ನೆಲಮಂಗಲ: ಬಟ್ಟೆ ತೊಳೆಯುವ ವಿಚಾರದಲ್ಲಿ ಪತಿ ಮತ್ತು ಪತ್ನಿಯ ನಡುವೆ ಜಗಳ ನಡೆದಿದೆ. ಇವರಿಬ್ಬರ ಮಧ್ಯೆ ಬಂದ ಅತ್ತೆಗೆ ಕಬ್ಬಿಣದ ರಾಡ್ನಿಂದ ಸೊಸೆ ತಲೆಗೆ ಬಡಿದ ಘಟನೆ ಜೋಗಿಪಾಳ್ಯದಲ್ಲಿ ನಡೆದಿದೆ. ಪತಿ ಮೋಹನ್ ಮತ್ತು ಪತ್ನಿ ಪದ್ಮಾವತಿ ನಡುವೆ ಜಗಳ ಉಂಟಾಗಿದ್ದು, ಜಗಳದ ಮಧ್ಯೆ ಮಾತನಾಡಲು ಬಂದ ಅತ್ತೆ ರಂಗಮ್ಮಳಿಗೆ ಕಬ್ಬಿಣದ ರಾಡ್ನಿಂದ ಏಟು ಬಿದ್ದಿದೆ. ರಂಗಮ್ಮಳಿಗೆ ಗಂಭೀರ ಗಾಯವಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬೆಂಗಳೂರಿನಲ್ಲಿ ದುಷ್ಕರ್ಮಿಗಳಿಂದ ಯುವಕನ ಹತ್ಯೆ:
ಸಾರ್ವಜನಿಕ ಶೌಚಾಲಯದಲ್ಲಿ ಯುವಕನ ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕೊಲೆಯಾದ ಯುವಕನಿಗೆ 25 ವರ್ಷ ವಯಸ್ಸು. ನಿನ್ನೆ ತಡರಾತ್ರಿ ಹತ್ಯೆ ನಡೆದಿದ್ದು, ಸಾರ್ವಜನಿಕರೊಬ್ಬರು ಶೌಚಾಲಯಕ್ಕೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Bengaluru Crime: ಫೇಸ್ಬುಕ್ ಲೈವ್ ವಿಡಿಯೋ ಅಪ್ಲೋಡ್ ಮಾಡಿದ ನಂತರ ವ್ಯಕ್ತಿ ಆತ್ಮಹತ್ಯೆ
ಇದನ್ನೂ ಓದಿ: ಯಶವಂತಪುರದಲ್ಲಿ ಹುಡುಗಿ ವಿಚಾರಕ್ಕೆ ಕಿತ್ತಾಟ: ಜಗಳ ಬಿಡಿಸಲು ಹೋದ PU ವಿದ್ಯಾರ್ಥಿಯ ಬರ್ಬರ ಕೊಲೆ