Automobile: ಜೂ.27 ರಂದು ಮಾರುಕಟ್ಟೆಗೆ ಲಗ್ಗೆ ಇಡಲಿರುವ ಮಹೀಂದ್ರಾ ಸ್ಕಾರ್ಪಿಯೋ-N, ಇಲ್ಲಿದೆ ಫೀಚರ್ಸ್

| Updated By: Rakesh Nayak Manchi

Updated on: Jun 12, 2022 | 1:30 PM

ಡಿಜಿಟಲ್ ಆರ್ಟಿಸ್ಟ್ ಜೆನ್-ಎಕ್ಸ್ ಡಿಸೈನ್ಸ್ ಡಿಜಿಟಲ್ ರೆಂಡರ್ ಮಾಡಿದ ಸ್ಕಾರ್ಪಿಯೋ-ಎನ್ 'ಗೋಲ್ಡ್ ಎಡಿಷನ್' ಕಾರಿನ ವಿನ್ಯಾಸ ಆಕರ್ಷಣೀಯವಾಗಿದೆ. ಪ್ರಸ್ತುತದ ಮಹೀಂದ್ರಾ ಸ್ಕಾರ್ಪಿಯೊವನ್ನು ಹೋಲಿಸಿದರೆ ಬೆಲೆ ಮತ್ತು ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆಗಳನ್ನು ಕಾಣಬಹುದು.

Automobile: ಜೂ.27 ರಂದು ಮಾರುಕಟ್ಟೆಗೆ ಲಗ್ಗೆ ಇಡಲಿರುವ ಮಹೀಂದ್ರಾ ಸ್ಕಾರ್ಪಿಯೋ-N, ಇಲ್ಲಿದೆ ಫೀಚರ್ಸ್
ಮಹೀಂದ್ರಾ ಸ್ಕಾರ್ಪಿಯೋ-ಎನ್
Image Credit source: Gen-x Designs
Follow us on

ಮಹೀಂದ್ರಾ ಕಂಪನಿಯು ತಯಾರಿಸಿದ ಬಹುನಿರೀಕ್ಷಿತ ಮಹೀಂದ್ರಾ ಸ್ಕಾರ್ಪಿಯೋ-ಎನ್ ಕಾರು ಭಾರತದ ಮಾರುಕಟ್ಟೆಗೆ ಜೂ.27ರಂದು ಲಗ್ಗೆ ಇಡಲಿದೆ. ಮಹೀಂದ್ರಾ ಈಗಾಗಲೇ SUVಯ ಬಾಹ್ಯ ವಿನ್ಯಾಸವನ್ನು ಅಧಿಕೃತವಾಗಿ ಬಹಿರಂಗಪಡಿಸಿದೆ. SUV ಕಂಪನಿಯು ಬಿಡುಗಡೆ ಮಾಡಿದ ಚಿತ್ರಗಳಲ್ಲಿ ಪ್ರಸ್ತುತ ಇರುವ ಸ್ಕಾರ್ಪಿಯೋಗಿಂತ ಹೆಚ್ಚು ಆಕರ್ಷಣೀಯವಾಗಿದೆ. ಹೊಸ ಸ್ಕಾರ್ಪಿಯೋ-ಎನ್ ಬಿಡುಗಡೆಯು ಹತ್ತಿರವಾಗುತ್ತಿದ್ದಂತೆ ಡಿಜಿಟಲ್ ಕಲಾವಿದರು SUV ಗಾಗಿ ಕೆಲವು ಆಸಕ್ತಿದಾಯಕ ಪರಿಕಲ್ಪನೆಯ ಕಾರನ್ನು ಬಿಡುಗಡೆ ಮಾಡುತ್ತಿದ್ದಾರೆ. ಇತ್ತೀಚೆಗೆ ಡಿಜಿಟಲ್ ಆರ್ಟಿಸ್ಟ್ ಜೆನ್-ಎಕ್ಸ್ ಡಿಸೈನ್ಸ್ ಡಿಜಿಟಲ್ ರೆಂಡರ್ ಮಾಡಿದ ಸ್ಕಾರ್ಪಿಯೋ-ಎನ್ ‘ಗೋಲ್ಡ್ ಎಡಿಷನ್’ ಅನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕಾರು ಖರೀದಿಸುತ್ತಿದ್ದೀರಾ? ಕಡಿಮೆ ಬೆಲೆಗೆ ಲಭ್ಯವಾಗುವ 10 ಕಾರುಗಳು ಇಲ್ಲಿವೆ ನೋಡಿ

Gen-x ಡಿಸೈನ್ಸ್ ವಿನ್ಯಾಸಗೊಳಿಸಿದ ಮಹೀಂದ್ರಾ ಸ್ಕಾರ್ಪಿಯೋ-ಎನ್ ‘ಗೋಲ್ಡ್ ಎಡಿಷನ್’ ಪರಿಕಲ್ಪನೆಯ ಮಾದರಿಯು ಕೊಂಚ XUV700 ಗೋಲ್ಡ್ ಆವೃತ್ತಿಯ ಮಾದರಿಯಂತೆ ಹೋಲುತ್ತದೆ. ಇದನ್ನು ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಮತ್ತು ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತ ಸುಮಿತ್ ಆಂಟಿಲ್‌ಗಾಗಿ ಸಿದ್ಧಪಡಿಸಲಾಗಿದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೊ-ಎನ್  ಸ್ಕಾರ್ಪಿಯೊ-ಜೆನ್ ಮಾದರಿಗಿಂತ ದುಬಾರಿಯಾಗಿದೆ. ಪ್ರಸ್ತುತ ಮಹೀಂದ್ರಾ ಸ್ಕಾರ್ಪಿಯೊದ ದೆಹಲಿ ಎಕ್ಸ್ ಶೋ ರೂಂ ಬೆಲೆ 13.54 ಲಕ್ಷದಿಂದ 18.62 ಲಕ್ಷ ರೂ. ಆಗಿದೆ. ಸ್ಕಾರ್ಪಿಯೊ-ಜೆನ್ ಮಾದರಿಯ ಕಾರು ಸ್ಥಗಿತಗೊಳಿಸಲಾಗುವುದಿಲ್ಲ ಮತ್ತು ಸ್ಕಾರ್ಪಿಯೋ ಕ್ಲಾಸಿಕ್ ಆಗಿ ಮಾರಾಟದಲ್ಲಿ ಮುಂದುವರಿಯುತ್ತದೆ ಎಂದು ಮಹೀಂದ್ರಾ ಕಂಪನಿ ತಿಳಿಸಿದೆ.

ಇದನ್ನೂ ಓದಿ: Honda U-go: ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಸ್ಕೂಟರ್​ ಪರಿಚಯಿಸಲಿದೆ ಹೋಂಡಾ

ಹೇಗಿದೆ ಫೀಚರ್ಸ್?

ಮಹೀಂದ್ರ ಸ್ಕಾರ್ಪಿಯೊ ಗೋಲ್ಡ್ ಆವೃತ್ತಿಯ ಪರಿಕಲ್ಪನೆಯ ಮಾದರಿಯು ಮುಂಭಾಗದ ಮೇಲ್ಭಾಗದಲ್ಲಿ ಗೋಲ್ಡನ್ ಹೈಲೈಟ್‌ಗಳು ಹೊಂದಿದ್ದು, ಹೆಡ್‌ಲೈಟ್‌ಗಳಿಗೂ ಅದೇ ಬಣ್ಣದ ಹೈಲೈಟ್​ಗಳನ್ನು ನೀಡಲಾಗಿದೆ. ಅಲ್ಲದೆ ಕಿಟಕಿಗಳ ಸುತ್ತಲೂ ಗೋಲ್ಡನ್ ಟ್ರಿಮ್‌ಗಳನ್ನು ಹೊಂದಿದೆ. ಡೋರ್ ಹ್ಯಾಂಡಲ್‌ಗಳಿಗೂ ಗೋಲ್ಡನ್ ಫಿನಿಶ್ ನೀಡಲಾಗಿದೆ. ಕಾರು ಸಂಪೂರ್ಣ ಹಸಿರು ಬಣ್ಣದಿಂದ ಕೂಡಿದ್ದು, ಗೋಲ್ಡನ್ ಅಂಶಗಳನ್ನು ಎದ್ದು ಕಾಣುವಂತೆ ಮಾಡುತ್ತಿದೆ.

ಇದನ್ನೂ ಓದಿ: CSR 762: ಜಬರ್​ದಸ್ತ್ ಬೈಕ್, 110 ಕಿ.ಮೀ ಮೈಲೇಜ್: ಸಿಗಲಿದೆ 40 ಸಾವಿರ ರೂ. ಸಬ್ಸಿಡಿ..!

ಡಿಜಿಟಲ್ ಮಾದರಿಯು ಮುಂಭಾಗದ ಗ್ರಿಲ್‌ನಲ್ಲಿ ಬ್ಲ್ಯಾಕ್ಡ್-ಔಟ್ ಸ್ಲ್ಯಾಟ್‌ಗಳು ಮತ್ತು ಗೋಲ್ಡನ್ ಟ್ವಿನ್-ಪೀಕ್ಸ್ ಲೋಗೋವನ್ನು ಹೊಂದಿದೆ. ಬಂಪರ್​ಗಳು, ಸೈಡ್ ಕ್ಲಾಡಿಂಗ್, ವೀಲ್ ಆರ್ಚ್ ಕ್ಲಾಡಿಂಗ್, ಹೆಡ್‌ಲ್ಯಾಂಪ್‌ಗಳು, DRL, ಹಿಂಬದಿಯ ಲೈಟ್​ಗಳು, ಕಾರಿನ ಮೇಲ್ಭಾಗದಲ್ಲಿನ ಪಟ್ಟಿಗಳು, ಮಿಶ್ರಲೋಹದ ಚಕ್ರಗಳು ಮತ್ತು ಇತರ ವೈಶಿಷ್ಟ್ಯಗಳು ಮೊದಲಿನಂತೆಯೇ ಇದೆ. ಇದರಲ್ಲಿ ಹೆಚ್ಚಿನ ಬದಲಾವಣೆಗಳು ಇಲ್ಲದಿದ್ದರೂ ಹೆಚ್ಚು ಆಕರ್ಷಕ ನೋಟವನ್ನು ನೀಡುತ್ತದೆ.

ಮಹೀಂದ್ರಾ ಸ್ಕಾರ್ಪಿಯೊ-ಎನ್ ಭಾರತೀಯ ಮಾರುಕಟ್ಟೆಯಲ್ಲಿ 2.0 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮತ್ತು 2.2 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್​ನೊಂದಿಗೆ ಲಭ್ಯವಿರುತ್ತದೆ. ಟ್ರಾನ್ಸ್ಮಿಷನ್ ಆಯ್ಕೆಗಳು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಸ್ವಯಂಚಾಲಿತ ಗೇರ್ ಬಾಕ್ಸ್ ಅನ್ನು ಒಳಗೊಂಡಿರುತ್ತದೆ. SUV ಕೆಲವು ಉನ್ನತ ರೂಪಾಂತರಗಳಲ್ಲಿ 4×4 ಆಯ್ಕೆಯನ್ನು ಸಹ ಪಡೆಯುತ್ತದೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:29 pm, Sun, 12 June 22