Weekly Horoscope ವಾರ ಭವಿಷ್ಯ: ವಾರ ಭವಿಷ್ಯ: ಮುಂದಿನ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ

ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ.

Weekly Horoscope ವಾರ ಭವಿಷ್ಯ: ವಾರ ಭವಿಷ್ಯ: ಮುಂದಿನ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ
ಭವಿಷ್ಯ
Follow us
ರಾಜೇಶ್ ದುಗ್ಗುಮನೆ
| Updated By: ಆಯೇಷಾ ಬಾನು

Updated on: May 23, 2021 | 6:45 AM

ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ.

ವಾರಭವಿಷ್ಯ:- ತಾ.24-05-2021 ರಿಂದ ತಾ.30-05-2021 ರವರೆವಿಗೆ, *** ಮೇಷರಾಶಿ:- ಈ ಸಮಯದಲ್ಲಿ ನಿಮ್ಮವರೇ ನಿಮ್ಮಿಂದ ದೂರ ಹೋಗುತ್ತಾರೆ ಮತ್ತು ಎಂದಿಗೂ ಯೋಚಿಸದೆ ಇರುವಂತಹ ಸಂಬಂಧಗಳು ನಿಮ್ಮ ಹತ್ತಿರ ಬರುತ್ತವೆ. ಜೀವನ ಸಂಗಾತಿಯೊಂದಿಗೆ ಯಾವುದೇ ವಿಷಯದಿಂದ ದೂರ ಹೋಗಬಹುದು. ಹೊಸ ಕೆಲಸವನ್ನು ಆರಂಭಿಸುವ ಮೊದಲು ಯಾರಾದರೂ ಹಿರಿಯರ ಸಲಹೆಯನ್ನು ತೆಗೆದುಕೊಳ್ಳಿ.. ವ್ಯವಹಾರದಲ್ಲಿ ಯಾವುದೇ ದೊಡ್ಡ ಹೂಡಿಕೆಗಾಗಿ ಯೋಚಿಸಿ, ಅರ್ಥಮಾಡಿಕೊಂಡು ಮುಂದುವರಿಸಿ. ಉದ್ಯೋಗದ ಬದಲಾವಣೆಗಾಗಿ ವಾರ ಮಧ್ಯದ ಸಮಯ ಉತ್ತಮವಾಗಿಲ್ಲ. ಮನೆಯ ಅಲಂಕಾರದ ವಸ್ತುಗಳ ಮೇಲೆ ಹಣವನ್ನು ಖರ್ಚು ಮಾಡಬಹುದು ಮತ್ತು ನಿಮ್ಮ ಹೊಸ ವಾಹನದ ಕನಸು ಸಹ ನಿಜವಾಗಬಹುದು. ಅದೃಷ್ಟದ ಬಣ್ಣ:ಆರೆಂಜ್ ಬಣ್ಣ ಅದೃಷ್ಟ ಸಂಖ್ಯೆ: 9

ವೃಷಭರಾಶಿ:- ಭೂಮಿಗೆ ಸಂಬಂಧಿಸಿದ ಯಾವುದೇ ವಿವಾದದಲ್ಲಿ ಇಂದುವರೆಗೂ ಹೋರಾಡುತ್ತಿದ್ದರೆ ಈ ದಿನವೂ ಅಲ್ಲಿಂದಲೂ ಸಹ ಪರಿಹಾರವನ್ನು ಪಡಯುವ ಹಾಗೆ ಕಾಣುತ್ತಿದೆ. ಶನಿಯ ನಿಮ್ಮ ರಾಶಿಚಕ್ರದಿಂದ ಒಂಬತ್ತನೇ ಮನೆಯಲ್ಲಿ ಹಾದುಹೋಗುವುದರಿಂದ, ಕೆಲವೊಮ್ಮೆ ನೀವು ಅದೃಷ್ಟಕ್ಕೊಳಗಾಗುತ್ತೀರಿ. ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ಇದು ಸಂಭವಿಸಿದಲ್ಲಿ, ಹಿರಿಯರ ಸಲಹೆಯನ್ನು ಪಡೆಯಿರಿ ಅಥವಾ ಸ್ವಲ್ಪ ಸಮಯದವರೆಗೆ ಅದನ್ನು ಮುಂದೂಡಿ. ಅದೃಷ್ಟದ ಬಣ್ಣ:ಹಳದಿ ಅದೃಷ್ಟ ಸಂಖ್ಯೆ: 6

ಮಿಥುನರಾಶಿ:- ಇಂದು ನೀವು ಒಂದು ಸಂದರ್ಭದಿಂದ ತೊಂದರೆಗೀಡಾಗುವ ಸಾಧ್ಯತೆಯಿದೆ. ನೀವು ವಾರ ಪೂರ್ತಿ ನಿರಾಸಕ್ತಿ ಹಾಗೂ ಆಲಸ್ಯದ ಭಾವನೆಯನ್ನು ಹೊಂದಬಹುದು. ನಿಮ್ಮ ಮನಸ್ಸು ಒತ್ತಡ ಹಾಗೂ ಉದ್ವೇಗದಿಂದ ನರಳಬಹುದು. ವ್ಯವಹಾರದಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆಯಿದೆ. ಕೆಟ್ಟ ಮತ್ತು ಹಾನಿಕಾರಕ ಆಲೋಚನೆಗಳಿಂದ ದೂರವಿರಿ. ಯಾವುದೇ ಕಾರ್ಯ ಪ್ರಾರಂಭಿಸುವ ಮೊದಲು ಎಚ್ಚರಿಕೆಯಿಂದ ಯೋಜನೆ ರೂಪಿಸಿ. ನಿಮ್ಮ ಮೇಲಾಧಿಕಾರಿಗಳ ಅಸಮಾಧಾನಕ್ಕೆ ಗುರಿಯಾಗದಂತೆ ನೋಡಿಕೊಳ್ಳಿ. ಶತ್ರುಗಳನ್ನು ಮತ್ತು ಪ್ರತಿಸ್ಪರ್ಧಿಗಳ ಮುಖಾಮುಖಿಯು ಹಿತಕರವಲ್ಲ. ಅದೃಷ್ಟದ ಬಣ್ಣ:ಹಸಿರು ಅದೃಷ್ಟ ಸಂಖ್ಯೆ: 5

ಕರ್ಕರಾಶಿ:- ಇಂದು ಕೈಗೆತ್ತಿಕೊಂಡ ಕಾರ್ಯಗಳು ಮತ್ತು ಯೋಜನೆಗಳು ಯಶಸ್ವಿಯಾಗಲಿವೆ. ಕಚೇರಿಯಿಂದ ಸಹಾಯ ದೊರೆಯುವ ಸಾಧ್ಯತೆಗಳು ಬಲವಾಗಿವೆ. ವೃತ್ತಿನಿರತರು ಮತ್ತು ಉದ್ಯಮಿಗಳು ತಮ್ಮ ಮೇಲಾಧಿಕಾರಿಗಳಿಂದ ಸಾಕಷ್ಟು ಪ್ರೋತ್ಸಾಹ ಮತ್ತು ಬೆಂಬಲವನ್ನು ನಿರೀಕ್ಷಿಸಬಹುದು. ಸಣ್ಣ ಪ್ರವಾಸ ಕೈಗೊಳ್ಳಬಹುದು. ಸ್ನೇಹಿತರು, ಪ್ರೀತಿಪಾತ್ರರು ಅಥವಾ ನೆರೆಯವರೊಂದಿಗಿನ ಜಗಳಗಳು ನಿಮಗೆ ಬೇಕಾದ ರೀತಿಯಲ್ಲೇ ಕಾರ್ಯನಿರ್ವಹಿಸಲಿವೆ. ನಿಮ್ಮ ಮನೋಭಾವ ಮತ್ತು ಆಲೋಚನೆಗಳು ಸತತ ಬದಲಾವಣೆಯ ಸ್ಥಿತಿಯಲ್ಲಿರುವ ಸಾಧ್ಯತೆಯಿದೆ. ಶತ್ರುಗಳು ಮತ್ತು ಕೆಡುಕನ್ನುಂಟುಮಾಡುವವರು ತಗ್ಗಿ ನಡೆಯಬಹುದು. ಆರ್ಥಿಕ ವಿಚಾರದಲ್ಲಿ ಉಂಟಾಗಬಹುದಾದ ಏರುಪೇರಿಗೆ ತಯಾರಾಗಿರಿ. ಅದೃಷ್ಟದ ಬಣ್ಣ:ಬಿಳಿಬಣ್ಣ ಅದೃಷ್ಟ ಸಂಖ್ಯೆ: 3

ಸಿಂಹರಾಶಿ:- ಅತ್ಯಂತ ಹಿತಕರ ಮತ್ತು ಫಲಭರಿತ ದಿನವು ನಿಮಗಾಗಿ ಕಾದಿಗೆ ಎಂಬುದಾಗಿ ಗಣೇಶ ಭರವಸೆ ನೀಡುತ್ತಾರೆ. ಎಲ್ಲಾ ಕಡೆಗಳಿಂದ ಬರುವ ಲಾಭ ಮತ್ತು ಪ್ರಯೋಜನಗಳು ನಿಮ್ಮನ್ನು ಸಂತೋಷದಲ್ಲಿರಿಸಲಿವೆ. ನಿಮ್ಮ ಗಳಿಕೆಯಲ್ಲಿ ಗಣನೀಯ ಏರಿಕೆ ಕಾಣುವಿರಿ. ಸ್ನೇಹಿತರ ಮನೋರಂಜನೆಗಾಗಿ ವೆಚ್ಚವು ನಿಮಗೆ ಹೇರಳವಾಗಿ ಹಿಂತಿರುಗಲಿದೆ. ತಿರುಗಾಟಕ್ಕೆ ಹೋಗುವುದರಿಂದ ಅಥವಾ ಸಣ್ಣ ಪ್ರವಾಸ ತೆರಳುವುರಿಂದ ನಿಮ್ಮ ವಾರವು ಇನ್ನಷ್ಟು ಆನಂದಕರ ಹಾಗೂ ಅವಿಸ್ಮರಣೀಯವಾಗಬಹುದು. ನೀವು ಇನ್ನೂ ಅವಿವಾಹಿತರಾಗಿದ್ದಲ್ಲಿ ವಿವಾಹದ ಯೋಜನೆಗಳು ಅನುಕೂಲಕರ ಹಾದಿಯಲ್ಲಿ ಸಾಗಲಿವೆ. ಇಂದು ಸ್ವಾದಿಷ್ಟ ಭೋಜನ ಸವಿಯುವಿರಿ. ಅದೃಷ್ಟದ ಬಣ್ಣ:ಕೆಂಪು ಅದೃಷ್ಟ ಸಂಖ್ಯೆ: 1

ಕನ್ಯಾರಾಶಿ:- ಆತ್ಮ ಹಾಗೂ ಅಹಂ ನಡುವೆ ಸಂಘರ್ಷ ಉಂಟಾಗಲಿದೆ. ಏನೇ ಆದರೂ, ಅದನ್ನು ತಪ್ಪಿಸುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ.ನೀವು ಕಡಿಮೆ ಚೈತನ್ಯ ಹಾಗೂ ಉತ್ಸಾಹವನ್ನು ಹೊಂದಿರುವ ಸಾಧ್ಯತೆಯಿದೆ. ಇದು ಅತೀ ಉದ್ವೇಗಕ್ಕೆ ಕಾರಣವಾಗಲು ಬಿಡಬೇಡಿ. ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಜಗಳ ಹಾಗೂ ವಾಗ್ವಾದ ನಡೆಸುವ ಸಾಧ್ಯತೆಗಳು ದಟ್ಟವಾಗಿದೆ. ನೀವು ಈ ವಾರ ತೀವ್ರ ಒತ್ತಾಯ ಹಾಗೂ ಅಸಹನೆಯಿಂದ ಕೂಡಿರಬಹುದು. ಧಾರ್ಮಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಖರ್ಚುವೆಚ್ಚಗಳನ್ನು ತಪ್ಪಿಸಲು ಸಾಧ್ಯವಿಲ್ಲ. ವಿಶೇಷವಾಗಿ ಇಂದು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ. ಅನಿರೀಕ್ಷಿತ ಖರ್ಚುವೆಚ್ಚ ಉಂಟಾಗಲಿದೆ. ಸಾಧ್ಯವಿದ್ದಷ್ಟು ಜಗಳ ಹಾಗೂ ಸಂಘರ್ಷದಿಂದ ದೂರವಿರಿ. ಅದೃಷ್ಟದ ಬಣ್ಣ:ಗುಲಾಬಿ ಅದೃಷ್ಟ ಸಂಖ್ಯೆ: 7

ತುಲಾರಾಶಿ:- ಸಮಯವು ಅತ್ಯಂತ ಹೆಚ್ಚು ಅನುಕೂಲಕರವಾಗಿರುತ್ತದೆ. ಈ ವಾರ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ ಆದರೆ ಈ ದಿನ ಕೆಲವು ಜನರು ಮಧುಮೇಹದ ಸಮಸ್ಯೆ ಮತ್ತು ಮೂತ್ರಕ್ಕೆ ಸಮಬಂಧಿಸಿದ ರೋಗವನ್ನು ಹೊಂದಬಹುದು. ಆದ್ದರಿಂದ ಜಾಗರೂಕರಾಗಿರಲು ಸಲಹೆ ನೀಡಲಾಗಿದೆ. ಅದೃಷ್ಟದ ಬಣ್ಣ:ತಿಳಿನೀಲಿ ಅದೃಷ್ಟ ಸಂಖ್ಯೆ: 4

ವೃಶ್ಚಿಕ ರಾಶಿ:- ಹೊಸ ಕೆಲಸವನ್ನು ಆರಂಭಿಸುವ ಮೊದಲು ಯಾರಾದರೂ ಹಿರಿಯರ ಸಲಹೆಯನ್ನು ತೆಗೆದುಕೊಳ್ಳಿ.. ವ್ಯವಹಾರದಲ್ಲಿ ಯಾವುದೇ ದೊಡ್ಡ ಹೂಡಿಕೆಗಾಗಿ ಯೋಚಿಸಿ, ಅರ್ಥಮಾಡಿಕೊಂಡು ಮುಂದುವರಿಸಿ. ಉದ್ಯೋಗದ ಬದಲಾವಣೆಗಾಗಿ ವಾರದ ಮಧ್ಯದ ಸಮಯ ಉತ್ತಮವಾಗಿಲ್ಲ. ಮನೆಯ ಅಲಂಕಾರದ ವಸ್ತುಗಳ ಮೇಲೆ ಹಣವನ್ನು ಖರ್ಚು ಮಾಡಬಹುದು ಮತ್ತು ನಿಮ್ಮ ಹೊಸ ವಾಹನದ ಕನಸು ಸಹ ನಿಜವಾಗಬಹುದು. ಅದೃಷ್ಟದ ಬಣ್ಣ:ಕೇಸರಿ ಅದೃಷ್ಟ ಸಂಖ್ಯೆ: 9

ಧನಸ್ಸು ರಾಶಿ:- ಈ ಕನಸ್ಸು ಸಹ ಖಂಡಿತವಾಗಿಯೂ ಸಂಪೂರ್ಣವಾಗುತ್ತದೆ. ಜೀವನ ಸಂಗಾತಿಯೊಂದಿಗೆ ಕೆಲವು ವಿವಾದಗಳು ಉಳಿದಿರುತ್ತವೆ ಆದರೆ ನೀವು ನಿಮ್ಮ ತಿಳುವಳಿಕೆಗಳಿಂದಾಗಿ ಈ ತೊಂದರೆಯನ್ನು ಪರಿಹರಿಸುತ್ತೀರಿ ವಾರದ ಕೊನೆಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಯಾವುದೇ ಪ್ರಕಾರದ ಅಪಘಾತದ ಯೋಗವು ಉಂಟಾಗುತ್ತಿದೆ ಆದ್ದರಿಂದ ವಾಹನವನ್ನು ಬಹಳ ಎಚ್ಚರಿಕೆಯಿಂದ ಚಲಾಯಿಸಿ. ಅದೃಷ್ಟದ ಬಣ್ಣ:ಹಳದಿ ಅದೃಷ್ಟ ಸಂಖ್ಯೆ: 3

ಮಕರರಾಶಿ:- ನೀವು ತಮ್ಮ ಸ್ವತಃ ಮನೆಯನ್ನು ಖರೀದಿಸಲು ಯೋಚಿಸುತ್ತಿದ್ದರೆ, ಈ ಕನಸ್ಸು ಸಹ ಖಂಡಿತವಾಗಿಯೂ ಸಂಪೂರ್ಣವಾಗುತ್ತದೆ. ಜೀವನ ಸಂಗಾತಿಯೊಂದಿಗೆ ಕೆಲವು ವಿವಾದಗಳು ಉಳಿದಿರುತ್ತವೆ ಆದರೆ ನೀವು ನಿಮ್ಮ ತಿಳುವಳಿಕೆಗಳಿಂದಾಗಿ ಈ ತೊಂದರೆಯನ್ನು ಪರಿಹರಿಸುತ್ತೀರಿ ವಾರದ ಕೊನೆಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಯಾವುದೇ ಪ್ರಕಾರದ ಅಪಘಾತದ ಯೋಗವು ಉಂಟಾಗುತ್ತಿದೆ ಆದ್ದರಿಂದ ವಾಹನವನ್ನು ಬಹಳ ಎಚ್ಚರಿಕೆಯಿಂದ ಚಲಾಯಿಸಿ. ಅದೃಷ್ಟದ ಬಣ್ಣ:ಕಪ್ಪು ಅದೃಷ್ಟ ಸಂಖ್ಯೆ: 8

ಕುಂಭರಾಶಿ:- ವ್ಯಾಪಾರ ಸಂಬಂಧಿತ ವಿಷಯಗಳಲ್ಲಿ ಹೊಸ ಅವಕಾಶಗಳನ್ನು ನೀಡುತ್ತಾನೆ . ಆದರೆ ಯಾವುದೇ ಪ್ರಕಾರದ ಅಹಂಕಾರವು ನಿಮ್ಮ ನಷ್ಟಕ್ಕೆ ಕಾರಣವಾಗಬಹುದು. ನೀವು ವಿದೇಶಕ್ಕೆ ಸಂಬಂಧಿಸಿದ ಯಾವುದೇ ಯೋಜನೆಗಾಗಿ ಕಾಯುತ್ತಿದ್ದರೆ, ಅದನ್ನು ಪಡೆದ ನಂತರ ನಿಮಗೆ ಲಾಭ ಸಿಗುತ್ತದೆ. ಯಾರಿಂದಲೂ ಕೇಳಿ ದೊಡ್ಡ ಹೂಡಿಕೆ ಮಾಡಬೇಡಿ ಮತ್ತು ಈ ವಾರದ ಮಧ್ಯದಲ್ಲಿ ಭೂಮಿಯ ಮೇಲೆ ಹೂಡಿಕೆ ಮಾಡುವ ಬಗ್ಗೆ ಯೋಚಿಸಿ. ಶನಿಯ ವಕ್ರತೆ ಆಗುವುದರ ಪರಿಣಾಮದಿಂದಾಗಿ ತಾಯಿಯೊಂದಿಗೆ ವಿವಾದವಾಗುವ ಸಾಧ್ಯತೆ ಹೆಚ್ಚಾಗಿದೆ. ಏಕೆಂದರೆ ಈ ಕಾರಣದಿಂದಾಗಿ ನೀವು ಮಾನಸಿಕ ಒತ್ತಡವನ್ನು ಸಹ ಎದುರಿಸಬೇಕಾಗಬಹುದು. ಈ ದಿನ ಸಣ್ಣ ಸಣ್ಣ ಪ್ರವಾಸಗಳ ಯೋಗವು ಸಹ ಇದೆ. ಅದೃಷ್ಟದ ಬಣ್ಣ: ನೀಲಿ ಅದೃಷ್ಟ ಸಂಖ್ಯೆ: 2

ಮೀನರಾಶಿ:- ಆರ್ಥಿಕ ಪರಿಸ್ಥಿತಿಯಿಂದ ಯಾವುದೇ ಅಡಚಣೆಗಳು ಬರುವುದಿಲ್ಲ. ವಾರದ ಮಧ್ಯದಲ್ಲಿ ಯಾವುದೇ ವಿಷಯದಿಂದ ತಾಯಿಯೊಂದಿಗೆ ಜಗಳವಾಗಬಹುದು.ಒಬ್ಬ ಸ್ನೇಹಿತನ ಸಹಾಯದಿಂದ ನಿಮ್ಮ ಕೆಲಸ ಸರಿಯಾಗಿ ಆಗುತ್ತದೆ. ಆದರೆ ಅದೇ ಸ್ನೇಹಿತನೊಂದಿಗೆ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬೇಡಿ. ನಿಮ್ಮ ಹಳೆಯ ಸ್ಥಗಿತಗೊಂಡಿರುವ ಶಿಕ್ಷಣ ಈ ದಿನಮತ್ತೆ ಆರಂಭವಾಗುತ್ತದೆ ಮತ್ತು ಪೂರ್ಣಗೊಳ್ಳುತ್ತದೆ. ಅದೃಷ್ಟದ ಬಣ್ಣ: ಬಿಳಿಪು ಅದೃಷ್ಟ ಸಂಖ್ಯೆ: 7

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ