Simple One: ಸಿಂಪಲ್ ಸ್ಕೂಟರ್ ಪರಿಚಯಿಸಿದ ಸಿಂಪಲ್ ಎನರ್ಜಿ: ಮೈಲೇಜ್ ಬರೋಬ್ಬರಿ 240 ಕಿ.ಮೀ
Simple One electric scooter: ಸಿಂಪಲ್ ಲೂಪ್ ಚಾರ್ಜರ್ನಲ್ಲಿ ಈ ಸ್ಕೂಟರ್ ಅನ್ನು ಕೇವಲ 60 ಸೆಕೆಂಡುಗಳ ಚಾರ್ಜ್ನಲ್ಲಿ 2.5 ಕಿ.ಮೀ ಕ್ರಮಿಸಬಹುದು. ಹಾಗೆಯೇ 30 ನಿಮಿಷಗಳ ಚಾರ್ಜ್ ಮಾಡಿದ್ರೆ 75 ಕಿ.ಮೀ ದೂರ ಚಲಿಸಬಹುದು.
ಬೆಂಗಳೂರು ಮೂಲದ ಸಿಂಪಲ್ ಎನರ್ಜಿ ಕಂಪೆನಿಯು ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಒಂಪಲ್ ಒನ್ ಅನ್ನು ಬಿಡುಗಡೆ ಮಾಡಿದೆ. ಅತ್ತ ಓಲಾ ಕಂಪೆನಿಯು ಎಸ್1 ಸ್ಕೂಟರ್ ಅನಾವರಣಗೊಳಿಸಿದ ಬೆನ್ನಲ್ಲೇ ಇತ್ತ ಸಿಂಪಲ್ ಒನ್ ಕೂಡ ಬಿಡುಗಡೆಯಾಗಿದೆ. ಕಂಪೆನಿಯು ಶೀಘ್ರದಲ್ಲೇ ಬೃಹತ್ ಚಾರ್ಜಿಂಗ್ ನೆಟ್‌ವರ್ಕ್ ಅನ್ನು ಸ್ಥಾಪಿಸಲಿದೆ. ಇದಕ್ಕಾಗಿ ಆಯಾ ನಗರಗಳ ಪ್ರಮುಖ ರೆಸ್ಟೊರೆಂಟ್ ಹಾಗೂ ಶಾಂಪಿಂಗ್ ಮಾಲ್ಗಳ ಜೊತೆ ಕಂಪೆನಿ ಪಾಲುದಾರಿಕೆ ಮಾಡಿಕೊಳ್ಳಲು ಯೋಜನೆ ರೂಪಿಸಿದೆ. ಇದರಿಂದ ಚಾರ್ಜಿಂಗ್ ಸಮಸ್ಯೆ ತಪ್ಪಲಿದ್ದು, ಹಾಗೆಯೇ ನಗರಗಳ ಪ್ರದೇಶಗಳ ಎಲ್ಲೆಡೆಯು ಸಿಂಪಲ್ ಲೂಪ್ ಫಾಸ್ಟ್ ಚಾರ್ಜರ್ ಮೂಲಕ ಚಾರ್ಜ್ ಮಾಡಿಕೊಳ್ಳುವ ಅವಕಾಶ ಗ್ರಾಹಕರಿಗೆ ದೊರೆಯಲಿದೆ.
ಈ ವಿದ್ಯುತ್ ಚಾಲಿತ ಸ್ಕೂಟರ್ನಲ್ಲಿ 4.8 kWh ಲಿಥಿಯಂ-ಐಯಾನ್ ಬ್ಯಾಟರಿ ನೀಡಲಾಗಿದೆ. ಇದು ಮಿಡ್-ಡ್ರೈವ್ ಮೋಟಾರ್ ಮತ್ತು ಫ್ಯೂಚರಿಸ್ಟಿಕ್ ವಿನ್ಯಾಸ ಹೊಂದಿದ್ದು, ಅದರ ಜೊತೆಗೆ ತೆಗೆಯಬಹುದಾದ ಬ್ಯಾಟರಿ ಇದರಲ್ಲಿದೆ. ಹೀಗಾಗಿ 2 ಬ್ಯಾಟರಿ ಬಳಸಿ ದೂರದ ಪ್ರಯಾಣವನ್ನು ಕೂಡ ಮಾಡಬಹುದು. ಹಾಗೆಯೇ ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 100 ಕಿಮೀ. ಇದು ಕೇವಲ 3.6 ಸೆಕೆಂಡುಗಳಲ್ಲಿ 0-50 ಕಿಲೋಮೀಟರ್‌ಗಳ ವೇಗವನ್ನು ಪಡೆಯುತ್ತದೆ.
ಸಿಂಪಲ್ ಒನ್ ಸ್ಕೂಟರ್ 72 Nm ಟಾರ್ಕ್ ಮತ್ತು 4.5 kW ಪವರ್ ಹೊಂದಿದೆ. ಹಾಗೆಯೇ 110 ಕೆಜಿ ಕರ್ಬ್ ಮತ್ತು 30 ಲೀಟರ್ ಬೂಟ್ ಸ್ಪೇಸ್ ಇದರಲ್ಲಿ ನೀಡಲಾಗಿದೆ. ಇನ್ನು ಈ ಸ್ಕೂಟರ್ನಲ್ಲಿ ಟಚ್ ಸ್ಕ್ರೀನ್, ಆನ್‌ಬೋರ್ಡ್ ನ್ಯಾವಿಗೇಷನ್, ಬ್ಲೂಟೂತ್ ಇತ್ಯಾದಿ ಸ್ಮಾರ್ಟ್ ಫೀಚರ್‌ಗಳನ್ನೂ ಸಹ ನೀಡಲಾಗಿದೆ.
ಸಿಂಪಲ್ ಲೂಪ್ ಚಾರ್ಜರ್ನಲ್ಲಿ ಈ ಸ್ಕೂಟರ್ ಅನ್ನು ಕೇವಲ 60 ಸೆಕೆಂಡುಗಳ ಚಾರ್ಜ್ನಲ್ಲಿ 2.5 ಕಿ.ಮೀ ಕ್ರಮಿಸಬಹುದು. ಹಾಗೆಯೇ 30 ನಿಮಿಷಗಳ ಚಾರ್ಜ್ ಮಾಡಿದ್ರೆ 75 ಕಿ.ಮೀ ದೂರ ಚಲಿಸಬಹುದು. ಅಷ್ಟೇ ಅಲ್ಲದೆ ಒಂದು ಬಾರಿ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿಕೊಂಡರೆ ಇಕೋ ಮೋಡ್ನಲ್ಲಿ 240 ಕಿ.ಮೀ ಮೈಲೇಜ್ (ರೇಂಜ್) ಸಿಗಲಿದೆ. ಅಂದಹಾಗೆ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ ಆರಂಭಿಕ ಬೆಲೆ 1,10,000 ರೂ.
ಇದನ್ನೂ ಓದಿ: Jio Offer: ಜಿಯೋ ಧಮಾಕಾ ಆಫರ್: 1095 GB ಡೇಟಾ ಜೊತೆ 1 ವರ್ಷದವರೆಗೆ ಉಚಿತ ಕರೆ ಸೌಲಭ್ಯ
ಇದನ್ನೂ ಓದಿ: India vs England 2nd Test: ಅಂದು ದಾದಾ, ಇಂದು ಕೊಹ್ಲಿ: ಲಾರ್ಡ್ಸ್ ಬಾಲ್ಕನಿಯಲ್ಲಿ ಕ್ಯಾಪ್ಟನ್ ಡ್ಯಾನ್ಸ್
ಇದನ್ನೂ ಓದಿ: Health Tips: ಹಲವು ಅನಾರೋಗ್ಯ ಸಮಸ್ಯೆಗಳಿಗೆ ಪಪ್ಪಾಯಿ ಎಲೆಗಳೇ ಔಷಧಿ
ಇದನ್ನೂ ಓದಿ: ಇವರ ಬ್ಯಾಟಿಂಗ್ ಮುಂದೆ, ಗೇಲ್-ಎಬಿಡಿ-ಸೆಹ್ವಾಗ್ ಏನೂ ಅಲ್ಲ: ವಿಶ್ವದ ಅತೀ ವೇಗದ ಶತಕದ ಸರದಾರ