ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಒಂದೇ ಕಾಲಿನ ಮಗು ಜನನ

ಅಪರೂಪದ ಮಗುವಿಗೆ ಸೊಂಟದ ಕೆಳಗೆ ಕೇವಲ ಒಂದು ಕಾಲಿನ ಆಕಾರ ಬಿಟ್ಟರೆ ಸಾಮಾನ್ಯ ದೈಹಿಕ ಭಾಗಗಳು ಇರಲಿಲ್ಲ. ಇದು ವೈದ್ಯಕೀಯ ಲೋಕಕ್ಕೆ ಅಚ್ಚರಿ ಮೂಡಿಸಿದೆ. ಅಲ್ಲದೇ ಕಿಮ್ಸ್ನ ಮಕ್ಕಳ ವಿಭಾಗದ ತಜ್ಞರು ಜನಿಸಿದ ವಿಚಿತ್ರ ಮಗುವಿನ ಬಗ್ಗೆ ಮಾಹಿತಿ ಸಂಗ್ರಹಿಸಲು ಹಲವು ಕಡೆಗಳಲ್ಲಿ ಸಿದ್ಧತೆ ನಡೆಸಿದ್ದರು.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಒಂದೇ ಕಾಲಿನ ಮಗು ಜನನ
ಒಂದು ಕಾಲಿನ ಮಗು
Follow us
TV9 Web
| Updated By: sandhya thejappa

Updated on: Jun 21, 2021 | 9:54 AM

ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯಲ್ಲಿ ಒಂಟಿಗಾಲಿನ ಅಪರೂಪದ ಮಗುವಿನ ಜನನವಾಗಿದೆ. ಮಗುವಿನ ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ. ನಿನ್ನೆ (ಜೂನ್ 20) ಮಧ್ಯಾಹ್ನ ಹೇರಿಗೆ ನೋವಿನಿಂದ ಬಳಲುತಿದ್ದ ಮಹಿಳೆ ಕಿಮ್ಸ್​ಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾದ ಕೆಲವೇ ಗಂಟೆಗಳಲ್ಲಿ ಹೆರಿಗೆ ಮಾಡಿಸಲಾಗಿತ್ತು. ಮಗು ವಿಚಿತ್ರ ಅಂಗಾಗದ ಮೂಲಕ ಜನಿಸಿದ್ದರಿಂದ ವೈದ್ಯರಲ್ಲಿ ಅಚ್ಚರಿ ಮೂಡುವಂತೆ ಮಾಡಿದೆ.

ಅಪರೂಪದ ಮಗುವಿಗೆ ಸೊಂಟದ ಕೆಳಗೆ ಕೇವಲ ಒಂದು ಕಾಲಿನ ಆಕಾರ ಬಿಟ್ಟರೆ ಸಾಮಾನ್ಯ ದೈಹಿಕ ಭಾಗಗಳು ಇರಲಿಲ್ಲ. ಇದು ವೈದ್ಯಕೀಯ ಲೋಕಕ್ಕೆ ಅಚ್ಚರಿ ಮೂಡಿಸಿದೆ. ಅಲ್ಲದೇ ಕಿಮ್ಸ್ನ ಮಕ್ಕಳ ವಿಭಾಗದ ತಜ್ಞರು ಜನಿಸಿದ ವಿಚಿತ್ರ ಮಗುವಿನ ಬಗ್ಗೆ ಮಾಹಿತಿ ಸಂಗ್ರಹಿಸಲು ಹಲವು ಕಡೆಗಳಲ್ಲಿ ಸಿದ್ಧತೆ ನಡೆಸಿದ್ದರು. ಆದರೆ ಜನಿಸಿದ 20 ನಿಮಿಷದಲ್ಲಿ ಮಗು ಸಾವನ್ನಪ್ಪಿದೆ.

ಹಳೇ ಹುಬ್ಬಳ್ಳಿಯ ಕೊಳೆಕಾರಾ ಫ್ಲಾಟ್ನ ನಿವಾಸಿ ಹುಸೇನ್ ಸಾಬ್ ಹಾಗೂ ರೇಷ್ಮಾ ಬಾನು ದಂಪತಿಗೆ ವಿಚಿತ್ರ ಮಗು ಜನಿಸಿತ್ತು. ಗರ್ಭಿಣಿಯಾಗಿ ಏಳು ತಿಂಗಳ ಬಳಿಕ ರೇಷ್ಮಾ ಬಾನುಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಕಿಮ್ಸ್​​ಗೆ ದಾಖಲಾಗಿದ್ದರು. ಸಮಯಕ್ಕಿಂತ ಮುಂಚೆಯೇ ಹೆರಿಗೆ ಆಗಿದ್ದರಿಂದ ಸಹಜವಾಗಿ ಮಗು ಬೆಳವಣಿಗೆ ಕಡಿಮೆಯಾಗಿರಬಹುದೆಂದು ಎಂದು ವೈದ್ಯರು ನಿರೀಕ್ಷಿಸಿದ್ದರು. ಆದರೆ ಒಂದೆ ಕಾಲಿನ ವಿಚಿತ್ರ ಮಗು ಜನಿಸಿದ್ದರಿಂದ ವೈದ್ಯಕೀಯ ಲೋಕಕ್ಕೆ ಸವಾಲಾಗಿತ್ತು. ಕೆಲ ಹೊತ್ತಿನಲ್ಲೆ ಮಗು ಸಾವನ್ನಪ್ಪಿದ್ದರಿಂದ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲಾಗಿದೆ.

ಅನುವಂಶೀಯ ಸಮಸ್ಯೆಯೇ ಕಾರಣ ವಿಚಿತ್ರ ಮಗು ಜನನಕ್ಕೆ ಅನುವಂಶೀಯ ಸಮಸ್ಯೆ ಕಾರಣವೆಂದು ಕಿಮ್ಸ್ ವೈದ್ಯರು ಹೇಳುತ್ತಿದ್ದಾರೆ. ಅನುವಂಶೀಯ ಸಮಸ್ಯೆಯಿಂದ ವಿಚಿತ್ರ ಮಗುವಿನ ಜನನವಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ

ಕೊಪ್ಪಳದಲ್ಲಿ ಎಂಟು ಕಾಲಿರುವ ಅಪರೂಪದ ಕುರಿ ಜನನ

ತುಮಕೂರಿನಲ್ಲಿ ಎರಡು ತಲೆಯ ಹಸುವಿನ ಕರು ಜನನ; ಅಚ್ಚರಿಗೊಂಡ ಗ್ರಾಮಸ್ಥರು

(A single legged baby was born at KIMS Hospital in hubli)

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?