ವಾಹನ ತಪಾಸಣೆ ವೇಳೆ ಕಾರಿನಲ್ಲಿ 99 ಲಕ್ಷ ರೂ ಪತ್ತೆ: 9.84 ಲಕ್ಷ ರೂ ಮದ್ಯ ವಶಕ್ಕೆ
ದಾಖಲೆಯಿಲ್ಲದೆ ಸಾಗಿಸುತ್ತಿದ್ದ 99 ಲಕ್ಷ ರೂ. ಹಣವನ್ನು ಜಿಲ್ಲೆಯ ಮದ್ದೂರು ತಾಲೂಕಿನ ನಿಡಘಟ್ಟ ಚೆಕ್ಪೋಸ್ಟ್ ಬಳಿ ಹಣ ಪತ್ತೆ ಆಗಿದೆ. ಕೆ.ಆರ್.ಪೇಟೆ ಮೂಲದ ಅಡಕೆ ವ್ಯಾಪಾರಿಗೆ ಸೇರಿದ ಹಣವಾಗಿದ್ದು, ಬೆಂಗಳೂರಿನಿಂದ ಮಂಡ್ಯದತ್ತ ತೆರಳುತ್ತಿದ್ದ ಕಾರಿನಲ್ಲಿ 99 ಲಕ್ಷ ರೂ. ಸಿಕ್ಕಿದೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡ್ಯ, ಮಾರ್ಚ್ 18: ಚೆಕ್ಪೋಸ್ಟ್ಗಳು ತಲೆ ಎತ್ತಿವೆ. ಬಸ್, ಕಾರು, ಬೈಕ್ ಹೀಗೆ ಎಲ್ಲಾ ವಾಹನಗಳಲ್ಲೂ ಇಂಚಿಂಚು ಜಾಲಾಡಲಾಗುತ್ತಿದೆ. ಚುನಾವಣಾ ನೀತಿ ಸಂಹಿತೆ (Code of Conduct) ಬೆನ್ನಲ್ಲೇ ಪೊಲೀಸರು ಅಲರ್ಟ್ ಆಗಿದ್ದಾರೆ. ಅಕ್ರಮಕ್ಕೆ ಕಡಿವಾಣ ಹಾಕಲು ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ. ಇವೆಲ್ಲದರ ಮಧ್ಯೆ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 99 ಲಕ್ಷ ರೂ. ಹಣವನ್ನು ಜಿಲ್ಲೆಯ ಮದ್ದೂರು ತಾಲೂಕಿನ ನಿಡಘಟ್ಟ ಚೆಕ್ಪೋಸ್ಟ್ ಬಳಿ ಹಣ ಪತ್ತೆ ಆಗಿದೆ. ಕೆ.ಆರ್.ಪೇಟೆ ಮೂಲದ ಅಡಕೆ ವ್ಯಾಪಾರಿಗೆ ಸೇರಿದ ಹಣವಾಗಿದ್ದು, ಬೆಂಗಳೂರಿನಿಂದ ಮಂಡ್ಯದತ್ತ ತೆರಳುತ್ತಿದ್ದ ಕಾರಿನಲ್ಲಿ 99 ಲಕ್ಷ ರೂ. ಸಿಕ್ಕಿದೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಳಿಕ ಆದಾಯ ತೆರಿಗೆ ಇಲಾಖೆಗೆ ಕೇಸ್ ವರ್ಗಾಯಿಸಲಿದ್ದಾರೆ.
ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ 3 ಲಕ್ಷ 82 ಸಾವಿರ ರೂ. ವಶಕ್ಕೆ
ಹುಬ್ಬಳ್ಳಿ ತಾಲೂಕಿನ ಸುಳ್ಳದ ರಸ್ತೆಯ ಚೆಕ್ ಪೋಸ್ಟ್ನಲ್ಲಿ ದಾಖಲೆಗಳಿಲ್ಲದೇ ಸಾಗಾಟ ಮಾಡುತ್ತಿದ್ದ 3 ಲಕ್ಷ 82 ಸಾವಿರ ರೂ. ಹಣ ವಶಕ್ಕೆ ಪಡೆಯಲಾಗಿದೆ. ಓಂಪ್ರಕಾಶ್ ಎಂಬವರ ಕಾರಿನಲ್ಲಿ ಹಣ ಸಾಗಾಟ ಮಾಡಲಾಗುತಿತ್ತು. ಕಿರೇಸೂರದಿಂದ ಹುಬ್ಬಳ್ಳಿಗೆ ಕಾರು ಬರುತ್ತಿದ್ದ ವೇಳೆ ಪತ್ತೆ ಆಗಿದೆ. ಹಣ ವಶಕ್ಕೆ ಪಡೆದು ನೋಡಲ್ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ.
3.89 ಲಕ್ಷ ರೂ. ವಶಕ್ಕೆ
ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಲೋಕಿಕೆರೆ ಚೆಕ್ ಪೋಸ್ಟ್ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3.89 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ಚೆಕ್ ಪೋಸ್ಟ್ ಮುಖ್ಯಸ್ಥ ಮಲ್ಲಿಕಾರ್ಜುನರವರ ನೇತೃತ್ವದಲ್ಲಿ ಎಸ್.ಎಸ್.ಟಿ. ತಂಡದಿಂದ 3.89 ರೂ. ನಗದು ವಶಕ್ಕೆ ಪಡೆಯಲಾಗಿದೆ. ಸದ್ಯ ವಶಕ್ಕೆ ಪಡೆದ ಹಣದ ಬಗ್ಗೆ ತನಿಖೆ ನಡೆಯುತ್ತಿದೆ. ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಮಾಹಿತಿ ನೀಡಿದ್ದಾರೆ.
9.84 ಲಕ್ಷ ರೂ.ಗಳ ಮೌಲ್ಯದ ವಿವಿಧ ಮದ್ಯ ವಶಕ್ಕೆ
ಬಾಗಲಕೋಟೆ ಜಿಲ್ಲೆಯ ವಿವಿಧೆಡೆ ವಾಹನ ತಪಾಸಣೆ ಮಾಡಲಾಗಿದ್ದು, ಅಕ್ರಮವಾಗಿ ಸಾಗಿಸುತ್ತಿದ್ದ 9.84 ಲಕ್ಷ ರೂ. ವಿವಿಧ ಮದ್ಯ ವಶಕ್ಕೆ ಪಡೆಯಲಾಗಿದೆ. ಹುನಗುಂದ ವಲಯದ ಕೂಡಲಸಂಗಮ ಕ್ರಾಸ್ನಲ್ಲಿ ಒಟ್ಟು 75526 ರೂ.ಗಳ ಮೌಲ್ಯದ 10.80 ಲೀ ಮದ್ಯ, ಮುಧೋಳ ವಲಯದ ದಾದನಟ್ಟಿ ಕ್ರಾಸ್ನಲ್ಲಿ ಒಟ್ಟು 9.09 ಲಕ್ಷ ರೂ.ಗಳ ಮೌಲ್ಯದ 40.50 ಲೀಟರ್ ಗೋವಾ ಮದ್ಯವನ್ನು ಖಚಿತ ಮಾಹಿತಿ ಮೇರೆಗೆ ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: ನೀತಿ ಸಂಹಿತೆ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ, ಸೀರೆಗಳ ಜಪ್ತಿ, ಇಂದು ಎಲ್ಲೆಲ್ಲಿ ಏನೇನು ಪತ್ತೆಯಾಯ್ತು?
ಆರೋಪಿತರು ಕೂಡಲಸಂಗಮ ಗ್ರಾಮದ ಶಂಕರಯ್ಯ ಸರಗಣಾಚಾರಿ ಹಾಗೂ ಬಸವನ ಬಾಗೆವಾಡಿಯ ಆಕಾಶ ಅಂದೊಡಗಿ ಎಂಬುವವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿ ಸಲ್ಲಿಕೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ಮಾಹಿತಿ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.