ದಸರಾ , ದೀಪಾವಳಿ ಶಾಪಿಂಗ್ ಪ್ಲ್ಯಾನ್ ಹಾಕಿದ್ದವರಿಗೆ ಬಿಗ್ ಶಾಕ್: ಅ.1ರಿಂದ ಎಲೆಕ್ಟ್ರಾನಿಕ್ ವಸ್ತುಗಳ ದರ ಏರಿಕೆ

ನಾಡಹಬ್ಬ ದಸರಾ ಹಾಗೂ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಹೊಸ ಗೃಹೋಪಯೋಗಿ ಸಾಧನಗಳನ್ನು ಖರೀದಿಸಲು ಯೋಜಿಸುತ್ತಿದ್ದ ಜನಸಾಮಾನ್ಯರಿಗೆ ಉತ್ಪಾದನಾ ಕಂಪನಿಗಳು ಶಾಕ್ ಕೊಟ್ಟಿವೆ. ಹೌದು... ಮುಂಬರುವ ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಎಸಿ, ವಾಷಿಂಗ್ ಮೆಷಿನ್ ಹಾಗೂ ಎಲ್‌ಇಡಿ ಟಿವಿ ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್ ಉಪಕರಣಗಳ ಬೆಲೆ ಹೆಚ್ಚಳವಾಗಲಿದೆ.

ದಸರಾ , ದೀಪಾವಳಿ ಶಾಪಿಂಗ್ ಪ್ಲ್ಯಾನ್ ಹಾಕಿದ್ದವರಿಗೆ ಬಿಗ್ ಶಾಕ್: ಅ.1ರಿಂದ ಎಲೆಕ್ಟ್ರಾನಿಕ್ ವಸ್ತುಗಳ ದರ ಏರಿಕೆ
Appliances
Edited By:

Updated on: Sep 29, 2026 | 10:08 PM

ಬೆಂಗಳೂರು, ಸೆಪ್ಟೆಂಬರ್ 29): ಇದು ದಸರಾ- ಹಬ್ಬದ ಸಂಭ್ರಮ ದಲ್ಲಿದ್ದವರಿಗೆ ಶಾಕಿಂಗ್ ನ್ಯೂಸ್ ಅಂತಾನೇ ಹೇಳಬಹುದು. ದಸರಾ-ದೀಪಾವಳಿಗಾಗಿ ವರ್ಷವೆಲ್ಲ ಜನರು ಕಾಯುತ್ತಿರುತ್ತಾರೆ. ಕಾರಣ ಹಬ್ಬದ ಸಂದರ್ಭದಲ್ಲಿ ಎಲ್ಲಾ ವಸ್ತುಗಳ ಮೇಲೆ ಡಿಸ್ಕೌಂಟ್ ಸಿಗುತ್ತೆ ಎಂದು. ಆದರೆ ಈ ಬಾರಿ ಗ್ರಾಹಕರಿಗೆ ಬೇಸರ ಸಂಗತಿಯೊಂದಿದ್ದು,ಅಕ್ಟೋಬರ್ 1ರಿಂದ ಟಿವಿ, ಫ್ರಿಡ್ಜ್, ವಾಷಿಂಗ್ ಮೆಷಿನ್, ಎಸಿ, ಏರ್ ಕೂಲರ್ ಸೇರಿದಂತೆ, ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳ ದರ ಏರಿಕೆ ಆಗಲಿದೆ.

4ರಿಂದ 8% ರಷ್ಟು ದರ ಏರಿಕೆ

ಈ ವರ್ಷದಲ್ಲಿ ಇದು ಮೂರನೇ ಬಾರಿ ದರ ಏರಿಕೆ ಮಾಡಲಾಗ್ತಿದ್ದು, ಹಬ್ಬದ ಸಂದರ್ಭದಲ್ಲಿ ಆಫರ್ ಸಿಗುತ್ತದೆ ಮನೆಗೆ ಟಿವಿ, ಫ್ರೀಡ್ಜ್, ವಾಷಿಂಗ್ ಮೆಷಿನ್, ಏರ್ ಕೂಲರ್ ಖರೀದಿಸಲು ಮುಂದಾಗಿದ್ದ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟುವುದು ಗ್ಯಾರಂಟಿ. ವಾಷಿಂಗ್ ಮೆಷಿನ್, ಫ್ರಿಡ್ಜ್, ಎಲ್ಇಡಿ ಟಿವಿ ಮೇಲೆ 4% ರಷ್ಟು ಏರಿಕೆ ಆದರೆ ಎಸಿ ಮೇಲೆ 8% ರಷ್ಟು ಏರಿಕೆ ಆಗಲಿದೆ.

ಇದನ್ನೂ ಓದಿ: ರಾಜ್ಯದ ರೈತರಿಗೆ ಸಿಹಿಸುದ್ದಿ​​ ನೀಡಿ ಮೋದಿ ಸರ್ಕಾರ: ಬೆಂಬಲ ಬೆಲೆ ಯೋಜನೆಯಡಿ ಭರ್ಜರಿ ಬೆಳೆ ಖರೀದಿ, ಜೋಶಿ ಧನ್ಯವಾದ

ಇಲೆಕ್ಟ್ರಾನಿಕ್ ಉತ್ಪನ್ನಗಳ ಬೆಲೆಯೇರಿಕೆ ಕಾರಣವೇನು?

ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಆರ್ಥಿಕ ಏರಿಳಿತ ಹಾಗೂ ಕಚ್ಚಾವಸ್ತುಗಳ ಅಭಾವವೇ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಎಂದು ಉದ್ಯಮ ರಂಗದ ತಜ್ಞರು ವಿಶ್ಲೇಷಿಸಿದ್ದಾರೆ. ಪಶ್ಚಿಮ ಏಷ್ಯಾ ಭಾಗದಲ್ಲಿ ಕಂಡುಬಂದಿರುವ ರಾಜಕೀಯ ಅಸ್ಥಿರತೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಅಭಾವ ಮತ್ತು ತಾಮ್ರ ಹಾಗೂ ಉಕ್ಕಿನ ದರದಲ್ಲಾದ ಗಣನೀಯ ಏರಿಕೆಯು ಉತ್ಪಾದನಾ ವೆಚ್ಚವನ್ನು ಹೆಚ್ಚಿಸಿದೆ. ಪರಿಣಾಮವಾಗಿ, ಕಂಪನಿಗಳು ಈ ಹೊರೆಯನ್ನು ನೇರವಾಗಿ ಗ್ರಾಹಕರ ಮೇಲೆ ವರ್ಗಾಯಿಸಲು ತೀರ್ಮಾನಿಸಿವೆ.

ಯುದ್ಧದಿಂದ ತಾಮ್ರ,ಉಕ್ಕು, ಪ್ಲಾಸ್ಟಿಕ್ ದರ ಹೆಚ್ಚಾಗಿರುವ ಹಿನ್ನೆಲೆ,ಎಲೆಕ್ಟ್ರಿಕ್ ವಸ್ತುಗಳ ದರ ಏರಿಕೆ ಮಾಡಲಾಗ್ತಿದೆ.ಕಚ್ಚಾ ವಸ್ತುಗಳ ಬೆಲೆಯಲ್ಲಿ 15% ಏರಿಕೆ ಆಗಿದ್ದು, ಇದರಿಂದ ಕಂಪನಿಗಳಿಗೆ ಹೊರೆ ಆಗುತ್ತಿದೆ ಹೀಗಾಗಿ ದರ ಏರಿಕೆ ಅನಿವಾರ್ಯ ಅಂತಿರೋ ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕಾ ಕಂಪನಿಗಳು. ಈ ಬಗ್ಗೆ ಮಾತನಾಡಿದ ಗೃಹಿಣಿಯರು ದರ ಏರಿಕೆ ಆಗ್ತಿರೋದ್ರಿಂದ ಟಿವಿ ಖರೀದಿಸಲು ಮುಂದಾಗಿದ್ವಿ, ಈಗ ದರ ಕಡಿಮೆ ಆದಮೇಲೆ ಖರೀದಿ ಮಾಡ್ತಿವಿ ಅಂತಿದ್ದಾರೆ.

ಒಟ್ನಲ್ಲಿ ಹಬ್ಬಕ್ಕೆ ಮನೆಗೆ ಟಿವಿ,ಫ್ರಿಡ್ಜ್, ವಾಷಿಂಗ್ ಮೆಷಿನ್ ಖರೀದಿಸಲು ಮುಂದಾಗಿದ್ದವ್ರಿಗೆ ಆಕ್ಟೋಬರ್ ಒಂದರಿಂದ ಶಾಕ್ ಆಗೋದಂತು ಗ್ಯಾರಂಟಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Loading...
Unable to load recommendations.
Follow Us