ನೂತನ ರಾಯಲ್ ಎನ್​ಫೀಲ್ಡ್ ಕ್ಲಾಸಿಕ್ 350 ಬಿಡುಗಡೆ ದಿನಾಂಕ ಘೋಷಣೆ

royal enfield bullet: ನೂತನ ಕ್ಲಾಸಿಕ್ ಎನ್​ಫೀಲ್ಡ್​ ಈ ಹಿಂದಿನ ಸ್ಪೈ ಶಾಟ್‌ಗಳಿಗಿಂತ ತುಸು ವಿಭಿನ್ನವಾಗಿದೆ. ಇದಾಗ್ಯೂ ಹೊಸ ಕ್ಲಾಸಿಕ್ 350 ವಿನ್ಯಾಸ ಅದೇ ಮಾದರಿಯಲ್ಲಿದ್ದು, ಹಲವು ಬಣ್ಣಗಳಲ್ಲಿ ಲಭ್ಯವಿರಲಿದೆ.

ನೂತನ ರಾಯಲ್ ಎನ್​ಫೀಲ್ಡ್ ಕ್ಲಾಸಿಕ್ 350 ಬಿಡುಗಡೆ ದಿನಾಂಕ ಘೋಷಣೆ
royal enfield classic 350
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 25, 2021 | 9:50 PM

ಜನಪ್ರಿಯ ಮೋಟಾರ್ ಸೈಕಲ್ ರಾಯಲ್ ಎನ್​ಫೀಲ್ಡ್ ಕ್ಲಾಸಿಕ್ 350 (royal enfield classic 350) ಬೈಕ್​ನ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ಅದರಂತೆ ಸೆಪ್ಟೆಂಬರ್ 1, 2021 ರಂದು ರಾಯಲ್ ಎನ್​ಫೀಲ್ಡ್​ 350 ರಸ್ತೆಗಿಳಿಯಲಿದೆ. ಕ್ಲಾಸಿಕ್ ಶ್ರೇಣಿಯು ಒಂದು ದಶಕದಿಂದಲೂ ಭಾರತದ ಅತ್ಯುತ್ತಮ ಬ್ರ್ಯಾಂಡ್‌ ಮೌಲ್ಯವನ್ನು ಹೊಂದಿದ್ದು, ಕಂಪನಿಯ ಭವಿಷ್ಯಕ್ಕೆ ಹೊಸ ಮಾದರಿಯು ಬಹಳ ಮುಖ್ಯವಾಗಿದೆ. ಹೀಗಾಗಿ ನೂತನ ಕ್ಲಾಸಿಕ್ 350 ಅನ್ನು ಪರಿಚಯಿಸುತ್ತಿರುವುದಾಗಿ ಕಂಪೆನಿ ಹೇಳಿಕೊಂಡಿದೆ.

ನೂತನ ಕ್ಲಾಸಿಕ್ ಎನ್​ಫೀಲ್ಡ್​ ಈ ಹಿಂದಿನ ಸ್ಪೈ ಶಾಟ್‌ಗಳಿಗಿಂತ ತುಸು ವಿಭಿನ್ನವಾಗಿದೆ. ಇದಾಗ್ಯೂ ಹೊಸ ಕ್ಲಾಸಿಕ್ 350 ವಿನ್ಯಾಸ ಅದೇ ಮಾದರಿಯಲ್ಲಿದ್ದು, ಹಲವು ಬಣ್ಣಗಳಲ್ಲಿ ಲಭ್ಯವಿರಲಿದೆ. ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಅಲ್ಲೂ 349 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್‌ ಇದರಲ್ಲಿದ್ದು, ಇದು ಮೀಟಿಯೊರ್ ಪವರ್ ಹೊಂದಿರಲಿದೆ​. ಹಾಗೆಯೇ ಕ್ಲಾಸಿಕ್ 350 20 bhp ಹಾರ್ಸ್​ಪವರ್ ಮತ್ತು 27 Nm ಗರಿಷ್ಠ ಟಾರ್ಕ್ ಉತ್ಪಾದಿಸಲಿದೆ. ಇನ್ನು ಇದರಲ್ಲಿ 5-ಸ್ಪೀಡ್ ಗೇರ್ ಬಾಕ್ಸ್ ನೀಡಲಾಗಿದೆ. ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಅವಳಿ ಶಾಕ್ಸ್​ ಸಹ ಇದರಲ್ಲಿದೆ.

ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ವಿಶೇಷತೆಯೇನು? ಪ್ರಸ್ತುತ ಮಾಹಿತಿ ಪ್ರಕಾರ, ಈ ಬೈಕ್​ನಲ್ಲಿ ಡಿಸ್ಕ್ ಬ್ರೇಕ್ ಜೊತೆಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಇರಲಿದೆ ಎನ್ನಲಾಗಿದೆ. ಹಾಗೆಯೇ ಹಿಂಭಾಗದ ಡ್ರಮ್ ಬ್ರೇಕ್ ಆಯ್ಕೆಯು ಎಲ್ಲಾ ಮಾಡೆಲ್​ಗಳಲ್ಲೂ ಲಭ್ಯವಿರುವ ಸಾಧ್ಯತೆಯಿದೆ. 2021 ರ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ನಲ್ಲಿ ಇತರ ಪ್ರಮುಖ ವಿಶೇಷತೆಗಳೆಂದರೆ ಡಿಜಿಟಲ್ ಟ್ರಿಪ್ಮೀಟರ್, ಇಂಧನ ಗೇಜ್ ಮತ್ತು ಓಡೋಮೀಟರ್‌ನೊಂದಿಗೆ ನವೀಕರಿಸಿದ ಇನ್‌ಸ್ಟ್ರುಮೆಂಟ್ ಕನ್ಸೋಲ್ ಇರಲಿದೆ. ಈ ಮಾಡೆಲ್​ನಲ್ಲಿ ಮೀಟಿಯೊರ್ ಟ್ರಿಪ್ಪರ್ ನ್ಯಾವಿಗೇಷನ್ ಪಾಡ್ ಸಹ ಇರುವ ಸಾಧ್ಯತೆಯಿದೆ. ಇದು ಈ ಹಿಂದಿನ ಮಾಡೆಲ್​ಗೆ ಹೋಲಿಸಿದರೆ ಭಿನ್ನವಾಗಿರಬಹುದು. ಹಾಗೆಯೇ ನೂತನ ಎನ್​ಫೀಲ್ಡ್​ ಅನ್ನು ವೈಯುಕ್ತಿಕ ಬಣ್ಣಗಳ ಆಯ್ಕೆಗಳಲ್ಲಿ ನೀಡಲಿದ್ದಾರೆ ಎಂದು ವರದಿಯಾಗಿದೆ.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೆಲೆ ಎಷ್ಟು? ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಪ್ರಸ್ತುತ ರೂ 1.79 ಲಕ್ಷದಿಂದ ರೂ. 2.06 ಲಕ್ಷಕ್ಕೆ ಏರಿಕೆಯಾಗಿದೆ (ಎಕ್ಸ್ ಶೋರೂಂ ಬೆಲೆ). ಹೊಸ ತಲೆಮಾರಿನ ಮಾಡೆಲ್​ ಕೂಡ ಈ ಮೊತ್ತದ ಅಸುಪಾಸಿನಲ್ಲಿ ಖರೀದಿಗೆ ಲಭ್ಯವಿರುವ ನಿರೀಕ್ಷೆಯಿದೆ. ಅದಾಗ್ಯೂ ಟಾಪ್ ವೆರಿಯಂಟ್‌ ತಕ್ಕಂತೆ ಬೆಲೆಯಲ್ಲೂ ವ್ಯತ್ಯಾಸ ಕಂಡು ಬರಬಹುದು.

ಇದನ್ನೂ ಓದಿ: ಪೆಟ್ರೋಲ್, ಡಿಸೇಲ್ ಹಾಕಬೇಕಿಲ್ಲ, ಚಾರ್ಜ್​ ಕೂಡ ಮಾಡಬೇಕಿಲ್ಲ: ಇದು ಮಾರುತಿ ಸುಜುಕಿ ಹೊಸ ಕಾರು

ಇದನ್ನೂ ಓದಿ: Video: ಒಂದೇ ಒಂದು ಬೌನ್ಸರ್ ಎಸೆದು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ!

ಇದನ್ನೂ ಓದಿ: Crime News: ಅಶ್ಲೀಲ ವೀಡಿಯೋ ಕಳುಹಿಸುತ್ತಿದ್ದ ಆಂಟಿ ಅರೆಸ್ಟ್..!

(royal enfield classic 350 launch date revealed)

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್