AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಡಾದಲ್ಲಿ ಬಗೆದಷ್ಟೂ ಹೊರ ಬರ್ತಿದೆ ಗೋಲ್​ಮಾಲ್, ಒಬ್ಬನಿಗೆ 3 ನಿವೇಶನ ಮಂಜೂರು

ಮೈಸೂರು: ಮುಡಾ ಅಧಿಕಾರಿಗಳಿಗೆ ಅದೇನಾಗಿದ್ಯೋ ಗೊತ್ತಿಲ್ಲ. ಒಂದರ ಮೇಲೆ ಒಂದು ಅವ್ಯವಹಾರಗಳು ಹೊರ ಬರುತ್ತಿದ್ದರು ಕಣ್ಮುಚ್ಚಿ ಕುಳಿತಿದ್ದಾರೆ. ಒಬ್ಬರಿಗೆ ಎರಡು ನಿವೇಶನ ಕೊಟ್ಟ ಬೆನ್ನಲ್ಲೇ ಈಗ ಒಬ್ಬರಿಗೆ ಮೂರು ನಿವೇಶನ ಕೊಟ್ಟು ಮುಡಾ ಅಧಿಕಾರಿಗಳು ಸುದ್ದಿಯಾಗಿದ್ದಾರೆ. ನಮ್ಮ ಸರ್ಕಾರಿ ಕಚೇರಿಗಳಲ್ಲಿ ಸಾಕಷ್ಟು ನಿಯಮಗಳಿವೆ. ಆದ್ರೆ, ಅವು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಬಡವರಿಗೂಂದು ನ್ಯಾಯ. ಉಳ್ಳವರಿಗೊಂದು ನ್ಯಾಯ ಎಂಬಂತಾಗಿದೆ. ಈ ರೂಲ್ಸ್‌ಗಳು ಅನ್ನೋದು ಕಡತಗಳಿಗೆ ಮಾತ್ರ ಸೀಮಿತಾನಾ ಅನ್ನೋ ಪ್ರಶ್ನೆಗಳು ಸಾಂಸ್ಕೃತಿಕ ನಗರಿಯಲ್ಲಿ ನಡೆದ ಅಕ್ರಮದಿಂದ ಎದ್ದಿವೆ. ‘ಮುಡಾ’ದಲ್ಲಿ […]

ಮುಡಾದಲ್ಲಿ ಬಗೆದಷ್ಟೂ ಹೊರ ಬರ್ತಿದೆ ಗೋಲ್​ಮಾಲ್, ಒಬ್ಬನಿಗೆ 3 ನಿವೇಶನ ಮಂಜೂರು
ಸಾಧು ಶ್ರೀನಾಥ್​
|

Updated on: Dec 14, 2019 | 12:42 PM

Share

ಮೈಸೂರು: ಮುಡಾ ಅಧಿಕಾರಿಗಳಿಗೆ ಅದೇನಾಗಿದ್ಯೋ ಗೊತ್ತಿಲ್ಲ. ಒಂದರ ಮೇಲೆ ಒಂದು ಅವ್ಯವಹಾರಗಳು ಹೊರ ಬರುತ್ತಿದ್ದರು ಕಣ್ಮುಚ್ಚಿ ಕುಳಿತಿದ್ದಾರೆ. ಒಬ್ಬರಿಗೆ ಎರಡು ನಿವೇಶನ ಕೊಟ್ಟ ಬೆನ್ನಲ್ಲೇ ಈಗ ಒಬ್ಬರಿಗೆ ಮೂರು ನಿವೇಶನ ಕೊಟ್ಟು ಮುಡಾ ಅಧಿಕಾರಿಗಳು ಸುದ್ದಿಯಾಗಿದ್ದಾರೆ.

ನಮ್ಮ ಸರ್ಕಾರಿ ಕಚೇರಿಗಳಲ್ಲಿ ಸಾಕಷ್ಟು ನಿಯಮಗಳಿವೆ. ಆದ್ರೆ, ಅವು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಬಡವರಿಗೂಂದು ನ್ಯಾಯ. ಉಳ್ಳವರಿಗೊಂದು ನ್ಯಾಯ ಎಂಬಂತಾಗಿದೆ. ಈ ರೂಲ್ಸ್‌ಗಳು ಅನ್ನೋದು ಕಡತಗಳಿಗೆ ಮಾತ್ರ ಸೀಮಿತಾನಾ ಅನ್ನೋ ಪ್ರಶ್ನೆಗಳು ಸಾಂಸ್ಕೃತಿಕ ನಗರಿಯಲ್ಲಿ ನಡೆದ ಅಕ್ರಮದಿಂದ ಎದ್ದಿವೆ.

‘ಮುಡಾ’ದಲ್ಲಿ ಬಗೆದಷ್ಟು ಹೊರ ಬರುತ್ತಿದೆ ಅವ್ಯವಹಾರಗಳು! ಮೈಸೂರಿನ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಗೆದಷ್ಟು ಬಗೆದಷ್ಟು ಅವ್ಯವಹಾರಗಳು ಹೊರ ಬರುತ್ತಲೇ ಇವೆ.‌ ಒಬ್ಬರಿಗೆ ಒಂದೇ ನಿವೇಶನವೆಂಬ ನಿಯಮವಿದ್ದರೂ ಒಬ್ಬರಿಗೆ ಎರಡೆರೆಡು ನಿವೇಶನ ನೀಡಿ ಸುದ್ದಿಯಾಗಿದ್ದ ಮುಡಾ ಈಗ ಮತ್ತೆ ಅದೇ ವಿಚಾರಕ್ಕೆ ಸುದ್ದಿಯಾಗಿದೆ. ಈ ಬಾರಿ ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ಮುಡಾ ಅಧಿಕಾರಿಗಳು ರಾಮಕೃಷ್ಣ ಎಂಬ ವ್ಯಕ್ತಿಗೆ ಒಂದಲ್ಲಾ ಎರಡಲ್ಲ ಪ್ರಾಧಿಕಾರದ ಮೂರು ನಿವೇಶನಗಳನ್ನು ನೀಡಿದೆ.

ಈ ಪ್ರಕರಣದ ಪ್ರಮುಖ ರೂವಾರಿ ಎಂ.ಎನ್. ರಾಮಕೃಷ್ಣ. ಈ ರಾಮಕೃಷ್ಣ ತಾನೊಬ್ಬ ಕೇಂದ್ರ ಸರ್ಕಾರಿ‌ ನೌಕರ ಎಂದು ಹೇಳಿಕೊಂಡು ಮೈಸೂರಿನ ಉದಯಗಿರಿ, ಮಹದೇವ ಪುರ ಹಾಗೂ ದೇವನೂರು ಬಡವಾಣೆಯಲ್ಲಿ ಎರಡು 30*40 ಮತ್ತು ಒಂದು 20*30 ನಿವೇಶನವನ್ನು ಪಡೆದಿದ್ದಾರೆ. ಅದರಲ್ಲಿ ಎರಡು ನಿವೇಶನ ಒಂದೇ ದಿನ ಮಂಜೂರಾಗಿರುವುದು ಅಚ್ಚರಿಗೆ ಕಾರಣವಾಗಿದೆ.‌ ಸದ್ಯ ಈ ಬಗ್ಗೆ ದೂರು ಸ್ವೀಕರಿಸಿರುವ ಕಾಂತರಾಜು ಈ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದಾರೆ. ಇದು ಕೇವಲ ಸ್ಯಾಂಪಲ್ ಮಾತ್ರ ಇಂತಹ ಹತ್ತು ಹಲವು ಅವ್ಯವಹಾರಗಳು ಮುಡಾದಲ್ಲಿ ನಡೆದಿವೆ.

ಮಗುವಿನ ಮೇಲೆ ನಾಯಿ ದಾಳಿ, ಹೀರೋನಂತೆ ಬಂದು ಕಾಪಾಡಿದ ತಂದೆ
ಮಗುವಿನ ಮೇಲೆ ನಾಯಿ ದಾಳಿ, ಹೀರೋನಂತೆ ಬಂದು ಕಾಪಾಡಿದ ತಂದೆ
ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಫ್ಲಾವರ್​ ಶೋ ಥೀಮ್
ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಫ್ಲಾವರ್​ ಶೋ ಥೀಮ್
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ
ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ
ರಾಯಚೂರು: ಎದೆಯತ್ತರದ ನೀರಲ್ಲೇ ಮೃತದೇಹ ಹೊತ್ತು ಸಾಗಿದ ಗ್ರಾಮಸ್ಥರು; ವಿಡಿಯೋ
ರಾಯಚೂರು: ಎದೆಯತ್ತರದ ನೀರಲ್ಲೇ ಮೃತದೇಹ ಹೊತ್ತು ಸಾಗಿದ ಗ್ರಾಮಸ್ಥರು; ವಿಡಿಯೋ