ಅರಿಷ್ಟವನ್ನು ತಿಳಿದುಕೊಳ್ಳುವುದು ಹೇಗೆ? ಅದರಿಂದ ಆಗುವುದೇನು?

ಅರಿಷ್ಟವೆಂದರೆ ಪಾಪ ಎಂದರ್ಥ. ಜನನ ಕಾಲದಲ್ಲಿ ನಮ್ಮ ಹಿಂದಿನ ಜನ್ಮದ ಶುಭಾಶುಭಕರ್ಮಗಳು ಫಲವನ್ನು ಕೊಡಲು ಆರಂಭಿಸುತ್ತವೆ. ಅಶುಭ ಅಥವಾ ಪಾಪವೇ ಅಧಿಕವಾಗಿದ್ದರೆ ಹುಟ್ಟಿದ ಕ್ಷಣದಿಂದಲೇ ಫಲವು ಪ್ರಾಪ್ತವಾಗುತ್ತದೆ. ಜನನದಿಂದ ಮರಣಪರ್ಯಂತ ತೊಂದರೆಗಳೂ ಒಂದಲ್ಲ ಒಂದು ರೀತಿಯಲ್ಲಿ ಬಂದೇಬರುತ್ತವೆ. ಅದಕ್ಕೆ ಕಾರಣ ಪಾಪವಾಗಿರುತ್ತದೆ. ಅದನ್ನು ವಿಶೇಷವಾಗಿ ಜನನಕಾಲದಲ್ಲಿಯೂ ಹೇಳುತ್ತಾರೆ.

ಅರಿಷ್ಟವನ್ನು ತಿಳಿದುಕೊಳ್ಳುವುದು ಹೇಗೆ? ಅದರಿಂದ ಆಗುವುದೇನು?
ಸಾಂದರ್ಭಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 22, 2023 | 5:40 PM

ಅರಿಷ್ಟವೆಂದರೆ ಪಾಪ ಎಂದರ್ಥ. ಜನನ ಕಾಲದಲ್ಲಿ ನಮ್ಮ ಹಿಂದಿನ ಜನ್ಮದ ಶುಭಾಶುಭಕರ್ಮಗಳು ಫಲವನ್ನು ಕೊಡಲು ಆರಂಭಿಸುತ್ತವೆ. ಅಶುಭ ಅಥವಾ ಪಾಪವೇ ಅಧಿಕವಾಗಿದ್ದರೆ ಹುಟ್ಟಿದ ಕ್ಷಣದಿಂದಲೇ ಫಲವು ಪ್ರಾಪ್ತವಾಗುತ್ತದೆ. ಜನನದಿಂದ ಮರಣಪರ್ಯಂತ ತೊಂದರೆಗಳೂ ಒಂದಲ್ಲ ಒಂದು ರೀತಿಯಲ್ಲಿ ಬಂದೇಬರುತ್ತವೆ. ಅದಕ್ಕೆ ಕಾರಣ ಪಾಪವಾಗಿರುತ್ತದೆ. ಅದನ್ನು ವಿಶೇಷವಾಗಿ ಜನನಕಾಲದಲ್ಲಿಯೂ ಹೇಳುತ್ತಾರೆ.

ಸಾಯಂಕಾಲದ ಸಮಯದಲ್ಲಿ ಯಾರದ್ದಾದರೂ ಜನನವಾಗಿ, ಆಗ ಲಗ್ನವು ಚಂದ್ರ ಹೋರೆಯಲ್ಲಿ ಇದ್ದರೆ, ಪಾಪಗ್ರಹಗಳು ಯಾವ ರಾಶಿಯಲ್ಲಾದರೂ ಅಂತ್ಯ ನವಾಂಶದಲ್ಲಿ ಇದ್ದರೆ, ಜನಿಸಿದ ಮಗುವು ಬದುಕುವುದಿಲ್ಲವೆಂದು ತಿಳಿಯಬೇಕು. ಹಾಗೆಯೇ ಚಂದ್ರನು ಪಾಪಗ್ರಹರ ಜೊತೆ ಇದ್ದು ಲಗ್ನ, ಚತುರ್ಥ, ಸಪ್ತಮ, ದಶಮದಲ್ಲಿ ಅಂದರೆ ಕೇಂದ್ರಸ್ಥಾನದಲ್ಲಿ ಇದ್ದು, ಪಾಪಗ್ರಹರು ಯಾವುದಾದರೂ ಮೂರು ಸ್ಥಾನದಲ್ಲಿ ಇದ್ದರೆ ಜನಿಸಿದ ಮಗುವು ಬದುಕುವುದಿಲ್ಲ ಎಂದು ತಿಳಿಯಬೇಕು.

ಮತ್ತೆ, ಜನ್ಮ ಸಮಯದಲ್ಲಿ ಲಗ್ನ ಮತ್ತು ಸಪ್ತಸ್ಥಾನದಲ್ಲಿ ಪಾಪಗ್ರಹರಿದ್ದು, ಚಂದ್ರನು ಪಾಪಗ್ರಹಯುಕ್ತನಾಗಿ ಶುಭಗ್ರಹರ ದೃಷ್ಟಿಯು ಇಲ್ಲದಿದ್ದರೆ ಹುಟ್ಟಿದ ಶಿಶುವು ಶೀಘ್ರವಾಗಿ ಮರಣವನ್ನು ಹೊಂದುತ್ತದೆ ಎಂದು ತಿಳಿಯಬೇಕು. ಯಾರದ್ದಾದರೂ ಜನನ ಸಂದರ್ಭದಲ್ಲಿ ಕ್ಷೀಣ ಚಂದ್ರ ಸಂದರೆ ಕೃಷ್ಣಪಕ್ಷದ ಅಷ್ಟಮಿಯಿಂದ ಶುಕ್ಲಪಕ್ಷದ ಅಷ್ಟಮಿಯವರೆಗಿನ ಚಂದ್ರನು ವ್ಯಯದಲ್ಲಿ ಇದ್ದರೆ, ಲಗ್ನ ಮತ್ತು ಅಷ್ಟಮದಲ್ಲಿ ಪಾಪಗ್ರಹರು ಅಂದರೆ, ಕುಜ, ಶನಿ, ರಾಹು, ಕೇತು ಮುಂತಾದವರು ಇದ್ದರೆ, ಕೇಂದ್ರಸ್ಥಾನ ಎಂದು ಕರೆಸಿಕೊಳ್ಳಲ್ಪಡುವ ಒಂದು, ನಾಲ್ಕು, ಏಳು ಮತ್ತು ಹತ್ತರಲ್ಲಿ ಗುರು, ಶುಕ್ರ ಮುಂತಾದ ಶುಭಗ್ರಹರು ಇಲ್ಲದೇ ಇದ್ದರೆ ಹುಟ್ಟಿದ ಮಗುವಿನ ಮರಣವನ್ನು ತಿಳಿಯಬೇಕು.

ಇದನ್ನೂ ಓದಿ: ಯೂಪ, ಶರ, ಶಕ್ತಿ, ದಂಡಯೋಗಗಳ ಬಗ್ಗೆ ಗೊತ್ತಾ? ಯೋಗಗಳ ಲಕ್ಷಣ ಮತ್ತು ಫಲಗಳೇನು?

ಹೀಗೆ ಜನನ ಕಾಲದಲ್ಲಿ ಮಗುವಿನ ಮರಣವನ್ನು ಹೇಳುತ್ತಾರೆ. ಇದಲ್ಲದೇ ತಾಯಿ ಮತ್ತು ಮಗುವಿನ ಕುರಿತೂ ಜನನ ಕಾಲದಲ್ಲಿ ಏನಾಗುತ್ತದೆ ಎನ್ನುವುದನ್ನು ಹೇಳುತ್ತಾರೆ, ಪ್ರಾಚೀನ ದೈವಜ್ಞರು.

ಚಂದ್ರನು ಲಗ್ನಸ್ಥಾನದಲ್ಲಿ ಹಾಗೂ ಸಪ್ತಮ ಮತ್ತು ಅಷ್ಟಮದಲ್ಲಿ ಅಶುಭಗ್ರಹರಿದ್ದು, ಚಂದ್ರನ ಮೇಲೆ ಶುಭಗ್ರಹರ ದೃಷ್ಟಿ ಇಲ್ಲದೇ ಇದ್ದರೆ ಹುಟ್ಟಿದ ಮಗುವು ತಾಯಿಯ ಸಹಿತವಾಗಿ ಮರಣವನ್ನು ಹೊಂದುತ್ತದೆ. ಒಂದೊಮ್ಮೆ ಬಲವುಳ್ಳ ಗ್ರಹರು ಚಂದ್ರನನ್ನು ನೋಡಿದರೂ ನಾನಾ ರೋಗಗಳು ಕಾಣಿಸಿಕೊಳ್ಳುವುದು. ಈ ರೀತಿಯಿಂದ ಅರಿಷ್ಟವನ್ನು ಅಥವಾ ಪುರ್ವಜನ್ಮದ ಪಾಪವನ್ನು ತಿಳಿಯಬೇಕು ಎನ್ನುವುದು ಜ್ಯೋತಿಷ್ಯಶಾಸ್ತ್ರದ ದೃಷ್ಟಿಯಾಗಿದೆ.

-ಲೋಹಿತಶರ್ಮಾ, ಇಡುವಾಣಿ

ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್