NT1100 tourer: ಶೀಘ್ರದಲ್ಲೇ 1100 ಸಿಸಿ ಬೈಕ್ ಬಿಡುಗಡೆ ಮಾಡಲಿದೆ ಹೋಂಡಾ..!
Honda NT1100 tourer: ಹೋಂಡಾ NT1100 ಬೆಲೆಯ ಬಗ್ಗೆ ಹೇಳುವುದಾದರೆ, ಜಾಗತಿಕ ಮಾರುಕಟ್ಟೆಯಲ್ಲಿ ಇದರ ಬೆಲೆ 12.20 ಲಕ್ಷದಿಂದ 13.22 ಲಕ್ಷದ ನಡುವೆ ಇದೆ.
ಹೋಂಡಾ ಶೀಘ್ರದಲ್ಲೇ 1100 ಸಿಸಿ ಎಂಜಿನ್ ಹೊಂದಿರುವ ಶಕ್ತಿಶಾಲಿ ಬೈಕ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಇದಕ್ಕಾಗಿ ಕಂಪನಿಯು ತನ್ನ NT1100 ಸ್ಪೋರ್ಟ್ಸ್ ಟೂರರ್‌ನ ಪೇಟೆಂಟ್‌ಗಾಗಿ ನೋಂದಣಿಯನ್ನು ಸಲ್ಲಿಸಿದೆ. NT1100 ಟೂರರ್ ಬೈಕ್ ಅಂತಾರಾಷ್ಟ್ರೀಯವಾಗಿ ಜನಪ್ರಿಯವಾಗಿರುವ CRF1000L ಆಫ್ರಿಕಾ ಟ್ವಿನ್ ಮೋಟಾರ್‌ಸೈಕಲ್ ಅನ್ನು ಆಧರಿಸಿದೆ. ಈ ಬೈಕ್ನಲ್ಲಿ DCT ಸ್ವಯಂಚಾಲಿತ ಗೇರ್‌ಬಾಕ್ಸ್ ಮತ್ತು ಎಲೆಕ್ಟ್ರಾನಿಕ್ ಸುರಕ್ಷತಾ ಉಪಕರಣಗಳು ಮತ್ತು ದೀರ್ಘ ಶ್ರೇಣಿಯ ವೈಶಿಷ್ಟ್ಯಗಳಿವೆ.
ಈ ಬೈಕಿನ ಎಂಜಿನ್ ಬಗ್ಗೆ ಹೇಳುವುದಾದರೆ, ಇದು 1,084 ಸಿಸಿ, ಪೆರಲಲ್-ಟ್ವಿನ್ ಎಂಜಿನ್ ಹೊಂದಿದೆ. ಈ ಪವರ್‌ಟ್ರೇನ್ 7,500rpm ನಲ್ಲಿ 102hp ಯ ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ. ಹಾಗೆಯೇ 104Nm ನ ಗರಿಷ್ಠ ಟಾರ್ಕ್ ಅನ್ನು 6,250rpm ನಲ್ಲಿ ದಾಖಲಿಸಲಾಗಿದೆ. ಇದು 6-ಸ್ಪೀಡ್ DCT ಅಥವಾ 6-ಸ್ಪೀಡ್ ಮ್ಯಾನುವಲ್ನಲ್ಲಿ ಖರೀದಿಗೆ ಲಭ್ಯವಿರಲಿದೆ.
ಹೋಂಡಾ ಈ ಟೂರಿಂಗ್ ಬೈಕ್ ಅನ್ನು ಹೋಂಡಾದ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್ (HSTC), ವೀಲಿ ಕಂಟ್ರೋಲ್, ಮೂರು ಡೀಫಾಲ್ಟ್ ರೈಡಿಂಗ್ ಮೋಡ್‌ಗಳು (ಅರ್ಬನ್, ರೈನ್ ಮತ್ತು ಟೂರ್) ಜೊತೆಗೆ ಎರಡು ರೈಡರ್ ಅಸಿಸ್ಟ್ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಲಿದೆ. ಇದಲ್ಲದೆ, ಇದು ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಬ್ಲೂಟೂತ್‌ನೊಂದಿಗೆ 6.5-ಇಂಚಿನ ಟಿಎಫ್‌ಟಿ ಟಚ್ ಪ್ಯಾನೆಲ್ ಅನ್ನು ಹೊಂದಿರಲಿದೆ.
ಹೋಂಡಾ NT1100 ಬೆಲೆಯ ಬಗ್ಗೆ ಹೇಳುವುದಾದರೆ, ಜಾಗತಿಕ ಮಾರುಕಟ್ಟೆಯಲ್ಲಿ ಇದರ ಬೆಲೆ 12.20 ಲಕ್ಷದಿಂದ 13.22 ಲಕ್ಷದ ನಡುವೆ ಇದೆ. ಹೀಗಾಗಿ ಹೋಂಡಾ NT1100 ಭಾರತೀಯ ಮಾರುಕಟ್ಟೆಯಲ್ಲೂ ಈ ಬೆಲೆಯ ಅಸುಪಾಸಿನಲ್ಲೇ ಬಿಡುಗಡೆಯಾಗಲಿದೆ. ಹೋಂಡಾ NT1100 ಕವಾಸಕಿ 1000SX ಮತ್ತು ಟ್ರಯಂಫ್ ಟೈಗರ್ 900 GT ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?
(Honda India files patent for NT1100 tourer)