆ ಇರುವುದು. ಆದಿತ್ಯ ಹೃದಯವು ನಿಮ್ಮ ಧೈರ್ಯವನ್ನು ಹೆಚ್ಚಿಸುವುದು.
ವೃಶ್ಚಿಕ ರಾಶಿ : ಅಕ್ಟೋಬರ್ ತಿಂಗಳ ಈ ವಾರದಲ್ಲಿ ನಿಮಗೆ ಶುಕ್ರ ಹಾಗೂ ಸೂರ್ಯನ ಸಂಚಾರದಿಂದ ಶುಭಾಶುಭಗಳು ಇರುವುವು. ಸೂರ್ಯನು ದ್ವಾದಶದಲ್ಲಿ ನೀಚನಾದ ಕಾರಣ ನಿರುತ್ಸಾಹ, ಆಲಸ್ಯ, ಕಾರ್ಯದಲ್ಲಿ ಹಿನ್ನಡೆ ಎಲ್ಲವೂ ನಿಮಗೆ ಆಗುವುದು. ಉತ್ತಮ ಕುಲದ ಸ್ತ್ರೀಯ ಜೊತೆ ಪ್ರೇಮವು ಉಂಟಾಗಬಹುದು. ವಿದೇಶಪ್ರಿಯರಿಗೆ ಸಂತೋಷದ ಸಮಾಚಾರವಿರಲಿದೆ. ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ನಡೆಸುವುದು ಕಷ್ಟವಾಗುವುದು ಶಿವಕವಚವನ್ನು ನಿತ್ಯವೂ ಪಠಿಸಿ.
ಧನು ರಾಶಿ : ರಾಶಿ ಚಕ್ರದ ಒಂಭತ್ತನೇ ರಾಶಿಯವರಿಗೆ ಈ ತಿಂಗಳ ಮೂರನೇ ವಾರದಲ್ಲಿ ಶುಕ್ರ ಹಾಗೂ ರವಿಯ ಸಂಚಾರದಿಂದ ಶುಭಾಶುಭವಿರಲಿದೆ. ದ್ವಾದಶದಲ್ಲಿ ಶುಕ್ರನು ನಿಮ್ಮ ಭೋಗಕ್ಕೆ ಹೆಚ್ಚು ಖರ್ಚು ಮಾಡಿಸುವನು. ಯಾವ ಲಾಭವೂ ನಿಮಗೆ ಇದರಿಂದ ಸಿಗದು. ಏಕಾದಶದಲ್ಲಿ ಸೂರ್ಯನು ನೀಚನಾದ ಕಾರಣ ಆತ್ಮಸ್ಥೈರ್ಯವು ಸಿಗದು. ರಾಶಿಯ ಅಧಿಪತಿಯಾದ ಗುರುವೂ ಷಷ್ಠದಲ್ಲಿ ಇರುವುದು ನಿಮ್ಮನ್ನು ಇನ್ನಷ್ಟು ಹಿಂದೂಡಬಹುದು. ಇಷ್ಟದೇವರನ್ನು ಪ್ರಾರ್ಥಿಸಿ, ಸರಿಯಾದ ದಾರಿ ನಿಮಗೆ ತೋರುವುದು.
ಮಕರ ರಾಶಿ : ಈ ರಾಶಿಯವರಿಗೆ ಅಕ್ಟೋಬರ್ ತಿಂಗಳ ಮೂರನೇ ವಾರದಲ್ಲಿ ಶುಕ್ರ ಹಾಗೂ ರವಿಯ ಸಂಚಾರದಿಂದ ಶುಭವಿದೆ. ಶುಕ್ರನು ಏಕಾದಶದಲ್ಲಿ ಇರುವ ಕಾರಣ ಭೋಗವಸ್ತುವಿನ ಕಡೆ ಆಕರ್ಷಣೆಯನ್ನು ಕೊಡಿಸುವನು. ವಿಶೇಷವಾಗಿ ಸ್ತ್ರೀ ಪುರುಷರ ನಡುವೆ ಅಧಿಕವಾದ ಆಕರ್ಷಣೆ ಇರುವುದು. ಔದ್ಯೋಗಿಕವಾದ ಪ್ರಗತಿಯನ್ನು ಕಾಣಲು ಸಾಧ್ಯವಾಗದು. ಇರುವುದನ್ನು ಸರಿಯಾಗಿ ನಿಭಾಯಿಸಿದರೆ ಭವಿಷ್ಯತ್ತು ನಿಮ್ಮ ಸ್ಥಾನವನ್ನು ಬದಲಿಸುವುದು. ತಾಳ್ಮೆಯಿಂದ ನಡೆಯುವುದು ಮುಖ್ಯ. ಗುರುಬಲವೂ ನಿಮಗೆ ಸಹಕಾರಿಯಾಗಲಿದೆ. ಸೂರ್ಯನಮಸ್ಕಾರವನ್ನು ಪ್ರಾತಃಕಾಲದಲ್ಲಿ ಮಾಡಿ.
ಕುಂಭ ರಾಶಿ : ರಾಶಿ ಚಕ್ರದ ಹನ್ನೊಂದನೇ ರಾಶಿಯವರಿಗೆ ಈ ವಾರದಲ್ಲಿ ಶುಕ್ರ ಹಾಗು ಸೂರ್ಯನ ಸಂಚಾರವು ವಿಶೇಷ ಬದಲಾವಣೆಯನ್ನು ತರುವುದು. ಕಲಾವಿದರಿಗೆ ಅಥವಾ ವಿನ್ಯಾಸಕಾರರಿಗೆ ಆದ್ಯತೆ ಅಧಿಕವಾಗುವುದು. ನಿಮ್ಮ ಯೋಜನೆಗೆ ಪೂರ್ಣ ಬೆಂಬಲವನ್ನು ಕಾಣುವಿರಿ. ತಂದೆ ಹಾಗೂ ಮಕ್ಕಳ ನಡುವೆ ವೈಮನಸ್ಯ. ಸರ್ಕಾರದ ಕಾರ್ಯದಲ್ಲಿ ಹಿನ್ನಡೆ, ರೋಗವೃದ್ಧಿಯಾವುದು. ಕುಟುಂಬವನ್ನು ಸಮತೋಲದಿಂದ ತೂಗಿಸುವ ಜವಾಬ್ದಾರಿಯು ನಿಮ್ಮ ಮೇಲಿರುವುದು. ಹನುಮಾನ್ ಚಾಲೀಸ್ ಪಠನದಿಂದ ನಿಮಗೆ ಬೇಕಾದ ದಾರಿಯು ತೆರೆದುಕೊಳ್ಳುವುದು.
ಮೀನ ರಾಶಿ : ಇದು ಅಕ್ಟೋಬರ್ ನ ಮೂರನೇ ವಾರವಾಗಿದ್ದು ನಿಮಗೆ ಶುಕ್ರ ಹಾಗು ಸೂರ್ಯರ ಸಂಚಾರದಿಂದ ಶುಭಾಶುಭವಿರಲಿದೆ. ನವನಸ್ಥಾನಕ್ಕೆ ಬರುವ ಶುಕ್ರನು ಕುಜನ ರಾಶಿಯಲ್ಲಿ ಇರುವ ಕಾರಣ ವೈವಾಹಿಕ ಸಂಬಂಧವು ಪೂರ್ವಜನ್ಮದ್ದಾಗಿರುವುದು. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಕಷ್ಟವಾದೀತು. ಯಾವ ಕಾರ್ಯಕ್ಕೂ ಆತ್ಮವಿಶ್ವಾಸವಿರದು. ಧೈರ್ಯವನ್ನು ತಂದುಕೊಳ್ಳಲೂ ಆಗದು. ತಂದೆಯ ಬಗ್ಗೆ ನಿಮಗೆ ಮಮಕಾರವಿರದು. ಶಿವೋಪಾಸನೆಯಿಂದ ಶಕ್ತಿಯು ತುಂಬಿಕೊಳ್ಳುವುದು.
-ಲೋಹಿತ ಹೆಬ್ಬಾರ್-8762924271 (what’s app only)