AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Toll Plaza Fee: ಒಂದು ವೇಳೆ ಹೀಗಾದಲ್ಲಿ ಟೋಲ್ ಫೀ ಕಟ್ಟಬೇಕಿಲ್ಲ ಅಂತಿದೆ ಹೆದ್ದಾರಿ ಪ್ರಾಧಿಕಾರದ ಸೂಚನೆ

ಒಂದು ವೇಳೆ ಹೀಗಾದಲ್ಲಿ ಟೋಲ್ ಪ್ಲಾಜಾಗಳಲ್ಲಿ ಶುಲ್ಕ ಪಾವತಿಸದೆ ಮುಂದೆ ಸಾಗುವ ಅವಕಾಶ NHAI ಮಾರ್ಗದರ್ಶಿ ಸೂತ್ರದಲ್ಲಿ ಸೂಚಿಸಲಾಗಿದೆ. ಅದು ಹೇಗೆ ಎಂಬುದರ ವಿವರ ಇಲ್ಲಿದೆ.

Toll Plaza Fee: ಒಂದು ವೇಳೆ ಹೀಗಾದಲ್ಲಿ ಟೋಲ್ ಫೀ ಕಟ್ಟಬೇಕಿಲ್ಲ ಅಂತಿದೆ ಹೆದ್ದಾರಿ ಪ್ರಾಧಿಕಾರದ ಸೂಚನೆ
ಸಾಂದರ್ಭಿಕ ಚಿತ್ರ
Srinivas Mata
| Edited By: |

Updated on:May 27, 2021 | 2:02 PM

Share

ಏನ್​ ಫಾಸ್​ಟ್ಯಾಗ್ ಬಂದರೇನು ಈ ಹೈವೇ ಟೋಲ್ ಪ್ಲಾಜಾಗಳಲ್ಲಿ ನಿಲ್ಲೋದು ತಪ್ಪಲಿಲ್ಲ. ಕೊಡೋ ದುಡ್ಡನ್ನ ಕೊಟ್ಟು, ಹೀಗೆ ರಸ್ತೆಯಲ್ಲಿ ಸಮಯ ಕಳೆಯಬೇಕಾಗಿದೆ ಎಂದು ಬೇಸರ ಮಾಡಿಕೊಳ್ಳುತ್ತಿದ್ದಲ್ಲಿ ನಿಮಗಾಗಿಯೇ ಆಸಕ್ತಿಕರ ಮಾಹಿತಿ ಇಲ್ಲಿದೆ. ಟೋಲ್ ಪ್ಲಾಜಾಗಳಿಗೆ ಸಂಬಂಧಿಸಿದಂತೆ ನ್ಯಾಷನಲ್ ಹೈವೇಸ್ ಅಥಾರಿಟಿ ಆಫ್ ಇಂಡಿಯಾ (NHAI)ಯಿಂದ ಹೊಸ ಮಾರ್ಗದರ್ಶಿ ಸೂತ್ರಗಳನ್ನು ವಿತರಣೆ ಮಾಡಲಾಗಿದೆ. ಆ ಸೂಚನೆಯಲ್ಲಿ ಇರುವ ಪ್ರಕಾರ, ಟೋಲ್ ಪ್ಲಾಜಾಗಳಲ್ಲಿ ವಾಹನಗಳ ಸರದಿ 100 ಮೀಟರ್​ಗಳನ್ನು (328.084 ಅಡಿಗಳು) ದಾಟುವಂತಿಲ್ಲ. ಕಾಯುವ ಅವಧಿ ಕಡಿಮೆ ಮಾಡಬೇಕು ಎಂಬ ಕಾರಣಕ್ಕೆ ಈ ಆದೇಶ ಬಂದಿದೆ. ಇದೇ ಕಾರಣಕ್ಕೆ NHAI ಕೂಡ ಟೋಲ್ ಫೀ ಸಂಗ್ರಹಿಸುವ ಅವಧಿ ಒಂದು ವಾಹನಕ್ಕೆ ಗರಿಷ್ಠ 10 ಸೆಕೆಂಡ್​ಗೆ ಮೊಟಕುಗೊಳಿಸುವ ಉದ್ದೇಶ ಇರಿಸಿಕೊಂಡಿದೆ. ಬಹಳ ದಟ್ಟಣೆ ಇರುವಂಥ ಸಮಯದಲ್ಲೂ ಈ 10 ಸೆಕೆಂಡ್​ ಗುರಿ ಮೀರಬಾರದು ಎಂದುಕೊಂಡು ಪ್ರಯತ್ನಿಸಲಾಗುತ್ತಿದೆ.

ಆದರೆ, ವಾಸ್ತವದಲ್ಲಿ 10 ಸೆಕೆಂಡ್​ಗಿಂತ ಹೆಚ್ಚಿನ ಸಮಯ ಆಗುತ್ತಿದೆ. ಅದರ ಪರಿಣಾಮವಾಗಿ 100 ಮೀಟರ್​ಗಳನ್ನು ದಾಟಿ ವಾಹನಗಳ ಸರದಿ ನಿಲ್ಲುತ್ತದೆ. ಹೀಗೆ ನಿಂತಲ್ಲಿ ಏನು ಮಾಡಲಾಗುತ್ತದೆ? ಹೆದ್ದಾರಿ ಪ್ರಾಧಿಕಾರ ಹೇಳುವಂತೆ ಟೋಲ್ ಶುಲ್ಕವನ್ನು ಪಾವತಿಸದೆ ಮುಂದಕ್ಕೆ ಸಾಗಬಹುದು. ಹೌದು, ತಮಾಷೆ ಮಾಡುತ್ತಿಲ್ಲ. NHAIನಿಂದ ಬಂದಿರುವ ಹೊಸ ಮಾರ್ಗದರ್ಶಿ ಸೂತ್ರದ ಪ್ರಕಾರ, 100 ಮೀಟರ್​ಗಳನ್ನು ದಾಟಿ, ವಾಹನಗಳನ್ನು ಸರದಿಯಲ್ಲಿ ನಿಂತರೆ, ಸಾಲಿನ ಮುಂಭಾಗದಲ್ಲಿ ಇರುವುದು ಯಾವುದೇ ಶುಲ್ಕ ಪಾವತಿಸದೆ ತೆರಳಬಹುದು. ಈ ಮಾರ್ಗದರ್ಶಿ ಸೂತ್ರ ಅಳವಡಿಸಿಕೊಳ್ಳುವುದಾದರೂ ಹೇಗೆ ಎಂಬ ಪ್ರಶ್ನೆ ಬರುವುದು ಸಹಜ. ಟೋಲ್​ ಗೇಟ್​ನಿಂದ 100 ಮೀಟರ್ ದೂರದಲ್ಲಿ ಒಂದು ಹಳದಿ ಪಟ್ಟಿಯನ್ನು ಬಳಿಯಲಾಗುತ್ತದೆ.

ಭಾರತದಾದ್ಯಂತ ಇರುವ ಟೋಲ್ ಪ್ಲಾಜಾದ ಪ್ರತಿ ಬೂತ್ ಬಳಿ ಇಂಥದ್ದೊಂದು ಹಳದಿ ಪಟ್ಟಿ 100 ಮೀಟರ್ ದೂರದಲ್ಲಿ ಇರುತ್ತದೆ. ಅಂದ ಹಾಗೆ ಸದ್ಯಕ್ಕೆ ಭಾರತದ ನಾನಾ ಭಾಗಗಳಲ್ಲಿ ಸ್ಥಳೀಯವಾಗಿ ಕೊರೊನಾ ಲಾಕ್​ಡೌನ್​ ಇರುವುದರಿಂದ ಟೋಲ್​ ಪ್ಲಾಜಾಗಳಲ್ಲಿ ಪ್ರಯಾಣಿಸುವುದಕ್ಕೆ ಅವಕಾಶ ಇಲ್ಲ. ಆದರೆ ಫಾಸ್​ಟ್ಯಾಗ್ ಜಾರಿಯಾದ ಮೇಲೆ ಟೋಲ್​ ಪ್ಲಾಜಾಗಳಲ್ಲಿ ಸಮಯ ಕಳೆಯುವುದು ಕಡಿಮೆ ಆಗಿದೆ. ಆದರೆ ಈಗಲೂ ಆ ಅವಧಿ ಕಡಿಮೆ ಆಗಬೇಕಾದ ಜರೂರತ್ತಿದೆ. ಈಗಿನ ಹೊಸ ನಿಯಮಾವಳಿಯಿಂದ ಟೋಲ್​ ಬೂತ್​ಗಳಲ್ಲಿ ವಾಹನಗಳ ಸಂಚಾರ ವೇಗ ಪಡೆದುಕೊಳ್ಳಬಹುದು ಎಂಬ ನಂಬಿಕೆ ಹಲವರಲ್ಲಿದೆ.

ಇದನ್ನೂ ಓದಿ: FASTag ಟೋಲ್​ಗಳಲ್ಲಿ ಫಾಸ್ಟ್​​ಟ್ಯಾಗ್​ ಕಡ್ಡಾಯ.. ಇಲ್ಲದಿದ್ರೆ ಕಟ್ಟಬೇಕಾಗುತ್ತೆ ದುಬಾರಿ ಹಣ

(If line in toll plaza crosses 100 metres, front line vehicles need not to pay fee, according to National Highway Authority Of India (NHAI))

Published On - 12:45 pm, Thu, 27 May 21

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್