Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಂಪು ನೀರು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ! ಮನೆಯಲ್ಲಿಯೇ ತಯಾರಿಸುವ ವಿಧಾನ ಇಲ್ಲಿದೆ

fennel water: ಪೊಟ್ಯಾಷಿಯಮ್​, ಮ್ಯಾಂಗನೀಸ್​, ಸತು, ಕಬ್ಬಿಣ ಮತ್ತು ತಾಮ್ರದಂತಹ ಖನಿಜಗಳಿಂದ ಸಮೃದ್ಧವಾಗಿರುತ್ತದೆ. ಇದು ಆರೋಗ್ಯಕ್ಕೆ ಪ್ರಯೋಜನಕಾರಿ. ಹಾಗಿರುವಾಗಿ ಬರೀದಾಗಿ ಸೋಂಪು ತಿನ್ನುವುದರ ಬದಲಾಗಿ ಸೋಂಪಿನ ನೀರು ಮತ್ತು ಟೀ ಮಾಡಿ ಸವಿಯಬಹುದು.

ಸೋಂಪು ನೀರು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ! ಮನೆಯಲ್ಲಿಯೇ ತಯಾರಿಸುವ ವಿಧಾನ ಇಲ್ಲಿದೆ
ಸೋಂಪು ನೀರು
Follow us
TV9 Web
| Updated By: shruti hegde

Updated on: Jun 19, 2021 | 9:35 AM

ಸೋಂಪು(ಬಡೆಸೊಪ್ಪು) ಒಂದು ಮಸಾಲೆ ಪದಾರ್ಥ. ಈ ಕಾಳುಗಳನ್ನು ವಿವಿಧ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಆರೋಗ್ಯಕ್ಕೆ ಉತ್ತಮ ಪ್ರಯೋಜನಗಳನ್ನು ನೀಡುವ ಸೋಂಪನ್ನು ಉಪಯೋಗಿಸುವುದು ಹೇಗೆ? ಸೋಂಪು ನೀರು ತಯಾರಿಸುವ ವಿಧಾನ ತಿಳಿಯಿರಿ. ಆರೋಗ್ಯದ ಕುರಿತಾಗಿ ಹೆಚ್ಚಿನ ಕಾಳಜಿ ಇರಲಿ. ಸಾಮಾನ್ಯವಾಗಿ ಅಡುಗೆ ತಯಾರಿಯಲ್ಲಿ ಸೋಂಪನ್ನು ಹೆಚ್ಚು ಬಳಸುವುದರಿಂದ ಇದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಬಾಯಿ ಫ್ರೆಶ್​ ಆಗಿರಲು ಹೆಚ್ಚು ಸೋಂಪನ್ನು ಬಳಕೆ ಮಾಡುತ್ತಾರೆ. ಇದು ಅನೇಕ ಪೋಷಕಾಂಶಗಳನ್ನು ಹೊಂದಿರುವುದರಿಂದ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನ ಸಿಗುತ್ತದೆ.

ಪೊಟ್ಯಾಷಿಯಮ್​, ಮ್ಯಾಂಗನೀಸ್​, ಸತು, ಕಬ್ಬಿಣ ಮತ್ತು ತಾಮ್ರದಂತಹ ಖನಿಜಗಳಿಂದ ಸಮೃದ್ಧವಾಗಿರುತ್ತದೆ. ಇದು ಆರೋಗ್ಯಕ್ಕೆ ಪ್ರಯೋಜನಕಾರಿ. ಹಾಗಿರುವಾಗ ಬರೀದಾಗಿ ಸೋಂಪು ತಿನ್ನುವುದರ ಬದಲಾಗಿ ಸೋಂಪಿನ ನೀರು ಮತ್ತು ಟೀ ಮಾಡಿ ಸವಿಯಬಹುದು.

ಸೋಂಪು ನೀರನ್ನು ಹೇಗೆ ತಯಾರಿಸುವುದು? ಒಂದು ಚಮಚ ಸೋಂಪಿನ ಬೀಜವನ್ನು ಒಂದು ಲೋಟ ನೀರಿನಲ್ಲಿ ರಾತ್ರಿ ನೆನೆಸಿಡಿ. ಬೆಳಿಗ್ಗೆ ಈ ನೀರನ್ನು ಕುಡಿಯಬಹುದು. ಹಾಗೆಯೇ ಸೋಂಪಿನ ಚಹ ತಯಾರಿಸುವುದು ಹೇಗೆಂದರೆ, ಒಂದು ಪಾತ್ರೆಗೆ ನೀರು ಹಾಕಿ ಇದಕ್ಕೆ ಒಂದು ಚಮಚ ಸೋಂಪಿನ ಬೀಜವನ್ನು ಸೇರಿಸಿ ಕುದಿಸಿ. ಆ ಬಳಿಕ ಪಾತ್ರೆಯನ್ನು ಮುಚ್ಚಿಸಿ. ಸ್ವಲ್ಪ ಸಮಯದ ಬಳಿಕ ಇದು ಹಳದಿ ಬಣ್ಣಕ್ಕೆ ತಿರುಗುತ್ತದೆ. ಈ ಚಹವನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಕುಡಿಯಿರಿ.

ಜೀರ್ಣಕ್ರಿಯೆಗೆ ಸೋಂಪು ಕಾಳು ಸಹಾಯಕ ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಿದ್ದರೆ ಸೋಂಪು ನೀರನ್ನು ಸೇವಿಸಿ. ಇದು ಗ್ಯಾಸ್ಟಿಕ್​ ಸಮಸ್ಯೆಯನ್ನು ದೂರವಾಗಿಸುತ್ತದೆ. ಜತೆಗೆ ಜೀರ್ಣಕ್ರಿಯೆ ಸಮಸ್ಯೆಯಿಂದ ಸುಧಾರಿಸಿಕೊಳ್ಳಬಹುದಾಗಿದೆ. ಮಲಬದ್ಧತೆ, ಅಜೀರ್ಣದಂತಹ ಸಮಸ್ಯೆಗೆ ಪರಿಹಾರ ನೀಡುತ್ತದೆ.

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಸೋಂಪಿನ ಬೀಜಗಳಲ್ಲಿ ಪೊಟ್ಯಾಷಿಯಮ್​ ಸಮೃದ್ಧವಾಗಿರುವದರಿಂದ ದೇಹದಕ್ಕೆ ತುಂಬಾ ಒಳ್ಳೆಯದು. ನಿಮ್ಮ ದೇಹದಲ್ಲಿನ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯಕವಾಗಿದೆ.

ಕಣ್ಣಿನ ಆರೋಗ್ಯಕ್ಕೆ ಸಹಾಯಕಾರಿ ನಿಮ್ಮ ದೃಷ್ಟಿಯನ್ನು ಸುಧಾರಿಸಲು ಸೋಂಪು ಸಹಾಯ ಮಾಡುತ್ತದೆ. ಸೋಂಪಿನಲ್ಲಿ ವಿಟಮಿನ್​ ಎ ಯುಕ್ತ ಪೌಷ್ಟಿಕಾಂಶ ಇರುವುದರಿಂದ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯವಾಗಿದೆ.

ತೂಕ ನಷ್ಟ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸೋಂಪು ಸಹಾಯ ಮಾಡುತ್ತದೆ. ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಸೋಂಪಿನ ಚಹಾ ಅಥವಾ ನೀರನ್ನು ಸೇವಿಸುವುದರಿಂದ ಹೊಟ್ಟೆ ಶುದ್ಧವಾಗುತ್ತದೆ. ಇದರಿಂದ ಆಹಾರ ಸರಿಯಾಗಿ ಜೀರ್ಣಗೊಳ್ಳುತ್ತದೆ ಮತ್ತು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:

ಬಾಯಿ ದುರ್ವಾಸನೆ ಬರೋಕೆ ಈ ಐದು ಆಹಾರಗಳು ಕಾರಣವಾಗಬಹುದು..

ಬಾಯಲ್ಲಿ ನೀರೂರಿಸುವ ಕೊಂಕಣಿ ಶೈಲಿಯ ವಡಾ ಕೊಂಬ್ಡಾ ನೀವೂ ಮಾಡಬಹುದು!