ಮುಸ್ಲಿಂ ಸಮುದಾಯದವರಿಗೆ ಹಣ್ಣುಗಳ ಕಿಟ್ ವಿತರಣೆ

Ayesha Banu

|

Updated on:May 21, 2020 | 4:22 PM

ಕೊಪ್ಪಳ: ಕೊರೊನಾ ವೈರಸ್ ಭೀತಿಯಲ್ಲಿ ಇಡೀ ಭಾರತವನ್ನು ಲಾಕ್​ಡೌನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ಕಾರ್ಯಕ್ರಮಗಳು ರದ್ದಾಗಿವೆ, ಈ ಸಮಯದಲ್ಲಿ ಮುಸ್ಲಿಂ ಸಮುದಾಯದವರಿಗೆ ರಂಜಾನ್ ಹಬ್ಬಕ್ಕೆ ಹೊರಗೆ ಹೋಗದೆ ಮನೆಯಲ್ಲಿ ಪ್ರಾರ್ಥನೆ ಮಾಡಿ ಲಾಕ್​ಡೌನ್​ಗೆ ಸಹಕರಿಸುತ್ತಿದ್ದಾರೆ. ರಂಜಾನ್ ತಿಂಗಳಲ್ಲಿ ಮುಸ್ಲಿಂ ಸಮುದಾಯದವರು ನಿರಂತರ ಒಂದು ತಿಂಗಳ ಕಾಲ ಉಪವಾಸ ಮಾಡಿ ಹಬ್ಬ ಆಚರಣೆ ಮಾಡ್ತಾರೆ. ಹೀಗಾಗಿ ಲಾಕ್​ಡೌನ್ ಸಮಯದಲ್ಲಿ ಉಪವಾಸ ಮಾಡ್ತಿರೋ ಮುಸ್ಲಿಂ ಸಮುದಾಯದವರಿಗೆ ನಗರಸಭೆ ಸದಸ್ಯರು ಹಣ್ಣುಗಳ ಕಿಟ್ ಹಂಚಿ ನೆರವಿಗೆ ಬಂದಿದ್ದಾರೆ. ಕೊಪ್ಪಳದ ವಿಜಯನಗರ […]

ಮುಸ್ಲಿಂ ಸಮುದಾಯದವರಿಗೆ ಹಣ್ಣುಗಳ ಕಿಟ್ ವಿತರಣೆ

ಕೊಪ್ಪಳ: ಕೊರೊನಾ ವೈರಸ್ ಭೀತಿಯಲ್ಲಿ ಇಡೀ ಭಾರತವನ್ನು ಲಾಕ್​ಡೌನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ಕಾರ್ಯಕ್ರಮಗಳು ರದ್ದಾಗಿವೆ, ಈ ಸಮಯದಲ್ಲಿ ಮುಸ್ಲಿಂ ಸಮುದಾಯದವರಿಗೆ ರಂಜಾನ್ ಹಬ್ಬಕ್ಕೆ ಹೊರಗೆ ಹೋಗದೆ ಮನೆಯಲ್ಲಿ ಪ್ರಾರ್ಥನೆ ಮಾಡಿ ಲಾಕ್​ಡೌನ್​ಗೆ ಸಹಕರಿಸುತ್ತಿದ್ದಾರೆ.

ರಂಜಾನ್ ತಿಂಗಳಲ್ಲಿ ಮುಸ್ಲಿಂ ಸಮುದಾಯದವರು ನಿರಂತರ ಒಂದು ತಿಂಗಳ ಕಾಲ ಉಪವಾಸ ಮಾಡಿ ಹಬ್ಬ ಆಚರಣೆ ಮಾಡ್ತಾರೆ. ಹೀಗಾಗಿ ಲಾಕ್​ಡೌನ್ ಸಮಯದಲ್ಲಿ ಉಪವಾಸ ಮಾಡ್ತಿರೋ ಮುಸ್ಲಿಂ ಸಮುದಾಯದವರಿಗೆ ನಗರಸಭೆ ಸದಸ್ಯರು ಹಣ್ಣುಗಳ ಕಿಟ್ ಹಂಚಿ ನೆರವಿಗೆ ಬಂದಿದ್ದಾರೆ.

ಕೊಪ್ಪಳದ ವಿಜಯನಗರ ಬಡಾವಣೆಯಲಿ ನಿರಂತರವಾಗಿ ಉಪವಾಸ ಇರೋ ಮುಸ್ಲಿಂ ಬಾಂಧವರಿಗೆ ನಗರಸಭೆ ಸದಸ್ಯೆ ದೇವಕ್ಕ ಕಂದಾರಿ ಮನೆ ಮನೆಗೆ ಹೋಗಿ ಹಣ್ಣುಗಳ ಕಿಟ್ ವಿತರಣೆ ಮಾಡಿ ರಂಜಾನ್ ಹಬ್ಬಕ್ಕೆ ಶುಭ ಕೋರಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada