Pulsar 250F: ಹೊಸ ಬಜಾಜ್ ಪಲ್ಸರ್ 250F: ಏನಿದರ ವಿಶೇಷತೆ, ಬೆಲೆ ಎಷ್ಟು ಗೊತ್ತಾ?

Pulsar 250F Price: ಬಜಾಜ್ ಆಟೋಮೊಬೈಲ್ಸ್​ ಮೂಲಗಳ ಮಾಹಿತಿ ಪ್ರಕಾರ, ಹೊಸ ಪಲ್ಸರ್ 250ಎಫ್ 250 ಸಿಸಿ ಸಿಂಗಲ್ ಸಿಲಿಂಡರ್ ಮಿಲ್ ಎಂಜಿನ್ ಅನ್ನು ಹೊಂದಿರಲಿದೆ.

Pulsar 250F: ಹೊಸ ಬಜಾಜ್ ಪಲ್ಸರ್ 250F: ಏನಿದರ ವಿಶೇಷತೆ, ಬೆಲೆ ಎಷ್ಟು ಗೊತ್ತಾ?
Pulsar 250F
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jul 30, 2021 | 4:51 PM

ದೇಶದ ಪ್ರಮುಖ ವಾಹನ ಉತ್ಪದಾನಾ ಕಂಪೆನಿ ಬಜಾಜ್ ತನ್ನ ನೂತನ ಬೈಕ್ ಪಲ್ಸರ್ 250 ಎಫ್ ( Bajaj Pulsar 250F) ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಹೊಸ ಮೋಟಾರ್​ ಸೈಕಲ್​ನ ಫೋಟೋಗಳು ಲೀಕ್ ಆಗಿದ್ದು, ಅದರಂತೆ ನೂತನ ಬೈಕ್​ನಲ್ಲಿ ಸೆಮಿ ಫೇರ್ಡ್ ವಿನ್ಯಾಸ ಕಾಣಬಹುದು. ಹಾಗೆಯೇ ಇದರಲ್ಲಿ ಎಲ್ಇಡಿ ಲೈಟ್​ಗಳನ್ನು ನೀಡಿರುವುದು ಕೂಡ ಕಂಡು ಬರುತ್ತದೆ.

ಮುಂಭಾಗದಲ್ಲಿ ಸಿಂಗಲ್ ಪ್ರೊಜೆಕ್ಟರ್ ಫ್ರಂಟ್ ಹೆಡ್ ಲ್ಯಾಂಪ್ ಇರಲಿದ್ದು, ಇದು ಅತ್ಯಂತ ತೀಕ್ಷ್ಣವಾದ LED DRL ಗಳನ್ನು ಹೊಂದಿರಲಿದೆ. ಅದೇ ರೀತಿ ಈ ಬೈಕಿಗೆ ದೊಡ್ಡ ವಿಂಡ್‌ಸ್ಕ್ರೀನ್ ನೀಡಲಾಗಿದೆ. ಅಂದರೆ ದೂರ ಪ್ರಯಾಣ ಹಾಗೂ ಹೆದ್ದಾರಿಗಳಲ್ಲಿನ ರೈಡ್​ಗೆ ತಕ್ಕಂತೆ ಪಲ್ಸರ್ 250 ಎಫ್​ ಅನ್ನು ವಿನ್ಯಾಸಗೊಳಿಸಲಾಗಿದೆ.

ಇನ್ನು ಈ ಹಿಂದಿನ ಪಲ್ಸರ್ ಮಾಡೆಲ್​ಗಳಿಗೆ ಹೋಲಿಸಿದರೆ, ಹೊಸ ಪಲ್ಸರ್​ನಲ್ಲಿ ರಿಯರ್ ವ್ಯೂ ಮಿರರ್ ವಿನ್ಯಾಸ ಕೂಡ ಬದಲಾಗಿದೆ. ಪ್ರಸ್ತುತ ಪ್ರೀಮಿಯಂ ಮಾಡೆಲ್​ಗೆ ಹೋಲಿಸಿದರೆ, ಹೊಸ ಮಾದರಿಯ ಪಲ್ಸರ್ ಸ್ವಲ್ಪ ದೊಡ್ಡದಾಗಿರಲಿದೆ. ಹಾಗೆಯೇ ಇದನ್ನು ಸುಲಭವಾಗಿ ನಿಯಂತ್ರಿಸಲ್ಪಡುವಂತೆ ಹಾಗೂ ಸುಲಭವಾಗಿ ಬೈಕ್ ಮೇಲೆ ಹಿಡಿತ ಸಾಧಿಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ.

Bajaj Pulsar 250F ವಿನ್ಯಾಸ-ವೈಶಿಷ್ಟ್ಯ: ಬಜಾಜ್ ಆಟೋಮೊಬೈಲ್ಸ್​ ಮೂಲಗಳ ಮಾಹಿತಿ ಪ್ರಕಾರ, ಹೊಸ ಪಲ್ಸರ್ 250ಎಫ್ 250 ಸಿಸಿ ಸಿಂಗಲ್ ಸಿಲಿಂಡರ್ ಮಿಲ್ ಎಂಜಿನ್ ಅನ್ನು ಹೊಂದಿರಲಿದೆ. ಜೊತೆಗೆ ಆಯಿಲ್ ಕೂಲರ್‌ ಅನ್ನು ಕೂಡ ನೀಡಲಾಗಿದೆ. 220F ಮಾದರಿಯು ಪ್ರಸ್ತುತ ಪವರ್‌ಟ್ರೇನ್‌ಗಿಂತ ಹೆಚ್ಚು ಶಕ್ತಿಶಾಲಿಯಾಗಿರಲಿದೆ. ವಿವಿಎ ಅಂದರೆ ವೇರಿಯಬಲ್ ವಾಲ್ವ್ ಆಕ್ಟಿವೇಷನ್ ಟೆಕ್ನಾಲಜಿಯನ್ನು ಎಂಜಿನ್‌ನಲ್ಲಿ ಬಳಸಲಾಗಿದೆ. ಇದರಿಂದ ಈ ಬೈಕ್​ ಹೆಚ್ಚಿನ ಮೈಲೇಜ್ ನೀಡಲಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಯಮಹಾ YZF- R15 V3.0 ಬೈಕ್​ನಲ್ಲೂ ಇದೇ ತಂತ್ರಜ್ಞಾನ ಅಳವಡಿಸಲಾಗಿದೆ. ಇದೀಗ ಬಜಾಬ್ ಪಲ್ಸರ್ 250ಎಫ್ ಕೂಡ ಮೈಲೇಜ್ ಹಾಗೂ ಪವರ್​ಗೆ ಹೆಚ್ಚಿನ ಒತ್ತು ನೀಡಿರುವುದು ವಿಶೇಷ.

ಇದರ ಹೊರತಾಗಿ Bajaj Pulsar 250F ಬೈಕ್​ನ ಹೆಚ್ಚಿನ ಮಾಹಿತಿ ಹಾಗೂ ಬಿಡುಗಡೆ ದಿನಾಂಕವನ್ನು ಕಂಪೆನಿಯು ಇದುವರೆಗೆ ಬಹಿರಂಗಪಡಿಸಿಲ್ಲ. ಅದಾಗ್ಯೂ ಆಟೋಮೊಬೈಲ್ ಎಕ್ಸ್​ಪರ್ಟ್​​ಗಳ ಪ್ರಕಾರ, ಹೊಸ ಪಲ್ಸರ್ ಆಗಸ್ಟ್ ತಿಂಗಳಾಂತ್ಯ ಅಥವಾ ಸೆಪ್ಟೆಂಬರ್​ನಲ್ಲಿ ಬಿಡುಗಡೆಯಾಗಲಿದೆ. ಹಾಗೆಯೇ ಈ ಬೈಕ್​ ಬೆಲೆಯು​ 1.40 ಲಕ್ಷ ರೂ. ಇರಲಿದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ಪಲ್ಸರ್ 220 ಮೂಲಕ ಯುವಕರನ್ನು ಸೆಳೆದಿರುವ ಬಜಾಜ್ ಇದೀಗ ಹೊಸ ವಿನ್ಯಾಸದೊಂದಿಗೆ ಪಲ್ಸರ್ 250ಎಫ್​ನೊಂದಿಗೆ ಮತ್ತೊಮ್ಮೆ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ತನ್ನ ಪಾರುಪತ್ಯ ಸಾಧಿಸುವ ವಿಶ್ವಾಸದಲ್ಲಿದೆ.

ಇದನ್ನೂ ಓದಿ: ಮದ್ಯಪಾನ ಮಾಡಿ ಶತಕ ಸಿಡಿಸಿದ್ದ ಗ್ಯಾರಿ ಸೋಬರ್ಸ್​..!

ಇದನ್ನೂ ಓದಿ: ಸೂರ್ಯಕುಮಾರ್ ಯಾದವ್​ಗೆ ಅವಕಾಶ ಕೈತಪ್ಪುವ ಆತಂಕ

(Bajaj Auto readies Pulsar 250F for launched: Pulsar 250F Price)

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್