20 ಸಾವಿರ ಕೋಟಿ ಟೆಂಡರ್ ಹಗರಣ ಸತ್ಯಕ್ಕೆ ದೂರವಾದದ್ದು: ಹೆಚ್.ವಿಶ್ವನಾಥ್ ಆರೋಪಕ್ಕೆ ತಿರುಗೇಟು ನೀಡಿದ ಶಾಸಕ ಎಂ.ಪಿ.ರೇಣುಕಾಚಾರ್ಯ

ಹೆಚ್.ವಿಶ್ವನಾಥ್ ಆಡಿಯೋ, ವಿಡಿಯೋ ಎಲ್ಲರಿಗೂ ಗೊತ್ತಿದೆ. ಆ ಆಡಿಯೋ, ವಿಡಿಯೋ ಪ್ಲೇ ಆದರೆ, ಅವರ ಸಂಸ್ಕೃತಿ ತಿಳಿಯುತ್ತದೆ. ನಾನು ಮುಖ್ಯಮಂತ್ರಿ ವಿರುದ್ಧ ಮಾತನಾಡಬೇಡಿ ಎಂದು ಹೇಳಿದ್ದೇನೆ. ಆದರೂ ವಿಶ್ವನಾಥ್ ಹತಾಶರಾಗಿ ಮಾತನಾಡುತ್ತಿರುವುದು ತಪ್ಪು. ಆ ವ್ಯಕ್ತಿಯ ನಾಲಿಗೆ ಸಂಸ್ಕೃತಿ ಬಗ್ಗೆ ಎಲ್ಲರಿಗೂ ಗೊತ್ತಿದೆ ಎಂದು ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.

20 ಸಾವಿರ ಕೋಟಿ ಟೆಂಡರ್ ಹಗರಣ ಸತ್ಯಕ್ಕೆ ದೂರವಾದದ್ದು: ಹೆಚ್.ವಿಶ್ವನಾಥ್ ಆರೋಪಕ್ಕೆ ತಿರುಗೇಟು ನೀಡಿದ ಶಾಸಕ ಎಂ.ಪಿ.ರೇಣುಕಾಚಾರ್ಯ
ಶಾಸಕ ಎಂ.ಪಿ.ರೇಣುಕಾಚಾರ್ಯ
Follow us
TV9 Web
| Updated By: preethi shettigar

Updated on: Jun 18, 2021 | 2:13 PM

ಬೆಂಗಳೂರು: ನೀರಾವರಿ ಇಲಾಖೆಯ ಟೆಂಡರ್ ಪಾರದರ್ಶಕವಾಗಿ ನಡೆದಿದೆ. ಈ ಯೋಜನೆಯ ಕುರಿತು ವೆಬ್​ಸೈಟ್​ನಲ್ಲಿ ಎಲ್ಲಾ ಮಾಹಿತಿ ಲಭ್ಯವಾಗಲಿದೆ. 20 ಸಾವಿರ ಕೋಟಿ ರೂಪಾಯಿ ಟೆಂಡರ್ ಹಗರಣ ಸತ್ಯಕ್ಕೆ ದೂರವಾದದ್ದು ಎಂದು ಹೆಚ್.ವಿಶ್ವನಾಥ್ ಆರೋಪಕ್ಕೆ ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.

ಬಳಿಕ ಮಾತನಾಡಿದ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕೊರೊನಾ ಸೋಂಕಿತರ ಜತೆಗಿನ ಒಟನಾಟದ ಕುರಿತು ಮಾತನಾಡಿದ್ದು ನಿನ್ನೆ ಅರುಣ್ ಸಿಂಗ್ ಭೇಟಿ ಮಾಡಿ ಮತಕ್ಷೇತ್ರಕ್ಕೆ ಹೊರಟಿದೆ. ಒಂದು ದಿವಸ ಮಾತ್ರ ಇರಲ್ಲ ಆ ಮೇಲೆ ಬರುತ್ತೀನಿ. ನನ್ನ ಕ್ಷೇತ್ರದ ಕೊರೊನಾ ರೋಗಿಗಳ ಜತೆಗೆ ಇದ್ದೆ. ಮನರಂಜನೆ ಯೋಗ ಎಲ್ಲ ಅವರ ಜೊತೆ ಮಾಡಿದ್ದೆ. ಈಗ ಮತ್ತೆ ಹೊರಟಿದ್ದೇನೆ ಹೋಗಿ ಹೋಳಿಗೆ ಊಟ ಹಾಕಿಸುತ್ತೇನೆ. 75 ಜನರನ್ನು ಡಿಸ್ಚಾರ್ಜ್ ಮಾಡುತ್ತೀನಿ ಎಂದು ತಿಳಿಸಿದ್ದಾರೆ.

ಹೆಚ್.ವಿಶ್ವನಾಥ್ ವಿರುದ್ಧ ಶಾಸಕ ರೇಣುಕಾಚಾರ್ಯ ವಾಗ್ದಾಳಿ ಹೆಚ್.ವಿಶ್ವನಾಥ್ ಆಡಿಯೋ, ವಿಡಿಯೋ ಎಲ್ಲರಿಗೂ ಗೊತ್ತಿದೆ. ಆ ಆಡಿಯೋ, ವಿಡಿಯೋ ಪ್ಲೇ ಆದರೆ, ಅವರ ಸಂಸ್ಕೃತಿ ತಿಳಿಯುತ್ತದೆ. ನಾನು ಮುಖ್ಯಮಂತ್ರಿ ವಿರುದ್ಧ ಮಾತನಾಡಬೇಡಿ ಎಂದು ಹೇಳಿದ್ದೇನೆ. ಆದರೂ ವಿಶ್ವನಾಥ್ ಹತಾಶರಾಗಿ ಮಾತನಾಡುತ್ತಿರುವುದು ತಪ್ಪು. ಆ ವ್ಯಕ್ತಿಯ ನಾಲಿಗೆ ಸಂಸ್ಕೃತಿ ಬಗ್ಗೆ ಎಲ್ಲರಿಗೂ ಗೊತ್ತಿದೆ. ಎಸ್.ಎಂ.ಕೃಷ್ಣ, ಸಿದ್ದರಾಮಯ್ಯ, ಹೆಚ್.ಡಿ.ದೇವೇಗೌಡ, ಕುಮಾರಸ್ವಾಮಿ, ಬಿ.ಎಸ್​.ಯಡಿಯೂರಪ್ಪ ಸೇರಿ ಎಲ್ಲರ ವಿರುದ್ಧವೂ ಮಾತನಾಡುತ್ತಾರೆ. ನಾನು ಯಾವತ್ತೂ ಯಾರ ವಿರುದ್ಧವೂ ಹಗುರವಾಗಿ ಮಾತಾಡಿಲ್ಲ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:

H Vishwanath: ವಿಶ್ವನಾಥ್ ಅವರೇ ನಿಮ್ಮ ವಯಸ್ಸೆಷ್ಟು? ಹತಾಶೆಯಿಂದ ಮಾತನಾಡಬೇಡಿ: ರೇಣುಕಾಚಾರ್ಯ ವಾಗ್ದಾಳಿ

H Vishwanath Press Meet ಮಹಾನುಭಾವ ರೇಣುಕಾಚಾರ್ಯ ನರ್ಸ್ ಜಯಲಕ್ಷ್ಮೀ ಪುರಾಣ ಮರೆತಿದ್ದಾರೆ -ಹೆಚ್. ವಿಶ್ವನಾಥ್