ವಿಧಾನಸಭೆಯಲ್ಲಿ 10,265 ಸಾವಿರ ಕೋಟಿ ಮೊತ್ತದ ಪೂರಕ ಅಂದಾಜು ಮಂಡನೆ

TV9 Digital Desk

| Edited By: guruganesh bhat

Updated on: Sep 14, 2021 | 10:15 PM

ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರಿ ನಿವಾಸದ ದೂರವಾಣಿ, ನೀರು, ವಿದ್ಯುತ್ ವೆಚ್ಚಕ್ಕಾಗಿ 15 ಲಕ್ಷ ಒದಗಿಸಲಾಗಿದೆ.

ವಿಧಾನಸಭೆಯಲ್ಲಿ 10,265 ಸಾವಿರ ಕೋಟಿ ಮೊತ್ತದ ಪೂರಕ ಅಂದಾಜು ಮಂಡನೆ
ಮಾಧುಸ್ವಾಮಿ

ಬೆಂಗಳೂರು: ₹10,265 ಸಾವಿರ ಕೋಟಿ ಮೊತ್ತದ ಪೂರಕ ಅಂದಾಜನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ವಿಧಾನಸಭೆಯಲ್ಲಿ ಮಂಡಿಸಿದರು. ಪೂರಕ ಅಂದಾಜಿನಲ್ಲಿ ಬೆಳಗಾವಿ ಲೋಕಸಭಾ ಉಪಚುನಾವಣೆಗೆ 13 ಕೋಟಿ, ಸಿಎಂ‌ ಬಾಲ ಸೇವಾ ಯೋಜನೆಗೆ 1.65 ಕೋಟಿ ಹೆಚ್ಚುವರಿ ಅನುದಾನ, ಅಂಗನವಾಡಿಗಳಿಗೆ ಮೂಲಭೂತ ಸೌಕರ್ಯಕ್ಕೆ 25 ಕೋಟಿ, ಅನ್ನಭಾಗ್ಯ ಯೋಜನೆಗಾಗಿ 60 ಕೋಟಿ ಹೆಚ್ಚುವರಿ ಅನುದಾನ, ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಪ್ರಚಾರಕ್ಕಾಗಿ ₹41 ಲಕ್ಷ, ಕೊವಿಡ್​ನಿಂದ ಮೃತಪಟ್ಟ BPL ಕುಟುಂಬಗಳಿಗೆ ಪರಿಹಾರಕ್ಕೆ ಅನುದಾನವನ್ನು ಪೂರಕ ಅಂದಾಜಿನಲ್ಲಿ ಒದಗಿಸಲಾಗಿದೆ.

ಮೃತ ಶಾಲಾ ಸೌಲಭ್ಯ ಯೋಜನೆಗೆ 75 ಕೋಟಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊವಿಡ್ ಕಾಱಚರಣೆ ನೆರವಿಗೆ ₹195 ಕೋಟಿ, ಬಿಬಿಎಂಪಿ ಹೊರಗುತ್ತಿಗೆ ಪೌರ ಕಾರ್ಮಿಕರ ವೇತನಕ್ಕೆ ₹60 ಕೋಟಿ, ನೀರಾವರಿ ಇಲಾಖೆ ಪಡೆದಿರುವ ಬ್ಯಾಂಕ್ ಸಾಲ ತೀರಿಸಲು 5 ಕೋಟಿ ಒದಗಿಸಲಾಗಿದೆ.

ಅತಿವೃಷ್ಟಿಯಿಂದ ಹಾನಿಗೊಳಗಾದ ಮೂಲಭೂತ ಸೌಕರ್ಯಗಳ ದುರಸ್ಥಿಗೆ ಕೇಂದ್ರದ ಅನುದಾನ 62 ಕೋಟಿ ಹೊಂದಾಣಿಕೆ, ಸಿಎಂ ತವರು ಜಿಲ್ಲೆ ಹಾವೇರಿಯ ವಿವಿಧ ಟ್ರಸ್ಟ್, ಮಠ, ದೇವಾಲಯಗಳ ಕಾಮಗಾರಿಗಳಿಗೆ 1 ಕೋಟಿ 18 ಲಕ್ಷ ಹೆಚ್ಚುವರಿ ಅನುದಾನ, ಸಿಎಂ ಘೋಷಿತ ಸ್ವಾತಂತ್ರ್ಯೋತ್ಸವ ಅಮೃತ ಶಾಲಾ ಸೌಲಭ್ಯ ಯೋಜನೆಗೆ 75 ಕೋಟಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊವಿಡ್ ಕಾರ್ಯಾಚರಣೆಗೆ ನೆರವಿಗಾಗಿ 159 ಕೋಟಿ, ಬಿಬಿಎಂಪಿ ಹೊರ ಗುತ್ತಿಗೆ ಪೌರ ಕಾರ್ಮಿಕರ ವೇತನಕ್ಕೆ 60 ಕೋಟಿ, ಆರೋಗ್ಯ ಇಲಾಖೆಗೆ ಕೊವಿಡ್ ನಿರ್ವಹಣೆಗೆ ಗುತ್ತಿಗೆ ವೈದ್ಯರು, ಗ್ರಾಮೀಣ ಸೇವಾ ವೈದ್ಯರ ವೇತನ ಪಾವತಿಗೆ 106 ಕೋಟಿ, ಕೊವಿಡ್ ಪರೀಕ್ಷೆಗೆ ಕಿರು ಉಪಕರಣ ಖರೀದಿಗೆ 17 ಕೋಟಿ ಹೆಚ್ಚುವರಿ ಅನುದಾನ ಒದಗಿಸಲಾಗಿದೆ.

ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಮಾಸ್ಕ್, ಪಿಪಿಇ ಕಿಟ್ ಆಕ್ಸಿಜನ್ ಕಾನ್ ಸೆಂಟಟ್ರೇಟರ್ ಖರೀದಿಗೆ 222 ಕೋಟಿ, ವೈದ್ಯಕೀಯ ಕಾಲೇಜು, ಆಸ್ಪತ್ರೆಗೆ ಐಸಿಯು, ಗ್ಯಾಸ್ ಪೈಪ್ ಲೈನ್, ಮೂಲಭೂತ ಸೌಕರ್ಯಗಳಿಗೆ 78 ಕೋಟಿ, ವಿಡ್ ಪರೀಕ್ಷೆಗೆ ವಿಟಿಎಂ ಕಿಟ್ ಖರೀದಿಗೆ 11 ಕೋಟಿ, ಲಾಕ್ ಡೌನ್ ಸಂತ್ರಸ್ತ ಬೀದಿ ವ್ಯಾಪಾರಿಗೆ ಸಹಾಯ ಧನಕ್ಕೆ 13 ಕೋಟಿ‌, ಕನ್ನಡ ಕಾಯಕ ವರ್ಷಾಚರಣೆಗೆ 2 ಕೋಟಿ, ಚಿತ್ರದುರ್ಗದಲ್ಲಿ ಬಸವಣ್ಣ ಲೋಹದ ಪ್ರತಿಮೆಗೆ 10 ಕೋಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಗೌರವಧನ, ವೇತನೇತರ ವೆಚ್ಚಕ್ಕಾಗಿ 34 ಲಕ್ಷ, ಎಲ್ಲಾ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಸಿಸಿಟಿವಿ ಅಳವಡಿಕೆಗೆ 10 ಕೋಟಿ, ಕೊವಿಡ್ ಪ್ಯಾಕೇಜ್ 2 ಅಡಿಯಲ್ಲಿ ನ್ಯಾಯವಾದಿಗಳಿಗೆ ನೆರವು ನೀಡಲು 5 ಕೋಟಿ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರಿ ನಿವಾಸದ ದೂರವಾಣಿ, ನೀರು, ವಿದ್ಯುತ್ ವೆಚ್ಚಕ್ಕಾಗಿ 15 ಲಕ್ಷ, ಶಾಸಕರ ಭವನದಲ್ಲಿ ಸಿಸಿಟಿವಿ ಅಳವಡಿಕೆಗೆ ಕೋಟಿ 45 ಲಕ್ಷ, ವಿಧಾನ ಪರಿಷತ್ ಸರ್ಕಾರಿ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠಗೆ ಹೊಸ ವಾಹನ ಖರೀದಿಗೆ 23 ಲಕ್ಷ, ಮುಕ್ತ ಮಾರುಕಟ್ಟೆಯಲ್ಲಿ ಸರ್ಕಾರ ಪಡೆದ ಸಾಲದ ಬಡ್ಡಿ ಪಾವತಿಗಾಗಿ 6 ಲಕ್ಷ ಅನುದಾನ ಒದಗಿಸಲಾಗಿದೆ.

9 ಐಎಎಸ್ ಅಧಿಕಾರಿಗಳ ವರ್ಗಾವಣೆ 9 ಐಎಎಸ್ ಅಧಿಕಾರಿಗಳ ವರ್ಗಾವಣೆಗೊಳಿಸಿ ಆದೇಶ ರಾಜ್ಯ ಸರ್ಕಾರ ಆದೇಶಿಸಿದೆ. ಅನಿಲ್ ಕುಮಾರ್‌ ಅವರಿಗೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ರಶ್ಮಿ ಎನ್‌. ಮಹೇಶ್‌ ಅವರನ್ನು ಕನ್ನಡ ಮತ್ತು ಸಂಸ್ಕೃತ ಇಲಾಖೆ ಪ್ರಧಾನ ಕಾರ್ಯದರ್ಶಿ, ಸೆಲ್ವಕುಮಾರ್‌. ಎಸ್‌ ಅವರನ್ನು ಸಹಕಾರ ಇಲಾಖೆ ಕಾರ್ಯದರ್ಶಿ, ಅಬಕಾರಿ ಇಲಾಖೆಯ ಆಯುಕ್ತರಾಗಿರುವ ಡಾ.ರವಿಶಂಕರ್‌ ಅವರಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿಯನ್ನು ಹೆಚ್ಚುವರಿ ಹೊಣೆಯನ್ನಾಗಿ, ಅನ್ಬುಕುಮಾರ್‌ ಅವರನ್ನು ಬಿಎಂಟಿಸಿ ಎಂಡಿ, ಡಾ.ರೇಜು.ಎಂ.ಟಿ ಅವರನ್ನು ಕೆಯುಐಡಿಎಫ್‌ಸಿ ಎಂಡಿ, ಬಿಬಿಎಂಪಿ ವಿಶೇಷ ಆಯುಕ್ತ ರಾಮ್‌ಪ್ರಸಾತ್‌ ಮನೋಹರ್ ಅವರಿಗೆ ಕೆಎಸ್‌ಐಐಡಿ ಎಂಡಿ ಹುದ್ದೆಯನ್ನು ಹೆಚ್ಚುವರಿ ಹೊಣೆಯನ್ನಾಗಿ ನೀಡಲಾಗಿದೆ.

ಇದನ್ನೂ ಓದಿ: 

ಅವಸರದಿಂದ ದೇವಸ್ಥಾನ ಒಡೆಯಬೇಡಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ

ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಆರ್​ಎಸ್​ಎಸ್​ ಆರ್ಥಿಕವಾಗಿ ಸದೃಢವಾಗಿದೆ: ಕುಮಾರಸ್ವಾಮಿ ಆರೋಪ  

(10265 crore Supplementary budget announced in Karnataka Assembly session 2021 today)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada