ಹಿಂದೆ ಕೊರೊನಾ ಲೆಕ್ಕ ಹೀಗಿತ್ತು! ಮುಂದಿನ ಲೆಕ್ಕಾಚಾರ ಕೇಳಿದ್ರೆ ಗಾಬರಿಯಾಗ್ತೀರಿ

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ತನ್ನ ಅಟ್ಟಹಾಸವನ್ನು ಮುಂದುವರೆಸಿದೆ. ಈಗಾಗಲೇ ಸೋಂಕಿತರ ಸಂಖ್ಯೆ 1578ಕ್ಕೆ ಏರಿಕೆಯಾಗಿದೆ. ಜೂನ್ ಮೊದಲ ವಾರದೊಳಗೆ ರಾಜ್ಯದಲ್ಲಿ 3 ಸಾವಿರ ಜನರಿಗೆ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆಯ ಕೆಲ ಹಿರಿಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕೊರೊನಾ ಪರೀಕ್ಷೆ ಹೆಚ್ಚಾದಷ್ಟು ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತೆ. ಹೊರ ರಾಜ್ಯ ಮತ್ತು ವಿದೇಶಗಳಿಂದ ಬಂದವರಿಂದಲೇ ಕರ್ನಾಟಕಕ್ಕೆ ಕಂಟಕವಾಗಲಿದೆಯಂತೆ. ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ದೆಹಲಿ, ಅಮೆರಿಕ, ಇಂಗ್ಲೆಂಡ್, ಮಲೇಷ್ಯಾ, ಸಿಂಗಾಪುರ ಸೇರಿದಂತೆ ನಾನಾ ಕಡೆಯಿಂದ […]

ಹಿಂದೆ ಕೊರೊನಾ ಲೆಕ್ಕ ಹೀಗಿತ್ತು! ಮುಂದಿನ ಲೆಕ್ಕಾಚಾರ ಕೇಳಿದ್ರೆ ಗಾಬರಿಯಾಗ್ತೀರಿ

Updated on: May 21, 2020 | 4:19 PM

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ತನ್ನ ಅಟ್ಟಹಾಸವನ್ನು ಮುಂದುವರೆಸಿದೆ. ಈಗಾಗಲೇ ಸೋಂಕಿತರ ಸಂಖ್ಯೆ 1578ಕ್ಕೆ ಏರಿಕೆಯಾಗಿದೆ. ಜೂನ್ ಮೊದಲ ವಾರದೊಳಗೆ ರಾಜ್ಯದಲ್ಲಿ 3 ಸಾವಿರ ಜನರಿಗೆ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆಯ ಕೆಲ ಹಿರಿಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಕೊರೊನಾ ಪರೀಕ್ಷೆ ಹೆಚ್ಚಾದಷ್ಟು ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತೆ. ಹೊರ ರಾಜ್ಯ ಮತ್ತು ವಿದೇಶಗಳಿಂದ ಬಂದವರಿಂದಲೇ ಕರ್ನಾಟಕಕ್ಕೆ ಕಂಟಕವಾಗಲಿದೆಯಂತೆ. ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ದೆಹಲಿ, ಅಮೆರಿಕ, ಇಂಗ್ಲೆಂಡ್, ಮಲೇಷ್ಯಾ, ಸಿಂಗಾಪುರ ಸೇರಿದಂತೆ ನಾನಾ ಕಡೆಯಿಂದ ಬರೋಬ್ಬರಿ 1 ಲಕ್ಷ 11 ಸಾವಿರ ಜನ ರಾಜ್ಯಕ್ಕೆ ವಾಪಸ್ ಆಗಿದ್ದಾರೆ. ಇದರಿಂದ ಸೋಂಕಿತ ಸಂಖ್ಯೆ ಹೆಚ್ಚಾಗಲಿದ್ದು, ಜೂನ್ ಮೊದಲ ವಾರದೊಳಗೆ 3 ಸಾವಿರ ಜನರಿಗೆ ಸೋಂಕು ತಗುಲಬಹುದು ಎಂದು ಅಂದಾಜಿಸಲಾಗಿದೆ.

ಐದು ದಿನದಲ್ಲಿ ಪಾಸಿಟಿವ್ ಕೇಸ್​ಗಳು:
ಇನ್ನು ಕಳೆದ 5ದಿನಗಳಲ್ಲಿ ಹೊರ ರಾಜ್ಯಗಳಿಂದ ಬಂದವರಿಂದ ಕರುನಾಡಿನಲ್ಲಿ ಕೊರೊನಾ ಸೋಂಕು ತಗುಲುತ್ತಿರುವವರ ಸಂಖ್ಯೆ ಗಮನಿಸುವುದಾದರೆ. ಮುಂಬೈ, ಮಹಾರಾಷ್ಟ್ರ, ಗುಜರಾತ್, ಅಹಮದಾಬಾದ್ ಹಾಗೂ ತಮಿಳುನಾಡಿನಿಂದ ಬದವರಿಂದಲೇ ಅತಿ ಹೆಚ್ಚು ಸೋಂಕು ತಗುಲುತ್ತಿದೆ.

ಕಳೆದ ಐದು ದಿನಗಳ ಲೆಕ್ಕಚಾರ:
ಮೇ 16ರಂದು 36
ಮೇ 17ರಂದು 55
ಮೇ 18ರಂದು 99
ಮೇ 19ರಂದು 149
ಮೇ 20ರಂದು 67 ಕೇಸ್​ಗಳು ಪತ್ತೆಯಾಗಿದ್ದು, ಇವೆಲ್ಲಕ್ಕೂ ಹೊರ ರಾಜ್ಯಗಳ ಲಿಂಗ್ ಇದೆ. ಹೀಗಾಗಿ ಹೊರ ರಾಜ್ಯ, ದೇಶಗಳಿಂದ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.

Published On - 1:24 pm, Thu, 21 May 20