ವಾರ ಭವಿಷ್ಯ: ಸಿಂಹದ ಗುರು-ಕುಜರಿಂದ ಉತ್ಸಾಹ, ಮೀನದ ವಕ್ರ ಶನಿಯಿಂದ ತಾಳ್ಮೆಯ ಪಾಠ

ಈ ವಾರ ಸಿಂಹದ ಗುರು-ಕುಜ, ತುಲಾದ ಶುಕ್ರ ಗ್ರಹಗಳ ಪ್ರಭಾವದಿಂದ ಉತ್ಸಾಹ, ಸೌಹಾರ್ದತೆ ಹೆಚ್ಚಲಿದೆ. ವೃಶ್ಚಿಕದ ರವಿ, ಬುಧ ಸಂಚಾರ, ಮೀನದ ಶನಿಯ ವಕ್ರಗತಿ ಪ್ರತಿ ರಾಶಿಯ ಮೇಲೆ ವಿಭಿನ್ನ ಪರಿಣಾಮ ಬೀರಲಿದೆ. ರಾಹು-ಕೇತು ಪರಿವರ್ತನೆ ಮಹತ್ವದ ಬದಲಾವಣೆಗೆ ನಾಂದಿ. ಪ್ರತಿಯೊಂದು ರಾಶಿಗೂ ವೃತ್ತಿ, ಆರ್ಥಿಕ, ಆರೋಗ್ಯ ಮತ್ತು ಸಂಬಂಧಗಳ ಕುರಿತು ಜ್ಯೋತಿಷ್ಯದ ಒಳನೋಟಗಳನ್ನು ಇಲ್ಲಿ ಪಡೆಯಿರಿ.

ವಾರ ಭವಿಷ್ಯ: ಸಿಂಹದ ಗುರು-ಕುಜರಿಂದ ಉತ್ಸಾಹ, ಮೀನದ ವಕ್ರ ಶನಿಯಿಂದ ತಾಳ್ಮೆಯ ಪಾಠ
ಸಾಂದರ್ಭಿಕ ಚಿತ್ರ
Edited By:

Updated on: Nov 29, 2026 | 10:50 PM

ಈ ವಾರದಲ್ಲಿ ಸಿಂಹದ ಗುರು, ಕುಜರು ಉತ್ಸಾಹ ತುಂಬಿದರೆ, ತುಲಾದ ಶುಕ್ರ ಸೌಹಾರ್ದದ ತಂಪನ್ನು ಬೀರುವನು. ವೃಶ್ಚಿಕದ ರವಿಯನ್ನು ಡಿಸೆಂಬರ್ ೨ರಂದು ಬುಧನು ಹೋಗಿ ಸೇರುವನು. ಮೀನದ ವಕ್ರ ಶನಿ ತಾಳ್ಮೆಯ ಪಾಠ ಹೇಳಿದರೆ, ವಾರಾಂತ್ಯದ ರಾಹು, ಕೇತು ಪರಿವರ್ತನೆಗೆ ನಾಂದಿಯಾಗಲಿದೆ.

ಮೇಷ ರಾಶಿ :
ಪಂಚಮ ಗುರುವಿನಿಂದ ಹೊಸ ಆಲೋಚನೆಗಳು ಅರಳುವವು. ಮಕ್ಕಳ ವಿಚಾರದಲ್ಲಿ ಸಂತಸ ಸಾಧ್ಯ. ಸಪ್ತಮ ಶುಕ್ರ ದಾಂಪತ್ಯದಲ್ಲಿ ಮಾಧುರ್ಯ ತುಂಬುವನು. ಅಷ್ಟಮ ರವಿ ಹಾಗೂ ಸಾಡೇಸಾಥ್ ಇರುವುದರಿಂದ ಆರೋಗ್ಯ ಮತ್ತು ಖರ್ಚಿನತ್ತ ಗಮನವಿರಲಿ. ಪ್ರಮುಖ ದಾಖಲೆಗಳನ್ನು ಪರಿಶೀಲಿಸಿ. ಆತುರ ತೊರೆದು ವಿವೇಕದಿಂದ ನಡೆದರೆ ನೆಮ್ಮದಿ ಹೆಚ್ಚುವುದು.

Loading...

ವೃಷಭ ರಾಶಿ :
ಲಾಭದ ಶನಿ ಪರಿಶ್ರಮಕ್ಕೆ ಫಲ ನೀಡುವನು. ಹಳೆಯ ನಿರೀಕ್ಷೆಯೊಂದು ಈಡೇರುವ ಭರವಸೆ ಮೂಡಬಹುದು. ಚತುರ್ಥದ ಕುಜನಿಂದ ಮನೆಯ ಜವಾಬ್ದಾರಿ ಹೆಚ್ಚುವ ಸಂಭವವಿದೆ. ಆಸ್ತಿ ವ್ಯವಹಾರದಲ್ಲಿ ಎಚ್ಚರ ವಹಿಸಿ. ಸಪ್ತಮ ರವಿಯಿರುವುದರಿಂದ ಸಂಗಾತಿಯೊಂದಿಗೆ ಹಠ ಬೇಡ. ತಾಳ್ಮೆಯ ಮಾತುಕತೆ ಸೌಹಾರ್ದ ಉಳಿಸಲಿದೆ.

ಮಿಥುನ ರಾಶಿ :
ತೃತೀಯದ ಗುರು, ಕುಜರು ಧೈರ್ಯ ಮತ್ತು ಕಾರ್ಯೋತ್ಸಾಹ ಹೆಚ್ಚಿಸುವರು. ಷಷ್ಠ ರವಿಯಿಂದ ಅಡೆತಡೆಗಳನ್ನು ಜಯಿಸುವ ಶಕ್ತಿ ದೊರೆಯಲಿದೆ. ಪಂಚಮ ಶುಕ್ರನಿಂದ ಮಕ್ಕಳು, ಕಲೆ ಹಾಗೂ ಸೃಜನಶೀಲ ಕಾರ್ಯಗಳಲ್ಲಿ ಸಂತಸ ಸಾಧ್ಯ. ದಶಮ ಶನಿ ಶಿಸ್ತನ್ನು ಅಪೇಕ್ಷಿಸುವನು. ಕರ್ತವ್ಯಗಳನ್ನು ಮುಂದೂಡದೆ ನಿರಂತರ ಪ್ರಯತ್ನ ಮುಂದುವರಿಸಿ.

ಕರ್ಕಾಟಕ ರಾಶಿ :
ದ್ವಿತೀಯ ಗುರು ಹಣಕಾಸು ಹಾಗೂ ಕುಟುಂಬಕ್ಕೆ ಬಲ ನೀಡುವನು. ಚತುರ್ಥ ಶುಕ್ರನಿಂದ ಮನೆಯಲ್ಲಿ ಉಲ್ಲಾಸದ ವಾತಾವರಣ ಸಾಧ್ಯ. ಪಂಚಮ ರವಿಯ ಕಾಲದಲ್ಲಿ ಮಕ್ಕಳ ವಿಚಾರಗಳಿಗೆ ಗಮನ ನೀಡಬೇಕಾಗಬಹುದು. ದ್ವಿತೀಯ ಕುಜನಿರುವುದರಿಂದ ಅನಗತ್ಯ ಖರ್ಚು ಹಾಗೂ ಕಟುನುಡಿಗೆ ಕಡಿವಾಣ ಹಾಕಿ. ಮಾತಿನ ಮಾಧುರ್ಯ ನೆಮ್ಮದಿ ತರಲಿದೆ.

ಸಿಂಹ ರಾಶಿ :
ರಾಶಿಯ ಗುರು-ಕುಜರು ಆತ್ಮವಿಶ್ವಾಸ ತುಂಬುವರು. ತೃತೀಯ ಶುಕ್ರನಿಂದ ಬಂಧು-ಮಿತ್ರರೊಂದಿಗೆ ಆತ್ಮೀಯತೆ ವೃದ್ಧಿಸಬಹುದು. ಚತುರ್ಥದ ರವಿಯಿರುವುದರಿಂದ ಮನೆಯ ವಿಷಯಗಳಲ್ಲಿ ಸಮಾಧಾನ ಅಗತ್ಯ. ಅಷ್ಟಮ ಶನಿಯ ಕಾಲದಲ್ಲಿ ವಾಹನ ಚಾಲನೆ ಹಾಗೂ ಆರೋಗ್ಯದಲ್ಲಿ ಜಾಗ್ರತೆ ವಹಿಸಿ. ವಾರಾಂತ್ಯದ ಷಷ್ಠ ರಾಹು ಸವಾಲು ಎದುರಿಸುವ ಬಲ ನೀಡುವನು.

ಕನ್ಯಾ ರಾಶಿ :
ತೃತೀಯ ರವಿ ನಿಮ್ಮ ಪ್ರಯತ್ನಗಳಿಗೆ ಬಲ ನೀಡುವನು. ಬುಧನಿಂದ ಸಂವಹನ ಚುರುಕಾಗಬಹುದು. ದ್ವಿತೀಯ ಶುಕ್ರ ಸವಿಮಾತು ಹಾಗೂ ಕುಟುಂಬದ ಸಹಕಾರ ಸೂಚಿಸುತ್ತಾನೆ. ವ್ಯಯದ ಗುರು, ಕುಜರಿಂದ ಖರ್ಚು ಮತ್ತು ಓಡಾಟ ಹೆಚ್ಚಬಹುದು. ಸಪ್ತಮ ಶನಿಯಿರುವುದರಿಂದ ಸಹಭಾಗಿತ್ವದಲ್ಲಿ ಸಹನೆಯಿರಲಿ.

ತುಲಾ ರಾಶಿ :
ಲಾಭದ ಗುರು, ಷಷ್ಠ ಶನಿ ಮತ್ತು ರಾಶಿಯ ಶುಕ್ರ ಆಶಾದಾಯಕ ವಾತಾವರಣ ಸೂಚಿಸುತ್ತಾರೆ. ಬಾಕಿ ಕೆಲಸಗಳಿಗೆ ವೇಗ ಸಿಗಬಹುದು. ಸ್ನೇಹಿತರ ಬೆಂಬಲ ಹಾಗೂ ಮನೆಯಲ್ಲಿನ ಸಂತಸದ ಕ್ಷಣಗಳು ಉಲ್ಲಾಸ ನೀಡುವವು. ದ್ವಿತೀಯ ರವಿಯಿರುವುದರಿಂದ ಮಾತಿನಲ್ಲಿ ನಯವಿರಲಿ. ಅವಕಾಶಗಳನ್ನು ವಿವೇಕದಿಂದ ಬಳಸಿ, ಆರ್ಥಿಕ ಶಿಸ್ತು ಕಾಪಾಡಿಕೊಳ್ಳಿ.

ವೃಶ್ಚಿಕ ರಾಶಿ :
ರಾಶಿಯ ರವಿ ಹಾಗೂ ದಶಮದ ಗುರು, ಕುಜರಿಂದ ಚಟುವಟಿಕೆ ಹೆಚ್ಚಲಿದೆ. ಜವಾಬ್ದಾರಿಗಳನ್ನು ದಿಟ್ಟವಾಗಿ ನಿಭಾಯಿಸುವ ಅವಕಾಶ ದೊರೆಯಬಹುದು. ವ್ಯಯ ಶುಕ್ರನಿಂದ ಸೌಕರ್ಯಗಳಿಗಾಗಿ ಖರ್ಚಾಗುವ ಸಂಭವವಿದೆ. ಪಂಚಮ ಶನಿಯಿರುವುದರಿಂದ ಮಕ್ಕಳೊಂದಿಗೆ ಸಹನೆಯಿರಲಿ. ದುಡಿಮೆಯ ಜೊತೆಗೆ ವಿಶ್ರಾಂತಿಗೂ ಸಮಯ ಮೀಸಲಿಡಿ.

ಧನು ರಾಶಿ :
ಭಾಗ್ಯದ ಗುರು ಮತ್ತು ಲಾಭದ ಶುಕ್ರ ಆಶಾಕಿರಣ ಮೂಡಿಸುವರು. ಧಾರ್ಮಿಕ ಕಾರ್ಯ, ಹಿರಿಯರ ಭೇಟಿ ಅಥವಾ ಸ್ನೇಹಕೂಟ ಸಂತಸ ನೀಡಬಹುದು. ವ್ಯಯ ರವಿಯಿಂದ ಓಡಾಟ ಹಾಗೂ ಖರ್ಚು ಹೆಚ್ಚುವ ಸಾಧ್ಯತೆಯಿದೆ. ಚತುರ್ಥದ ಶನಿಯಿರುವುದರಿಂದ ಮನೆಯ ವಿಷಯಗಳಲ್ಲಿ ತಾಳ್ಮೆ ಅಗತ್ಯ. ಸಕಾರಾತ್ಮಕ ಚಿಂತನೆ ನಿಮ್ಮ ಶಕ್ತಿಯಾಗಲಿ.

ಮಕರ ರಾಶಿ :
ತೃತೀಯದಲ್ಲಿರುವ ಶನಿ ಮತ್ತು ಲಾಭದ ರವಿ ಪ್ರಗತಿಗೆ ಪೂರಕರು. ಮಿತ್ರರ ಹಾಗೂ ಹಿರಿಯರ ಸಹಕಾರ ದೊರೆಯಬಹುದು. ದಶಮದ ಶುಕ್ರನಿಂದ ಕಾರ್ಯಕ್ಷೇತ್ರದಲ್ಲಿ ಸೌಹಾರ್ದ ಸಾಧ್ಯ. ಅಷ್ಟಮ ಕುಜನಿರುವುದರಿಂದ ಅಪಾಯಕಾರಿ ಸಾಹಸ ಮತ್ತು ವಿವಾದಗಳಿಂದ ದೂರವಿರಿ. ವಾರಾಂತ್ಯದಿಂದ ರಾಶಿಯಲ್ಲಿ ರಾಹು ಸಂಚರಿಸುವುದರಿಂದ ನಿರ್ಧಾರಗಳಲ್ಲಿ ಸ್ಪಷ್ಟತೆಯಿರಲಿ.

ಕುಂಭ ರಾಶಿ :
ಸಪ್ತಮದ ಗುರು ಹಾಗೂ ಭಾಗ್ಯದ ಶುಕ್ರನಿಂದ ಹಿತೈಷಿಗಳ ಬೆಂಬಲ ಸಾಧ್ಯ. ವಿವಾಹ ಮಾತುಕತೆಗಳಿಗೆ ಅನುಕೂಲದ ಸೂಚನೆಯಿದೆ. ದಶಮ ರವಿ ಕಾರ್ಯಕ್ಷೇತ್ರದಲ್ಲಿ ಮನ್ನಣೆ ತರಬಹುದು. ಸಪ್ತಮ ಕುಜನಿಂದ ಅಭಿಪ್ರಾಯಭೇದ ಮೂಡುವ ಸಂಭವವಿದೆ. ಸಾಡೇಸಾತಿಯೂ ಇರುವುದರಿಂದ ಮಾತು ಮತ್ತು ಹಣಕಾಸಿನಲ್ಲಿ ಸಂಯಮ ಅಗತ್ಯ.

ಮೀನ ರಾಶಿ :
ಷಷ್ಠದ ಕುಜ ಸವಾಲು ಎದುರಿಸುವ ಶಕ್ತಿ ನೀಡುವನು. ಭಾಗ್ಯದ ರವಿಯಿಂದ ಹಿರಿಯರ ಮಾರ್ಗದರ್ಶನ ಹಾಗೂ ದೈವಚಿಂತನೆಗೆ ಅವಕಾಶವಾಗಬಹುದು. ಷಷ್ಠ ಗುರು ಇರುವುದರಿಂದ ಸಾಲ ವ್ಯವಹಾರದಲ್ಲಿ ವಿವೇಕವಿರಲಿ. ಜನ್ಮರಾಶಿಯಲ್ಲಿ ಶನಿ ಹಾಗೂ ಅಷ್ಟಮ ಶುಕ್ರನ ಕಾಲದಲ್ಲಿ ಆರೋಗ್ಯದತ್ತ ಗಮನ ನೀಡಿ. ಶಿಸ್ತು ಮತ್ತು ಧ್ಯಾನ ನೆಮ್ಮದಿಗೆ ದಾರಿಯಾಗಬಹುದು.

– ಲೋಹಿತ್ ಹೆಬ್ಬಾರ್

ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
Loading...
Unable to load recommendations.
Follow Us