ಬೆಂಗಳೂರು, ಏಪ್ರಿಲ್ 23: ಆಹಾರ ಇಲಾಖೆ (Food Department) ಈಗಾಗಲೇ ಜನಸಾಮಾನ್ಯರು ಸೇವಿಸುವ ಆಹಾರದ ಮೇಲೆ ಹದ್ದಿನ ಕಣ್ಣಿಟ್ಟಿದೆ. ಅನೇಕ ಆಹಾರ ಪದಾರ್ಥಗಳ (Food items) ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ನಡೆಸುತ್ತಿದೆ. ಪರೀಕ್ಷಾ ವರದಿ ಆಧರಿಸಿ ಕಳಪೆ ಅಥವಾ ಕಲಬೆರಕೆ ಮಾಡುವವರ ವಿರುದ್ಧ ಕ್ರಮವನ್ನ ಕೈಗೊಳ್ಳುತ್ತಿದೆ. ಇಡ್ಲಿ, ಬಟಾಣಿ ಸೇರಿದಂತೆ ಅನೇಕ ತಿನಿಸುಗಳ ಬಳಿಕ, ಇದೀಗ ಮಸಾಲೆ ಪದಾರ್ಥಗಳ ಮೇಲೆ ಗಮನಹರಿಸಿದೆ.
ಜೀರಿಗೆಯಲ್ಲಿ ಕಲಬೆರೆಕೆ ಜೊತೆಗೆ ಬಣ್ಣ ಕೂಡ ಬಳಕೆ ಮಾಡಲಾಗುತ್ತಿದೆ ಎನ್ನಲಾಗಿದೆ. ಜೀರಿಗೆಗೆ ಬಣ್ಣದ ಕೋಟಿಂಗ್, ಅಥವಾ ಲೆಡ್ ಕ್ರೋಮೆಟ್ ಕೆಮಿಕಲ್ ಮಿಕ್ಸ್ ಮಾಡುವ ಸಾಧ್ಯತೆ ಇರುತ್ತೆ. ಇದರ ಜೊತೆಗೆ ಇದರ ವಾಲ್ಯೂಮ್ ಹೆಚ್ಚಳ ಮಾಡಲು, ಮರದ ಡಸ್ಟ್ ಹಾಗೂ ಕಸ ಮಣ್ಣು ಸೇರಿಸಲಾಗುತ್ತಿದೆ.
ಈ ಹಿನ್ನೆಲೆ ನಗರದಲ್ಲಿ ಕಳಪೆ ಗುಣಮಟ್ಟದ ಜೀರಿಗೆ ಮಾರಾಟವಾಗುತ್ತಿದೆ ಎಂಬ ಮಾಹಿತಿ ದೊರೆತಿದೆ. ಇನ್ನು ಆಹಾರ ಪದಾರ್ಥಗಳಲ್ಲಿನ ಕಲಬೆರಕೆಯಿಂದ ಆರೋಗ್ಯದ ಮೇಲೆ ಗಂಭಿರ ಪರಿಣಾಮ ಬೀರುತತ್ತದೆ. ಹೀಗಾಗಿ, ಎಚ್ಚರವಹಿಸುವಂತೆ ಆಹಾರ ತಜ್ಞರು ಎಚ್ಚರಿಸಿದ್ದಾರೆ.
ಇನ್ನು, ಈಗಾಗಲೇ ಬೆಂಗಳೂರಿನ ಅನೇಕ ಭಾಗಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಕಡೆಗಳಿಂದ ಜೀರಿಗೆಯ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಈ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಇದ್ರ ವರದಿ ಕೆಲವೇ ದಿನಗಳಲ್ಲಿ ಬರಲಿದೆ. ಇದರಲ್ಲಿ ಏನೆಲ್ಲ ಅಂಶಗಳು ಸೇರಿದೆ ಎನ್ನುವುದನ್ನ ತಿಳಿದ ಬಳಿಕ ಕಲಬೆರೆಕೆ ಅಥವಾ ಬಣ್ಣದ ಕೋಟಿಂಗ್ ಮಾಡಲಾಗುತ್ತಿದಿಯಾ ಅನ್ನೋದ್ರ ಕುರಿತು ಕ್ರಮ ಕೈಗೊಳ್ಳಲು ಆಹಾರ ಇಲಾಖೆ ಪ್ಲಾನ್ ಮಾಡುತ್ತಿದೆ. ಇನ್ನು ರೆ.ನಿರಂತರ ಆಹಾರ ಕಲಬೆರೆಕೆ ಹಿನ್ನೆಲೆಯಲ್ಲ ಸಿಟಿ ಜನರು ಕೂಡ ಬೇಸತ್ತು ಹೋಗಿದ್ದಾ
ಇದನ್ನೂ ಓದಿ: ಪನ್ನೀರ್ ಪ್ರಿಯರಿಗೆ ಶಾಕಿಂಗ್ ಸುದ್ದಿ: ಆಹಾರ ಇಲಾಖೆ ಪರೀಕ್ಷೆ ವೇಳೆ ಬ್ಯಾಕ್ಟೀರಿಯಾ ಅಂಶ ಪತ್ತೆ
ಒಟ್ಟಿನಲ್ಲಿ ಜನರ ಆರೋಗ್ಯಕ್ಕೆ ಅನೇಕ ತಿನಿಸುಗಳ ಕೆಟ್ಟ ಪರಿಣಾಮ ಬೀರುತ್ತಿದ್ವು. ಇದೀಗ ಮಸಾಲೆ ಪದಾರ್ಥಗಳು ಕೂಡಾ ಇದೇ ಸಾಲಿಗೆ ಸೇರುತ್ತಾ ಇಲ್ವಾ ಅನ್ನೋದನ ವರದಿ ಬಂದ ಬಳಿಕ ತಿಳಿಯಲಿದೆ.
Published On - 6:37 pm, Wed, 23 April 25