ಗಣರಾಜ್ಯೋತ್ಸವದ ಪ್ರಯುಕ್ತ, ಕರ್ನಾಟಕದ 21 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ರಾಷ್ಟ್ರಪತಿ ಪದಕಗಳಿಗೆ ಭಾಜನರಾಗಿದ್ದಾರೆ. ಇಬ್ಬರಿಗೆ ವಿಶಿಷ್ಟ ಸೇವಾ ಪದಕ, ಉಳಿದವರಿಗೆ ಶ್ಲಾಘನೀಯ ಸೇವಾ ಪದಕ ದೊರೆತಿದೆ. ಈ ಪುರಸ್ಕಾರವು ಅವರ ಅತ್ಯುತ್ತಮ ಸೇವೆಯನ್ನು ಗುರುತಿಸುತ್ತದೆ. ಇದು ರಾಜ್ಯದ ಪೊಲೀಸ್ ಇಲಾಖೆಗೆ ಹೆಮ್ಮೆಯ ಕ್ಷಣ.
ಕರ್ನಾಟಕ ಪೊಲೀಸ್
ವಿವೇಕ ಬಿರಾದಾರ
Updated on:
Jan 25, 2025 | 2:49 PM
ಬೆಂಗಳೂರು, ಜನವರಿ 25: ಗಣರಾಜ್ಯೋತ್ಸವ (Republic Day) ದಿನಾಚರಣೆ ಹಿನ್ನೆಲೆಯಲ್ಲಿ ಕೊಡಲಾಗುವ ರಾಷ್ಟ್ರಪತಿಗಳ ಪದಕ ಗೌರವಕ್ಕೆ ಕರ್ನಾಟಕದ 21 ಜನ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಭಾಜನರಾಗಿದ್ದಾರೆ. ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ ಮತ್ತು 19 ಜನ ಪೊಲೀಸರು ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕಕ್ಕೆ ಪಾತ್ರರಾಗಿದ್ದಾರೆ.
ವಿಶಿಷ್ಟ ಸೇವಾ ಪದಕ ಪುರಸ್ಕೃತರು
ಬಸವರಾಜು ಶರಣಪ್ಪ ಜಿಳ್ಳೆ- ಡಿಐಜಿಪಿ, ಕೆಎಸ್ಆರ್ಪಿ, ಬೆಂಗಳೂರು
ಹಂಜಾ ಹುಸೇನ್, ಕಮಾಂಡೆಂಟ್, ಕೆಎಸ್ಆರ್ಪಿ, ತುಮಕೂರು
ಶ್ಲಾಘನೀಯ ಸೇವಾ ಪದಕ ಪುರಸ್ಕೃತರು
ರೇಣುಕಾ ಕೆ ಸುಕುಮಾರ, ಡಿಐಜಿಪಿ, ಡಿಸಿಆರ್ಇ, ಬೆಂಗಳೂರು
ಸಂಜೀವ ಎಂ ಪಾಟೀಲ್, ಎಐಜಿಪಿ, ಜನರಲ್, ಪೊಲೀಸ್ ಪ್ರಧಾನ ಕೇಂದ್ರ ಕಚೇರಿ
ಬಿಎಂ ಪ್ರಸಾದ್, ಕಮಾಂಡೆಂಟ್, ಐಆರ್ಬಿ, ಕೊಪ್ಪಳ
ಗೋಪಾಲ್ ಡಿ ಜೋಗಿನ್, ಎಸಿಪಿ, ಸಿಸಿಬಿ ಬೆಂಗಳೂರು
ವೀರೆಂದ್ರ ನಾಯಕ್ ಎನ್, ಡೆಪ್ಯೂಟಿ ಕಮಾಂಡೆಂಟ್, ಕೆಎಸ್ಆರ್ಪಿ, ಬೆಂಗಳೂರು
ಗೋಪಾಲಕೃಷ್ಣ ಬಿ ಗೌಡರ್, ಡಿವೈಎಸ್ಪಿ, ಚಿಕ್ಕೋಡಿ ಉಪ ವಿಭಾಗ, ಬೆಳಗಾವಿ
ಬಲೇಂದ್ರನ್ ಸ್ಟೇಷನ್ ಆರ್ಹೆಚ್ಸಿ, ಕೆಎಸ್ಆರ್ಪಿ, ಬೆಂಗಳೂರು
ಅರುಣಕುಮಾರ, ಸಿಹೆಚ್ಸಿ, ಡಿಐಜಿಪಿ ಕಚೇರಿ, ಕಲಬುರಗಿ
ನಯಾಜ್ ಅಂಜುಮ್ ಎಹೆಚ್ಸಿ ಡಿಪಿಓ, ಚಿಕ್ಕಮಗಳೂರು
ಶ್ರೀನಿವಾಸ ಎಂ, ಸಿಹೆಚ್ಸಿ, ಡಿಸಿಪಿ ಪಶ್ಚಿಮ ವಿಭಾಗ ಕಚೇರಿ, ಬೆಂಗಳೂರು
ಅಶ್ರಪ್ ಪಿ. ಎಂ, ಹಿರಿಯ ಗುಪ್ತ ಸಹಾಯಕರು, ರಾಜ್ಯ ಗುಪ್ತವಾರ್ತೆ, ಬೆಂಗಳೂರು
ಶಿವಾನಂದ ಬಿ, ಸಿಹೆಚ್ಸಿ ಕುಂದಾಪುರ ಪೊಲೀಸ್ ಠಾಣೆ, ಉಡುಪಿ
ಎಲ್ಲ ರಾಜ್ಯಗಳ ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ ಮತ್ತು ಇತರೆ ಸೇವೆಗಳ ಒಟ್ಟು 942 ಸಿಬ್ಬಂದಿಯು 2025ರ ಗಣರಾಜ್ಯೋತ್ಸವ ಅಂಗವಾಗಿ ಕೊಡುವ ಶೌರ್ಯ ಮತ್ತು ಸೇವಾ ಪದಕ ಗೌರವಕ್ಕೆ ಪಾತ್ರರಾಗಿದ್ದಾರೆ.
ವರದಿ: ಪ್ರದೀಪ್ ಚಿಕ್ಕಾಟಿ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
Vivek Biradar
ಮೂಲತಃ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯವ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಅಪರಾಧ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ.