ಕೊಟಕ್ ಮಹೀಂದ್ರಾ ಬ್ಯಾಂಕ್ನಿಂದ ಪೇ ಯುವರ್ ಕಾಂಟ್ಯಾಕ್ಟ್ ಎಂಬ ಫೀಚರ್ ಅನ್ನು ತನ್ನ ಮೊಬೈಲ್ ಬ್ಯಾಂಕಿಂಗ್ ಆ್ಯಪ್ನಲ್ಲಿ ಪರಿಚಯಿಸಲಾಗಿದೆ. ಈ ಮೂಲಕವಾಗಿ ಗ್ರಾಹಕರು ತಮ್ಮ ಕಾಂಟ್ಯಾಕ್ಟ್ಗಳಿಗೆ ಹಣ ಕಳುಹಿಸಬಹುದು ಮತ್ತು ಪಾವತಿ ಸಹ ಮಾಡಬಹುದು. ಕೇವಲ ಮೊಬೈಲ್ ನಂಬರ್ ಹಾಕಿದರೆ ಸಾಕು. ಈ ವಹಿವಾಟನ್ನು ಮೊಬೈಲ್ ಸಂಖ್ಯೆಯಿಂದ ಮಾತ್ರ ಮಾಡುವುದಕ್ಕೆ ಸಾಧ್ಯ. ಬ್ಯಾಂಕ್ನಲ್ಲಿನ ಖಾತೆ ಸಂಖ್ಯೆ, ಐಎಫ್ಎಸ್ಸಿ ಕೋಡ್ ಅಥವಾ ಯುಪಿಐ ಐ.ಡಿ. ಇಂಥದ್ದು ಯಾವುದರ ಅಗತ್ಯವೂ ಇಲ್ಲದೆ ಹಣವನ್ನು ಕಳುಹಿಸಬಹುದು ಹಾಗೂ ಪಾವತಿಯನ್ನು ಮಾಡಬಹುದು. ಗ್ರಾಹಕರಾದವರು ತಮ್ಮ ಕಾಂಟ್ಯಾಕ್ಟ್ನಲ್ಲಿ ಸೇವ್ ಆಗಿರುವ ಮೊಬೈಲ್ ಫೋನ್ ಸಂಖ್ಯೆಯನ್ನು ಆರಿಸಿಕೊಂಡರೆ ಸಾಕು ಅಥವಾ ಆ ಸಂಖ್ಯೆಯನ್ನು ನಮೂದಿಸಿದರೂ ಆಯಿತು. ಇನ್ನು ಯುಪಿಐ ಆ್ಯಪ್ ಅಥವಾ ಬೆನಿಫಿಷಿಯರಿ (ಫಲಾನುಭವಿ) ಖಾತೆಗೆ ಜೋಡಣೆಯಾದ ಕೆಎಂಬಿಎಲ್ ಖಾತೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಪೇ ಯುವರ್ ಕಾಂಟ್ಯಾಕ್ಟ್ ಫೀಚರ್ ಎಂಬುದು ಎಲ್ಲ ಪೇಮೆಂಟ್ ಆ್ಯಪ್ಗಳಲ್ಲೂ ಕಾರ್ಯ ನಿರ್ವಹಿಸುತ್ತದೆ. ಆಂಡ್ರಾಯಿಡ್ ಹಾಗೂ ಐಒಎಸ್ ಎರಡರಲ್ಲೂ ಲಭ್ಯವಿದೆ.
ಕೊಟಕ್ ಮಹೀಂದ್ರಾ ಬ್ಯಾಂಕ್ ಮುಖ್ಯ ಡಿಜಿಟಲ್ ಅಧಿಕಾರಿ ಮತ್ತು ಅಧ್ಯಕ್ಷ ದೀಪಕ್ ಶರ್ಮಾ ಮಾತನಾಡಿ, ಕೊಟಕ್ ಮಹೀಂದ್ರಾ ಬ್ಯಾಂಕ್ ಗ್ರಾಹಕರು ಈಗ ಸ್ನೇಹಿತರಿಗೆ, ಮನೆಯ ಸಹಾಯಕರಿಗೆ, ನೆರೆಹೊರೆಯ ಮಳಿಗೆಗಳಿಗೆ ಮುಂತಾದವರಿಗೆ ಮೊಬೈಲ್ ನಂಬರ್ ಮೂಲಕವೇ ಪೇಮೆಂಟ್ ಮಾಡಬಹುದು. ಇನ್ನೂ ಮುಂದುವರಿದು ಯಾವುದೇ ಯುಪಿಐ ಐ.ಡಿ.ಗೆ. ಕೊಟಕ್ ಮಹೀಂದ್ರಾ ಬ್ಯಾಂಕ್ ಆ್ಯಪ್ ಮೂಲಕ ಸುರಕ್ಷಿತವಾಗಿ ಪಾವತಿ ಮಾಡಬಹುದು. ಗ್ರಾಹಕರು ಈಗ ಹಲವು ಪೇಮೆಂಟ್ ಆ್ಯಪ್ಗಳನ್ನು ತಮ್ಮ ಪೋನ್ಗೆ ಡೌನ್ಲೋಡ್ ಮಾಡಿಕೊಳ್ಳುವ ಬಗ್ಗೆ ಯೋಚಿಸುವ ಅಗತ್ಯ ಇಲ್ಲ ಎಂದಿದ್ದಾರೆ.
ಭಾರತೀಯ ಮಾರುಕಟ್ಟೆಯಲ್ಲಿ ಯುಪಿಐ ಬಲು ಜನಪ್ರಿಯವಾಗಿದೆ. ಯಾರೆಲ್ಲ ಭಾರತೀಯರ ಬಳಿ ಬ್ಯಾಂಕ್ ಖಾತೆ ಇದೆಯೋ ಅವರೆಲ್ಲರ ಹತ್ತಿರವೂ ಯುಪಿಐ ಐ.ಡಿ. ಇದೆ. ಪೇ ಯುವರ್ ಕಾಂಟ್ಯಾಕ್ಟ್ ಮೂಲಕವಾಗಿ ನಮ್ಮ ಗ್ರಾಹಕರು ಯಾವುದೇ ಪೇಮೆಂಟ್ ಅಪ್ಲಿಕೇಷನ್ಗಳಲ್ಲಿ ಮತ್ತು ಯಾವುದೇ ಖಾತೆಗೆ ಜೋಡಣೆಯಾದ ಯುಪಿಐಗೆ ಬೆನಿಫಿಷಿಯರಿ (ಫಲಾನುಭವಿ)ಯನ್ನು ಗುರುತಿಸಲು ಅನುಕೂಲ ಆಗುವಂತೆ ಮೊಬೈಲ್ ನಂಬರ್ ಮೂಲಕ ಹಣವನ್ನು ವರ್ಗಾವಣೆ ಮಾಡಬಹುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Tata Vehicles finance: ಕೊಟಕ್ ಮಹೀಂದ್ರಾ ಪ್ರೈಮ್ನಿಂದ ಟಾಟಾ ಮೋಟಾರ್ಸ್ ಪ್ರಯಾಣಿಕರ ವಾಹನದ ಮೇಲೆ ಸಾಲ ಸೌಲಭ್ಯ
(Kotak Mahindra Bank introduced pay your contact feature in mobile banking app)