AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಕ್ಕಲಕೋಟೆ ಬಳಿ ಉತ್ಖನನದಲ್ಲಿ ಸಿಕ್ತು ಒಂದರ ಪಕ್ಕದಲ್ಲೊಂದು 5 ಸಾವಿರ ವರ್ಷ ಹಳೆಯ ಅಸ್ಥಿಪಂಜರಗಳು!

ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆ ಉತ್ಖನನದಲ್ಲಿ ಪ್ರಾಗೈತಿಹಾಸಿಕ ಕಾಲದ ಎರಡು ಮಾನವ ಅಸ್ಥಿಪಂಜರಗಳು ಪತ್ತೆಯಾಗಿವೆ. 5.5 ಅಡಿ ಉದ್ದದ ಈ ಅಸ್ಥಿಪಂಜರಗಳು 3,000 ರಿಂದ 5,000 ವರ್ಷಗಳಷ್ಟು ಹಳೆಯದೆಂದು ಅಂದಾಜಿಸಲಾಗಿದೆ. ಇವುಗಳ ಸುತ್ತ ಮಡಿಕೆ ಚೂರುಗಳು, ಸೂಕ್ಷ್ಮ ಶಿಲಾಯುಗದ ಅವಶೇಷಗಳು ದೊರೆತಿದ್ದು, ಇದು ನವಶಿಲಾಯುಗ ಅಥವಾ ಪ್ರಾಗೈತಿಹಾಸಿಕ ಕಾಲದ ಪ್ರಮುಖ ಮಾನವ ನೆಲೆಯಾಗಿತ್ತು ಎಂಬುದಕ್ಕೆ ಸಾಕ್ಷಿ ದೊರೆತಂತಾಗಿದೆ.

ತೆಕ್ಕಲಕೋಟೆ ಬಳಿ ಉತ್ಖನನದಲ್ಲಿ ಸಿಕ್ತು ಒಂದರ ಪಕ್ಕದಲ್ಲೊಂದು 5 ಸಾವಿರ ವರ್ಷ ಹಳೆಯ ಅಸ್ಥಿಪಂಜರಗಳು!
ತೆಕ್ಕಲಕೋಟೆ ಬಳಿ ಉತ್ಖನನದಲ್ಲಿ ಸಿಕ್ತು ಒಂದರ ಪಕ್ಕದಲ್ಲೊಂದು 5 ಸಾವಿರ ವರ್ಷ ಹಳೆಯ ಅಸ್ಥಿಪಂಜರಗಳು!
ವಿನಾಯಕ ಬಡಿಗೇರ್​
| Edited By: |

Updated on:Feb 08, 2026 | 12:06 PM

Share

ಬಳ್ಳಾರಿ, ಫೆಬ್ರುವರಿ 08: ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಗೌಡ್ರ ಮೂಲೆ ಬೆಟ್ಟದಲ್ಲಿ ನಡೆಯುತ್ತಿರುವ ಉತ್ಖನನದ (Excavation) ವೇಳೆ ಪ್ರಾಗೈತಿಹಾಸಿಕ ಕಾಲಕ್ಕೆ ಸೇರಿದ ಎರಡು ಮಾನವ ಅಸ್ಥಿಪಂಜರಗಳು ಪತ್ತೆಯಾಗಿವೆ. ಅಮೆರಿಕಾದ ಹಾರ್ಟ್‌ವಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಹಾಗೂ ಉತ್ಖನನ ತಂಡದ ಸಹ ನಿರ್ದೇಶಕಿ ನಮಿತಾ ಎಸ್. ಸುಗಂಧಿ ನೇತೃತ್ವದ ಸಂಶೋಧಕರ ತಂಡ ಈ ಉತ್ಖನನ ಕಾರ್ಯವನ್ನು ನಡೆಸುತ್ತಿದೆ. ಕಳೆದ ವಾರ ಮಣ್ಣನ್ನು ಅಗೆದಾಗ ಮೊದಲು ಮಾನವ ಮೂಳೆಗಳು ಪತ್ತೆಯಾಗಿದ್ದು, ನಂತರ ಮತ್ತಷ್ಟು ಆಳವಾಗಿ ಅಗೆದಾಗ ಸುಮಾರು 5.5 ಅಡಿ ಉದ್ದದ ಎರಡು ಸಂಪೂರ್ಣ ಮಾನವ ಅಸ್ಥಿಪಂಜರಗಳು ಒಂದರ ಪಕ್ಕದಲ್ಲೊಂದು ಪತ್ತೆಯಾಗಿವೆ.

ಪಳೆಯುಳಿಕೆ ಸುತ್ತ ಮುತ್ತ ಮಡಿಕೆ ಚೂರುಗಳು ಪತ್ತೆ

ಅಸ್ಥಿಪಂಜರಗಳು ಯಾವುದೇ ರೀತಿಯಲ್ಲಿ ಹಾಳಾಗದೆ ಉತ್ತಮ ಸ್ಥಿತಿಯಲ್ಲಿ ದೊರೆತಿದ್ದು, ಮೃತದೇಹಗಳ ಮೇಲೆ ಕಲ್ಲುಗಳನ್ನು ಇಟ್ಟು ಶವಸಂಸ್ಕಾರ ಮಾಡಿದ ಪದ್ಧತಿಯ ಸ್ಪಷ್ಟ ಕುರುಹುಗಳು ಕಂಡುಬಂದಿವೆ. ಪಳೆಯುಳಿಕೆಗಳ ಸುತ್ತ ಮಡಿಕೆ ಚೂರುಗಳು, ಸೂಕ್ಷ್ಮ ಶಿಲಾಯುಗದ ಅವಶೇಷಗಳು ಹಾಗೂ ಮಾನವ ಆಯುಧ ಬಳಕೆಗೆ ಸಂಬಂಧಿಸಿದ ಸಾಕ್ಷ್ಯಗಳು ಪತ್ತೆಯಾಗಿವೆ. ಇದರಿಂದ ಇದು ನವಶಿಲಾಯುಗ ಅಥವಾ ಪ್ರಾಗೈತಿಹಾಸಿಕ ಕಾಲದ ಪ್ರಮುಖ ಮಾನವ ನೆಲೆ ಆಗಿರಬಹುದೆಂದು ತಜ್ಞರು ಅಂದಾಜಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ವೀಡಿಯೋ ನೋಡಿ

ಇದನ್ನೂ ಓದಿ Ballari: ತೆಕ್ಕಲಕೋಟೆ ಬಳಿ ಉತ್ಖನನದ ವೇಳೆ ಸಾವಿರಾರು ವರ್ಷಗಳ ಹಿಂದಿನ ಅಸ್ಥಿಪಂಜರ ಪತ್ತೆ

ಕಾರ್ಬನ್ ಡೇಟಿಂಗ್‌ಗೆ ನಿರ್ಧಾರ

ಪತ್ತೆಯಾದ ಅಸ್ಥಿಪಂಜರಗಳು ಸುಮಾರು 3,000 ರಿಂದ 5,000 ವರ್ಷಗಳ ಹಿಂದಿನವು ಆಗಿರಬಹುದೆಂದು ಹೇಳಲಾಗಿದ್ದು, ನಿಖರ ಕಾಲಮಾನದ ನಿರ್ಧಾರಕ್ಕಾಗಿ ಕಾರ್ಬನ್ ಡೇಟಿಂಗ್ ಪರೀಕ್ಷೆಗೆ ಒಳಪಡಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಉತ್ಖನನ ಕಾರ್ಯದ ನಿರ್ದೇಶಕರಾದ ಪರಂಪರೆ ಇಲಾಖೆ ಉಪ ನಿರ್ದೇಶಕ ಆರ್. ಶೇಜೇಶ್ವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತೆಕ್ಕಲಕೋಟೆ ಪ್ರದೇಶವನ್ನು ಸಂರಕ್ಷಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಯಾರೀ ಪ್ರೊ. ನಮಿತಾ ಎಸ್ ಸುಗಂಧಿ?

ಅಮೆರಿಕದ ಹಾಟ್೯ ವಿಕ್ ವಿಶ್ವವಿದ್ಯಾಲಯ ಪ್ರೊ. ನಮಿತಾ ಎಸ್ ಸುಗಂಧಿ, 2019ರಲ್ಲಿ ಮೊದಲ ಬಾರಿಗೆ ತೆಕ್ಕಲಕೋಟೆಗೆ ಉತ್ಖನನಕ್ಕೆ ಬಂದಿದ್ದರು. ನಂತರ 2025 ರಲ್ಲಿ ಸಂಶೋಧನಾ ಪ್ರಬಂಧ ಸಿದ್ದಪಡಿಸಲು ಎರಡನೇ ಸಲ ಭೇಟಿ ನೀಡಿದ್ದರು. ಜೊತೆಗೆ Man and Environment – Tekkalakote ಪ್ರಬಂಧ ಮಂಡನೆಯನ್ನೂ ಮಾಡಿದ್ದರು. ಪ್ರಸ್ತುತವಾಗಿ ಮೂರನೇ ಬಾರಿ ಭೇಟಿ ನೀಡಿರುವ ನಮಿತಾ, ಉತ್ಖನನ ಕಾರ್ಯದಲ್ಲಿ ನಿರತರಾಗಿದ್ದಾರೆ.

ಯಾಕೆ ಇದೇ ಸ್ಥಳ ಆಯ್ಕೆ ಮಾಡಿದರು?

ಮೈಸೂರು ಪ್ರಾಶ್ಚವಸ್ತು ಇಲಾಖೆಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ಎಮ್ ಎಸ್ ನಾಗರಾಜ ರಾವ್, 1964 ರಲ್ಲಿ ಉತ್ಖನನ ಮಾಡಿ ತೆಕ್ಕಲಕೋಟೆ ಇತಿಹಾಸವನ್ನ ಜಗತ್ತಿಗೆ ತಿಳಿಯಪಡಿಸಿದ್ದರು. ಈ ಬಗ್ಗೆ The stone is hill dwellers in Tekkalakote ಪುಸ್ತಕದಲ್ಲಿ ವಿವರಣೆಯನ್ನೂ ನೀಡಿದ್ದಾರೆ. ಈ ಪುಸ್ತಕ ಓದಿದ ನಮಿತಾ ಎಸ್ ಸುಗಂಧಿ, ಕುತೂಹಲದಿಂದ ಸಂಶೋಧನೆಗೆ ತೆಕ್ಕಲಕೋಟೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:06 am, Sun, 8 February 26

ಬಿಗ್ ಬಾಸ್ ಮುಗಿದು ಇಷ್ಟು ದಿನವಾದ್ರೂ ಕಡಿಮೆ ಆಗಿಲ್ಲ ಗಿಲ್ಲಿ ನಟ ಹವಾ
ಬಿಗ್ ಬಾಸ್ ಮುಗಿದು ಇಷ್ಟು ದಿನವಾದ್ರೂ ಕಡಿಮೆ ಆಗಿಲ್ಲ ಗಿಲ್ಲಿ ನಟ ಹವಾ
ಕನಕಪುರ ಶ್ರೀನಿವಾಸ್ ಅಶ್ಲೀಲ ಮಾತಿಗೆ ಕಿಚ್ಚ ಸುದೀಪ್ ಖಡಕ್ ರಿಯಾಕ್ಷನ್
ಕನಕಪುರ ಶ್ರೀನಿವಾಸ್ ಅಶ್ಲೀಲ ಮಾತಿಗೆ ಕಿಚ್ಚ ಸುದೀಪ್ ಖಡಕ್ ರಿಯಾಕ್ಷನ್
SDPI ರಾಜ್ಯಾಧ್ಯಕ್ಷ ಮಜೀದ್ ಕಾರಿನಲ್ಲಿ ಏಕಾಏಕಿ ಬೆಂಕಿ!
SDPI ರಾಜ್ಯಾಧ್ಯಕ್ಷ ಮಜೀದ್ ಕಾರಿನಲ್ಲಿ ಏಕಾಏಕಿ ಬೆಂಕಿ!
ಪ್ರಯಾಣ ಕಾಲದಲ್ಲಿ ಅಪಶಕುನಗಳು ಎದುರಾದ್ರೆ ಏನು ಮಾಡಬೇಕು?
ಪ್ರಯಾಣ ಕಾಲದಲ್ಲಿ ಅಪಶಕುನಗಳು ಎದುರಾದ್ರೆ ಏನು ಮಾಡಬೇಕು?
ಇಂದು ಈ ರಾಶಿಯವರು ಬೇರೆಯವರ ಕೆಲಸಕ್ಕೆ ಸಮಯ ವ್ಯರ್ಥ ಮಾಡಬಾರದು
ಇಂದು ಈ ರಾಶಿಯವರು ಬೇರೆಯವರ ಕೆಲಸಕ್ಕೆ ಸಮಯ ವ್ಯರ್ಥ ಮಾಡಬಾರದು
ಸೂರಜ್‌ಕುಂಡ್ ಜಾತ್ರೆ ದುರಂತ; ಸುನಾಮಿ ಉಯ್ಯಾಲೆ ತುಂಡಾಗಿ ಪೊಲೀಸ್ ಸಾವು
ಸೂರಜ್‌ಕುಂಡ್ ಜಾತ್ರೆ ದುರಂತ; ಸುನಾಮಿ ಉಯ್ಯಾಲೆ ತುಂಡಾಗಿ ಪೊಲೀಸ್ ಸಾವು
‘ಕಾವು, ಕಾವು’ ಎಂದವರಿಗೆ ಟಾಂಗ್ ಕೊಟ್ಟ ಗಿಲ್ಲಿ: ವಿಡಿಯೋ
‘ಕಾವು, ಕಾವು’ ಎಂದವರಿಗೆ ಟಾಂಗ್ ಕೊಟ್ಟ ಗಿಲ್ಲಿ: ವಿಡಿಯೋ
ರೊಮಾರಿಯೊ ಶೆಫರ್ಡ್​ಗೆ ಹ್ಯಾಟ್ರಿಕ್ ವಿಕೆಟ್; ವಿಂಡೀಸ್​ಗೆ ಜಯ
ರೊಮಾರಿಯೊ ಶೆಫರ್ಡ್​ಗೆ ಹ್ಯಾಟ್ರಿಕ್ ವಿಕೆಟ್; ವಿಂಡೀಸ್​ಗೆ ಜಯ
ಮಲೇಷ್ಯಾದ 800 ಕಲಾವಿದರಿಂದ ಪ್ರಧಾನಿ ಮೋದಿಗೆ ಶಾಸ್ತ್ರೀಯ ನೃತ್ಯದ ಸ್ವಾಗತ
ಮಲೇಷ್ಯಾದ 800 ಕಲಾವಿದರಿಂದ ಪ್ರಧಾನಿ ಮೋದಿಗೆ ಶಾಸ್ತ್ರೀಯ ನೃತ್ಯದ ಸ್ವಾಗತ
ನಿಂದಿಸಿದ ಶ್ರೀನಿವಾಸ್​​ಗೆ ಪ್ರತ್ಯುತ್ತರ ಕೊಟ್ಟ ನಿರ್ದೇಶಕ ಎಪಿ ಅರ್ಜುನ್
ನಿಂದಿಸಿದ ಶ್ರೀನಿವಾಸ್​​ಗೆ ಪ್ರತ್ಯುತ್ತರ ಕೊಟ್ಟ ನಿರ್ದೇಶಕ ಎಪಿ ಅರ್ಜುನ್