AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರಾ ನಕ್ಷತ್ರದ ವಿಚಿತ್ರ ಸ್ವಭಾವಗಳು ಯಾವುವು? ಇಲ್ಲಿದೆ ನೋಡಿ

ಇಪ್ಪತ್ತೇಳು ನಕ್ಷತ್ರಗಳಲ್ಲಿ ಚಿತ್ರಾ ನಕ್ಷತ್ರ ಕೂಡ ಒಂದು. ಇದು ಹದಿನಾಲ್ಕನೇ ನಕ್ಷತ್ರವಾಗಿದೆ. ಅಂದರೆ ಸರಿಯಾಗಿ ಮಧ್ಯ ನಕ್ಷತ್ರ. ಈ ನಕ್ಷತ್ರ ಆಕಾಶದಲ್ಲಿ ಒಂದೇ ನಕ್ಷತ್ರವಾಗಿ ಬಣ್ಣ ಬಣ್ಣದ ಆಕಾರದಲ್ಲಿ ಪ್ರಜ್ವಲಿಸುತ್ತದೆ.  ಇದು ಕನ್ಯಾ ಮತ್ತು ತುಲಾ ರಾಶಿಯನ್ನು ಸರಿಯಾಗಿ ಎರಡೆರಡು ಪದಗಳನ್ನು ಹಂಚಿಕೊಂಡ ನಕ್ಷತ್ರ.  ಈ ಚಿತ್ರಾ ನಕ್ಷತ್ರದ ವಿಚಿತ್ರ ಸ್ವಭಾವಗಳೇನು? ಇಲ್ಲಿದೆ ನೋಡಿ 

ಚಿತ್ರಾ ನಕ್ಷತ್ರದ ವಿಚಿತ್ರ ಸ್ವಭಾವಗಳು ಯಾವುವು? ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Feb 13, 2025 | 4:24 PM

Share

ಖಗೋಲದಲ್ಲಿ ಕಾಣುವ ಪ್ರಮುಖ ಇಪ್ಪತ್ತೇಳು ನಕ್ಷತ್ರಗಳಲ್ಲಿ ಚಿತ್ರಾ ನಕ್ಷತ್ರ ಕೂಡ ಒಂದು. ಇದು ಹದಿನಾಲ್ಕನೇ ನಕ್ಷತ್ರವಾಗಿದೆ. ಅಂದರೆ ಸರಿಯಾಗಿ ಮಧ್ಯ ನಕ್ಷತ್ರ. ಈ ನಕ್ಷತ್ರ ಆಕಾಶದಲ್ಲಿ ಒಂದೇ ನಕ್ಷತ್ರವಾಗಿ ಬಣ್ಣ ಬಣ್ಣದ ಆಕಾರದಲ್ಲಿ ಪ್ರಜ್ವಲಿಸುತ್ತದೆ. ಇದರ ಅಧಿಪತಿ ದೇವಶಿಲ್ಪಿ ಎಂದೇ ಖ್ಯಾತಿ ಪಡೆದ ವಿಶ್ವಕರ್ಮನಾಗಿದ್ದಾನೆ. ಈ ನಕ್ಷತ್ರದಿಂದಲೇ ಚೈತ್ರ ಮಾಸ ಎನಿಸಿಕೊಳ್ಳುವುದು. ಇದರ ಗ್ರಹ ಕುಜ. ಕನ್ಯಾ ಮತ್ತು ತುಲಾ ರಾಶಿಯನ್ನು ಸರಿಯಾಗಿ ಎರಡೆರಡು ಪದಗಳನ್ನು ಹಂಚಿಕೊಂಡ ನಕ್ಷತ್ರ. ಇದನ್ನು ತಿರ್ಯಕ್ ನಕ್ಷತ್ರ ಎಂಬುದಾಗಿಯೂ ಕರೆಯುತ್ತಾರೆ. ಇದರ ಅಕ್ಷರಗಳು ಪೇ, ಪೋ, ರ, ರಾ, ರಿ, ರೀ ಇವುಗಳಾಗಿವೆ. ಇದರ ದೇವತೆ ವಿಶ್ವಕರ್ಮನಾದ ಕಾರಣ ಸೌಂದರ್ಯ ಹಾಗೂ ವಿನ್ಯಾಸ ಕಾರ್ಯಗಳು ಇವರಿಂದ ಪ್ರಸಾರಕ್ಕೆ ಬರಲಿದೆ. ಹೊಸ ಶೋಧನೆಗಳನ್ನು ಇವರು ಪ್ರಕಟಿಸುವರು. ಇಂತಹವರ ಸ್ವಭಾವ ಹೇಗಿರಲಿದೆ.

  • ಶತ್ರುನಾಶ : ತಮ್ಮ‌‌ ಪ್ರಭಾವ ಮತ್ತು ಪರಾಕ್ರಮದಿಂದ ಶತ್ರುಗಳ ನಾಶವನ್ನು ಮಾಡಿಕೊಳ್ಳುವರು. ಶತ್ರುಗಳನ್ನು ಗೆಲ್ಲುವ ತಂತ್ರ ಗೊತ್ತಿರಲಿದೆ.
  • ಸಮರ್ಥ : ಎಂತಹ ಕಾರ್ಯವನ್ನೂ ಹೇಗೆ ನಿರ್ವಹಿಸಬೇಕು ಎಂಬ ಬುದ್ಧಿಯಿರುವುದು. ಯಾವುದಕ್ಕೂ ಹೆದರೆದೇ ಕಾರ್ಯದಲ್ಲಿ ಮುನ್ನಡೆಯುವರು.
  • ವಿನಯ : ಎಂತ ವಿದ್ಯೆ, ಸಂಪತ್ತು, ಸ್ಥಾನಮಾನಗಳಿದ್ದರೂ ವಿನಯಶೀಲರಾಗಿ, ಬಾಗಬೇಕಾದಲ್ಲಿ ಬಾಗುವರು. ದರ್ಪವನ್ನು ಯಾರಲ್ಲಿಯೂ ತೋರಲಾರರು.
  • ಚಿತ್ರ ವಸ್ತ್ರಧಾರಣೆ : ಹೆಚ್ಚು ಬಣ್ಣಗಳಿಂದ ಕೂಡಿದ ವಸ್ತ್ರಗಳನ್ನು ಯಾವಾಗಲೂ ಧರಿಸುವರು. ಇವರಿಗೆ ಅನೇಕ ವರ್ಣಗಳು ಇಷ್ಟವಾಗುತ್ತದೆ.
  • ಸುಲೋಚನಾಂಗ : ಇವರ ಕಣ್ಣುಗಳು ಬಹಳ‌ ಆಕರ್ಷಕವಾಗಿ ಕಾಣಿಸುವುದು. ಅಗಲವಾದ ಹಾಗೂ ಮೀನಿನಂತಹ ಉದ್ದವಾದ ಕಣ್ಣು. ಅಷ್ಟೇ ಅಲ್ಲ ಅಂಗಗಳೂ ದೃಡವಾಗಿ, ಹೃಷ್ಟಪುಷ್ಟವಾಗಿ ಕಾಣಿಸುವುದು. ತುಂಬು ಶರೀರದವರಾಗಿರುವರು.
  • ನಿರ್ಮಾಣಕಾರ್ಯ : ಈ ನಕ್ಷತ್ರದವರು ನಿರ್ಮಾಣ ಕಾರ್ಯದಲ್ಲಿ ಬಹಳ ಚಾಣಾಕ್ಷರು.‌ ಯಾರ ಬಳಿಯಿಂದ ಎಂತಹ ಕಾರ್ಯವನ್ನು ಹೇಗೆ ಮಾಡಿಸಿಕೊಳ್ಳುವುದು ಎನ್ನುವುದನ್ನು ಬಲ್ಲವರು.
  • ವಿದ್ಯಾಸಕ್ತಿ : ಈ ನಕ್ಷತ್ರದ ಮೊದಲ ಎರಡು ಅದರಲ್ಲಿ ಜನಿಸಿದವರು ವಿದ್ಯಾಭ್ಯಾಸ ಸಾಹಿತ್ಯಾಸಕ್ತಿ, ಶಿಲ್ಪಕಲೆ, ಚಿತ್ರಕಲೆಗಳಲ್ಲಿ ಆಸಕ್ತಿಯನ್ನು ಇಟ್ಟುಕೊಳ್ಳುವರು. ತಕ್ಕಮಟ್ಟಿಗೆ ವಿನೋದವನ್ನು ಇಷ್ಟಪಡುವವರೂ ಆಗಿರುತ್ತಾರೆ.
  • ಭೋಗರತಿ : ಕೊನೆಯ ಎರಡು ಪಾದದಲ್ಲಿ ಜನಿಸಿದವರು ಭೋಗದಲ್ಲಿ, ಸ್ತ್ರೀಯರ ಒಡನಾಟ, ಕಾಮದಲ್ಲಿ ಆಸಕ್ತಿ, ಆಸೆಬುರುಕು ತನ, ಇವೆಲ್ಲವೂ ಅಧಿಕವಾಗಿ ಇರುವುದು.

ಇದು ಭೋಗಕ್ಕೆ ಹೇಳಿ ಮಾಡಿಸಿದ ನಕ್ಷತ್ರ. ಚೈತ್ರ ಮಾಸಕ್ಕೆ ಇದೇ ನಕ್ಷತ್ರ ಕಾರಣವಾಗಿದ್ದು, ಅದು ಬರುವುದು ವಸಂತ ಮಾಸದಲ್ಲಿ. ಅಂದರೆ ಸೃಷ್ಟಿಯಾಗುವ, ಮರುಸೃಷ್ಟಿಯಾಗುವ ಕಾರ್ಯಕ್ಕೆ ಪೂರಕವಾದ ಋತು ಹಾಗೂ ಮಾಸಗಳು. ಅಧಿಪತಿಯೂ ಕುಜನಾದ ಕಾರಣ ಎಲ್ಲವೂ ಮೇಳೈಸಿದ ಭೋಗವನ್ನು ಅಪೇಕ್ಷಿಸುವಂತೆ ಮಾಡುವ ನಕ್ಷತ್ರ ಇದು.

– ಲೋಹಿತ ಹೆಬ್ಬಾರ್ – 8762924271

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ