Dharwad Jail: ಜೈಲುಗಳಲ್ಲಿ ಅನಕ್ಷರಸ್ಥ ಕೈದಿಗಳಿಗೆ ಅಕ್ಷರ ಜ್ಞಾನದ ದೀಪ; ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಅಭಿಯಾನ

TV9 Digital Desk

| Edited By: ಸಾಧು ಶ್ರೀನಾಥ್​

Updated on:Nov 04, 2021 | 1:41 PM

ಅನಕ್ಷರತೆ ಮತ್ತಿತರೆ ಕಾರಣದಿಂದ ಸಮಾಜದಲ್ಲಿ ದಿನಾಲೂ ಅಪರಾಧ ಕೃತ್ಯಗಳನ್ನು ಕಾಣುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಸರಕಾರ ರಾಜ್ಯದ ಎಲ್ಲ ಕಾರಾಗೃಹಗಳಲ್ಲಿನ ಅನಕ್ಷರಸ್ಥ ಕೈದಿಗಳನ್ನು ಶಿಕ್ಷಣವಂತರನ್ನಾಗಿ ಮಾಡಲು ಜೈಲುಗಳಲ್ಲಿ ನ. ೧ರಿಂದ ಶಿಕ್ಷಕರಿಂದ ಅಕ್ಷರ ಜ್ಞಾನದ ತಿಳಿವಳಿಕೆ ಮೂಡಿಸುವ ಕಾರ್ಯಕ್ರಮ ಶುರುವಾಗಿದೆ. ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಧಾರವಾಡ ಕೇಂದ್ರ ಕಾರಾಗೃಹದ 120 ಅನಕ್ಷರಸ್ಥ ಕೈದಿಗಳು ಜೈಲುಗಳಲ್ಲಿ ಅಕ್ಷರಭ್ಯಾಸ ಆರಂಭಿಸಿದ್ದಾರೆ. 120 ಕೈದಿಗಳಿಗೆ ಅಕ್ಷರ ಪಾಠ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಒಟ್ಟು 520 ಕೈದಿಗಳಿದ್ದಾರೆ. ಈ ಪೈಕಿ 120 ಅನಕ್ಷರಸ್ಥರು ಹಾಗೂ […]

Dharwad Jail: ಜೈಲುಗಳಲ್ಲಿ ಅನಕ್ಷರಸ್ಥ ಕೈದಿಗಳಿಗೆ ಅಕ್ಷರ ಜ್ಞಾನದ ದೀಪ; ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಅಭಿಯಾನ
ಜೈಲುಗಳಲ್ಲಿ ಅನಕ್ಷರಸ್ಥ ಕೈದಿಗಳನ್ನ ಶಿಕ್ಷಣವಂತರನ್ನಾಗಿ ಮಾಡಲು ಅಕ್ಷರ ಜ್ಞಾನ ಕಾರ್ಯಕ್ರಮ

Follow us on

ಅನಕ್ಷರತೆ ಮತ್ತಿತರೆ ಕಾರಣದಿಂದ ಸಮಾಜದಲ್ಲಿ ದಿನಾಲೂ ಅಪರಾಧ ಕೃತ್ಯಗಳನ್ನು ಕಾಣುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಸರಕಾರ ರಾಜ್ಯದ ಎಲ್ಲ ಕಾರಾಗೃಹಗಳಲ್ಲಿನ ಅನಕ್ಷರಸ್ಥ ಕೈದಿಗಳನ್ನು ಶಿಕ್ಷಣವಂತರನ್ನಾಗಿ ಮಾಡಲು ಜೈಲುಗಳಲ್ಲಿ ನ. ೧ರಿಂದ ಶಿಕ್ಷಕರಿಂದ ಅಕ್ಷರ ಜ್ಞಾನದ ತಿಳಿವಳಿಕೆ ಮೂಡಿಸುವ ಕಾರ್ಯಕ್ರಮ ಶುರುವಾಗಿದೆ. ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಧಾರವಾಡ ಕೇಂದ್ರ ಕಾರಾಗೃಹದ 120 ಅನಕ್ಷರಸ್ಥ ಕೈದಿಗಳು ಜೈಲುಗಳಲ್ಲಿ ಅಕ್ಷರಭ್ಯಾಸ ಆರಂಭಿಸಿದ್ದಾರೆ.

120 ಕೈದಿಗಳಿಗೆ ಅಕ್ಷರ ಪಾಠ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಒಟ್ಟು 520 ಕೈದಿಗಳಿದ್ದಾರೆ. ಈ ಪೈಕಿ 120 ಅನಕ್ಷರಸ್ಥರು ಹಾಗೂ ಅರೆ ಅನಕ್ಷರಸ್ಥರೆಂದು ಗುರುತಿಸಲಾಗಿದೆ. ಇವರ ಪೈಕಿ ಓದು-ಬರಹ ಏನೂ ಗೊತ್ತಿಲ್ಲದವರನ್ನು ಅನಕ್ಷರಸ್ಥರು ಅಂತಾ ಗುರುತಿಸಲಾಗುತ್ತದೆ. ಇನ್ನು 1 ರಿಂದ 4ನೇ ತರಗತಿವರೆಗೆ ಓದಿ ಇದೀಗ ಅದನ್ನೆಲ್ಲಾ ಮರೆತಿರುವವರನ್ನು ಅರೆ ಅನಕ್ಷರಸ್ಥರು ಎಂದು ಗುರುತಿಸಲಾಗಿದೆ. ಕಾರಾಗೃಹಗಳಲ್ಲಿನ ಅನಕ್ಷರಸ್ಥರನ್ನು ಶಿಕ್ಷಣವಂತರನ್ನಾಗಿ ಮಾಡಲು ಜೈಲುಗಳಲ್ಲಿ ಇಬ್ಬರು ಶಿಕ್ಷಕರಿಂದ ಪ್ರತಿದಿನ ಅಕ್ಷರ ಜ್ಞಾನದ ತಿಳಿವಳಿಕೆ ಮೂಡಿಸಲು ಮುಂದಾಗಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಜೈಲುಗಳಲ್ಲಿ ಅಕ್ಷರಾಭ್ಯಾಸ ಶುರು ಬಡತನ, ನಿರುದ್ಯೋಗ, ಅನಕ್ಷರತೆ ಮತ್ತಿತರ ಸಾಮಾಜಿಕ ಕಾರಣದಿಂದ ಅಪರಾಧಗಳ ಪ್ರಮಾಣ ಹೆಚ್ಚಾಗುತ್ತಿದ್ದು, ಇಂತಹ ಅಪರಾಧ ಕೃತ್ಯಗಳ ಆರೋಪ ಹೊತ್ತು ಜೈಲು ಹಕ್ಕಿಯಾಗಿರುವವರಿಗೆ ಶಿಕ್ಷಣ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜೈಲುಗಳಲ್ಲಿ ಅಕ್ಷರಭ್ಯಾಸ ಶುರುವಾಗಿದೆ. ಕೋಪದ ಕೈಗೆ ಬುದ್ದಿ ನೀಡಿ ಅಥವಾ ಆಸೆ, ಆಮಿಷಗಳಿಗೆ ಬಲಿಯಾಗಿ ಅಪರಾಧ ಕೃತ್ಯ ಎಸಗಿದ ಆರೋಪದಲ್ಲಿ ಜೈಲು ಸೇರಿದವರು ಮುಂದೆ ಇಂತಹ ಕೃತ್ಯ ಮುಂದುವರಿಸಬಾರದು. ಅವರು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬುದು ಅಕ್ಷರ ಜ್ಞಾನದ ಸುದುದ್ದೇಶವಾಗಿದೆ.

ಇದರಿಂದ ಜಿಲ್ಲೆಯಲ್ಲಿ ಸಾಕ್ಷರತಾ ಪ್ರಮಾಣವೂ ಹೆಚ್ಚಾಗುತ್ತದೆ. ಹೀಗಾಗಿ ಜಿಲ್ಲೆಯಲ್ಲಿ ಪ್ರಾಮಾಣಿಕನಿಂದ ಹಿಡಿದು ಕೈದಿಯವರೆಗೆ ಯಾರೂ ಕೂಡ ಅನಕ್ಷರಸ್ಥರಾಗಿರಬಾರದು ಎಂಬ ಕಾರಣಕ್ಕೆ ಜಿಲ್ಲಾ ಲೋಕ ಶಿಕ್ಷಣಾಕಾರಿಗಳು ಮತ್ತು ಜಿಲ್ಲಾ ಸಾಕ್ಷರತಾ ಸಮಿತಿಯಿಂದ ಇಲಾಖೆಯ ವಿದ್ಯಾದೀವಿಗೆ ಯೋಜನೆಯಲ್ಲಿ ‘ಶಿಕ್ಷೆಯಿಂದ ಶಿಕ್ಷಣದೆಡೆಗೆ…’ ಘೋಷವಾಕ್ಯದಡಿ ಕಾರಾಗೃಹದಲ್ಲಿ ಜೈಲು ಹಕ್ಕಿಗಳಿಗೆ ಪಾಠ ಕಲಿಸಲು ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ಒಟ್ಟಾರೆ ಕೈದಿಗಳು ಕೂಡ ಸಾಕ್ಷರರಾದಲ್ಲಿ ಲೋಕ ಜ್ಞಾನ ತಿಳಿದು ಮುಂದೆ ಅವರೂ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಹೊರಹೊಮ್ಮಲಿ ಎಂಬ ಸದುದ್ದೇಶ ಈ ಯೋಜನೆಯ ಹಿಂದಿದೆ.

Akshara jnana Literacy programe for illeterate jailmates in dharwad jail

ಅನಕ್ಷರಸ್ಥ ಕೈದಿಗಳಿಗೆ ಅಕ್ಷರ ಜ್ಞಾನದ ದೀಪ; ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಅಭಿಯಾನ

ಬೋಧನೆ ಹೇಗಿರುತ್ತೆ ಗೊತ್ತಾ..? ಜೈಲು ಹಕ್ಕಿಗಳಿಗೆ ಸರಳ ಓದು, ಬರಹ, ಕೂಡುವ, ಕಳೆಯುವ ಲೆಕ್ಕದ ಜೊತೆಗೆ ನೋಟುಗಳನ್ನು ಗುರುತಿಸುವಿಕೆ, ಗುರು- ಹಿರಿಯರನ್ನು ಗೌರವಿಸುವುದು, ದೇಶಪ್ರೇಮ, ಮಾನವೀಯ ಮೌಲ್ಯಗಳ ಅಳವಡಿಕೆ ಮತ್ತಿತರೆ ಒಂದಿಷ್ಟು ನೈತಿಕತೆಯ ಪಾಠ ಮಾಡಲಾಗುವುದು. ಪಾಠ ಮಾಡಲೆಂದೇ ಕಾರಾಗೃಹದಲ್ಲಿ ಇಬ್ಬರು ಶಿಕ್ಷಕರನ್ನು ಈಗಾಗಲೇ ನಿಯೋಜಿಸಿಕೊಳ್ಳಲಾಗಿದೆ. ಅವರು ನ. 1 ರಿಂದ ದಿನಕ್ಕೆ ಒಂದು ಗಂಟೆ ಅಥವಾ ಎರಡು ಗಂಟೆಯಂತೆ ಪಾಠ ಮಾಡಿ, ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುತ್ತಿದ್ದಾರೆ. ಪಠ್ಯ, ಬೋಧನೆ ಪೂರ್ಣಗೊಂಡ ನಂತರ ಕೈದಿಗಳಿಗೆ ಪರೀಕ್ಷೆ ನಡೆಸಿ ಅದರಲ್ಲಿ ಪಾಸಾದವರಿಗೆ ಸರಕಾರ ಸಾಕ್ಷರತಾ ಪ್ರಮಾಣಪತ್ರ ನೀಡಲಿದೆ.

ಇದೊಂದು ಅದ್ಭುತ ಯೋಜನೆ – ಎಂ.ಎ. ಮರಿಗೌಡರ್ ಈ ಯೋಜನೆ ಬಗ್ಗೆ ಟಿವಿ-9 ಡಿಜಿಟಲ್‌ ಜತೆ ಮಾತನಾಡಿದ ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕ ಎಂ.ಎ. ಮರಿಗೌಡರ್, ಕಾರಾಗೃಹದಲ್ಲೂ ಅನಕ್ಷರಸ್ಥರಿದ್ದಾರೆ ಎಂಬುದನ್ನು ತಿಳಿದ ಸರಕಾರ ವಿದ್ಯಾದೀವಿಗೆ ಎಂಬ ಯೋಜನೆಯಡಿ ಅವರಿಗೆ ಶಿಕ್ಷಣ ನೀಡಲು ಮುಂದಾಗಿದೆ. ಧಾರವಾಡ ಕೇಂದ್ರ ಕಾರಾಗೃಹದಲ್ಲಿ 120 ಅನಕ್ಷರಸ್ಥ ಕೈದಿಗಳನ್ನು ಗುರುತಿಸಲಾಗಿದ್ದು, ಅವರಿಗೆ ಈ ವಿಶೇಷ ಕಾರ್ಯಕ್ರಮದ ಮೂಕ ಅಕ್ಷರಭ್ಯಾಸ ಮಾಡಿಸಲಾಗುತ್ತದೆ. ಇದೊಂದು ಅದ್ಭುತ ಯೋಜನೆ. ಈ ಯೋಜನೆ ಮೂಲಕ ಅನಕ್ಷರಸ್ಥ ಕೈದಿಗಳ ಬದುಕಿನಲ್ಲಿ ಅಕ್ಷರದ ಬೆಳಕಿನ ಪ್ರವೇಶವಾಗುತ್ತದೆ ಅಂತಾ ಹೇಳಿದ್ದಾರೆ.

-ನರಸಿಂಹಮೂರ್ತಿ ಪ್ಯಾಟಿ

(Akshara jnana Literacy programe for illiterate jailmates in dharwad jail from november 1)

ತಾಜಾ ಸುದ್ದಿ

Most Read Stories

Click on your DTH Provider to Add TV9 Kannada