Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಮಕೂರಿನಲ್ಲಿ ಎರಡು ತಲೆಯ ಹಸುವಿನ ಕರು ಜನನ; ಅಚ್ಚರಿಗೊಂಡ ಗ್ರಾಮಸ್ಥರು

ಕರು ಜನಿಸಿದ ಮರುಕ್ಷಣವೇ ಮರಣಹೊಂದಿದ್ದು, ಗ್ರಾಮಸ್ಥರು ಅಚ್ಚರಿಗೊಳಗಾಗಿದ್ದಾರೆ. ಎರಡು ತಲೆ ಇರುವ ಕರುವನ್ನು ಕಂಡು ಸ್ಥಳೀಯರು ದೇವರ ಮೊರೆ ಹೋಗಿ ಪೂಜೆ ಸಲ್ಲಿಸಿದ್ದಾರೆ. ಇದರಿಂದ ಗ್ರಾಮಕ್ಕೀಡಾಗಬಹುದೆಂಬ ನಂಬಿಕೆ ಗ್ರಾಮಸ್ಥರದ್ದಾಗಿದೆ. ಎರಡು ತಲೆಯ ಕರುವಿಗೆ ಗ್ರಾಮಸ್ಥರು ಅರಿಶಿನ ಕುಂಕುಮ ಇಟ್ಟು, ಹೂ ಹಾಕಿ ಪೂಜೆ ಸಲ್ಲಿಸಿದ್ದಾರೆ.

ತುಮಕೂರಿನಲ್ಲಿ ಎರಡು ತಲೆಯ ಹಸುವಿನ ಕರು ಜನನ; ಅಚ್ಚರಿಗೊಂಡ ಗ್ರಾಮಸ್ಥರು
ಎರಡು ತಲೆ ಇರುವ ಕರು
Follow us
TV9 Web
| Updated By: sandhya thejappa

Updated on: Jun 19, 2021 | 10:00 AM

ತುಮಕೂರು: ಇತ್ತೀಚೆಗೆ ಪ್ರಕೃತಿ ವಿಕೋಪಗೊಂಡಿರುವಂತೆ ಕಾಣುತ್ತಿದೆ. ಜನರಿಗೆ ಭಯ ಬೀಳಿಸುವ ಘಟನೆಗಳು ಸಾಕಷ್ಟು ನಡೆಯುತ್ತಿವೆ. ಸದ್ಯ ಅಂತಹದೊಂದು ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ನಡೆದಿದೆ. ಎರಡು ತಲೆ ಇರುವ ಕರು ಜನನವಾಗಿದೆ. ಪಾವಗಡ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಹಸುವೊಂದು ಎರಡು ತಲೆ ಇರುವ ಕರುವಿಗೆ ಜನ್ಮ ನೀಡಿದೆ. ಎರಡು ತಲೆ ಇದ್ದ ಕಾರಣ ಪಶು ವೈದ್ಯರ ಮೂಲಕ ಆಪರೇಷನ್ ಮಾಡಿ ಕರುವನ್ನು ಹೊರ ತೆಗೆಯಲಾಗಿದೆ.

ಕರು ಜನಿಸಿದ ಮರುಕ್ಷಣವೇ ಮರಣಹೊಂದಿದ್ದು, ಗ್ರಾಮಸ್ಥರು ಅಚ್ಚರಿಗೊಳಗಾಗಿದ್ದಾರೆ. ಎರಡು ತಲೆ ಇರುವ ಕರುವನ್ನು ಕಂಡು ಸ್ಥಳೀಯರು ದೇವರ ಮೊರೆ ಹೋಗಿ ಪೂಜೆ ಸಲ್ಲಿಸಿದ್ದಾರೆ. ಇದರಿಂದ ಗ್ರಾಮಕ್ಕೀಡಾಗಬಹುದೆಂಬ ನಂಬಿಕೆ ಗ್ರಾಮಸ್ಥರದ್ದಾಗಿದೆ. ಎರಡು ತಲೆಯ ಕರುವಿಗೆ ಗ್ರಾಮಸ್ಥರು ಅರಿಶಿನ ಕುಂಕುಮ ಇಟ್ಟು, ಹೂ ಹಾಕಿ ಪೂಜೆ ಸಲ್ಲಿಸಿದ್ದಾರೆ. ಏನಾದರೂ ಅನಾಹುತಗಳು ನಡೆಯುವ ಮುನ್ಸೂಚನೆ ಇದ್ದರೇ ಹೀಗೆ ಆಗುತ್ತದೆ ಎನ್ನುವ ನಂಬಿಕೆ ಸ್ಥಳೀಯರದ್ದು.

ಈ ಹಿಂದೆ ಕೊಪ್ಪಳದಲ್ಲಿ ಒಂದು ಮುಖ, ಎರಡು ದೇಹ, ಎಂಟು ಕಾಲ ಇರುವ ಅಪರೂಪದ ಕುರಿ ಹುಟ್ಟಿತ್ತು. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಾಬಲಕಟ್ಟಿ ಗ್ರಾಮದ ಮಲ್ಲಪ್ಪ ರಾಜೂರು ಎಂಬುವವರ ಮನೆಯಲ್ಲಿ ಎಂಟು ಕಾಲಿನ ಕುರಿ ಜನನವಾಗಿತ್ತು. ಆದರೆ ಇದು ಕೂಡಾ ಹುಟ್ಟಿದ ಕೆಲವೇ ಕ್ಷಣದಲ್ಲಿ ಸಾವನ್ನಪ್ಪಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕರಾದ ಡಾ.ಎಚ್.ನಾಗರಾಜ್, ಕುರಿಗಳ ಸಂತಾನೋತ್ಪತ್ತಿ ಸಮಯದಲ್ಲಿ ವ್ಯತ್ಯಾಸವಾಗಿ ಈ ತರಹದ ಕುರಿಗಳು ಜನನವಾಗುತ್ತದೆ. ಈ ರೀತಿ ಅಪರೂಪದ ಕುರಿಗಳು ಬದುಕುವುದು ತುಂಬಾ ಅಪರೂಪ ಅಂತ ಹೇಳಿದ್ದರು. ಇದೇ ರೀತಿ ಸಂತಾನೋತ್ಪತ್ತಿ ವೇಳೆಯಲ್ಲಿ ವ್ಯತ್ಯಾಸವಾಗಿ ತುಮಕೂರಿನಲ್ಲಿ ಎರಡು ತಲೆಯ ಹಸು ಹಸುವಿನ ಕರು ಹುಟ್ಟಿರಬಹುದು.

ಇದನ್ನೂ ಓದಿ

18 ಪೊಲೀಸರ ವಿರುದ್ಧ ಎಫ್​ಐಆರ್​ ದಾಖಲಿಸಲು ನ್ಯಾಯಾಲಯದ ಆದೇಶ; ಮಾಜಿ ಸೈನಿಕನಿಂದ ದೂರು

ಕೊಪ್ಪಳದಲ್ಲಿ ಎಂಟು ಕಾಲಿರುವ ಅಪರೂಪದ ಕುರಿ ಜನನ

(A two headed cow calf is born at Tumkur)