ಹಿರಿಯ ನಾಗರಿಕರ ‘ದಂತಪಂಕ್ತಿ’ ಯೋಜನೆಗೆ ವಯೋಮಿತಿ ಇಳಿಕೆ ಮಾಡಿದ ಸರ್ಕಾರ
ಕರ್ನಾಟಕ ಸರ್ಕಾರವು ಹಿರಿಯ ನಾಗರಿಕರ ದಂತ ಭಾಗ್ಯ ಯೋಜನೆಯ ವಯೋಮಿತಿಯನ್ನು 60 ರಿಂದ 45 ವರ್ಷಕ್ಕೆ ಇಳಿಸಿದೆ. ಸಂಪೂರ್ಣ ದಂತಪಂಕ್ತಿಗೆ 2000 ರೂ.ವರೆಗೆ ಮತ್ತು ಭಾಗಶಃ ದಂತಪಂಕ್ತಿಗೆ 1000 ರೂ.ವರೆಗೆ ವೆಚ್ಚ ಹೆಚ್ಚಳವಾಗಿದೆ. ಈ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಹಿರಿಯ ನಾಗರಿಕರಿಗೆ ಉಚಿತ ದಂತಪಂಕ್ತಿ ಒದಗಿಸುವ ಉದ್ದೇಶವಿದೆ. ವೆಚ್ಚ ಹೆಚ್ಚಳಕ್ಕೆ ದಂತ ಸಾಮಗ್ರಿಗಳ ಬೆಲೆ ಏರಿಕೆ ಕಾರಣ ಎಂದು ಸರ್ಕಾರ ತಿಳಿಸಿದೆ.

ಬೆಂಗಳೂರು, ಜುಲೈ 28: ಹಿರಿಯ ನಾಗರಿಕರ ದಂತಪಂಕ್ತಿ (Dentition) ಯೋಜನೆಗೆ ವಯೋಮಿತಿ ಇಳಿಕೆ ಮಾಡಿ ರಾಜ್ಯ ಸರ್ಕಾರ (Karnataka Government) ಆದೇಶ ಹೊರಡಿಸಿದೆ. ದಂತ ಭಾಗ್ಯ ಯೋಜನೆ ಸೌಲಭ್ಯ ಪಡೆಯಲು ಹಿರಿಯ ನಾಗರಿಕರ (Senior citizens) ವಯೋಮಿತಿಯನ್ನು 60 ವರ್ಷದಿಂದ 45 ವರ್ಷಕ್ಕೆ ಇಳಿಸಲಾಗಿದೆ. ಸಂಪೂರ್ಣ ದಂತಪಂಕ್ತಿಗೆ 750 ರೂ. ರಿಂದ 2000 ರೂ.ಗೆ ಗಳಿಗೆ ಹಾಗೂ ಭಾಗಶಃ ದಂತಪಂಕ್ತಿಗೆ 300 ರೂ. ರಿಂದ 1000 ರೂ.ಗೆ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ.
ಆದೇಶ ಪತ್ರದಲ್ಲಿ ಏನಿದೆ?
“ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಹಿರಿಯ ನಾಗರಿಕರಿಗೆ ಉಚಿತವಾಗಿ ದಂತ ಪಂಕ್ತಿ ನೀಡುವ ಉದ್ದೇಶದಿಂದ ದಂತ ಭಾಗ್ಯ ಯೋಜನೆಯನ್ನು ಜಾರಿಗೊಳಿಸಲು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ದಂತ ಭಾಗ್ಯ ಯೋಜನೆ ಸೌಲಭ್ಯ ಪಡೆಯಲು ಹಿರಿಯ ನಾಗರಿಕರ ವಯೋಮಿತಿಯನ್ನು 60 ವರ್ಷದಿಂದ 45 ವರ್ಷಕ್ಕೆ ಇಳಿಸಲಾಗಿದೆ. ಹಾಗೂ ಆಸ್ಪತ್ರೆ/ಕಾಲೇಜಿಗೆ ಗುಣಮಟ್ಟದ ದಂತ ಪಂಕ್ತಿಯನ್ನು ನೀಡಲು ಪ್ರತಿ ರೋಗಿಗೆ ರೂ.500.00 ರಿಂದ ರೂ.750.00 ಹೆಚ್ಚಿಸಲಾಗಿದೆ.”
“ಪ್ರತಿ ಸಂಪೂರ್ಣ ದಂತ ಪಂಕ್ತಿಗೆ ರೂ.750.00 ರಿಂದ ರೂ.2000.00 ಗಳಿಗೆ ಹಾಗೂ ಭಾಗಶ: ದಂತಪಂಕ್ತಿಗೆ ರೂ.300.00 ರಿಂದ 1000.00 ಗಳಿಗೆ ಹೆಚ್ಚಿಸುವುದರೊಂದಿಗೆ ಇನ್ನಿತರ ಮಾರ್ಪಡುಗಳೊಂದಿಗೆ ಆದೇಶ ಹೊರಡಿಸಲಾಗಿದೆ.”
“ದಂತ ಭಾಗ್ಯ ಯೋಜನೆಯಲ್ಲಿ ದಂತ ಪಂಕ್ತಿಗಳನ್ನು ತಯಾರಿಸುವ ಸಾಮಾಗ್ರಿಗಳು, ಕನ್ಸೂಮಬಲ್ ಮತ್ತು ಇತರೆ ತಯಾರಿಕ ವೆಚ್ಚಗಳು ಹೆಚ್ಚಾಗುತ್ತಿರುವುದರಿಂದ ಪ್ರಸ್ತುತ ದರಗಳನ್ನು ಪರಿಷ್ಕರಿಸಬೇಕಾಗುತ್ತದೆ. ಆದುದರಿಂದ ದಂತಭಾಗ್ಯ ಯೋಜನೆಯಡಿ ಸಂಪೂರ್ಣ ದಂತಪಂಕ್ತಿಗೆ ನೀಡಲಾಗುತ್ತಿರುವ ರೂ. 2000 ಗಳನ್ನು ರೂ. 3000 ಗಳಿಗೆ ಹೆಚ್ಚಿಸಲು ರೂ. 50.00 ಲಕ್ಷಗಳ ಹೆಚ್ಚುವರಿ ದಂತಭಾಗ್ಯದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಕೋರಲಾಗಿದೆ.”
ಇದನ್ನೂ ಓದಿ: ಗ್ರೇಟರ್ ಬೆಂಗಳೂರು: 5 ಪಾಲಿಕೆಗಳನ್ನು ರಚಿಸಿ ಸರ್ಕಾರ ಆದೇಶ
“ದಂತ ಭಾಗ್ಯ ಯೋಜನೆಯ ದಂತವಂಕ್ರಿಗಳ ಯೂನಿಟ್ ದರಗಳ ಹೆಚ್ಚಳದಿಂದ ಉಂಟಾಗುವ ಹೆಚ್ಚುವರಿ ಮೊತ್ತವನ್ನು ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಇಲಾಖೆಗೆ ಒದಗಿಸಲಾದ ಅನುದಾನಕ್ಕೆ ಸೀಮಿತಗೊಳಿಸಿ ವೆಚ್ಚ ಭರಿಸುವ ಷರತ್ತಿಗೊಳವಟ್ಟು ಸಹಮತಿ ನೀಡಲಾಗಿದೆ” ಎಂದು ಆದೇಶ ಪತ್ರದಲ್ಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:26 pm, Mon, 28 July 25



