ಮಂತ್ರಿ ಮಾಧುಸ್ವಾಮಿಗೆ ಮುಖ್ಯಮಂತ್ರಿ ಯಡಿಯೂರಪ್ಪ ವಾರ್ನಿಂಗ್
ಬೆಂಗಳೂರು: ಕೋಲಾರದಲ್ಲಿ ರೈತ ಮಹಿಳೆಗೆ ಸಚಿವ ಜೆ.ಸಿ.ಮಾಧುಸ್ವಾಮಿ ಱಸ್ಕಲ್ ಎಂದ ವಿಚಾರಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಸಿಎಂ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿರುವುದು ಸರಿಯಲ್ಲ. ಈ ರೀತಿ ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಮಾತನಾಡಬಾರದು. ಸಚಿವರಾಗಿ ರೈತ ಮಹಿಳೆ ಜತೆ ಈ ರೀತಿ ಮಾತಾಡಿದ್ದು ತಪ್ಪು. ನಾನು ರೈತ ಮಹಿಳೆ ಹಾಗೂ ಮಾಧುಸ್ವಾಮಿ ಜತೆ ಮಾತಾಡುತ್ತೇನೆ. ಸಚಿವರು ಈ ರೀತಿ ಮಾತಾಡಿದ್ದನ್ನ ಸಹಿಸಿಕೊಳ್ಳಲು ಆಗಲ್ಲ. ಇನ್ನು ಮುಂದೆ ಈ ರೀತಿ ಆಗದಂತೆ ಕ್ರಮ […]
ಬೆಂಗಳೂರು: ಕೋಲಾರದಲ್ಲಿ ರೈತ ಮಹಿಳೆಗೆ ಸಚಿವ ಜೆ.ಸಿ.ಮಾಧುಸ್ವಾಮಿ ಱಸ್ಕಲ್ ಎಂದ ವಿಚಾರಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಸಿಎಂ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿರುವುದು ಸರಿಯಲ್ಲ.
ಈ ರೀತಿ ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಮಾತನಾಡಬಾರದು. ಸಚಿವರಾಗಿ ರೈತ ಮಹಿಳೆ ಜತೆ ಈ ರೀತಿ ಮಾತಾಡಿದ್ದು ತಪ್ಪು. ನಾನು ರೈತ ಮಹಿಳೆ ಹಾಗೂ ಮಾಧುಸ್ವಾಮಿ ಜತೆ ಮಾತಾಡುತ್ತೇನೆ. ಸಚಿವರು ಈ ರೀತಿ ಮಾತಾಡಿದ್ದನ್ನ ಸಹಿಸಿಕೊಳ್ಳಲು ಆಗಲ್ಲ. ಇನ್ನು ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳುತ್ತೇನೆ. ಜೆ.ಸಿ.ಮಾಧುಸ್ವಾಮಿಗೆ ವಾರ್ನ್ ಮಾಡಿದ್ದೇನೆ ಎಂದ್ರು.
ನಡೆದದ್ದೇನು?: ಕೋಲಾರ ತಾಲೂಕಿನ ಎಸ್ ಅಗ್ರಹಾರದಲ್ಲಿ ಬುಧವಾರ ಕೆರೆ ವೀಕ್ಷಣೆಗೆ ಎಂದು ಕಾನೂನು ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಬಂದಿದ್ದರು. ಈ ವೇಳೆ ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧಕ್ಷೆ ನಳಿನಿ ಎನ್ನುವವರು ಕೆರೆ ಒತ್ತುವರಿ ತೆರವಿಗೆ ಸರ್ಕಾರ ಗಮನ ಹರಿಸುತ್ತಿಲ್ಲ.
ಒತ್ತುವರಿ ಮಾಡಿಕೊಂಡವರಿಗೆ ಪಹಣಿ ನೀಡಲಾಗಿದೆ. ಇದಕ್ಕೆ ಯಾರು ಹೊಣೆ. ಇದನ್ನು ಬಗೆಹರಿಸಿಕೊಡಿ ಎಂದು ಸಚಿವರಿಗೆ ಮನವಿ ಮಾಡಿದ್ರು. ಇದರಿಂದ ಕೋಪಿತರಾದ ಸಚಿವ ಮಾಧುಸ್ವಾಮಿ ನಾನು ಬಾರಿ ಕೆಟ್ಟ ಮನುಷ್ಯ ಇದ್ದಿನಿ, ಬಾಯಿ ಮುಚ್ಚು ರಾಸ್ಕಲ್ ಎಂದು ಅವಾಜ್ ಹಾಕಿದ್ರು.
Published On - 11:58 am, Thu, 21 May 20