AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Love Horoscope: ಫೆ.22ರಿಂದ 28ರವರೆಗೆ ಈ ರಾಶಿಯವರಿಗೆ ದಾಂಪತ್ಯ – ಸ್ನೇಹದಲ್ಲಿ ಏರಿಳಿತ

ಫೆಬ್ರವರಿ 22-28ರ ಈ ವಾರವು ನಿಮ್ಮ ಭಾವನಾತ್ಮಕ ಸಂಬಂಧಗಳ ಮೇಲೆ ಮಹತ್ವದ ಪ್ರಭಾವ ಬೀರಲಿದೆ. ಮಾತು ಮತ್ತು ವರ್ತನೆಯಲ್ಲಿ ಎಚ್ಚರವಿರಲಿ. ಪ್ರತಿಯೊಂದು ರಾಶಿ ಚಿಹ್ನೆಗೂ ಪ್ರೇಮ, ದಾಂಪತ್ಯ ಮತ್ತು ಸ್ನೇಹದಲ್ಲಿನ ಏರಿಳಿತಗಳ ಕುರಿತು ವಿಶೇಷ ಜ್ಯೋತಿಷ್ಯ ಭವಿಷ್ಯವಿದೆ. ಸಂಬಂಧಗಳನ್ನು ಗಟ್ಟಿಗೊಳಿಸಲು ಮತ್ತು ಸವಾಲುಗಳನ್ನು ಎದುರಿಸಲು ಈ ವಾರದ ಸಲಹೆಗಳು ನಿಮಗೆ ಮಾರ್ಗದರ್ಶನ ನೀಡುತ್ತವೆ.

Weekly Love Horoscope: ಫೆ.22ರಿಂದ 28ರವರೆಗೆ ಈ ರಾಶಿಯವರಿಗೆ ದಾಂಪತ್ಯ - ಸ್ನೇಹದಲ್ಲಿ ಏರಿಳಿತ
ವಾರದ ಪ್ರೇಮ ಭವಿಷ್ಯ Image Credit source: Tv9 kannada
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Feb 21, 2026 | 10:18 PM

Share

ಫೆಬ್ರವರಿ 22ರಿಂದ ಫೆಬ್ರವರಿ 28ರ ವರೆಗೆ ಮೂರನೇ ವಾರವಾಗಿದ್ದು ಭಾವನಾತ್ಮಕ ಸಂಬಂಧಕ್ಕೆ ಹೆಚ್ಚು ಪ್ರಭಾವ ಬೀರುವುದಾಗಿದೆ. ಮಾತು ಹಾಗು ವರ್ತನೆಗಳು ಸರಿಯಾಗಿರಲಿ. ಸಹಜತೆಯೂ ಉದ್ದೇಶದಿಂದ ಕೂಡಿರುವ ಶಂಕೆ ಬರಬಹುದು. ಅಲ್ಲಿಯೇ ಬಿರುದುಗಳು ಸರಿಮಾಡಿಕೊಂಡು ಮುಂದುವರಿಯಿರಿ.

ಮೇಷ :

​ಪ್ರೇಮಿಗಳ ನಡುವೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬರಬಹುದು, ಮಾತಿನಲ್ಲಿ ಸಂಯಮವಿರಲಿ. ದಾಂಪತ್ಯ ಜೀವನದಲ್ಲಿ ಮಧುರತೆ ಇರುತ್ತದೆ. ಸಂಗಾತಿಯಿಂದ ಅನಿರೀಕ್ಷಿತ ಉಡುಗೊರೆ ಸಿಗಬಹುದು. ಹಳೆಯ ಸ್ನೇಹಿತರನ್ನು ಭೇಟಿ ಮಾಡುವ ಅವಕಾಶ ಸಿಗಲಿದೆ.

​ವೃಷಭ :

​ಪ್ರೀತಿಯಲ್ಲಿರುವವರಿಗೆ ಇದು ಶುಭ ಕಾಲ. ಹೊಸ ಸಂಬಂಧಗಳು ಚಿಗುರಲಿವೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರುವ ಸಾಧ್ಯತೆ ಇದೆ. ಮನೆಯಲ್ಲಿ ಶುಭ ಕಾರ್ಯದ ಚರ್ಚೆ ನಡೆಯಲಿದೆ. ಸ್ನೇಹಿತರೊಂದಿಗೆ ಪ್ರವಾಸ ಕೈಗೊಳ್ಳುವ ಯೋಜನೆ ರೂಪಿಸುವಿರಿ.

ಮಿಥುನ :

​ನಿಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ. ಪ್ರೇಮ ಜೀವನ ಸುಗಮವಾಗಿರುತ್ತದೆ. ಸಂಗಾತಿಯ ಆರೋಗ್ಯದ ಬಗ್ಗೆ ಗಮನವಿರಲಿ. ಪರಸ್ಪರ ಹೊಂದಾಣಿಕೆ ಅಗತ್ಯ. ಹೊಸ ಗೆಳೆಯರ ಸೇರ್ಪಡೆಯಿಂದ ನಿಮ್ಮ ಸಾಮಾಜಿಕ ವಲಯ ವಿಸ್ತಾರವಾಗಲಿದೆ.

ಕರ್ಕಾಟಕ :

​ಭಾವನಾತ್ಮಕವಾಗಿ ಸ್ವಲ್ಪ ಏರಿಳಿತ ಇರಬಹುದು. ಸಂಗಾತಿಗೆ ಹೆಚ್ಚಿನ ಸಮಯ ನೀಡಿ. ವೈವಾಹಿಕ ಜೀವನದಲ್ಲಿ ನೆಮ್ಮದಿ ಇರಲಿದೆ. ಹಿರಿಯರ ಆಶೀರ್ವಾದ ನಿಮ್ಮ ಮೇಲಿರುತ್ತದೆ. ಕಷ್ಟಕಾಲದಲ್ಲಿ ಗೆಳೆಯರು ನಿಮ್ಮ ಬೆನ್ನಿಗೆ ನಿಲ್ಲಲಿದ್ದಾರೆ.

​ಸಿಂಹ :

​ನಿಮ್ಮ ಆಕರ್ಷಣೆ ಹೆಚ್ಚಾಗಲಿದೆ. ಪ್ರೇಮ ಪ್ರಸ್ತಾಪ ಮಾಡಲು ಇದು ಸೂಕ್ತ ಸಮಯ. ಸಂಗಾತಿಯೊಂದಿಗೆ ಸಣ್ಣ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಸಂಬಂಧ ಗಟ್ಟಿಯಾಗಲಿದೆ. ಸ್ನೇಹಿತರೊಂದಿಗೆ ವಿನೋದಮಯ ಕ್ಷಣಗಳನ್ನು ಕಳೆಯುವಿರಿ.

​ ಕನ್ಯಾ :

​ಪ್ರೀತಿಯಲ್ಲಿ ಪ್ರಾಮಾಣಿಕತೆ ಮುಖ್ಯ. ಸುಳ್ಳು ಹೇಳುವುದನ್ನು ತಪ್ಪಿಸಿ. ದಾಂಪತ್ಯದಲ್ಲಿ ಹೊಂದಾಣಿಕೆ ಕಂಡುಬರುತ್ತದೆ. ಮನೆ ಕೆಲಸಗಳಲ್ಲಿ ಸಂಗಾತಿ ಸಹಾಯ ಮಾಡುತ್ತಾರೆ. ತಪ್ಪು ತಿಳುವಳಿಕೆಯಿಂದ ದೂರವಿರಿ, ಸ್ನೇಹಿತರ ಮಾತುಗಳಿಗೆ ಕಿವಿಗೊಡಿ.

​ ತುಲಾ :

​ಪ್ರೇಮ ಜೀವನದಲ್ಲಿ ರೋಮಾಂಚನವಿರಲಿದೆ. ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯುವಿರಿ. ವಿವಾಹ ಸಂಬಂಧಿ ಮಾತುಕತೆಗಳು ಯಶಸ್ವಿಯಾಗುತ್ತವೆ. ಹಳೆಯ ಗೆಳೆಯರೊಂದಿಗೆ ಮನಸ್ತಾಪವಿದ್ದರೆ ಅದು ಈ ವಾರ ಬಗೆಹರಿಯಲಿದೆ.

ವೃಶ್ಚಿಕ :

​ಪ್ರೀತಿಯ ವಿಚಾರದಲ್ಲಿ ಆತುರದ ನಿರ್ಧಾರ ಬೇಡ. ತಾಳ್ಮೆಯಿಂದಿರಿ. ಸಂಗಾತಿಯ ಮೇಲೆ ಅನಗತ್ಯ ಸಂಶಯ ಬೇಡ. ವಿಶ್ವಾಸವೇ ಸಂಬಂಧದ ಅಡಿಪಾಯ. ಹೊಸ ಗೆಳೆಯರಿಂದ ಆರ್ಥಿಕವಾಗಿ ಅಥವಾ ವೃತ್ತಿಪರವಾಗಿ ಸಹಾಯ ಸಿಗಬಹುದು.

ಧನು :

ಪ್ರೇಮಿಗಳ ನಡುವೆ ಮಧುರ ಬಾಂಧವ್ಯ ಇರಲಿದೆ. ಪರಸ್ಪರ ಗೌರವ ಹೆಚ್ಚಾಗುತ್ತದೆ. ಅವಿವಾಹಿತರಿಗೆ ಉತ್ತಮ ಸಂಬಂಧಗಳು ಹುಡುಕಿಕೊಂಡು ಬರುತ್ತವೆ. ಸೃಜನಾತ್ಮಕ ಕೆಲಸಗಳಲ್ಲಿ ಗೆಳೆಯರು ಪ್ರೋತ್ಸಾಹ ನೀಡಲಿದ್ದಾರೆ.

ಮಕರ ;

​ಕೆಲಸದ ಒತ್ತಡದಿಂದ ಪ್ರೇಮ ಜೀವನಕ್ಕೆ ಸಮಯ ನೀಡುವುದು ಕಷ್ಟವಾಗಬಹುದು. ಕುಟುಂಬ ಸದಸ್ಯರ ಹಸ್ತಕ್ಷೇಪದಿಂದ ಸಣ್ಣ ಅಸಮಾಧಾನ ಮೂಡಬಹುದು, ಎಚ್ಚರಿಕೆ ಇರಲಿ. ಆತ್ಮೀಯ ಗೆಳೆಯರೊಂದಿಗೆ ನಿಮ್ಮ ಗುಟ್ಟುಗಳನ್ನು ಹಂಚಿಕೊಳ್ಳುವಿರಿ.

ಕುಂಭ :

​ನೀವು ಇಷ್ಟಪಟ್ಟ ವ್ಯಕ್ತಿಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಗಲಿದೆ. ವೈವಾಹಿಕ ಜೀವನದಲ್ಲಿ ಶಾಂತಿ ಮತ್ತು ಸಂತೋಷ ನೆಲೆಸಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಸ್ನೇಹಿತರೊಂದಿಗೆ ಪಾಲ್ಗೊಳ್ಳುವಿರಿ.

ಮೀನ :

​ಪ್ರೇಮ ಜೀವನದಲ್ಲಿ ಹೊಸ ತಿರುವು ಬರಲಿದೆ. ಸಂಗಾತಿಯ ಮೇಲೆ ಪ್ರೀತಿ ಹೆಚ್ಚಾಗುತ್ತದೆ. ಮನೆಗೆ ಅತಿಥಿಗಳ ಆಗಮನವಾಗಬಹುದು. ದಾಂಪತ್ಯ ಸುಖಮಯವಾಗಿರುತ್ತದೆ. ಗೆಳೆಯರ ಸಲಹೆಯು ನಿಮಗೆ ಹೊಸ ದಾರಿಯನ್ನು ತೋರಿಸಲಿದೆ. ​

– ಲೋಹಿತ ಹೆಬ್ಬಾರ್

Follow Us
ಲೋಹಿತ ಹೆಬ್ಬಾರ್​, ಇಡುವಾಣಿ
ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಇನ್ನು ಈ ಎಲ್ಲ ದಾಖಲೆ ಕಡ್ಡಾಯ
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಇನ್ನು ಈ ಎಲ್ಲ ದಾಖಲೆ ಕಡ್ಡಾಯ