RTPS: ರಾಯಚೂರು ವಿದ್ಯುತ್ ಉತ್ಪಾದನಾ ಕೇಂದ್ರದ 3 ಘಟಕಗಳು ಬಂದ್; ಅನಧಿಕೃತ ಲೋಡ್​ ಶೆಡ್ಡಿಂಗ್ ಆರೋಪ​​

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 16, 2023 | 12:36 PM

ರಾಜ್ಯ ಸರ್ಕಾರ ಚುನಾವಣಾ ಪೂರ್ವದಲ್ಲಿಯೇ ನೀಡಿದ್ದ 5 ಗ್ಯಾರಂಟಿಗಳಲ್ಲೊಂದಾದ 200 ಯೂನಿಟ್​ವರೆಗೆ ಉಚಿತ ವಿದ್ಯುತ್​ಗೆ ಈಗಾಗಲೇ ಚಾಲನೆ ನೀಡಿದ್ದು, ಇದರ ಬೆನ್ನಲ್ಲೇ ಇದೀಗ ರಾಯಚೂರು ವಿದ್ಯುತ್ ಉತ್ಪಾದನಾ ಘಟಕದಲ್ಲಿ (Raichur Thermal Power Station) 3 ಯೂನಿಟ್​​ಗಳು​ ಸ್ಥಗಿತ ಮಾಡಲಾಗಿದೆ.

RTPS: ರಾಯಚೂರು ವಿದ್ಯುತ್ ಉತ್ಪಾದನಾ ಕೇಂದ್ರದ 3 ಘಟಕಗಳು ಬಂದ್; ಅನಧಿಕೃತ ಲೋಡ್​ ಶೆಡ್ಡಿಂಗ್ ಆರೋಪ​​
ಆರ್​ಟಿಪಿಎಸ್​
Follow us on

ರಾಯಚೂರು:ರಾಜ್ಯ ಸರ್ಕಾರ ಚುನಾವಣಾ ಪೂರ್ವದಲ್ಲಿಯೇ ನೀಡಿದ್ದ 5 ಗ್ಯಾರಂಟಿಗಳಲ್ಲೊಂದಾದ 200 ಯೂನಿಟ್​ವರೆಗೆ ಉಚಿತ ವಿದ್ಯುತ್​ಗೆ ಈಗಾಗಲೇ ಚಾಲನೆ ನೀಡಿದೆ. ರಾಜ್ಯದಲ್ಲಿ ವಿದ್ಯುತ್​​ನ ಅಗತ್ಯವೂ ಸಹಜವಾಗಿಯೇ ಹೆಚ್ಚಾಗಿದೆ. ಈ ಸಂದರ್ಭದಲ್ಲೇ ರಾಯಚೂರು(Raichur )ವಿದ್ಯುತ್ ಉತ್ಪಾದನಾ ಘಟಕದಲ್ಲಿ(Raichur Thermal Power Station) 3 ಯೂನಿಟ್​​ಗಳು​ ಸ್ಥಗಿತ ಮಾಡಲಾಗಿದೆ. ರಾಜ್ಯದ ಒಟ್ಟು ವಿದ್ಯುತ್ ಬೇಡಿಕೆ ಸುಮಾರು 12000 ಮೆಗಾವ್ಯಾಟ್ ಇದ್ದು, ಆ ಪೈಕಿ ಆರ್​ಟಿಪಿಎಸ್ ಬಹುಪಾಲು ವಿದ್ಯುತ್​ನ್ನು ಪೂರೈಸುತ್ತಿತ್ತು. ಹೌದು ಒಟ್ಟು 1720 ಮೆಗಾವ್ಯಾಟ್ ವಿದ್ಯುತ್ ಪೂರೈಸುತ್ತಿದ್ದು, ಸದ್ಯ ಆರ್​ಟಿಪಿಎಸ್​ನ 3 ಯೂನಿಟ್​ಗಳು ಸ್ಥಗಿತಗೊಂಡಿರುವ ಹಿನ್ನೆಲೆ ಕೇವಲ‌ 400-500 ಮೆಗಾವ್ಯಾಟ್ ವಿದ್ಯುತ್ ಮಾತ್ರ ಉತ್ಪಾದನೆ ಮಾಡಲಾಗುತ್ತಿದೆ.

ಸ್ಥಗಿತಗೊಂಡ ಯೂನಿಟ್​ಗಳ ದುರಸ್ತಿ ಕಾರ್ಯಕ್ಕೆ ಸಿಬ್ಬಂದಿ ಹರಸಾಹಸ

ಇನ್ನು ಕಳೆದ ಜನವರಿ 24 ರಂದು ಕೂಡ ತಾಂತ್ರಿಕ ಸಮಸ್ಯೆಯಿಂದ ಆರ್​ಟಿಪಿಎಸ್​ನ 4ಘಟಕಗಳು ಬಂದ್​ ಆಗಿದ್ದವು. ಹೌದು ಇರುವ ಒಟ್ಟು 8ಘಟಕಗಳ ಪೈಕಿ 4ನ್ನು ಬಂದ್​ ಮಾಡಲಾಗಿತ್ತು. ಇದೀಗ ಮತ್ತೆ ಅದೇ ಸಮಸ್ಯೆಯಿಂದ 3 ಘಟಕಗಳನ್ನು ಸ್ಥಗಿತ ಮಾಡಲಾಗಿದೆ. ಈ ರೀತಿ ಪದೇ ಪದೆ ತಾಂತ್ರಿಕ ದೋಷದಿಂದ ಯೂನಿಟ್​ ಬಂದ್ ಆಗುತ್ತಿದ್ದು, ಅನಧಿಕೃತ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆಯೆಂದು ಆರೋಪಿಸಿ ಆರ್​ಟಿಪಿಎಸ್​​ನ ಅಧಿಕಾರಿಗಳ ವಿರುದ್ಧ ಸ್ಥಳೀಯರು, ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:4 ಸಾವಿರ ಕೋಟಿ ರೂ. ವಿದ್ಯುತ್​ ಬಿಲ್​ ಬಾಕಿ ಉಳಿಸಿಕೊಂಡ ನೀರಾವರಿ ಇಲಾಖೆ: ಡಿಕೆ ಶಿವಕುಮಾರ್​

ಸಂಪೂರ್ಣ ಬಂದ್ ಆಗಿರುವ ಒಂದನೇ ಯುನಿಟ್

ಇನ್ನು ಈಗಾಗಲೇ ಇರುವ 8 ಘಟಕಗಳಲ್ಲಿ ಕಳೆದ ಒಂದು ವರ್ಷದ ಹಿಂದೆ ಕಲ್ಲಿದ್ದಲು ಪೂರೈಸುವ ಬಂಕರ್ ಕುಸಿದ ಪರಿಣಾಮ ಒಂದನೇ ಯುನಿಟ್ ಸಂಪೂರ್ಣ ಬಂದ್​ ಆಗಿದೆ. ಇತ್ತ ಮಳೆ ಅಭಾವದಿಂದ ಜಲ ಮೂಲಗಳ ಮೂಲಕ ವಿದ್ಯುತ್ ಉತ್ಪಾದಿಸುವುದು ಕುಂಠಿತವಾಗಿದ್ದು, ಹೀಗಾಗಿ ಕಲ್ಲಿದ್ದಲು ಮೂಲಕ ವಿದ್ಯುತ್ ಉತ್ಪಾದಿಸು ಘಟಕಗಳ ಮೇಲೆ ಒತ್ತಡ ಹೆಚ್ಚಿದೆ. ಈ ಮಧ್ಯೆ ರಾಯಚೂರಿನ ಆರ್​ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಮೂರು ಯುನಿಟ್​ಗಳು ಬಂದ್ ಆಗಿದೆ. ಈ ಬಗ್ಗೆ ಆರ್ ಟಿಪಿಎಸ್ ಅಧಿಕಾರಿಗಳು ‘ಇತ್ತ ನಿನ್ನೆಯಷ್ಟೇ ಆರನೇ ಯುನಿಟ್ ರಿಪೇರಿಯಾಗಿದೆ. ಸದ್ಯ ತಾಂತ್ರಿಕ ದೋಷದಿಂದ ಮೂರು ಯುನಿಟ್​ಗಳು ಸ್ಥಗಿತವಾಗಿದ್ದು, ಐದು ಯುನಿಟ್​ಗಳಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ