Aishwarya Amartya Hegde Marriage: ಪ್ರೇಮಿಗಳ ದಿನದಂದು ಸಪ್ತಪದಿ ತುಳಿದ ಡಿ.ಕೆ. ಶಿವಕುಮಾರ್ ಪುತ್ರಿ; ಐಶ್ವರ್ಯಾ-ಅಮರ್ತ್ಯ ಹೆಗ್ಡೆ ಮದುವೆಯ ಸುಂದರ ಕ್ಷಣಗಳು

ಬೆಂಗಳೂರಿನಲ್ಲಿ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯಾ, ಕಾಫಿ ಡೇ ಮಾಲೀಕ ದಿ.ಸಿದ್ಧಾರ್ಥ ಪುತ್ರ ಅಮರ್ಥ್ಯ ಹೆಗ್ಡೆ ವಿವಾಹ ಸಮಾರಂಭ ನಡೆಯುತ್ತಿದೆ. ವಿವಾಹ ಕಾರ್ಯಕ್ರಮಕ್ಕೆ ಗಣ್ಯಾತಿ ಗಣ್ಯರು, ಮಠಾಧೀಶರು ಆಗಮಿಸಿದ್ದಾರೆ.

TV9 Web
| Updated By: ganapathi bhat

Updated on:Apr 06, 2022 | 7:59 PM

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಪುತ್ರಿ ಐಶ್ವರ್ಯ, ಮಾಜಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಮೊಮ್ಮಗ ಮತ್ತು ಕಾಫೀ ಡೇ ಮಾಲೀಕ ದಿ.ಸಿದ್ದಾರ್ಥ್ ಹೆಗ್ಡೆ ಪುತ್ರ ಅಮರ್ತ್ಯ ಹೆಗ್ಡೆ ಜೊತೆ ಇಂದು (ಫೆ.14) ಹಸೆಮಣೆ ಏರಿದ್ದಾರೆ.

DK SHIVAKUMAR DAUGHTER MARRIAGE PHOTOS

1 / 11
ಬೆಳಗ್ಗೆ 9.45 ರ ಮುಹೂರ್ತದಲ್ಲಿ ಸಪ್ತಪದಿ ತುಳಿದಿದ್ದಾರೆ. ಇಂದು ಪ್ರೇಮಿಗಳ ದಿನಾಚರಣೆ. ಈ ದಿನದಂದೇ ಐಶ್ವರ್ಯಾ ಮದುವೆ ನೆರವೇರುತ್ತಿರುವುದು ವಿಶೇಷ ಸಂಭ್ರಮವಾಗಿದೆ.

DK SHIVAKUMAR DAUGHTER MARRIAGE PHOTOS

2 / 11
ಡಿ.ಕೆ. ಶಿವಕುಮಾರ್​ ಹಾಗೂ ಎಸ್​.ಎಂ. ಕೃಷ್ಣ ಇಬ್ಬರೂ ರಾಜಕೀಯ ರಂಗದಲ್ಲಿ ಅತ್ಯಂತ ಪ್ರಭಾವಿಗಳು. ಕಾಫಿ ಡೇ ಮಾಲೀಕ ದಿ. ಸಿದ್ದಾರ್ಥ್ ಕೂಡ ಖ್ಯಾತರು. ಹಾಗಾಗಿ, ರಾಜಕೀಯ ಮತ್ತು ಇತರ ವಲಯದ ದಿಗ್ಗಜರು ಮದುವೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇತ್ತು.

DK SHIVAKUMAR DAUGHTER MARRIAGE PHOTOS

3 / 11
ವಿನಯ್ ಗುರೂಜಿ, ನೊಣವಿನಕೆರೆ ಸ್ವಾಮೀಜಿ ಸಹಿತ ಇತರ ಮಠಾಧೀಶರು ಮದುವೆ ಸಮಾರಂಭದಲ್ಲಿ ಭಾಗವಹಿಸಿ ನವದಂಪತಿಗೆ ಶುಭಹಾರೈಸಿದ್ದಾರೆ.

DK SHIVAKUMAR DAUGHTER MARRIAGE PHOTOS

4 / 11
ಬೆಂಗಳೂರಿನಲ್ಲಿ ಐಶ್ವರ್ಯಾ, ಅಮರ್ತ್ಯ ಹೆಗ್ಡೆ ವಿವಾಹ ಸಮಾರಂಭಕ್ಕೆ ಗಣ್ಯಾತಿ ಗಣ್ಯರು, ಮಠಾಧೀಶರು ಆಗಮಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜಕೀಯ ಮುಖಂಡರಾದ ವಿ.ಸೋಮಣ್ಣ, ಡಾ.ಜಿ.ಪರಮೇಶ್ವರ್, ಶಾಮನೂರು ಶಿವಶಂಕರಪ್ಪ, ಎನ್.ಚಲುವರಾಯಸ್ವಾಮಿ, ಟಿ.ಎ.ನಾರಾಯಣಗೌಡ, ಪ್ರಭಾಕರ ಕೋರೆ, ಮುನಿರತ್ನ, ಕುಮಾರ ಬಂಗಾರಪ್ಪ, ಆರ್.ಸಂಪತ್ ರಾಜ್ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದಾರೆ.

DK SHIVAKUMAR DAUGHTER MARRIAGE PHOTOS

5 / 11
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐಶ್ವರ್ಯಾ-ಅಮರ್ತ್ಯ ಹೆಗ್ಡೆ

DK SHIVAKUMAR DAUGHTER MARRIAGE PHOTOS

6 / 11
ಮದುವೆ ಸಂಪ್ರದಾಯದಂತೆ ಮದುಮಗನನ್ನು ಮದುವೆ ಮಂಟಪಕ್ಕೆ ಡಿ.ಕೆ. ಶಿವಕುಮಾರ್ ಕುಟುಂಬದವರು ಸ್ವಾಗತಿಸಿದ್ದಾರೆ. ಕನ್ಯಾದಾನ ನೆರವೇರಿಸಿದ್ದಾರೆ. ಅಳಿಯ ಅಮರ್ತ್ಯ ಹೆಗ್ಡೆ ಕಾಲು ತೊಳೆದು ಸಂಪ್ರದಾಯ ನೆರವೇರಿಸಿದ್ದಾರೆ.

DK SHIVAKUMAR DAUGHTER MARRIAGE PHOTOS

7 / 11
ಸ್ವಾಮಿಗಳು, ಮಠಾಧೀಶರು, ಗಣ್ಯಾತಿಗಣ್ಯರು ವಧುವರರನ್ನು ಆಶೀರ್ವದಿಸಿದ್ದಾರೆ.

DK SHIVAKUMAR DAUGHTER MARRIAGE PHOTOS

8 / 11
ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ, ಕಾಂಗ್ರೆಸ್ ನಾಯಕ ಜಿ. ಪರಮೇಶ್ವರ್, ಉದ್ಯಮಿ ಅಶೋಕ್ ಖೇಣಿ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಎಐಸಿಸಿ ನಾಯಕ ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್, ಮುಖ್ಯಮಂತ್ರಿ ಯಡಿಯೂರಪ್ಪ ಭಾಗಿ ಸಾಧ್ಯತೆ ಅಂದಾಜಿಸಲಾಗಿದೆ.

DK SHIVAKUMAR DAUGHTER MARRIAGE PHOTOS

9 / 11
ಬೆಂಗಳೂರಿನ ಐಷಾರಾಮಿ ಹೋಟೆಲ್​ಗಳಲ್ಲಿ ಒಂದಾದ ವೈಟ್ ಫೀಲ್ಡ್​ನ ಶೆರಟಾನ್​ನಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿದೆ. ಫೆಬ್ರವರಿ 17ರಂದು ಪ್ರೆಸ್ಟೀಜ್​ ಗಾಲ್ಫ್​​ಶೈರ್​ ರೆಸಾರ್ಟ್​ನಲ್ಲಿ ಆರತಕ್ಷತೆ ಕಾರ್ಯಕ್ರಮ ನೆರವೇರಲಿದೆ.

DK SHIVAKUMAR DAUGHTER MARRIAGE PHOTOS

10 / 11
ಮದುವೆ ಕಾರ್ಯಕ್ರಮ ಇಂದು (ಫೆಬ್ರವರಿ 14) ಆದರೂ, ಮದುವೆ ಕಾರ್ಯಕ್ರಮದ ಸಂಭ್ರಮ ಫೆ.5ರಿಂದಲೇ ಆರಂಭಗೊಂಡಿತ್ತು. ಸಂಗೀತ ಕಾರ್ಯಕ್ರಮಗಳು ರಸವತ್ತಾಗಿ ಏರ್ಪಟ್ಟಿದ್ದವು. ಫೆಬ್ರವರಿ 10ರಂದು ಅರಿಶಿಣ ಕಾರ್ಯಕ್ರಮ ನೆರವೇರಿದೆ. ನವೆಂಬರ್​ 18ರಂದು ಬೆಂಗಳೂರಿನ ಹೊರ ವಲಯದಲ್ಲಿ ಸಿಂಪಲ್​ ಆಗಿ ನಿಶ್ಚಿತಾರ್ಥ ಸಮಾರಂಭವೂ ನೆರವೇರಿತ್ತು.

DK SHIVAKUMAR DAUGHTER MARRIAGE PHOTOS

11 / 11

Published On - 11:05 am, Sun, 14 February 21

Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ