ಟರ್ಕಿಯಿಂದ ಬಂತು ಈರುಳ್ಳಿ! ದರ-ಗಾತ್ರ ನೋಡಿ ಮಂಗಳೂರು ಮಂದಿ ಸುಸ್ತೋಸುಸ್ತು!

|

Updated on: Dec 05, 2019 | 4:59 PM

ಮಂಗಳೂರು: ದರದರನೇ ಏರುತ್ತಿದ್ದ ಈರುಳ್ಳಿ ದರದಿಂದ ಕಣ್ಣೀರು ಸುರಿಸುತ್ತಿದ್ದ ಗ್ರಾಹಕರನ್ನು ಸಮಾಧಾನಪಡಿಸಲು ಕೇಂದ್ರ ಸರಕಾರ ಮುಂದಾಗಿದೆ. ಬರೋಬ್ಬರಿ ಆರು ಸಾವಿರ ಮೈಲು ದೂರದ ಟರ್ಕಿ ದೇಶದಿಂದ ಮಂಗಳೂರು ಮಾರುಕಟ್ಟೆಗೆ ಈರುಳ್ಳಿ ಬಂದಿದೆ. ಮೊದಲ ದಿನವೇ ಕೆಜಿಗೆ 120 ರಿಂದ 130 ರೂ. ದರ ನಿಗದಿಯಾಗಿದೆ. ಟರ್ಕಿಯಿಂದ 11,000 ಟನ್‌ ಈರುಳ್ಳಿ ಆಮದು ಮಾಡಿಕೊಳ್ಳಲಾಗಿದೆ. ಸಾರ್ವಜನಿಕ ಸಂಸ್ಥೆ ಎಂಎಂಟಿಸಿಗೆ ಆಮದು ಜವಾಬ್ದಾರಿ ವಹಿಸಲಾಗಿದೆ. ಮಂಗಳೂರಿಗೆ ಬಂತು ಟರ್ಕಿ ಈರುಳ್ಳಿ..! ಟರ್ಕಿಯಿಂದ ಈರುಳ್ಳಿ ಬಂದಾಗ ದರ ಸುಧಾರಿಸಬಹುದು. ಕೆಜಿಗೆ 50ರಿಂದ […]

ಟರ್ಕಿಯಿಂದ ಬಂತು ಈರುಳ್ಳಿ!  ದರ-ಗಾತ್ರ ನೋಡಿ ಮಂಗಳೂರು ಮಂದಿ ಸುಸ್ತೋಸುಸ್ತು!
Follow us on

ಮಂಗಳೂರು: ದರದರನೇ ಏರುತ್ತಿದ್ದ ಈರುಳ್ಳಿ ದರದಿಂದ ಕಣ್ಣೀರು ಸುರಿಸುತ್ತಿದ್ದ ಗ್ರಾಹಕರನ್ನು ಸಮಾಧಾನಪಡಿಸಲು ಕೇಂದ್ರ ಸರಕಾರ ಮುಂದಾಗಿದೆ. ಬರೋಬ್ಬರಿ ಆರು ಸಾವಿರ ಮೈಲು ದೂರದ ಟರ್ಕಿ ದೇಶದಿಂದ ಮಂಗಳೂರು ಮಾರುಕಟ್ಟೆಗೆ ಈರುಳ್ಳಿ ಬಂದಿದೆ. ಮೊದಲ ದಿನವೇ ಕೆಜಿಗೆ 120 ರಿಂದ 130 ರೂ. ದರ ನಿಗದಿಯಾಗಿದೆ. ಟರ್ಕಿಯಿಂದ 11,000 ಟನ್‌ ಈರುಳ್ಳಿ ಆಮದು ಮಾಡಿಕೊಳ್ಳಲಾಗಿದೆ. ಸಾರ್ವಜನಿಕ ಸಂಸ್ಥೆ ಎಂಎಂಟಿಸಿಗೆ ಆಮದು ಜವಾಬ್ದಾರಿ ವಹಿಸಲಾಗಿದೆ.

ಮಂಗಳೂರಿಗೆ ಬಂತು ಟರ್ಕಿ ಈರುಳ್ಳಿ..!
ಟರ್ಕಿಯಿಂದ ಈರುಳ್ಳಿ ಬಂದಾಗ ದರ ಸುಧಾರಿಸಬಹುದು. ಕೆಜಿಗೆ 50ರಿಂದ 60ಕ್ಕೆ ಲಭಿಸಬಹುದು ಎಂದೆಲ್ಲ ನಿರೀಕ್ಷಿಸಲಾಗಿತ್ತು. ಆದರೆ ದರ ಮತ್ತಷ್ಟು ದುಬಾರಿಯಾಗಿದೆ. ಜನ ಈರುಳ್ಳಿಯ ದರ ಕೇಳಿಯೇ ಸುಸ್ತಾಗುತ್ತಿದ್ದಾರೆ.

ಈಗ ಮಾರುಕಟ್ಟೆಗೆ ಬಂದಿರುವ ಪ್ರತಿಯೊಂದು ಈರುಳ್ಳಿ ಅರ್ಧ ಕೆಜಿಯಷ್ಟು ಭಾರ ಇದ್ದು, ಒಂದು ಕೆಜಿಗೆ 2-3 ಈರುಳ್ಳಿ ಮಾತ್ರ ತೂಗುತ್ತಿವೆ! ಅತ್ಯಂತ ಶುಭ್ರವಾಗಿದ್ದು, ತುಂಬಾ ಖಾರವೂ ಇದೆ. ಈರುಳ್ಳಿ ಕತ್ತರಿಸಿದಾಗ ದರಕ್ಕೆ ತಕ್ಕಂತೆ ಕಣ್ಣೀರು ಬರಿಸುತ್ತಿದೆ. ಟರ್ಕಿ ಭೂಮಾರ್ಗವಾಗಿ 6,388 ಕಿ.ಮೀ ದೂರವಿದ್ದು, ಸುಮಾರು 54 ದಿನ ಬೇಕಾಗಬಹುದು.

Published On - 11:58 am, Wed, 4 December 19