ಕಲಘಟಗಿ ಕಾರ್ಮಿಕ ಇಲಾಖೆಯಲ್ಲಿ ಏಜೆಂಟರ ದರ್ಬಾರ್; ಸರ್ಕಾರಿ ಶುಲ್ಕ 30 ಆದ್ರೆ ಏಜೆಂಟರು ಪಡೆಯುತ್ತಿರುವುದು 700

ಕಾಡ್೯ ನೋಂದಣಿಗೆ ಸರ್ಕಾರಿ ಶುಲ್ಕ ಇರುವುದೇ ಕೇವಲ 25 ರಿಂದ 30 ರೂಪಾಯಿ. ಆದರೆ ಏಜೆಂಟರ್ ಬಡ ಕಾರ್ಮಿಕರನ್ನು ಸುಲಿಗೆ ಮಾಡುತ್ತಿದ್ದಾರೆ. ಅಲ್ಲದೇ ಸರ್ಕಾರಿ ಕಚೇರಿಯಲ್ಲಿಯೇ ರಾಜರೋಷವಾಗಿ ಅವ್ಯವಹಾರ ಮಾಡುತ್ತಿದ್ದು, ಏಜೆಂಟರ ಹಾವಳಿಗೆ ಜನರು‌ ಬೇಸತ್ತಿದ್ದಾರೆ.

ಕಲಘಟಗಿ ಕಾರ್ಮಿಕ ಇಲಾಖೆಯಲ್ಲಿ ಏಜೆಂಟರ ದರ್ಬಾರ್; ಸರ್ಕಾರಿ ಶುಲ್ಕ 30 ಆದ್ರೆ ಏಜೆಂಟರು ಪಡೆಯುತ್ತಿರುವುದು 700
ಕಲಘಟಗಿ ಕಾರ್ಮಿಕ ಇಲಾಖೆಯಲ್ಲಿ ಏಜೆಂಟರ ದರ್ಬಾರ್

ಧಾರವಾಡ: ಜಿಲ್ಲೆಯ ಕಲಘಟಗಿಯ ಕಾರ್ಮಿಕ ಇಲಾಖೆಯಲ್ಲಿ ಏಜೆಂಟರ ಹಾವಳಿ ಹೆಚ್ಚಾಗಿದೆ. ಕಾರ್ಮಿಕ‌ ಇಲಾಖೆ ಫಲಾನಭವಿ ಕಾರ್ಡ್ ಮಾಡಿಸಿಕೊಡಲು ಒನ್ ಟು ಡಬಲ್ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಸಾರ್ವಜನಿಕರೊಬ್ಬರು ಕಾರ್ಮಿಕರಿಂದ ಹಣ ವಸೂಲಿ ಮಾಡುತ್ತಿರುವ ವಿಡಿಯೋ ಮೊಬೈಲ್‌ನಲ್ಲಿ ಸೆರೆ ಹಿಡಿದು ಮಾಧ್ಯಮಕ್ಕೆ ನೀಡಿದ್ದಾರೆ.

ಕೊರೊನಾ ಹಿನ್ನೆಯಲ್ಲಿ ಕಾರ್ಮಿಕರಿಗೆ ಸರ್ಕಾರದಿಂದ ಸೌಲಭ್ಯ ನೀಡಲಾಗುತ್ತಿದೆ. ಅದು ನೋಂದಾಯಿತ ಕಾರ್ಮಿಕರಿಗಷ್ಟೆ ಈ ಸೌಲಭ್ಯ ನೀಡುತ್ತಿರೋ ಹಿನ್ನಲೆ, ಸದ್ಯ ಎಲ್ಲಾ ವಿಭಾಗಗ ಕಟ್ಟಡ, ಕೂಲಿ ಕಾರ್ಮಿಕರು ಇಲಾಖೆಯಿಂದ ನೋಂದಣಿ ಮಾಡಿಸಿಕೊಳ್ಳಲು ಮುಗಿಬಿದಿದ್ದಾರೆ. ಇದನ್ನ ಬಂಡವಾಳ ಮಾಡಿಕೊಂಡಿರೋ ಕೆಲ ಏಜೆಂಟರು ಕಾರ್ಮಿಕ ಇಲಾಖೆಯಲ್ಲೂ ತಮ್ಮ ವಸೂಲಿ ದಂಧೆ ಶುರುಮಾಡಿದ್ದಾರೆ. ಬಡ ಕಾರ್ಮಿಕರಿಂದ ಪ್ರತಿ ನಿತ್ಯ ಸಾವಿರಾರು ರೂಪಾಯಿ ವಸೂಲಿ ಮಾಡಲು ಶುರುಮಾಡಿದ್ದಾರೆ.

ಒಂದೊಂದು ಕಾರ್ಡ್ ಗೆ 600 ರಿಂದ 700 ರೂಪಾಯಿ ಹಣ ವಸೂಲಿ ಮಾಡುತ್ತಿದ್ದು ಸಧ್ಯ ಹಣ ವಸೂಲಿ ಮಾಡುತ್ತಿರುವ ದೃಶ್ಯವನ್ನು ಸಾರ್ವಜನಿಕರೇ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ದುರಂತ ಎನಪ್ಪಾ ಅಂದ್ರೆ ಆ ಕಾಡ್೯ ನೋಂದಣಿಗೆ ಸರ್ಕಾರಿ ಶುಲ್ಕ ಇರುವುದೇ ಕೇವಲ 25 ರಿಂದ 30 ರೂಪಾಯಿ. ಆದರೆ ಏಜೆಂಟರ್ ಬಡ ಕಾರ್ಮಿಕರನ್ನು ಸುಲಿಗೆ ಮಾಡುತ್ತಿದ್ದಾರೆ. ಅಲ್ಲದೇ ಸರ್ಕಾರಿ ಕಚೇರಿಯಲ್ಲಿಯೇ ರಾಜರೋಷವಾಗಿ ಅವ್ಯವಹಾರ ಮಾಡುತ್ತಿದ್ದು, ಏಜೆಂಟರ ಹಾವಳಿಗೆ ಜನರು‌ ಬೇಸತ್ತಿದ್ದಾರೆ.

ಇದನ್ನೂ ಓದಿ: ಕುಲಶೇಖರ ಬಳಿ ರೈಲು ಹಳಿ ಮೇಲೆ ಮಣ್ಣು ಕುಸಿತ; ರೈಲು ಸಂಚಾರ ರದ್ದು

Click on your DTH Provider to Add TV9 Kannada